Home / Laxminews 24x7 (page 3717)

Laxminews 24x7

ಇಂದಿನಿಂದ ಬೆಂಗಳೂರಲ್ಲಿ ಬೀದಿಬದಿ ಹಣ್ಣು-ಚಾಟ್ಸ್​ ವ್ಯಾಪಾರ ನಡೆಸುವಂತಿಲ್ಲ: ಸಿಎಂ ಖಡಕ್ ಸೂಚನೆ

ಇಂದಿನಿಂದ ಬೆಂಗಳೂರಲ್ಲಿ ಬೀದಿಬದಿ ಹಣ್ಣು-ಚಾಟ್ಸ್​ ವ್ಯಾಪಾರ ನಡೆಸುವಂತಿಲ್ಲ: ಸಿಎಂ ಖಡಕ್ ಸೂಚನೆ ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಹಾಗೂ ಕಾಲರಾ ಭೀತಿ ಹೆಚ್ಚಾಗಿರುವ ಹಿನ್ನೆಲೆ ಇಂದಿನಿಂದ ಬೆಂಗಳೂರಿನಲ್ಲಿ ಯಾವುದೇ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ನಡೆಸಬಾರದೆಂದು ಸಿಎಂ ಬಿ.ಎಸ್. ಯಡಿಯೂರಪ್ಪ ಖಡಕ್ ಸೂಚನೆ ಕೊಟ್ಟಿದ್ದಾರೆ. ಬಿಬಿಎಂಪಿ ಮೇಯರ್ ಗೌತಮ್‌ ಕುಮಾರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಮಂಜುನಾಥ್‌ ರಾಜು, ಆಡಳಿತ ಪಕ್ಷದ ನಾಯಕ ಮುನೀಂದ್ರಕುಮಾರ್‌ ಹಾಗೂ ಆಯುಕ್ತ ಅನಿಲ್‌ ಕುಮಾರ್‌ಗೆ ಸಿಎಂ …

Read More »

ಬೆಂಗ್ಳೂರು ಹಜ್ ಭವನ ಕಾಮಗಾರಿಗೆ 5 ಕೋಟಿ ರೂ. ಘೋಷಿಸಿದ ಸಿಎಂ

ಬೆಂಗ್ಳೂರು ಹಜ್ ಭವನ ಕಾಮಗಾರಿಗೆ 5 ಕೋಟಿ ರೂ. ಘೋಷಿಸಿದ ಸಿಎಂ ಬೆಂಗಳೂರು: ಸದ್ಯ ನಮ್ಮ ರಾಜ್ಯವೂ ಸೇರಿದಂತೆ ದೇಶದೆಲ್ಲೆಡೆ ಪೌರತ್ವ ಕಾಯ್ದೆ(ಸಿಎಎ) ಪರ – ವಿರೋಧ ಸಂಘರ್ಷ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬೆಂಗಳೂರಿನ ಹಜ್ ಭವನಕ್ಕೆ 5 ಕೋಟಿ ರೂ ಅನುದಾನ ಘೋಷಿಸುವ ಮೂಲಕ ರಾಜ್ಯದ ಮುಸ್ಲಿಮರಲ್ಲಿ ಭರವಸೆಯ ಬೆಳಕು ಮೂಡಿಸಿದ್ದಾರೆ. ಬೆಂಗಳೂರಿನ ಹೆಗ್ಡೆನಗರದಲ್ಲಿರುವ ಹಜ್ ಭವನದಲ್ಲಿ ಇಂದು ಹಜ್ ಯಾತ್ರೆ-2020ಕ್ಕೆ ಆನ್ …

Read More »

ಭಾರೀ ಪ್ರಮಾಣದಲ್ಲಿ ಕುಸಿಯಿತು ತರಕಾರಿ ಬೆಲೆ

ಭಾರೀ ಪ್ರಮಾಣದಲ್ಲಿ ಕುಸಿಯಿತು ತರಕಾರಿ ಬೆಲೆ – ವ್ಯಾಪಾರಕ್ಕೆ ಬರ್ತಿಲ್ಲ ಕೇರಳಿಗರು ಮೈಸೂರು: ಕೊರೊನಾ ವೈರಸ್ ಎಫೆಕ್ಟ್ ಅರಮನೆ ನಗರಿಯಲ್ಲಿ ತರಕಾರಿ ಮೇಲೆ ಬಿದ್ದಿದೆ. ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟವಾಗದೆ ಎಲ್ಲಾ ತರಕಾರಿ ಬೆಲೆ ಸಂಪೂರ್ಣವಾಗಿ ಕುಸಿದಿದೆ. ಕೇರಳದಲ್ಲಿ ಕೊರೊನಾದಿಂದ ಮೈಸೂರಿನ ತರಕಾರಿ ವ್ಯಾಪಾರದ ಮೇಲೆ ಭಾರಿ ಹೊಡೆತ ಬಿದ್ದಿದೆ. ಮೈಸೂರು ಎಪಿಎಂಸಿಯಿಂದ ನೇರವಾಗಿ ಕೇರಳಕ್ಕೆ ತರಕಾರಿ ಮಾರಾಟವಾಗುತ್ತಿತ್ತು. ಶೇಕಡಾ ಶೇ. 80 ತರಕಾರಿಗಳನ್ನ ಕೇರಳದ ವ್ಯಾಪಾರಿಗಳೇ ತೆಗೆದುಕೊಳ್ಳುತ್ತಿದ್ದರು. ಇದನ್ನೂ …

Read More »

ಕೊರೊನಾ‌ ವೈರಸ್ ವದಂತಿಗೆ 9 ಸಾವಿರ ಕೋಳಿಗಳನ್ನ ನಾಶ ಮಾಡಿದ್ದಾನೆ.

ಕೋಲಾರ : ಕೊರೊನಾ‌ ವೈರಸ್ ವದಂತಿಗೆ ಕೋಳಿ‌ ಮಾಂಸದ ಮಾರಾಟ ಭಾರಿ ಇಳಿಕೆ ಕಂಡಿತ್ತು, ಇದರಿಂದ ಕೋಳಿ ವ್ಯಾಪಾರದಲ್ಲಿ ಭಾರಿ ಹಿನ್ನಡೆಯಾಗಿ ವ್ಯಕ್ತಿಯೋರ್ವ 9 ಸಾವಿರ ಕೋಳಿಗಳನ್ನ ನಾಶ ಮಾಡಿದ್ದಾನೆ. ಕೋಳಿ ವ್ಯಾಪಾರದಲ್ಲಿ 60- 90 ರೂಪಾಯಿ ಕಡಿತಗೊಂಡಿದೆ. ಈ‌ಹಿನ್ನೆಲೆ ಬಂಗಾರಪೇಟೆ ತಾಲೂಕಿನ‌ ಮಾಗೊಂದಿ ಗ್ರಾಮದ ಹೇಮಂತ್ ತಮ್ಮ ಕೋಳಿಫಾರಂನಲ್ಲಿರುವ ಎಲ್ಲಾ ಕೋಳಿಗಳಿಗೆ ವಿಷ ನೀಡಿ ನಾಶ ಮಾಡಿದ್ದಾನೆ

Read More »

ಫೋನ್​ ಮಾಡಿದ ತಕ್ಷಣ ಕೆಮ್ಮುವ ಧ್ವನಿ ಕೇಳ್ತಿದ್ದೀರಾ..? ಅದು ಕೊರೊನಾ ಕಾಲರ್​ಟ್ಯೂನ್..!

ನಿನ್ನೆ ಮೊನ್ನೆಯಿಂದ ಯಾರಿಗಾದ್ರೂ ಫೋನ್​ ಮಾಡಿದ ತಕ್ಷಣ ಆ ಕಡೆಯಿಂದ ಕೆಮ್ಮುವ ಧ್ವನಿಯನ್ನ ಹಲವರು ಕೇಳಿರಬಹುದು. ಇದನ್ನ ಕೇಳಿದ ಅನೇಕರು ಅರೇ ಇದೇನಪ್ಪಾ ಇನ್ನೂ ರಿಂಗ್​ ಆಗಿಲ್ಲ ಆಗ್ಲೇ ಯಾರೋ ಕೆಮ್ಮುತ್ತಿದ್ದಾರಲ್ಲ ಅಂತಲೂ ಅಂದುಕೊಂಡಿರಬಹುದು.? ಇದಕೆಲ್ಲಾ ಕಾರಣ ಬೇರೇನೂ ಅಲ್ಲ. ಸದ್ಯ, ವಿಶ್ವಕ್ಕೇ ತಲೆನೋವಾಗಿ ಪರಿಣಮಿಸಿರೋ ಕೊರೊನಾವೈರಸ್ ಹೌದು. ಕೊರೊನಾವೈರಸ್​ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ದೂರ ಸಂಪರ್ಕ ಇಲಾಖೆ ಈ ರೀತಿಯ ವಿಭಿನ್ನ ಪ್ರಯತ್ನ ಮಾಡಿದೆ. ಮೊಬೈಲ್​ ಬಳಕೆದಾರರ …

Read More »

ರಮೇಶ ಅಳಿಯನ ದಬ್ಬಾಳಿಕೆಗೆ ಹೆದರಿ ಮಠಕ್ಕೆ ಬೀಗ ಹಾಕಿ ಊರು ಬಿಟ್ಟ ಯೋಗಿಕೊಳ್ಳ ಮಠದ ವೀರಭದ್ರೆಶ್ವರ ಶ್ರೀ:ಆರೋಪ

ಗೋಕಾಕ: ಇಲ್ಲಿನ ಪ್ರತಿಷ್ಠಿತ ಯೋಗಿಕೊಳ್ಳದ ನಿರ್ವಾಣೇಶ್ವರ ಮಠದ ಪೀಠಾಧಿಪತಿ ವೀರಭದ್ರೆಶ್ವರ ಸ್ವಾಮೀಜಿಗಳ ಮೇಲೆ ಸಚಿವ ರಮೇಶ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ ದಬ್ಬಾಳಿಕೆಯಿಂದ ಭಯಪಟ್ಟು ಮಠಕ್ಕೆ ಬೀಗ ಹಾಕಿ ಶ್ರೀಗಳು ಊರು ಬಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅವಧೂತ ಪರಂಪರೆಯ ನಿರ್ವಾಣೇಶ್ವರ ಮಠದ ವೀರಭದ್ರ ಸ್ವಾಮೀಜಿ ಗೋಕಾಕ್ ತಾಲೂಕಿನ ಯೋಗಿಕೊಳ್ಳದಲ್ಲಿರುವ ಮಠಕ್ಕೆ 15 ವರ್ಷಗಳಿಂದ ಪೀಠಾಧಿಪತಿಯಾಗಿದ್ದಾರೆ. ಎರಡು ವರ್ಷಗಳ ಹಿಂದೆ ರಮೇಶ್ ಜಾರಕಿಹೊಳಿ‌ ಅಳಿಯ ಅಂಬಿರಾವ್ ಪಾಟೀಲ್ ತಮ್ಮ …

Read More »

ಅಧಿಕಾರಿಗಳನ್ನ ಅಮಾನತು ಮಾಡಿ, ರೈತರಿಗೆ ಪರಿಹಾರ ಘೋಷಿಸಿ- ಕುಮಾರಸ್ವಾಮಿ ಆಗ್ರಹ

ಬೆಂಗಳೂರು: ತುಮಕೂರು ಜಿಲ್ಲೆಯ ತಿಪ್ಪೂರು ಗ್ರಾಮದಲ್ಲಿ ಅಡಿಕೆ ಹಾಗೂ ತೆಂಗಿನ ಮರಗಳನ್ನ ಸ್ಥಳೀಯ ತಹಶೀಲ್ದಾರ್​ ಮೇರೆಗೆ ಗ್ರಾಮ ಲೆಕ್ಕಿಗ ಕಡಿದು ಹಾಕಿದ್ದಾರೆ ಎಂದೇಳುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಈ ಘಟನೆ ಬಗ್ಗೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಇಂದು ಪ್ರತಿಕ್ರಿಯಿಸಿದ್ದಾರೆ. ರೈತರ ನೂರಾರು ಅಡಿಕೆ, ತೆಂಗಿನ ಮರಗಳನ್ನು ಒತ್ತುವರಿ ತೆರವು ಮಾಡುವ ನೆಪದಲ್ಲಿ ಕತ್ತರಿಸಿ ಹಾಕಿರುವುದು ಒಳ್ಳೆದಲ್ಲ ಇದು ಖಂಡನೀಯ ಎಂದು ಮಾಜಿ ಸಿಎಂ ಅವರು …

Read More »

ಈಗಿನ ಸರ್ಕಾರ ಬಜೆಟಿನಲ್ಲಿ 25 ಕೋಟಿ ಮಾತ್ರ ಅನುದಾನ ನೀಡಿದೆ: ಶಾಂತಾನಂದ ಮಹಾ ಸ್ವಾಮಿಗಳು

ಗೋಕಾಕ : ತಾಲೂಕಿನ ಮಲ್ಲಾಪೂರ ಪಿಜಿ ಪಟ್ಟಣದ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ವಿಶ್ವ ಕರ್ಮ ಹೋರಾಟಗಾರರ ಸಮಿತಿ ಸ್ಥಳೀಯ ಪುರುಷರ ಮತ್ತು ಮಹಿಳಾ ಘಟಕ ಉದ್ಘಾಟನಾ ಸಮಾರಂಭಕ್ಕೆ ಸಾನಿಧ್ಯ ವಹಿಸಿದ ಪರಮಪೂಜ್ಯ ಶ್ರೀ ಶಾಂತಾನಂದ ಮಹಾಸ್ವಾಮಿಗಳು ಜ್ಯೋತಿ ಬೆಳೆಗಿಸುವುದರ ಮೂಲಕ ಉದ್ಘಾಟಿಸಿದರು. ಮಾತನಾಡಿ ಮಹಿಳೆಯಾಗಿ ಸಂಘಟನೆ ಬೆಳೆಸಿ ಹೋರಾಟ ಮಾಡುತ್ತಿರುವುದು ಶ್ಲಾಘನೀಯ ಎಲ್ಲ ವಿಶ್ವ ಕರ್ಮ ಸಮಾಜ ಬಾಂದವರು ಒಗ್ಗೂಡ ಬೇಕಾಗಿದೆ.ವ್ಯಕ್ತಿಯ ಮತ್ತು ಸಮುದಾಯದ ಮೇಲೆ …

Read More »

ಅಗ್ರಸ್ಥಾನಕ್ಕೇರಲು ಉಭಯ ಜಿಲ್ಲೆಗಳ ಕಸರತ್ತು

ಬೆಳಗಾವಿ: ಹೊಸ ಹೊಸ ಪ್ರಯೋಗಗಳ ಮೂಲಕ ವಿಶೇಷ ತರಗತಿ, ವಿವಿಧ ವಿಷಯಗಳ ಮನವರಿಕೆ ಮಾಡಿಕೊಟ್ಟು ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆ ಮಕ್ಕಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧಗೊಳಿಸಿದ್ದು, ಮಾ. 27ರಿಂದ ಏಪ್ರಿಲ್‌ 9ರ ವರೆಗೆ ನಡೆಯಲಿರುವ ಪರೀಕ್ಷೆಗಾಗಿ ಮಕ್ಕಳು ಕಾಯುತ್ತಿದ್ದಾರೆ. ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಅಗ್ರಸ್ಥಾನಕ್ಕೇರಲು ಎರಡೂ ಜಿಲ್ಲೆಗಳು ಜೋರು ತಯಾರಿ ನಡೆಸಿವೆ. ಕಳೆದ ವರ್ಷ ಬೆಳಗಾವಿ ಶೇ. 77.43ರಷ್ಟು ಫಲಿತಾಂಶ ಪಡೆದು 24ನೇ ಸ್ಥಾನದಲ್ಲಿತ್ತು. …

Read More »

ಬ್ರೇಕಿಂಗ್‌: ಭಾರತದಲ್ಲಿ ಕೊರೊನಾವೈರಸ್‌ಗೆ ಮೊದಲ ಬಲಿ!?

ನವದೆಹಲಿ: ಕೊರೊನಾವೈರಸ್‌ನಿಂದ ಶಂಕಿತ ಸಾವು ವರದಿಯಾಗಿದೆ, ಇದು ವೈರಸ್ ಹರಡಿದ ನಂತರದ ಭಾರತದ ಮೊದಲ ಸಾವಿನ ಪ್ರಕರಣವಾಗಿರಬಹುದು ಎನ್ನಲಾಗುತ್ತಿದೆ. ಭಾನುವಾರ ಬೆಳಿಗ್ಗೆ, ಲಡಾಖ್‌ನ ಸೋನಮ್ ನಾರ್ಬು ಆಸ್ಪತ್ರೆಗೆ ದಾಖಲಾದ ರೋಗಿಯೊಬ್ಬರು ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ,ಹೀಗಾಗಿ ಅವರು ಕರೋನವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಲೇಹ್‌ನ ಯೌಕುಮಾ ಚೋಚುಕ್ ಗ್ರಾಮದವರಾಗಿದ್ದ 73 ವರ್ಷದ ಅಲಿ ಮೊಹಮ್ಮದ್ ಅವರು ತೀವ್ರ ಜ್ವರದಿಂದ ಮಾರ್ಚ್ 7 ರಂದು ಆಸ್ಪತ್ರೆಗೆ ದಾಖಲಾಗಿದ್ದರು, ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ ಎನ್ನಲಾಗಿದೆ. …

Read More »