Breaking News
Home / ಜಿಲ್ಲೆ / ಬೈಲಹೊಂಗಲ ತಾಲೂಕಿನಲ್ಲಿರುವ ಅಕ್ರಮ ಕಳ್ಳಭಟ್ಟಿ ಅಡ್ಡಾಗಳ ಮೇಲೆ ದಾಳಿ

ಬೈಲಹೊಂಗಲ ತಾಲೂಕಿನಲ್ಲಿರುವ ಅಕ್ರಮ ಕಳ್ಳಭಟ್ಟಿ ಅಡ್ಡಾಗಳ ಮೇಲೆ ದಾಳಿ

Spread the love

ಬೈಲಹೊಂಗಲ ತಾಲೂಕಿನಲ್ಲಿರುವ ಅಕ್ರಮ ಕಳ್ಳಭಟ್ಟಿ ಅಡ್ಡಾಗಳ ಮೇಲೆ ದಾಳಿ

ನೊವೆಲ್ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಿಂದ ಬೈಲಹೊಂಗಲ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹಾಗೂ ಈ ಹಿಂದೆ ಇದ್ದ ಕಳ್ಳಭಟ್ಟಿ ಕೇಂದ್ರಗಳ ಅಡ್ಡಾಗಳಾದ ದೇಶನೂರ, ಹೊಗರ್ತಿ,ಕೊಳದೂರ, ಮೊಹರೆ,ಸುತಗಟ್ಟಿ ವಟಬಾಳ ಹಳ್ಳಿಗಳ ಮೇಲೆ ಮೇಲಿಂದ ಮೇಲೆ ದಾಳಿ ಮಾಡಲಾಗುತ್ತಿದೆ. ಎಂದು ಬೈಲಹೊಂಗಲ ಅಬಕಾರಿ ನೀರಿಕ್ಷಕರಾದ ರವಿ.ಎಂ ಮುರಗೋಡ ಇವರು ತಿಳಿಸಿದರು.

ದಾಳಿಯ ವಿವರಣೆ:-

ಮಾರ್ಚ್ ೨೪ ರಂದು ಹೊಗರ್ತಿ ಕ್ರಾಸ್ ಬಳಿ ರಸ್ತೆ ಗಸ್ತು ಮಾಡುತ್ತಿದ್ದಾಗ ವಾಹನ ಸಂಖ್ಯೆ ಕೆ.ಎ-೨೨ ಇಡಿ-೦೭೫೮ ದ್ವಿ ಚಕ್ರ ವಾಹನದಲ್ಲಿ ೮೦ ಪುಗ್ಗಾಗಳ ಮೂಲಕ ಮೂಲಕ ಸುಮಾರು ೮ ಲೀಟರನಷ್ಟು ಕಳ್ಳಭಟ್ಟಿ ಸರಾಯಿ ಪತ್ತೆಯಾಗಿದ್ದು, ವಾಹನ ಸವಾರ ಪರಾರಿಯಾಗಿದ್ದಾನೆ‌ ಈ ಕುರಿತು ೨೬/೨೦೧೯-೨೦ ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಮದ್ಯವನ್ನು ವಶಪಡಿಸಿಕೊಂಡಿದ್ದು ಸರಾಯಿಯ ಅಂದಾಜು ಮೊತ್ತ ಸುಮಾರು ೪೧,೦೦೦/- ರೂಪಾಯಿಗಳು ಎಂದು ತಿಳಿಸಿದರು.

ನಂತರ ಮಾರ್ಚ್ ೨೫ ರಂದು ಸುತಗಟ್ಟಿ ಗ್ರಾಮದ ಹತ್ತಿರ ರಸ್ತೆ ಗಸ್ತು ಮಾಡುವಾಗ ಯಾವುದೇ ಅಕ್ರಮ ಕಂಡು ಬಂದಿರುವುವದಿಲ್ಲ ಎಂದು ಅವರು ತಿಳಿಸಿದರು.

ಮಾರ್ಚ್ ೨೬ ರಂದು ಮೊಹರೆ ಗ್ರಾಮದ ತಳವಾರ ಒಣಿಯಲ್ಲಿ ದಾಳಿ ಮಾಡಿ ಅಲ್ಲಿನ ಸದೆಪ್ಪ ಬೋರಪ್ಪ್ ತಳವಾರ ವಯಸ್ಸು ೩೦ ವರ್ಷ ಜಾತಿ ‘ನಾಯಕ’ ಉದ್ಯೋಗ ಕೂಲಿ ಇತನ ಮನೆಯನ್ನು ತಪಾಸಣೆ ಮಾಡಲಾಗಿ ಅಲ್ಲಿನ ೨ ಲೀಟರ್ ೨ ಹಳೇಯ ಪ್ಲಾಸ್ಟಿಕ್ ಬಾಟಲಗಳಲ್ಲಿ ೪ ಲೀಟರಗಳಷ್ಟು ಕಳ್ಳಭಟ್ಟಿ ಸರಾಯಿಯನ್ನು ವಶಪಡಿಸಿಕೊಂಡು ಆತನನ್ನು ಮಾನ್ಯ ನ್ಯಾಯಲಯದ ಮುಂದೆ ಹಾಜರು ಪಡಿಸಲಾಗಿದೆ. ಎಂದು ತಿಳಿಸಿದರು.
ಈ ಕುರಿತು ೦೯/೨೦೧೯-೨೦ ಅಡಿಯಲ್ಲಿ ಅಬಕಾರಿ ಉಪನಿರೀಕ್ಷಕರು -೧ ಇವರು ಪ್ರಕರಣ ದಾಖಲಿಸಿದ್ದಾರೆ.

ಅದೇ ರೀತಿ ಹೊಗರ್ತಿ ಗ್ರಾಮದಲ್ಲಿ ಕರೆಮ್ಮನ ಗುಡಿ ಹತ್ತಿರ ಹೋಗುತ್ತಿದ್ದಾಗ ನಾಗೇಂದ್ರ ಕರೆಪ್ಪ ವ್ಯಾಪರಗಿ ವಯಸ್ಸು ೪೨ ಜಾತಿ ನಾಯಕ ಇತನು ಬಳಿ ಒಂದು ಟ್ಯೂಬನಲ್ಲಿ ೫ ಲೀಟರ್ ಕಳ್ಳಭಟ್ಟಿ ಸರಾಯಿಯನ್ನು ಮುಚ್ಚಲಿಡಲು ಹೋಗುತ್ತಿದ್ದಾಗ ಆತನನ್ನು ಬಂದಿಸಿ ಆತನ ವಿರುದ್ಧ ಅಬಕಾರಿ ಉಪ ನೀರಿಕ್ಷಕರು -೨ ಇವರು ೨೧/೨೦೧೯-೨೦ ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯಿಂದ ೯೦೦ ಮೌಲ್ಯದ ಅಕ್ರಮ ಕಳ್ಳಭಟ್ಟಿಯನ್ನು ವಶಪಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಾರ್ಚ್ ೨೭ ರಂದು ವಟಬಾಳ ಹಳ್ಳ ಹೊಗರ್ತಿ ಜಂಗಲ ಪ್ರದೇಶದಲ್ಲಿ ಇಲಾಖೆಯ ವತಿಯಿಂದ ದಾಳಿ ಮಾಡಲಾಗಿದ್ದು ಯಾವುದೇ ಅಕ್ರಮ ಪ್ರಕರಣಗಳು ಕಂಡು ಬಂದಿಲ್ಲಾ ಎಂದು ಮಾಹಿತಿ ನೀಡಿದರು.

ಮಾರ್ಚ್ ೨೮ ರಂದು ಬೆಳಗಿನ ಜಾವ ೫ ಗಂಟೆಯಿಂದ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ಹತ್ತಿರ ರಸ್ತೆ ಗಾವಲು ಮಾಡುತ್ತಿದ್ದಾಗ ೫:೩೦ ಗಂಟೆಗೆ ದ್ವಿಚಕ್ರ ವಾಹನ ಸಂಖ್ಯೆ ಕೆಎ-೨೨ ಇಜಿ ೩೫೩೪ ಮೂಲಕ ೩ ಜನರು ವ್ಯಕ್ತಿಗಳು ಕಳ್ಳಭಟ್ಟಿ ಸೇವಿಸಿ ಪ್ರತಿಯೊಬ್ಬರು ಹತ್ತಿರ ೮ ಪುಗ್ಗಾಗಳ ಮೂಲಕ ಮಾರಟಗೊಸ್ಕರ ಸಾಗಿಸುತ್ತಿದ್ದಂತಹ ಒಟ್ಟು ೨.೪ ಲೀಟರ್ ಕಳ್ಳಭಟ್ಟಿ ಸರಾಯಿಯನ್ನು ವಶಪಡಿಸಿಕೊಂಡು.

ಒಟ್ಟು ೩ ಜನ ಆಪಾಧಿತರಾದ ಕಲ್ಮೇಶ ಶಿವರಾಯಪ್ಪ ಕಳ್ಳಿ ವಯಸ್ಸು ೩೬ ಜಾತಿ ಹಿಂದೂ ಕುರಬರ ಉದ್ಯೋಗ ಒಕ್ಕಲುತನ, ಎರಡನೇ ಆರೋಪಿಯಾದ ಈರಪ್ಪ ಬಸಪ್ಪ ಕಡಕೊಳ ವಯಸ್ಸು ೩೩ ಜಾತಿ ಹಿಂದು ಲಿಂಗಾಯತ ಉದ್ಯೋಗ ಕೂಲಿ, ಮೂರನೇ ಆರೋಪಿಯಾದ ವಿಜಯ ಸಿದ್ದಪ್ಪಾ ಹೊಸವಾಳ ವಯಸ್ಸು ೨೮ ಜಾತಿ ಹಿಂದು ಅಂಬಿಗ ಉದ್ಯೋಗ ಕೂಲಿ ಈ ಮೂವರನ್ನು ಬಂದಿಸಿ ಈ ಪ್ರಕರಣಕ್ಕೆ ಸಂಬಂದಿಸಿದಂತೆ ಅಬಕಾರಿ ಉಪ ನಿರೀಕ್ಷಕರು -೧ ಬೈಲಹೊಂಗಲ ಇವರು ೧೦/೨೦೧೯-೨೦ ಅಡಿಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ. ಈ ಪ್ರಕರಣದಲ್ಲಿ ವಶಪಡಿಸಿಕೊಂಡ ಅಕ್ರಮ ಕಳ್ಳಭಟ್ಟಿ ಸರಾಯಿಯ ಅಂದಾಜು ಮೊತ್ತ ೪೫.೫೦೦/- ರೂಪಾಯಿಗಳಾಗಿದ್ದು ಇದರ ಜೊತೆಗೆ ೩ ಜನ ಆರೋಪಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು‌.

ಕಳ್ಳಭಟ್ಟಿ ಸರಾಯಿಯು ಮಾನವನ‌‌‌ ಸೇವೆಗೆ ಯೋಗ್ಯವಲ್ಲದ ಕಾರಣ ಇದನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು ಈ ದಾಳಿಯನ್ನು ಡಾ. ವೈ ಮಂಜುನಾಥ ಅಬಕಾರಿ ಜಂಟಿ ಆಯುಕ್ತರು ಬೆಳಗಾವಿ ವಿಭಾಗ ,ಶ್ರೀ ಬಸವರಾಜ ಸಂದಿಗವಾಡ ಅಬಕಾರಿ ಉಪ ಆಯುಕ್ತರು ಬೆಳಗಾವಿ ಜಿಲ್ಲೆ ಇವರ ನಿರ್ದೇಶನದಂತೆ‌

ರವಿ ಎಂ ಮುರಗೋಡ ಅಬಕಾರಿ ನೀರಿಕ್ಷಕರರು ಬೈಲಹೊಂಗಲ, ಅಬಕಾರಿ ಉಪ ನೀರಿಕ್ಷಕರಾದ ಬಸವರಾಜ ಕರವಿನಕೊಪ್ಪ, ಎಲ್ ಬಿ ಚಹ್ವಾಣ ಮತ್ತು ಅಬಕಾರಿ ರಕ್ಷಕರಾದ ಡಿ.ಎಸ್ ತಲ್ಲೂರ, ಪಿ.ಎನ್. ಸತ್ತೂರ, ಎ ಎಸ್ ಜಾಲಿಕಟ್ಟಿ, ವಿ. ಎಂ ಕೇರಾಳಿ, ಎಂ.ಬಿ ಮುಲ್ಲಾ . ಎ ವಾಯ್ ಬಮ್ಮಿಗಟ್ಟಿ ಮತ್ತು ವಾಹನ ಚಾಲಕರಾದ ಆಶೀಪ್ ಇನಾಮದಾರ್ ದಾಳಿಯಲ್ಲಿ ಭಾಗವಹಿಸಿದ್ದರೆಂದು ರವಿ ಎಂ ಮುರಗೋಡ ಅಬಕಾರಿ ನೀರಿಕ್ಷಕರರು ಬೈಲಹೊಂಗಲ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

Spread the love ಕಾಸರಗೋಡು: ಕೇರಳದ ಕಾಸರ ಗೋಡು ಲೋಕಸಭೆ ಕ್ಷೇತ್ರದಲ್ಲಿ ನಡೆದ ಅಣಕು ಮತದಾನ ವೇಳೆ ಬಿಜೆಪಿ ಪರವಾಗಿ ಹೆಚ್ಚು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ