Daily Archives: ಆಗಷ್ಟ್ 23, 2021

4 ವರ್ಷ ಸಂಸಾರ ಮಾಡಿ..ಇನ್ನೊಂದು ಮದುವೆಯಾದ ಪತ್ನಿ.. ಹಾಸ್ಯನಟ ಕಂಗಾಲು..!

ಮಂಡ್ಯ: ಕಳೆದರಡು ವರ್ಷಗಳಿಂದ ಮಾಹಾಮಾರಿ ಕೊರೊನಾ ನಮ್ಮ ಜೀವನದಲ್ಲಿ ಆಡಿದ ಆಟ ಅಷ್ಟಿಷ್ಟಲ್ಲ. ಕೆಲವು ಬದುಕುಗಳನ್ನು ಕೊರೊನಾ ಬೀದಿಗೆ ತಂದ್ರೆ, ಇನ್ನು ಕೆಲವರ ಬದುಕಿಗೆ ಲಾಕ್​​ಡೌನ್​ ಎಂಬ ಅಸ್ತ್ರದ ಮೂಲಕ ಮನೆಯಲ್ಲೇ ಇರಿಸಿ ಸಂಬಂಧಗಳ ಮೌಲ್ಯ ಏನೆಂಬುದನ್ನು ತೋರಿಸಿಕೊಟ್ಟಿತು.   ಇದೆಲ್ಲದರ ನಡುವೆ ಕೊರೊನಾ ಹೊಡೆತಕ್ಕ ಎಷ್ಟೋ ಕುಟುಂಬಗಳು ಹೈರಾಣಾಗಿ ಹೋಗಿದ್ದು, ಮಂಡ್ಯದಲ್ಲಿ ಕೊರೊನಾ ಹೊಡೆತಕ್ಕೆ ಕಿರುತೆರೆ ಕಲಾವಿದನ 4 ವರ್ಷದ ಪ್ರೀತಿ ಕೊಚ್ಚಿ ಹೋಗಿದ್ದು, ಕಲಾವಿದ ಕಂಗಾಲಾಗಿದ್ದಾನೆ. ಹೌದು …

Read More »

ಸಾರಿಗೆ ನೌಕರರ ಸಂಬಳಕ್ಕೆ ಹಣ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಸಂಬಳಕ್ಕಾಗಿ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿದೆ. ಒಟ್ಟು 60.82 ಕೋಟಿ ಹಣವನ್ನ ಬಿಡುಗಡೆ ಮಾಡಿ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಸತ್ಯವತಿ ಆದೇಶ ಹೊರಡಿಸಿದ್ದಾರೆ. KSRTC, ವಾಯುವ್ಯ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ಸಿಬ್ಬಂದಿ ಜುಲೈ ತಿಂಗಳ ಸಂಬಳಕ್ಕಾಗಿ ಶೇಕಡ 25% ರಷ್ಟು ಹಣವನ್ನ ನೀಡಿದೆ. KSRTCಗೆ 27.74 ಕೋಟಿ, ವಾಯುವ್ಯ ಸಾರಿಗೆ ನಿಗಮಕ್ಕೆ 17.48 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆಗೆ 15.61 …

Read More »

ಬಿಜೆಪಿ ಸೋಲಿಸಲು ಜಾಣ ನಡೆ ಇಡಬೇಕಿದೆ; ವಿಪಕ್ಷಗಳಿಗೆ ಶಿವಸೇನಾ ಸಲಹೆ

ಮುಂಬೈ, ಆಗಸ್ಟ್‌ 23: ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಆತುರಪಡದೇ ಚುರುಕು ಹಾಗೂ ಜಾಣ ನಡೆ ಇಡಬೇಕು ಎಂದು ಶಿವಸೇನೆ ಸಲಹೆ ನೀಡಿದೆ. 2024ರ ಲೋಕಸಭಾ ಚುನಾವಣೆಗೆ ಈಗಾಗಲೇ ವಿರೋಧ ಪಕ್ಷಗಳು ಅಣಿಯಾಗುತ್ತಿದ್ದು, ಬಿಜೆಪಿ ಮಣಿಸಲು ಕಾರ್ಯತಂತ್ರಗಳ ರೂಪಿಸುವ ಕುರಿತು ಸಭೆಯೂ ನಡೆದಿದೆ. ‘ನರೇಂದ್ರ ಮೋದಿ-ಶಾ ಅವರನ್ನು ಯುದ್ಧದಲ್ಲಿ ಸೋಲಿಸಬಹುದು. ಆದರೆ ಹೋರಾಟಕ್ಕೆ ಬೇಕಿರುವ ಒಂದೇ ಒಂದು ಆಯುಧ ಎಂದರೆ ಬಲವಾದ ಆತ್ಮವಿಶ್ವಾಸ’ ಎಂದು ಶಿವಸೇನೆ ಹೇಳಿದೆ. …

Read More »

ಪೊಲೀಸ್ ರು ಬೇಜವ್ದಾರಿ ತೋರಿದರೆ ಕೆಲಸದಿಂದ ಅಮಾನತು: ಲಕ್ಷ್ಮಣ ನಿಂಬರಗಿ

ಬೆಳಗಾವಿ: ನಗರ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಗಳಿಗೆ ಡಿಸಿಪಿ ಡಾ. ವಿಕ್ರಮ ಅಮಟೆ ಅವರು ಚುರುಕು ಮುಟ್ಟಿಸಿದ ಬೆನ್ನಲ್ಲೆ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಅಕ್ರಮ ಚಟುವಟಿಕೆಯನ್ನು ತಡೆಗಟ್ಟುವಲ್ಲಿ ಪೊಲೀಸ್ ರು ಬೇಜವ್ದಾರಿ ತೋರಿದರೆ ಕೆಲಸದಿಂದ ಅಮಾನತುಗೊಳ್ಳಿಸಲಾಗುವುದು ಎಂದು ಸೂಚನೆ ನೀಡಿದ್ದಾರೆ. ಈಗಾಗಲೇ ಅಕ್ರಮವಾಗಿ ಮದ್ಯ ಮಾರಾಟ, ಮಟಕಾ, ಜೂಜಾಟ ಹಾಗೂ ಮಾದಕ ವಸ್ತುಗಳ ಮಾರಾಟ ಮಾಡುವವರನ್ನು ಡಿಸಿಪಿ ಅವರು ಹೆಡೆಮುರಿಕಟ್ಟುತ್ತಿದ್ದಾರೆ. ಆರೋಪಿಗಳ ವಿರುದ್ಧ …

Read More »

ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರ: ಮುಖ್ಯಮಂತ್ರಿಗೆ ಅಭಿನಂದನೆ : ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ

ಬೆಳಗಾವಿ: ‘ಬೆಂಗಳೂರಿನ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿರುವ ಮಹತ್ವದ ಕಚೇರಿಗಳನ್ನು ಸ್ಥಳಾಂತರಿಸುವ ಮೂಲಕ ಸುವರ್ಣ ವಿಧಾನಸೌಧವನ್ನು ಆಡಳಿತದ ಶಕ್ತಿಕೇಂದ್ರವನ್ನಾಗಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿರುವುದು ಗಡಿ ಭಾಗದ ಕನ್ನಡಿಗರಲ್ಲಿ ಅತೀವ ಸಂತಸ ಮತ್ತು ಸಮಾಧಾನ ಉಂಟು ಮಾಡಿದೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಹೇಳಿದೆ. ಈ ಬಗ್ಗೆ ಮುಖ್ಯಮಂತ್ರಿಗೆ ಭಾನುವಾರ ಅಭಿನಂದನಾ ಪತ್ರ ಬರೆದಿರುವ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ, ‘ಅಧಿಕಾರ ವಹಿಸಿಕೊಂಡ ನಂತರ ಮೊದಲ …

Read More »

ಶಾಲೆಗಳಲ್ಲಿ ಹಬ್ಬದ ವಾತಾರಣ ನಿರ್ಮಾಣವಾಗಿದೆ -ಸಿಎಂ ಬೊಮ್ಮಾಯಿ ಹರ್ಷ

ಬೆಂಗಳೂರು: ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಶಾಲೆಗಳು ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರು ನಗರದ ಮಲ್ಲೇಶ್ವರಂ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಇವತ್ತು ಕೊರೊನಾದಿಂದ ಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಿದೆ. ಸೋಂಕು ಇಳಿಕೆಯಾಗುತ್ತಿದಂತೆ ಶಾಲೆಗಳ ಸಂಖ್ಯೆಯನ್ನು ಹೆಚ್ಚು ಮಾಡ್ತೇವೆ. ಕೊರೊನಾ ಕಡಿಮೆಯಾದ ಕಾರಣದಿಂದ ಶಾಲೆ ಆರಂಭ ಮಾಡಲಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ನೋಡಿ ಬಹಳ ಸಂತೋಷವಾಯಿತು. ಭೇಟಿ ವೇಳೆ …

Read More »

ನಮ್ಮ ಪಕ್ಷದಲ್ಲಿ ಕಾರ್ಯಕರ್ತರು ಸರಿಯಿಲ್ಲ, ಹೊಸಬರಿಂದಲೇ ಪಕ್ಷ ಕಟ್ಟುತ್ತೇನೆ: H.D.K.

ಹುಬ್ಬಳ್ಳಿ: ಜನತಾ ಪರಿವಾರದ ಹಳಬರನ್ನು ಒಟ್ಟುಗೂಡಿಸುವ ಆಸಕ್ತಿ ಇಲ್ಲ. ಹೊಸಬರಿಂದಲೇ ಪಕ್ಷ ಕಟ್ಟುತ್ತೇನೆ. ನನಗೆ ಮಮತಾ ಬ್ಯಾನರ್ಜಿಯವರೇ ಸ್ಫೂರ್ತಿ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಜಿಲ್ಲಾ ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಕಾರ್ಯಕರ್ತರು ಸರಿಯಿಲ್ಲ. ಕಾರ್ಯಕರ್ತರಲ್ಲಿ ಇಚ್ಛಾಶಕ್ತಿ ಕೊರತೆ ಇದೆ. ನಾನು ಬೆಂಗಳೂರಿಗೆ ಹೋಗುತ್ತಿದ್ದಂತೆ, ಮನೆಗೆ ಹೋಗಿ ಮಲಗುತ್ತಾರೆ. ಹೀಗಾಗಿ ನಮ್ಮ ಪಕ್ಷ ಉತ್ತರ ಕರ್ನಾಟಕದಲ್ಲಿ ಸಂಘಟನೆ ಆಗುತ್ತಿಲ್ಲ ಎಂದರು. ಇನ್ನು ಮುಖ್ಯಮಂತ್ರಿ …

Read More »

ಸೈಲೆಂಟಾಗಿ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಹಾದಿ ಹಿಡಿದ್ರಾ ಆನಂದ್ ಸಿಂಗ್​?

ಖಾತೆ ಹಂಚಿಕೆಯಾಗಿ 20 ದಿನಗಳೇ ಕಳೆದ್ರೂ, ಸಚಿವ ಆನಂದ ಸಿಂಗ್ ಮಾತ್ರ ಅಧಿಕೃತವಾಗಿ ಇಲಾಖೆಯ ಚಾರ್ಚ್ ತೆಗೆದುಕೊಳ್ಳದೆ ಹೊಸಪೇಟೆಯಲ್ಲಿ ಬೀಡು ಬಿಟ್ಟು ವೈಲೆಂಟ್​ ಸಚಿವ ಸೈಲೆಂಟ್​ ಆಗಿದ್ದಾರೆ. ಆರಂಭದಲ್ಲಿ ಖಾತೆ ಕ್ಯಾತೆ ತೆಗೆದು ಗದ್ದಲ ಎಬ್ಬಿಸಿದ್ದ ಸಚಿವರು ಸದ್ಯ ಸೈಲೆಂಟ್​ ಆಗಿದ್ದು, ಶಾಸಕ ರಮೇಶ್ ಜಾರಕಿಹೊಳಿ ಹಿಡಿದ ಹಾದಿ ತುಳಿತ್ತಿದ್ದಾರಾ? ಎಂಬ ಅನುಮಾನಗಳು ಶುರುವಾಗಿವೆ. ಸರ್ಕಾರಿ ಕಾರು ಬಳಸದೆ ತಮ್ಮ ಖಾಸಗಿ ಕಾರಿನಲ್ಲಿ ಓಡಾಟ ಮಾಡ್ತಿರೋ ಸಚಿವ ಆನಂದ ಸಿಂಗ್, …

Read More »

ಹಾನಗಲ್​​ ಉಪಚುನಾವಣೆ; ಪ್ರತಿಷ್ಠೆಯಾಗಿ ಸ್ವೀಕರಿಸಿದ ಬೊಮ್ಮಾಯಿ.. ಸೈಲೆಂಟ್​​ ಆದ್ರಾ ಕಾಂಗ್ರೆಸ್ಸಿಗರು?

ಹಾವೇರಿ: ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಸಿಎಂ ಬಸವರಾಜ್​​ ಬೊಮ್ಮಾಯಿ ಪ್ರತಿಷ್ಠೆ ಕಣವಾಗಿ ಸ್ವೀಕರಿಸದ್ದೇ ತಡ ಸ್ಥಳೀಯ ಕಾಂಗ್ರೆಸ್​ ನಾಯಕರು ಫುಲ್​​ ಸೈಲೆಂಟ್​​ ಆಗಿದ್ದಾರೆ. ಉಪಚುನಾವಣೆಯಲ್ಲಿ ಹಾನಗಲ್​​​ ಟಿಕೆಟ್​ಗಾಗಿ ಮಾಜಿ ಸಚಿವ ಮನೋಹರ ತಹಶೀಲ್ದಾರ್​​ ಮತ್ತು ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಶ್ರೀನಿವಾಸ ನಡುವೆ ಭಾರೀ ಪೈಪೋಟಿ ನಡೆದಿತ್ತು. ಇಬ್ಬರು ತಮ್ಮ ಬೆಂಬಲಿಗರನ್ನು ಕರೆದುಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಮನೆಗಳಿಗೆ …

Read More »

ಟ್ರ್ಯಾಕ್ಟರ್​ ಪಂಕ್ಚರ್​ ಆಗಿ ಪಲ್ಟಿ.. ಕೂದಲೆಳೆ ಅಂತರದಲ್ಲಿ ತಪ್ಪಿತು ಭಾರೀ ಅನಾಹುತ

ಚಿಕ್ಕಮಗಳೂರು: ಓವರ್ ಲೋಡ್ ಆಗಿ ಟ್ರ್ಯಾಕ್ಟರ್ ಹಿಮ್ಮುಖವಾಗಿ ಪಲ್ಟಿ ಹೊಡೆದಿರೋ ಘಟನೆ, ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಬಳಿ ಘಟನೆ ನಡೆದಿದೆ. ಮಾಕೋನಹಳ್ಳಿಯಲ್ಲಿ, ಟಿಂಬರ್ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್, ರಸ್ತೆಯ ಅಪ್ ಹತ್ತುವ ವೇಳೆ ಟೈರ್ ಪಂಚರ್ ಆಗಿ, ಹಿಂಬದಿಗೆ ಹೋಗಿ ಹೋಗಿ ಟ್ರ್ಯಾಕ್ಟರ್​ ಪಲ್ಟಿಯಾಗಿದೆ. ಟ್ರ್ಯಾಕ್ಟರ್​ನಿಂದ ಜಿಗಿದು ಚಾಲಕ ಜೀವ ಉಳಿಸಿಕೊಂಡಿದ್ದಾನೆ. ಆದ್ರೆ, ಟ್ರ್ಯಾಕ್ಟರ್​ಸಂಪೂರ್ಣ ಜಖಂಗೊಂಡಿದೆ. ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ.

Read More »