ಗೋಕಾಕ : ತಾಲೂಕಿನ ಮಲ್ಲಾಪೂರ ಪಿಜಿ ಪಟ್ಟಣದ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ವಿಶ್ವ ಕರ್ಮ ಹೋರಾಟಗಾರರ ಸಮಿತಿ ಸ್ಥಳೀಯ ಪುರುಷರ ಮತ್ತು ಮಹಿಳಾ ಘಟಕ ಉದ್ಘಾಟನಾ ಸಮಾರಂಭಕ್ಕೆ ಸಾನಿಧ್ಯ ವಹಿಸಿದ ಪರಮಪೂಜ್ಯ ಶ್ರೀ ಶಾಂತಾನಂದ ಮಹಾಸ್ವಾಮಿಗಳು ಜ್ಯೋತಿ ಬೆಳೆಗಿಸುವುದರ ಮೂಲಕ ಉದ್ಘಾಟಿಸಿದರು. ಮಾತನಾಡಿ ಮಹಿಳೆಯಾಗಿ ಸಂಘಟನೆ ಬೆಳೆಸಿ ಹೋರಾಟ ಮಾಡುತ್ತಿರುವುದು ಶ್ಲಾಘನೀಯ ಎಲ್ಲ ವಿಶ್ವ ಕರ್ಮ ಸಮಾಜ ಬಾಂದವರು ಒಗ್ಗೂಡ ಬೇಕಾಗಿದೆ.ವ್ಯಕ್ತಿಯ ಮತ್ತು ಸಮುದಾಯದ ಮೇಲೆ ಅನ್ಯಾಯ ವಾಗತಿದೆ ಎಂದರೆ.ನಿವೆಲ್ಲರೂ ಅದರ ಹಿಂದೆ ಬೆನ್ನೆಲುಬಾಗಿ ನಿಲ್ಲಬೇಕಾಗಿದೆ. ಎಂದು ಪುರುಷ ಮತ್ತು ಮಹಿಳಾ ಸಂಘಟಕರಿಗೆ ಮಾರ್ಗ ದರ್ಶನ ನೀಡಿದರು. ಅದ್ಯಕ್ಷತೆ ವಹಿಸಿದ ಅಖಿಲ ಕರ್ನಾಟಕ ವಿಶ್ವ ಕರ್ಮ ಹೋರಾಟಗಾರ ಸಮೀತಿ ರಾಜ್ಯಾಧ್ಯಕ್ಷರಾದ ಶ್ರೀ ಮತಿ ಗಾಯತ್ರಿ ಚಂದ್ರಶೇಖರ ರವರು ಈಗಿನ ಸರ್ಕಾರ ಕ್ಕೆ ಬಜೆಟ್‌ನಲ್ಲಿ ನಮ್ಮ ಸಮುದಾಯಕ್ಕೆ 50ಕೋಟಿ ಮೀಸಲು ನೀಡಲು ಹೇಳಿದ್ದೆ ಆದರೆ 25 ಕೋಟಿ ಮಾತ್ರ ಅನುದಾನ ಕೊಟ್ಟಿದೆ.ರಾಜ್ಯದಲ್ಲಿ ವಿಶ್ವ ಕರ್ಮ ಜನಾಂಗವು 45 ಲಕ್ಷ ಜನರಿದ್ದಾರೆ ಅವರಿಗೆ ಏನು ಸಿಗುವುದು ಎಂದು ಅರ್ಥ ಮಾಡಿಕೊಳ್ಳಿ ಅದಗೋಸ್ಕರ ನಾವು ಒಗ್ಗಟ್ಟು ಆಗಬೇಕಾಗಿದೆ.ಅದು ಸಂಘಟನೆ ಮುಖಾಂತರ ಮಾತ್ರ ಸಾಧ್ಯ ಸರ್ಕಾರದಿಂದ ಬರುವ ನಮ್ಮ ಸಮಾಜಕ್ಕೆ ಅನುದಾನವಾಗಲಿ ಅಥವಾ ಸಮಾಜದ ಮೇಲೆ ಅನ್ಯಾಯವಾದಾಗ ಪ್ರತಿಭಟಿಸಿ ಕಷ್ಟಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.ತಾವೆಲ್ಲರೂ ಹಳ್ಳಿ ಹಳ್ಳಿಗಳಲ್ಲಿ ಸಂಘಟನೆ ಬೆಳೆಸಿ ಸಮಾಜಕ್ಕೆ ಸರ್ಕಾರ ವತಿಯಿಂದ ಬರುವ ಸೌಲಭ್ಯ ಗಳನ್ನು ಜನರಿಗೆ ತಲುಪುವಂತೆ ಕೆಲಸ ಆಗಬೇಕಾಗಿದೆ.ಎಂದು ಸಲಹೆ ನೀಡಿದರು. ಮುಖ್ಯ ಅತಿಥಿಗಳಾದ ಸುರೇಶ್ ಪತ್ತಾರ. ಪಾಂಡು ಪೋತದಾರ.ಈಶ್ವರ ಪತ್ತಾರ. ರಾಘವೇಂದ್ರ ಪತ್ತಾರ. ಮಹೇಶ್ ಪತ್ತಾರ. ಅಪ್ಪಾಸಾಬ ಮುಲ್ಲಾ. ಬಸವರಾಜ ಬಡಿಗೇರ. ರಾಜು ಪಂಚಾಳ.ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Check Also
ಮುನಿರತ್ನಗೆ ಜಾಮೀನು ನೀಡದಿರಲು ಮನವಿ
Spread the love ಮಂಡ್ಯ: ‘ಶಾಸಕ ಮುನಿರತ್ನ ಅವರು ದಲಿತ ನಿಂದನೆ ಮಾಡಿರುವುದು ಸಾಕ್ಷಿ ಸಮೇತ ಸಿಕ್ಕಿರುವುದರಿಂದ ಪರಿಶಿಷ್ಟ ಜಾತಿ …