Breaking News
Home / ರಾಜ್ಯ (page 2334)

ರಾಜ್ಯ

ರಮೇಶ ಅಳಿಯನ ದಬ್ಬಾಳಿಕೆಗೆ ಹೆದರಿ ಮಠಕ್ಕೆ ಬೀಗ ಹಾಕಿ ಊರು ಬಿಟ್ಟ ಯೋಗಿಕೊಳ್ಳ ಮಠದ ವೀರಭದ್ರೆಶ್ವರ ಶ್ರೀ:ಆರೋಪ

ಗೋಕಾಕ: ಇಲ್ಲಿನ ಪ್ರತಿಷ್ಠಿತ ಯೋಗಿಕೊಳ್ಳದ ನಿರ್ವಾಣೇಶ್ವರ ಮಠದ ಪೀಠಾಧಿಪತಿ ವೀರಭದ್ರೆಶ್ವರ ಸ್ವಾಮೀಜಿಗಳ ಮೇಲೆ ಸಚಿವ ರಮೇಶ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ ದಬ್ಬಾಳಿಕೆಯಿಂದ ಭಯಪಟ್ಟು ಮಠಕ್ಕೆ ಬೀಗ ಹಾಕಿ ಶ್ರೀಗಳು ಊರು ಬಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅವಧೂತ ಪರಂಪರೆಯ ನಿರ್ವಾಣೇಶ್ವರ ಮಠದ ವೀರಭದ್ರ ಸ್ವಾಮೀಜಿ ಗೋಕಾಕ್ ತಾಲೂಕಿನ ಯೋಗಿಕೊಳ್ಳದಲ್ಲಿರುವ ಮಠಕ್ಕೆ 15 ವರ್ಷಗಳಿಂದ ಪೀಠಾಧಿಪತಿಯಾಗಿದ್ದಾರೆ. ಎರಡು ವರ್ಷಗಳ ಹಿಂದೆ ರಮೇಶ್ ಜಾರಕಿಹೊಳಿ‌ ಅಳಿಯ ಅಂಬಿರಾವ್ ಪಾಟೀಲ್ ತಮ್ಮ …

Read More »

ಅಧಿಕಾರಿಗಳನ್ನ ಅಮಾನತು ಮಾಡಿ, ರೈತರಿಗೆ ಪರಿಹಾರ ಘೋಷಿಸಿ- ಕುಮಾರಸ್ವಾಮಿ ಆಗ್ರಹ

ಬೆಂಗಳೂರು: ತುಮಕೂರು ಜಿಲ್ಲೆಯ ತಿಪ್ಪೂರು ಗ್ರಾಮದಲ್ಲಿ ಅಡಿಕೆ ಹಾಗೂ ತೆಂಗಿನ ಮರಗಳನ್ನ ಸ್ಥಳೀಯ ತಹಶೀಲ್ದಾರ್​ ಮೇರೆಗೆ ಗ್ರಾಮ ಲೆಕ್ಕಿಗ ಕಡಿದು ಹಾಕಿದ್ದಾರೆ ಎಂದೇಳುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಈ ಘಟನೆ ಬಗ್ಗೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಇಂದು ಪ್ರತಿಕ್ರಿಯಿಸಿದ್ದಾರೆ. ರೈತರ ನೂರಾರು ಅಡಿಕೆ, ತೆಂಗಿನ ಮರಗಳನ್ನು ಒತ್ತುವರಿ ತೆರವು ಮಾಡುವ ನೆಪದಲ್ಲಿ ಕತ್ತರಿಸಿ ಹಾಕಿರುವುದು ಒಳ್ಳೆದಲ್ಲ ಇದು ಖಂಡನೀಯ ಎಂದು ಮಾಜಿ ಸಿಎಂ ಅವರು …

Read More »

ಈಗಿನ ಸರ್ಕಾರ ಬಜೆಟಿನಲ್ಲಿ 25 ಕೋಟಿ ಮಾತ್ರ ಅನುದಾನ ನೀಡಿದೆ: ಶಾಂತಾನಂದ ಮಹಾ ಸ್ವಾಮಿಗಳು

ಗೋಕಾಕ : ತಾಲೂಕಿನ ಮಲ್ಲಾಪೂರ ಪಿಜಿ ಪಟ್ಟಣದ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ವಿಶ್ವ ಕರ್ಮ ಹೋರಾಟಗಾರರ ಸಮಿತಿ ಸ್ಥಳೀಯ ಪುರುಷರ ಮತ್ತು ಮಹಿಳಾ ಘಟಕ ಉದ್ಘಾಟನಾ ಸಮಾರಂಭಕ್ಕೆ ಸಾನಿಧ್ಯ ವಹಿಸಿದ ಪರಮಪೂಜ್ಯ ಶ್ರೀ ಶಾಂತಾನಂದ ಮಹಾಸ್ವಾಮಿಗಳು ಜ್ಯೋತಿ ಬೆಳೆಗಿಸುವುದರ ಮೂಲಕ ಉದ್ಘಾಟಿಸಿದರು. ಮಾತನಾಡಿ ಮಹಿಳೆಯಾಗಿ ಸಂಘಟನೆ ಬೆಳೆಸಿ ಹೋರಾಟ ಮಾಡುತ್ತಿರುವುದು ಶ್ಲಾಘನೀಯ ಎಲ್ಲ ವಿಶ್ವ ಕರ್ಮ ಸಮಾಜ ಬಾಂದವರು ಒಗ್ಗೂಡ ಬೇಕಾಗಿದೆ.ವ್ಯಕ್ತಿಯ ಮತ್ತು ಸಮುದಾಯದ ಮೇಲೆ …

Read More »

ಅಗ್ರಸ್ಥಾನಕ್ಕೇರಲು ಉಭಯ ಜಿಲ್ಲೆಗಳ ಕಸರತ್ತು

ಬೆಳಗಾವಿ: ಹೊಸ ಹೊಸ ಪ್ರಯೋಗಗಳ ಮೂಲಕ ವಿಶೇಷ ತರಗತಿ, ವಿವಿಧ ವಿಷಯಗಳ ಮನವರಿಕೆ ಮಾಡಿಕೊಟ್ಟು ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆ ಮಕ್ಕಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧಗೊಳಿಸಿದ್ದು, ಮಾ. 27ರಿಂದ ಏಪ್ರಿಲ್‌ 9ರ ವರೆಗೆ ನಡೆಯಲಿರುವ ಪರೀಕ್ಷೆಗಾಗಿ ಮಕ್ಕಳು ಕಾಯುತ್ತಿದ್ದಾರೆ. ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಅಗ್ರಸ್ಥಾನಕ್ಕೇರಲು ಎರಡೂ ಜಿಲ್ಲೆಗಳು ಜೋರು ತಯಾರಿ ನಡೆಸಿವೆ. ಕಳೆದ ವರ್ಷ ಬೆಳಗಾವಿ ಶೇ. 77.43ರಷ್ಟು ಫಲಿತಾಂಶ ಪಡೆದು 24ನೇ ಸ್ಥಾನದಲ್ಲಿತ್ತು. …

Read More »

ಬೆಳಗಾವಿ| ಕೊರೊನಾ ಸೋಂಕು ಹಿನ್ನೆಲೆ: ಮಾಸಿದ ಹೋಳಿ ರಂಗು

ಬೆಳಗಾವಿ: ಚೀನಾದಿಂದ ಹರಡುತ್ತಿರುವ ‘ಕೋವಿಡ್‌-19’ ಸೋಂಕಿನ ಭೀತಿ ಇಲ್ಲೂ ಆವರಿಸಿರುವುದರಿಂದಾಗಿ, ಈ ಬಾರಿಯ ಹೋಳಿ ಆಚರಣೆಯು ‘ರಂಗು’ ಕಳೆದುಕೊಂಡಿದೆ. ಹೋಳಿ ಹಬ್ಬ ಈ ಭಾಗದ ಪ್ರಮುಖ ಆಚರಣೆಗಳಲ್ಲೊಂದು. ಈ ಬಾರಿ ಮಾರ್ಚ್‌ 9ರಂದು ಕಾಮದಹನ ಹಾಗೂ 10ರಂದು ಬಣ್ಣದಾಟ (ಓಕುಳಿ) ನಿಗದಿಯಾಗಿದೆ. ಆದರೆ, ಪ್ರಾಣಕ್ಕೆ ಮಾರಕವಾಗಬಲ್ಲ ಸೋಂಕಿನ ಭಯ ಹರಡಿರುವುದರಿಂದಾಗಿ ಹಬ್ಬ ಆಚರಿಸಲು ಬಹಳ ಜನರು ಮುಂದೆ ಬರುತ್ತಿಲ್ಲ. ಮಾರುಕಟ್ಟೆಯಲ್ಲಿ ನಾನಾ ರೀತಿಯ ಪರಿಕರಗಳು ಬಂದಿವೆ. ಆದರೆ, ಹಿಂದಿನ ವರ್ಷಗಳಿಗೆ …

Read More »

ರೈತರ ಪರ ಕೆಲಸ ಮಾಡಲು ಪಕ್ಷಾತೀತವಾಗಿ ಸಹಕರಿಸಿ: ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ

ರೈತರ ಪರ ಕೆಲಸ ಮಾಡಲು ಪಕ್ಷಾತೀತವಾಗಿ ಸಹಕರಿಸಿ: ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ರಾಜ್ಯದ ಮೂಲೆ ಮೂಲೆಗೂ ನೀರಾವರಿ ಸೌಲಭ್ಯ ಒದಗಿಸಲು ಸರ್ಕಾರ ಬದ್ಧ/ಮುಂದಿನ 3 ವರ್ಷಗಳ ಕಾಲ ಇನ್ನೂ ಹೆಚ್ಚಿನ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ/ದಿಗ್ಗೆವಾಡಿಯಲ್ಲಿ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ ಗ್ರಾಮೀಣ ಪ್ರದೇಶಗಳಲ್ಲಿ ನೀರಾವರಿ ಮಾಡುವ ಕನಸು ಅನೇಕ ವರ್ಷಗಳ ಹಿಂದಿನದು. ಶಾಸಕನಾದಾಗಿನಿಂದಲೂ ನೀರಾವರಿಗೆ ಆದ್ಯತೆ ನೀಡಿರುತ್ತೇನೆ. ಮುಂದಿನ 3 ವರ್ಷಗಳ ಕಾಲ ಇನ್ನೂ …

Read More »

ಮಾಜಿ ಗುರು ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಚಿವ ಭೈರತಿ ಬಸವರಾಜ್..!

ಮಾಜಿ ಗುರು ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಚಿವ ಭೈರತಿ ಬಸವರಾಜ್..! ಗುರುವಿಗೆ ತಿರುಗೇಟು ನೀಡಿದ ನಗರಾಭಿವೃದ್ಧಿ ಸಚಿವರು/ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದಾರೆ ವಿರೋಧ ಮಾಡುವುದು ಸ್ವಾಭಾವಿಕ/ಆದರೆ ಯಡಿಯೂರಪ್ಪ ನವರು ಸಮರ್ಥವಾಗಿ ಬಜೆಟ್ ಮಂಡಿಸಿದ್ದಾರೆ:ಸಚಿವ ಭೈರತಿ ಬಸವರಾಜ್ ಬೆಳಗಾವಿ : ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಗುರು ಸಿದ್ದರಾಮಯ್ಯ ಅವರಿಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಬೆಳಗಾವಿಯಲ್ಲಿಂದು ತಿರುಗೇಟು ನೀಡಿದ್ದಾರೆ.ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಗೆ ಮುಖ್ಯಮಂತ್ರಿ ಯಡಿಯೂರಪ್ಪ 600 ಕೋಟಿ ರು. ಅನುದಾನ …

Read More »

ರಾಜ್ಯದ ಅಭಿವೃದ್ಧಿಗೆ ಸಿಎಂ ಉತ್ತಮ ಬಜೆಟ್ ಕೊಟ್ಟಿದ್ದಾರೆ:ಸಚಿವ ರಮೇಶ ಜಾರಕಿಹೊಳಿ

ರಾಜ್ಯದ ಅಭಿವೃದ್ಧಿಗೆ ಸಿಎಂ ಉತ್ತಮ ಬಜೆಟ್ ಕೊಟ್ಟಿದ್ದಾರೆ:ಸಚಿವ ರಮೇಶ ಜಾರಕಿಹೊಳಿ ಮುಂದೆ ಒಳ್ಳೆ ದಿನಗಳು ಬಂದಾಗ ಗೊತ್ತಾಗುತ್ತೆ/ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದ ಸಚಿವರು/ಎಂ.ಕೆ.ಹುಬ್ಬಳ್ಳಿಯಲ್ಲಿ ರಮೇಶ್ ಜಾರಕಿಹೊಳಿ‌ ಹೇಳಿಕೆ ಬೆಳಗಾವಿ: ಮಾರ್ಚ 9 : ರಾಜ್ಯದ ಅಭಿವೃದ್ಧಿಗೆ ಸಿಎಂ ಉತ್ತಮ ಬಜೆಟ್ ಕೊಟ್ಟಿದ್ದಾರೆ.ವಿಶೇಷವಾಗಿ ‌ನೀರಾವರಿಗೆ ಹೆಚ್ಚಿನ ಒತ್ತು ಕೊಡುವುದಲ್ಲದೆ ಸಮಾಜ ಕಲ್ಯಾಣ ಇಲಾಖೆ ಸೇರಿ ಎಲ್ಲಾ ಇಲಾಖೆಗಳಿಗೆ ಸಮನಾಗಿ ಅನುದಾನ ಹಂಚಿದ್ದಾರೆಂದು ಎಂ.ಕೆ.ಹುಬ್ಬಳ್ಳಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು.ಬಿ.ಎಸ್. ಯಡಿಯೂರಪ್ಪ …

Read More »

ಅಪಘಾತ ವಲಯಗಳಲ್ಲಿ ಅಪಘಾತ ವಲಯ, ನಿಧಾನವಾಗಿ ಸಾಗಿ

ಅಪಘಾತ ವಲಯಗಳಲ್ಲಿ ಅಪಘಾತ ವಲಯ, ನಿಧಾನವಾಗಿ ಸಾಗಿ ಎಂಬಂತಹ ಸೂಚನಾ ಫಲಕಗಳನ್ನು ಅಳವಡಿಸುವ ಕಾರ್ಯ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಅವರು ಸೂಚಿಸಿದರು. ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಮುಖವಾಗಿ ೩೬ ಸ್ಥಳಗಳನ್ನು ಅಪಘಾತವಲಯಗಳೆಂದು ಗುರುತಿಸಿದ್ದು, ೩೬ ಸ್ಥಳಗಳಲ್ಲೂ ಕೂಡ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಅಪಘಾತ ವಲಯವಿದೆ ಎನ್ನುವಂತಹ …

Read More »

ಶಿಕ್ಷಕಿಯನ್ನು ಹೊಡೆಯಲು ಹೋದ ಹೆಡ್ಮಾಸ್ತರ ! ಗೋಕಾಕದಲ್ಲೊಂದು ಅಮಾನವಿಯ ಘಟನೆ

ಗೋಕಾಕ:ಶಿಕ್ಷಕಿಯನ್ನು ಹೊಡೆಯಲು ಹೋದ ಹೆಡ್ಮಾಸ್ತರ ! ಗೋಕಾಕದಲ್ಲೊಂದು ಅಮಾನವಿಯ ಘಟನೆ ಕಳೆದ ಜನೆವರಿ ತಿಂಗಳಲ್ಲಿ ವಿದ್ಯಾರ್ಥಿಗಳನ್ನು ಥಳಿಸಿ ಜನರಿಂದ ಪ್ರತಿಭಟನೆಗೆ ಒಳಗಾಗಿ ರಾಜ್ಯದಾದ್ಯಂತ ಸುದ್ದಿಯಾಗಿದ್ದ ಇಲ್ಲಿಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಹೆಡ್ಮಾಸ್ತರನು ಶಿಕ್ಷಕಿಯೊಬ್ಬಳ ಮೇಲೆ ಕೈಎತ್ತಿ ಯಡವಟ್ಟು ಮಾಡಿಕೊಂಡ ಘಟನೆ ಮಂಗಳವಾರದಂದು ಜರುಗಿದೆ. ಶಾಲೆಯ ಓರ್ವ ಶಿಕ್ಷಕಿ ಸಂಬಳ ಅತ್ಯಂತ ಕಡಿಮೆ ಎಂದು ಬೇರೆ ಶಾಲೆಗೆ ನೌಕರಿಗೆ ಹೋಗುವ ಇಚ್ಛೆಯಿಂದ ತನ್ನ ಸರ್ಟಿಫಿಕೇಟ ಹಿಂತಿರುಗಿ ಕೊಡುವಂತೆ ಕೇಳಿದಾಗ ಆಕೆಯನ್ನು …

Read More »