Breaking News

ಕೋವಿಡ್ ನಿಂದ ರೈಲ್ವೆಗೆ 36000 ಕೋಟಿ ನಷ್ಟ

Spread the love

ಮುಂಬೈ: ಕೊರೊನಾದಿಂದಾಗಿ ಭಾರತೀಯ ರೈಲ್ವೆ ಇಲಾಖೆಗೆ 36,000 ಕೋಟಿ ರೂಪಾಯಿ ನಷ್ಟವಾಗಿರುವುದಾಗಿ ರೈಲ್ವೆ ಇಲಾಖೆ ರಾಜ್ಯ ಸಚಿವ ರಾವ್‌ ಸಾಹೇಬ್‌ ದಾನ್ವೆ ಹೇಳಿದ್ದಾರೆ.

ಸರಕು ರೈಲುಗಳೇ ನಮಗೆ ನಿಜವಾದ ಆದಾಯ ತಂದು ಕೊಡುತ್ತಿರುವುದು ಎಂದು ಅವರು ತಿಳಿಸಿದ್ದಾರೆ. ಭಾನುವಾರದಂದು ಮಹಾರಾಷ್ಟ್ರದ ಜಲ್ನಾ ರೈಲು ನಿಲ್ದಾಣದ ಅಂಡರ್‌ ಪಾಸ್‌ ಗುದ್ದಲಿ ಪೂಜೆ ನೆರವೇರಿಸಿದ ಅವರು, “ಪ್ಯಾಸೆಂಜರ್‌ ರೈಲುಗಳಿಂದ ಯಾವಾಗಲೂ ಲಾಭ ಸಿಗುವುದಿಲ್ಲ. ಟಿಕೆಟ್‌ ದರ ಹೆಚ್ಚಿಸಿದರೆ ಜನರಿಗೆ ತೊಂದರೆಯೆಂದು ದರ ಹೆಚ್ಚಳ ಮಾಡಿಲ್ಲ.

ಕೊರೊನಾದಿಂದಾಗಿ ಇಲಾಖೆಗೆ 36,000 ಕೋಟಿ ರೂ. ನಷ್ಟವಾಗಿದೆ. ಆ ಸಮಯದಲ್ಲಿ ಸರಕು ರೈಲುಗಳು ಆದಾಯ ತಂದುಕೊಟ್ಟಿವೆ’ ಎಂದು ರಾವ್‌ ಸಾಹೇಬ್‌ ನುಡಿದಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ