Breaking News

ಶಿಕ್ಷಕಿಯನ್ನು ಹೊಡೆಯಲು ಹೋದ ಹೆಡ್ಮಾಸ್ತರ ! ಗೋಕಾಕದಲ್ಲೊಂದು ಅಮಾನವಿಯ ಘಟನೆ

Spread the love

ಗೋಕಾಕ:ಶಿಕ್ಷಕಿಯನ್ನು ಹೊಡೆಯಲು ಹೋದ ಹೆಡ್ಮಾಸ್ತರ ! ಗೋಕಾಕದಲ್ಲೊಂದು ಅಮಾನವಿಯ ಘಟನೆ ಕಳೆದ ಜನೆವರಿ ತಿಂಗಳಲ್ಲಿ ವಿದ್ಯಾರ್ಥಿಗಳನ್ನು ಥಳಿಸಿ ಜನರಿಂದ ಪ್ರತಿಭಟನೆಗೆ ಒಳಗಾಗಿ ರಾಜ್ಯದಾದ್ಯಂತ ಸುದ್ದಿಯಾಗಿದ್ದ ಇಲ್ಲಿಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಹೆಡ್ಮಾಸ್ತರನು ಶಿಕ್ಷಕಿಯೊಬ್ಬಳ ಮೇಲೆ ಕೈಎತ್ತಿ ಯಡವಟ್ಟು ಮಾಡಿಕೊಂಡ ಘಟನೆ ಮಂಗಳವಾರದಂದು ಜರುಗಿದೆ.
ಶಾಲೆಯ ಓರ್ವ ಶಿಕ್ಷಕಿ ಸಂಬಳ ಅತ್ಯಂತ ಕಡಿಮೆ ಎಂದು ಬೇರೆ ಶಾಲೆಗೆ ನೌಕರಿಗೆ ಹೋಗುವ ಇಚ್ಛೆಯಿಂದ ತನ್ನ ಸರ್ಟಿಫಿಕೇಟ ಹಿಂತಿರುಗಿ ಕೊಡುವಂತೆ ಕೇಳಿದಾಗ ಆಕೆಯನ್ನು ಬೈಯ್ದು ಹೊಡೆಯಲು ಮೈಮೇಲೆ ಹೋದಾಗ ಆಕೆ ಅಳುತ್ತ ಮನೆಗೆ ಹೋಗಿ ವಿಷಯ ತಿಳಿಸಿದಾಗ ಆಕೆಯ ಮನೆಯವರು ಶಾಲೆಗೆ ಹೋಗಿ ಹೆಡ್ಮಾಸ್ತರರನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ.
ಜನೆವರಿ ತಿಂಗಳಲ್ಲಿ ವಿದ್ಯಾರ್ಥಿಗಳ ಮೇಲಿನ ಹಲ್ಲೆಯ ನಂತರ ಕೆಲ ಪಾಲಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆಂದು ಮತ್ತು ಕೆಲ ಶಿಕ್ಷಕರು ಕೆಲಸ ಬಿಟ್ಟು ಹೋಗಿದ್ದಾರೆಂದು ಹೇಳಲಾಗುತ್ತಿದೆ.
ಈ ಶಾಲೆಯ ಹೆಡ್ಮಾಸ್ತರ ಸದಾ ಇಂಥ ಯಡವಟ್ಟುಗಳನ್ನು ಮಾಡಿಕೊಳ್ಳುತ್ತಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಆತನ ವಿರುದ್ಧ ಅವಶ್ಯಕ ಕ್ರಮ ಕೈಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಇದೇ ಮುಖ್ಯೋಪಾಧ್ಯಾಯ ಶಾಲೆಯಲ್ಲಿಯ 6 ತರಗತಿಯ 13 ಜನ ವಿದ್ಯಾರ್ಥಿಗಳನ್ನು ಹಿಗ್ಗಾಮುಗ್ಗಾ ಥಳಿಸಿ ಸುದ್ಧಿಯಾಗಿದ್ದ ಈ ಸುದ್ದಿ ಇನ್ನು ಮಾಯವಾಗುವ ಮೊದಲೇ ಹಿಂತಹ ಇನ್ನೊಂದು ಘಟನೆಗೆ ಕಾರಣೀಕರ್ತನಾಗಿದ್ದು, ಎಷ್ಟು ಸರಿ ಎಂದು ಸಾರ್ವಜನಿಕರು ಮಾತನಾಡಿಕೋಳ್ಳುತ್ತಿದ್ದಾರೆ. ಯಾವುದಕ್ಕೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇತನ ಮೇಲೆ ಕಠಿಣ ಕ್ರಮ ಕೈಗೊಂಡು ಇತನನ್ನು ಶಿಕ್ಷಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ವಸತಿ ಯೋಜನೆ ಫಲಾನುಭವಿಗಳಿಗೆ 1 ಲಕ್ಷ ರೂ.ನೆರವು ಘೋಷಣೆ

Spread the loveವಸತಿ ಯೋಜನೆ ಫಲಾನುಭವಿಗಳಿಗೆ 1 ಲಕ್ಷ ರೂ.ನೆರವು ಘೋಷಣೆ   ಬೆಂಗಳೂರು : ವಸತಿ ರಹಿತರಿಗೆ ರಾಜ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ