Breaking News
Home / ರಾಜ್ಯ (page 1531)

ರಾಜ್ಯ

ಮೈಸೂರು ಪ್ರಕರಣ: ಬಾಲಾಪರಾಧಿ ಸೇರಿ ಐವರು ಅರೆಸ್ಟ್; ತರಕಾರಿ ಮಂಡಿಗೆ ಬಂದವರು ಅಪರಾಧ ಮಾಡಿದರು

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಳೆದ ಮಂಗಳವಾರ ನಡೆದ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಓರ್ವ ಬಾಲಾಪರಾಧಿ ಸೇರಿ ಐವರು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ಡಿಜಿ ಐಜಿಪಿ ಪ್ರವೀಣ್ ಸೂದ್ ಮಾಹಿತಿ ನೀಡಿದರು. ಮೈಸೂರಿನಲ್ಲಿ ಡಿಜಿ ಐಜಿಪಿ ಪ್ರವೀಣ್ ಸೂದ್ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಆರೋಪಿಗಳ ಪತ್ತೆಗೆ ಪೊಲೀಸರ ಏಳು ತಂಡ ರಚಿಸಲಾಗಿತ್ತು. ಆರೋಪಿಗಳು ಎಲ್ಲರೂ ತಮಿಳುನಾಡಿನ ತಿರುಪುರ್ ದವರು, ಅವರೆಲ್ಲಾ ಕೂಲಿ ಕಾರ್ಮಿಕರಾಗಿದ್ದಾರೆ. …

Read More »

‘ಓಲ್ಡ್‌ ಮಾಂಕ್‌’ ಫ‌ನ್‌ ಟೈಮ್‌: ಪುನೀತ್‌ ಕೈಯಿಂದ ಹೊರಬಂದ ಟ್ರೇಲರ್‌

ಸದ್ಯ ಥಿಯೇಟರ್‌ಗಳಲ್ಲಿ ಶೇಕಡ ನೂರರಷ್ಟು ಪ್ರೇಕ್ಷಕರ ಪ್ರವೇಶಾವಕಾಶ ಇಲ್ಲದಿರುವ ಕಾರಣ, ಅನೇಕ ಸಿನಿಮಾಗಳು ತಮ್ಮ ಬಿಡುಗಡೆಗೆಯನ್ನು ಮುಂದೂಡಿ ಕೊಂಡಿಕೊಂಡಿವೆ. ಆದರೂ ಶೀಘ್ರದಲ್ಲಿಯೇ ಥಿಯೇಟರ್‌ಗಳಲ್ಲಿ ಪೂರ್ಣ ಪ್ರವೇಶಾವಕಾಶ ಸಿಗಬಹುದು ಎಂಬ ನಿರೀಕ್ಷೆಯಿಂದ, ಅನೇಕ ಸಿನಿಮಾಗಳು ಭರ್ಜರಿಯಾಗಿಯೇ ತಮ್ಮ ಪ್ರಮೋಶನ್‌ ಕೆಲಸಗಳನ್ನು ನಡೆಸುತ್ತಿವೆ. ಕಳೆದ ಎರಡು ಮೂರು ವಾರಗಳಿಂದ ಬ್ಯಾಕ್‌ಟುಬ್ಯಾಕ್‌ ಹೊಸ ಸಿನಿಮಾಗಳ ಫ‌ಸ್ಟ್‌ಲುಕ್‌, ಟೀಸರ್‌, ಟ್ರೇಲರ್, ಹಾಡುಗಳು ಬಿಡುಗಡೆಯಾಗುತ್ತಿವೆ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸ ಸಿನಿಮಾಗಳ ಸದ್ದು ಜೋರಾಗುತ್ತಿದೆ. ಇನ್ನು ನಟ ಶ್ರೀನಿ …

Read More »

ರಕಾರಿ ಆಸ್ಪತ್ರೆಯನ್ನು 100 ರಿಂದ 250 ಬೆಡ್‌ಗೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು 100 ರಿಂದ 150 ಬೆಡ್ ಗೆ ಪರಿವರ್ತಿಸಿ ಮೇಲ್ದರ್ಜೆಗೆ ಏರಿಸಲಾಗುವುದು : ರಮೇಶ್ ಜಾರಕಿಹೊಳಿ

ಇಲ್ಲಿನ ಸರಕಾರಿ ಆಸ್ಪತ್ರೆಯನ್ನು 100 ರಿಂದ 250 ಬೆಡ್‌ಗೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು 100 ರಿಂದ 150 ಬೆಡ್ ಗೆ ಪರಿವರ್ತಿಸಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಮಾಜಿ ಸಚಿವರು ,ಶಾಸಕರು ಸಾಹುಕಾರ್ ಶ್ರೀ ರಮೇಶ್ ಜಾರಕಿಹೊಳಿ ಹೇಳಿದರು. ಶನಿವಾರದಂದು ನಗರದ ಶಾಸಕರ ಕಛೇರಿಯಲ್ಲಿ ನಡೆದ ವೈದ್ಯರ ಸಭೆಯಲ್ಲಿ ಅವರು ಮಾತನಾಡಿದರು. ಪ್ರಸ್ತುತ ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಉತ್ತಮವಾಗಿದೆ. ಆಸ್ಪತ್ರೆಗಳು, ವೈದ್ಯಕೀಯ ಸೌಲಭ್ಯಗಳು, ಉತ್ತಮ ಪ್ರಮಾಣದಲ್ಲಿವೆ. ವೈದ್ಯರ …

Read More »

ಸಾಲಗಾರರ ‌ಕಾಟಕ್ಕೆ‌ ಬೇಸತ್ತು‌, ಫೇಸ್ಬುಕ್ ಲೈವ್ ನಲ್ಲಿಯೇ‌ ರೈತನೋರ್ವ ಕೀಟನಾಶಕ ಸೇವಿಸಿ‌ ಆತ್ಮಹತ್ಯೆಗೆ ಯತ್ನ

ಬೆಳಗಾವಿ: ಸಾಲಗಾರರ ‌ಕಾಟಕ್ಕೆ‌ ಬೇಸತ್ತು‌, ಫೇಸ್ಬುಕ್ ಲೈವ್ ನಲ್ಲಿಯೇ‌ ರೈತನೋರ್ವ ಕೀಟನಾಶಕ ಸೇವಿಸಿ‌ ಆತ್ಮಹತ್ಯೆಗೆ ಯತ್ನಿಸಿದ‌ ಘಟನೆ ನಿನ್ನೆ ಸಂಜೆ ನಡೆದಿದೆ. ಗೋಕಾಕ ತಾಲ್ಲೂಕು ಮಕ್ಕಳಗೇರಿ ಗ್ರಾಮದ‌ ಲಕ್ಷ್ಮಣ ಈಳಗೇರ ಎಂಬಾತನೇ ಆತ್ಮಹತ್ಯೆಗೆ ‌ಯತ್ನಿಸಿದ ರೈತ. ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದು, ಆತನನ್ನು ಗೋಕಾಕ‌ ತಾಲೂಕು ಆಸ್ಪತ್ರೆಯಲ್ಲಿ‌ ದಾಖಲಿಸಲಾಗಿದೆ. ರೈತ ಮಾಡಿರುವ ಫೇಸ್ಬುಕ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಸಂತ್ರಸ್ತ ರೈತ ವಿಷಪ್ರಾಷಣ ಮಾಡುವ ಮುಂಚೆ‌ ತನ್ನ …

Read More »

ಬ್ರೈನ್ ಡೆಡ್ ಆದ ಯುವಕನ ಅಂಗಾಂಗ ದಾನ: ಬೆಂಗಳೂರಿಗೆ ‘ಲಿವರ್’ ಏರ್ ಲಿಫ್ಟ್

ಕಲಬುರಗಿ: ಮನೆ ಮಹಡಿಯಿಂದ ಕೆಳಗಡೆ ಬಿದ್ದು ಬ್ರೈನ್ ಡೆಡ್ ಆಗಿರುವ ಯುವಕನ ಅಂಗಾಂಗವನ್ನು ಪೋಷಕರು ದಾನ ಮಾಡಿದ್ದು, ಶನಿವಾರ ಹೈದರಾಬಾದ್ ಮೂಲಕ ಬೆಂಗಳೂರಿಗೆ ಯುವಕನ ‘ಲಿವರ್’ ಅನ್ನು ಏರ್ ಲಿಫ್ಟ್ ಮಾಡಲಾಗಿದೆ. ಇಲ್ಲಿನ ಖೂಬಾ ಪ್ಯಾಟ್ ನಿವಾಸಿ, 19 ವರ್ಷದ ಯುವಕ ಆಯ ತಪ್ಪಿ ಮನೆ ಮಹಡಿಯಿಂದ ಕೆಳಗಡೆ ಬಿದ್ದು ಗಾಯಗೊಂಡಿದ್ದ. ಕಳೆದ 7 ದಿನಗಳಿಂದ ಚಿಕಿತ್ಸೆ ನಡೆಯುತ್ತಿದ್ದರೂ ಸುಧಾರಿಸಿಕೊಳ್ಳದ ಕಾರಣ ಹಾಗೂ ಬ್ರೈನ್ ಡೆಡ್‌ ಹಿನ್ನಲೆ ಅಂಗಾಂಗ ದಾನಕ್ಕೆ …

Read More »

ಭಕ್ತರ ಅನುಕೂಲಕ್ಕಾಗಿ ಪ್ರತ್ಯೇಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾದ ಮಂತ್ರಾಲಯ ಮಠ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ದೇಶ – ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ರಸ್ತೆ ಹಾಗೂ ರೈಲು ಮಾರ್ಗ ಇದ್ದರೂ ಸಹ ವಿಮಾನ ನಿಲ್ದಾಣದ ಸೌಲಭ್ಯ ಇರಲಿಲ್ಲ. ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಆರಂಭವಾಗಿತ್ತಾದರೂ ನಿಧಾನಗತಿಯಲ್ಲಿ ಸಾಗಿದೆ. ರಾಜ್ಯ ರಾಜಕೀಯ ಅನಿಶ್ಚಿತತೆ ಸೇರಿದಂತೆ ಹಲವು ಕಾರಣಗಳಿಂದ ಕಳೆದ ಮೂರು ವರ್ಷಗಳಿಂದಲೂ ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗಿತ್ತು. ಇದು ಕಲ್ಯಾಣ ಕರ್ನಾಟಕ ಭಾಗದ ಜನತೆಯ ಆಕ್ರೋಶಕ್ಕೆ …

Read More »

ಸಾಮೂಹಿಕ ಅತ್ಯಾಚಾರ: ನಮ್ಮಲ್ಲಿಯ ಕಳ್ಳರು ಪೊಲೀಸರಿಗಿಂತ ಬುದ್ಧಿವಂತರಿದ್ದಾರೆ- ವಿನಯ್​ ಗುರೂಜಿ

ರಾಯಚೂರು: ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತು ಅವಧೂತ ವಿನಯ್​ ಗುರೂಜಿ ಪ್ರತಿಕ್ರಿಯೆ ನೀಡಿದ್ದು, ನಮ್ಮಲ್ಲಿಯ ಕಳ್ಳರು ಪೊಲೀಸರಿಗಿಂತ ಬುದ್ಧಿವಂತರಿದ್ದಾರೆ, ಕಾನೂನನ್ನು ಬಿಗಿಪಡಿಸುವದರ ಮೂಲಕ ಹೆಣ್ಣುಮಕ್ಕಳನ್ನು ಕಾಪಾಡಬೇಕು ಎಂದಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ರೀತಿಯ ಪ್ರಕರಣಕ್ಕೆ ಬೇರೆ ದೇಶಗಳಲ್ಲಿ ಬೇಲ್ ಸಿಗಲ್ಲ, ಆದ್ರೆ ನಮ್ಮ ಭಾರತ ಕಾನೂನಲ್ಲಿ ಕೃತ್ಯ ಮಾಡಿದವರು ಬಚಾವ್ ಆಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳು ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ವಿಪರೀತ ಆಚರಣೆಗಳೇ …

Read More »

ನಡುರಸ್ತೆಯಲ್ಲಿ ದಂಡ ವಸೂಲಿ ಮಾಡುತ್ತಿದ್ದ ಪೊಲೀಸರಿಗೆ ಚಳಿ ಬಿಡಿಸಿದ ರಮೇಶ್ ಕುಮಾರ್

ಚಿಂತಾಮಣಿ : ನಡುರಸ್ತೆಯಲ್ಲಿ ನಿಂತು ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದ ಚಿಂತಾಮಣಿ ನಗರ ಠಾಣಾ ಪೊಲೀಸರಿಗೆ ಮಾಜಿ ಸ್ಪೀಕರ್ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಚಳಿ ಬಿಡಿಸಿದ ಘಟನೆ ನಡೆಯಿತು. ಶುಕ್ರವಾರ ನಗರ ಠಾಣಾ ಎಸ್‌ಐ ಮುಕ್ತಿಯಾರ್ ತಮ್ಮ ಸಿಬ್ಬಂದಿಯೊಂದಿಗೆ ತಾಲೂಕಿನ ಮಾಡಿಕೇರಿ ಕ್ರಾಸ್‌ನಲ್ಲಿ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದು, ಈ ವೇಳೆ ಶ್ರೀನಿವಾಸಪುರದಿಂದ ಬೆಂಗಳೂರಿನ ಕಡೆ ಬಂದ ರಮೇಶ್ ಕುಮಾರ್ ರವರು ತಮ್ಮ ವಾಹನ ನಿಲ್ಲಿಸಿ …

Read More »

ಕೋವಿಡ್ ಸೋಂಕಿತನನ್ನು ನಿರ್ದಯಿಯಾಗಿ ಎಳೆದೊಯ್ದರು : ಆರೋಪ

ಮಂಗಳೂರು, ಆ.27: ದ.ಕ. ಜಿಲ್ಲೆಯ ಆರೋಗ್ಯ ಇಲಾಖೆಯ ಸಿಬ್ಬಂದಿ ಎನ್ನಲಾದ 20ಕ್ಕೂ ಅಧಿಕ ಮಂದಿಯ ತಂಡವು ಕೋವಿಡ್ ಸೋಂಕಿತರನ್ನು ನಿರ್ದಯವಾಗಿ ಎಳೆದೊಯ್ದಿದ್ದಾರೆ ಎಂದು ಕೋವಿಡ್ ಸೋಂಕಿತ, ಮುಲ್ಕಿ-ಕಾರ್ನಾಡು ನಿವಾಸಿ ರೊನಾಲ್ಡ್ ವಾಟ್ಸನ್ ಎಂಬವರು ಆರೋಪಿಸಿದ್ದಾರೆ. ಈ ಬಗ್ಗೆ ‘ವಾರ್ತಾಭಾರತಿ’ ಜೊತೆ ಮಾತನಾಡಿದ ಅವರು, ನಾನು ಈಗಾಗಲೇ ಕೊವ್ಯಾಕ್ಸಿನ್‌ನ ಎರಡೂ ಲಸಿಕೆಗಳನ್ನು ಪಡೆದಿದ್ದೇನೆ. ಆದಾಗ್ಯೂ, ಆಗಸ್ಟ್ 22ರಂದು ಸಣ್ಣ ಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಪರಿಚಿತ ಖ್ಯಾತ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯುತ್ತಿದ್ದೆ. …

Read More »

ನನಗೆ 60 ವರ್ಷ, 2 ಚಪಾತಿ ಮೇಲೆ ಒಂದಿಷ್ಟು ಅನ್ನ ಸಾಕು: ವಾದ ಸಮರ್ಥಿಸಿದ ಕತ್ತಿ

ಚಾಮರಾಜನಗರ: ಮನುಷ್ಯನಿಗೆ ಬದುಕಲು ತಿಂಗಳಿಗೆ ಐದು ಕೆಜಿ ಆಹಾರಧಾನ್ಯ ಸಾಕು ಎಂಬ ತಮ್ಮ ಹೇಳಿಕೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಅವರು ಪುನರುಚ್ಚರಿಸಿದರು. ತಾಲ್ಲೂಕಿನ ಕೆ.ಗುಡಿಯಲ್ಲಿ ‌ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನನಗೆ 60 ವರ್ಷ ವಯಸ್ಸಾಗಿದೆ. 2 ಚಪಾತಿ ಮೇಲೆ ಒಂದಿಷ್ಟು ಅನ್ನ ಸಾಕು’ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ‘ಮುಖ್ಯಮಂತ್ರಿ ಆದರೆ 10 ಕೆಜಿ ಪ‍ಡಿತರ ಕೊಡುವುದಾಗಿ ಸಿದ್ದರಾಮಯ್ಯ ಅವರು ಘೋಷ‌ಣೆ ಮಾಡುತ್ತಾರೆ. ಹಾಗಾದರೆ, …

Read More »