Breaking News
Home / 2021 / ಆಗಷ್ಟ್ / 23 (page 2)

Daily Archives: ಆಗಷ್ಟ್ 23, 2021

ಆಯುಧ ಸ್ವಚ್ಛ ಮಾಡುವ ವೇಳೆ ಆಕಸ್ಮಿಕವಾಗಿ ಗುಂಡು ಸಿಡಿದು ಪೇದೆ ಸಾವು!

ದಾವಣಗೆರೆ: ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆಯೊಬ್ಬರು ಆಕಸ್ಮಿಕವಾಗಿ ಗುಂಡು ಸಿಡಿದ ಪರಿಣಾಮ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ. ಸಶಸ್ತ್ರ ಮೀಸಲು ಪಡೆಯ ಚೇತನ್ (28 ವ) ಸಾವನ್ನಪ್ಪಿದ ಪೊಲೀಸ್ ಕಾನ್ಸ್ ಸ್ಟೇಬಲ್. ದಾವಣಗೆರೆ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಘಟನೆ ಸಂಭವಿಸಿದೆ. ಬೆಳಗಿನ ತರಬೇತಿ ಮುಗಿಸಿ ಆಯುಧ ಸ್ವಚ್ಛ ಮಾಡಿವ ವೇಳೆ ಈ ಅವಘಡ ನಡೆದಿದೆ. ತೀವ್ರವಾಗಿ ಗಾಯಗೊಂಡ ಚೇತನ್ ಅವರನ್ನು ಸಿಟಿ ಸೆಂಟ್ರಲ್ ಆಸ್ಪತ್ರೆ …

Read More »

ಹೊಸ ಡಿಜಿಟಲೀಕರಣ ನೀತಿ ಹಾಗೂ ಆರ್ ಆಯಂಡ್ ಡಿ ಪಾಲಿಸಿ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಹೊಸ ಡಿಜಿಟಲೀಕರಣ ನೀತಿಯ ಜತೆಗೆ ಸಂಶೋಧನೆ ಮತ್ತು ಅಭಿವೃದ್ಧಿ ಪಾಲಿಸಿಯನ್ನು ಜಾರಿಗೆ ತರಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ, 2021-22ನೇ ಸಾಲಿನ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸ ಡಿಜಿಟಲೈಸೇಷನ್ ಪಾಲಿಸಿ (ಹೊಸ ಡಿಜಿಟಲೀಕರಣ ನೀತಿ)ಯನ್ನು ಜಾರಿಗೆ ತರಲಿದ್ದೇವೆ. ಬ್ರಾಡ್ಬ್ಯಾಂಡ್ ಹಾಗೂ ಇಂಟರ್ ನೆಟ್ ವ್ಯವಸ್ಥೆಯನ್ನು ಗ್ರಾಹಕರ …

Read More »

ಧಾರವಾಡ: ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಿ ಸ್ವಾಗತಿಸಿದ ಜಿಲ್ಲಾಧಿಕಾರಿ

ಹುಬ್ಬಳ್ಳಿ: ‘ಹದಿನೆಂಟು ತಿಂಗಳ ನಂತರ ಶಾಲೆ ಮತ್ತು ಕಾಲೇಜುಗಳು ಪುನರಾರಂಭವಾಗುತ್ತಿವೆ. ವಿದ್ಯಾರ್ಥಿಗಳು ಶುಚಿತ್ವ ಮತ್ತು ಆರೋಗ್ಯ ಸುರಕ್ಷತೆಯ ಕ್ರಮಗಳೊಂದಿಗೆ ಕಲಿಕೆಗೆ ಒತ್ತು ನೀಡಬೇಕು’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ ನೀಡಿದರು. ನವನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 9ರಿಂದ 12ನೇ ತರಗತಿಗಳ ಪುನರಾರಂಭದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಹೂವು ನೀಡಿ ಸ್ವಾಗತಿಸಿ ಮಾತನಾಡಿದ ಅವರು, ‘ತರಗತಿಗಳ ಪುನರಾರಂಭ ಸಂತೋಷದಾಯಕ. ಭವಿಷ್ಯ ಉಜ್ವಲವಾಗಿಸಿಕೊಳ್ಳಲು ವಿದ್ಯಾರ್ಥಿಗಳು ದೊಡ್ಡ ಗುರಿ ಹೊಂದಿರಬೇಕು. ಆಸಕ್ತಿದಾಯಕ …

Read More »

ಡಿ.ಕೆ. ಶಿವಕುಮಾರ್ ಭೇಟಿಯಾದ ಮಾಜಿ ಸಚಿವ ವಿನಯ್ ಕುಲಕರ್ಣಿ

ಬೆಂಗಳೂರು: ಜಿಲ್ಲಾ ಪಂಚಾಯತಿ ಸದಸ್ಯನ ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಸೇರಿ ಶನಿವಾರ ಜಾಮೀನಿನ ಮೇಲೆ ಬಿಡುಗಡೆಯಾದ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದರು. ಬೆಂಗಳೂರಿಗೆ ಆಗಮಿಸಿದ್ದ ವಿನಯ್ ಕುಲಕರ್ಣಿ, ಇಂದು ಸದಾಶಿವ ನಗರದ ಡಿ ಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು.

Read More »

ಭಯ, ಆತಂಕವಿಲ್ಲದೇ ಶಾಲೆಗೆ ಬನ್ನಿ: ಉಮೇಶ್ ಕತ್ತಿ

ಚಿಕ್ಕೋಡಿ: ಭಯ, ಆತಂಕವಿಲ್ಲದೇ ಶಾಲೆಗೆ ಬನ್ನಿ ಎಂದು ವಿದ್ಯಾರ್ಥಿಗಳಲ್ಲಿ ಅರಣ್ಯ ಹಾಗೂ ಆಹಾರ ಇಲಾಖೆ ಸಚಿವ ಉಮೇಶ ಕತ್ತಿ ಮನವಿ ಮಾಡಿಕೊಂಡಿದ್ದಾರೆ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳಿಂದ ಇಂದಿನಿಂದ ಶಾಲಾ ಕಾಲೇಜುಗಳನ್ನ ಆರಂಭಿಸಲಾಗಿದ್ದು, ಯಾವುದೇ ಭಯ, ಆತಂಕವಿಲ್ಲದೇ ವಿದ್ಯಾರ್ಥಿಗಳು ಶಾಲೆಗೆ ಬರಬೇಕು. ಇಂದಿನಿಂದ ಶಾಲಾ ಕಾಲೇಜುಗಳು ಆರಂಭವಾದ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕಿನ ಗುಡಸ್ ಪ್ರೌಢ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬುವ ಕಾರ್ಯ ಮಾಡಿದರು. ಕೊರೊನಾ ಕುರಿತು ಸಕಲ ಮುನ್ನೆಚ್ಚರಿಕೆ …

Read More »

ಸಚಿವ ಸ್ಥಾನಕ್ಕಾಗಿ ತೆರೆಮರೆ ಲಾಬಿ ಮತ್ತೆ ಚುರುಕು

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ, ಖಾತೆಗಳ ಹಂಚಿಕೆ ಬಳಿಕ ತಲೆದೋರಿದ ಅಸಮಾಧಾನ ಸರಿಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಸರತ್ತು ನಡೆಸಿದ್ದರೆ, ಸಚಿವ ಸ್ಥಾನಕ್ಕಾಗಿ ತೆರೆಮರೆ ಲಾಬಿ ಮತ್ತೆ ಚುರುಕಾಗಿದೆ. ಖಾಲಿ ಇರುವ ನಾಲ್ಕು ಸ್ಥಾನಗಳ ಪೈಕಿ ಎರಡು ಸ್ಥಾನಗಳು ಪ್ರಬಲರಿಬ್ಬರಿಗೆ ಮೀಸಲಿಟ್ಟರೆ, ಉಳಿದ ಎರಡು ಸ್ಥಾನಗಳಿಗೆ ಎರಡು ಡಜನ್ ಆಕಾಂಕ್ಷಿಗಳನ್ನು ಸಂಭಾಳಿಸುವುದು ಪಕ್ಷದ ವರಿಷ್ಠರು ಹಾಗೂ ಬೊಮ್ಮಾಯಿಗೆ ದೊಡ್ಡ ಸವಾಲಾಗಲಿದೆ. ಪ್ರಾಮಾಣಿಕ ಶಾಸಕರಿಗೆ ಅವಕಾಶ ನೀಡುವ ಉದ್ದೇಶದಿಂದ ಸಿಎಂ ಶೀಘ್ರವೇ ಸಚಿವ …

Read More »

ಪಕ್ಷ ಸಂಘಟನೆಗೆ ಮಮತಾ ಬ್ಯಾನರ್ಜಿಯೇ ಸ್ಫೂರ್ತಿ: ಎಚ್‌.ಡಿ. ಕುಮಾರಸ್ವಾಮಿ

ಹುಬ್ಬಳ್ಳಿ: ‘ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ನನಗೆ ಸ್ಫೂರ್ತಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಟಿಎಂಸಿಯ ಸುಮಾರು 60ರಿಂದ 70 ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆಯಿತು. ಆದರೂ, ಮಮತಾ ಅವರು ಏಕಾಂಗಿಯಾಗಿ ಹೋರಾಡಿ ಚುನಾವಣೆಯಲ್ಲಿ ಮತ್ತೆ ಗೆದ್ದು ಬಂದರು. ಪಕ್ಷ ಕಟ್ಟಲು ಅವರಿಗಿಂತ ಸ್ಫೂರ್ತಿ ಬೇಕೇ’ ಎಂದರು. …

Read More »

ಕೋವಿಡ್ ನಿಂದ ರೈಲ್ವೆಗೆ 36000 ಕೋಟಿ ನಷ್ಟ

ಮುಂಬೈ: ಕೊರೊನಾದಿಂದಾಗಿ ಭಾರತೀಯ ರೈಲ್ವೆ ಇಲಾಖೆಗೆ 36,000 ಕೋಟಿ ರೂಪಾಯಿ ನಷ್ಟವಾಗಿರುವುದಾಗಿ ರೈಲ್ವೆ ಇಲಾಖೆ ರಾಜ್ಯ ಸಚಿವ ರಾವ್‌ ಸಾಹೇಬ್‌ ದಾನ್ವೆ ಹೇಳಿದ್ದಾರೆ. ಸರಕು ರೈಲುಗಳೇ ನಮಗೆ ನಿಜವಾದ ಆದಾಯ ತಂದು ಕೊಡುತ್ತಿರುವುದು ಎಂದು ಅವರು ತಿಳಿಸಿದ್ದಾರೆ. ಭಾನುವಾರದಂದು ಮಹಾರಾಷ್ಟ್ರದ ಜಲ್ನಾ ರೈಲು ನಿಲ್ದಾಣದ ಅಂಡರ್‌ ಪಾಸ್‌ ಗುದ್ದಲಿ ಪೂಜೆ ನೆರವೇರಿಸಿದ ಅವರು, “ಪ್ಯಾಸೆಂಜರ್‌ ರೈಲುಗಳಿಂದ ಯಾವಾಗಲೂ ಲಾಭ ಸಿಗುವುದಿಲ್ಲ. ಟಿಕೆಟ್‌ ದರ ಹೆಚ್ಚಿಸಿದರೆ ಜನರಿಗೆ ತೊಂದರೆಯೆಂದು ದರ ಹೆಚ್ಚಳ ಮಾಡಿಲ್ಲ. ಕೊರೊನಾದಿಂದಾಗಿ ಇಲಾಖೆಗೆ …

Read More »

ಮುಂದುವರಿದ ಕಾಬುಲ್ ಕಾರ್ಮೋಡ: ಏರ್​ಪೋರ್ಟ್​ನಲ್ಲಿ ಸಾವಿರಾರು ಜನರು ಅತಂತ್ರ; ಹಿಂಸೆ ನಡುವೆಯೂ ದೇಶ ತೊರೆಯಲು ಯತ್ನ

ಐಸಿಸ್ ದಾಳಿ ಆತಂಕ ತಾಲಿಬಾನಿಗಳ ಪೈಶಾಚಿಕ ಆಳ್ವಿಕೆಗೆ ಹೆದರಿ ಕಾಬುಲ್ ವಿಮಾನ ನಿಲ್ದಾಣಕ್ಕೆ ಜನಪ್ರವಾಹವೇ ಹರಿದುಬರುತ್ತಿದೆ. ಬಹುತೇಕರು ಅನ್ನಾಹಾರವಿಲ್ಲದೆ ನಿತ್ರಾಣರಾಗಿದ್ದಾರೆ. ಈ ನಡುವೆ, ಐಸಿಸ್ ಉಗ್ರರು ಏರ್​ಪೋರ್ಟ್ ಮೇಲೆ ದಾಳಿ ನಡೆಸಬಹುದು ಎಂಬ ಸುಳಿವು ಸಿಕ್ಕ ಕಾರಣ, ಅವರ ದಾರಿ ತಪ್ಪಿಸುವುದಕ್ಕಾಗಿ ವಿಮಾನದಲ್ಲಿರುವ ಹೀಟ್-ಸೀಕಿಂಗ್ ಟೆಕ್ನಾಲಜಿಯನ್ನು ಬಳಸಿ ಜ್ವಾಲೆ ಉಗುಳುವಂತೆ ಮಾಡಲಾಗಿದೆ. ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಹಾರಾಟ ಸ್ಥಗಿತವಾಗಿದ್ದರೂ, ಸೇನಾ ವಿಮಾನಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ತೆರಳಲು ಧಾವಂತ ಎಲ್ಲರಲ್ಲೂ …

Read More »

ನಮ್ಮವರು ಪಾರು : ಅಫ್ಘಾನ್‌ನಿಂದ 392 ಮಂದಿ ವಾಪಸ್‌; ಕಾರ್ಯಾಚರಣೆಗೆ ಯಶ

ಕಾಬೂಲ್‌/ಹೊಸದಿಲ್ಲಿ/ಲಂಡನ್‌: ಅಫ್ಘಾನಿಸ್ಥಾನದಲ್ಲಿ ತಾಲಿಬಾನಿ ಕಪಿಮುಷ್ಠಿ ಯಿಂದ 392 ಮಂದಿ ಭಾರತೀಯರನ್ನು ಪಾರು ಮಾಡಿ ಸ್ವದೇಶಕ್ಕೆ ಕರೆತರುವಲ್ಲಿ ಭಾರತ ಸರಕಾರ ಯಶಸ್ವಿಯಾಗಿದೆ. ಈ ಪೈಕಿ ಏಳು ಮಂದಿ ಕನ್ನಡಿಗರಿದ್ದಾರೆ. ಮೂವರು ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಸ್ವದೇಶಾಗಮನಕ್ಕೆ ಸಿದ್ಧರಾಗಿದ್ದಾರೆ. ಅಫ್ಘಾನಿಸ್ಥಾನವು ತಾಲಿಬಾನ್‌ ವಶವಾಗಿ 8 ದಿನಗಳು ಕಳೆದಿವೆ. ರವಿವಾರದ ವರೆಗೆ ಒಟ್ಟು 392 ಮಂದಿ ಭಾರತಕ್ಕೆ ಆಗಮಿಸಿದ್ದಾರೆ. ಇವರಲ್ಲಿ 23 ಮಂದಿ ಅಫ್ಘಾನಿ ಹಿಂದೂಗಳು ಮತ್ತು ಸಿಕ್ಖರಿದ್ದಾರೆ. ರವಿವಾರ 257 ಮಂದಿ ಆಗಮಿಸಿದ್ದಾರೆ. 168 …

Read More »