Breaking News

 ಸ್ಮಾಟ್೯ ಸಿಟಿ ಯೋಜನೆ ಅಡಿಯಲ್ಲಿ ರೂ.೯೫೯.೪೩ ಕೋಟಿ ಮೊತ್ತದಲ್ಲಿ ಒಟ್ಟು ೧೦೦ ಕಾಮಗಾರಿ

ಬೆಳಗಾವಿ: ಸ್ಮಾಟ್೯ ಸಿಟಿ ಯೋಜನೆ ಅಡಿಯಲ್ಲಿ ರೂ.೯೫೯.೪೩ ಕೋಟಿ ಮೊತ್ತದಲ್ಲಿ ಒಟ್ಟು ೧೦೦ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿಯವರೆಗೆ ರೂ. ೬೬.೨೯ ಕೋಟಿಯ ೧೬ ಕಾಮಗಾರಿಗಳು ಮುಕ್ತಾಯಗೊಂಡಿದ್ದು, ರೂ.೭೭೧.೭೬ ಕೋಟಿಯ ೬೨ ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದ ೧೪ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಬಾಕಿ ಇರುವ ೮ ಕಾಮಗಾರಿಗಳು ಡಿಪಿಆರ್ ರಚನೆ ಹಂತದಲ್ಲಿವೆ. ಕೇಂದ್ರದಿಂದ ರೂ.೧೯೬ ಕೋಟಿ ಮತ್ತು ರಾಜ್ಯದಿಂದ ರೂ.೨೦೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದುವರೆಗೆ ರೂ.೧೪೩.೩೩ ಕೋಟಿ ಖಚಾ೯ಗಿದೆ. ಮುಖ್ಯವಾಗಿ ೪೧ …

Read More »

ಧಿಡೀರಣೆ ರಾಜಕೀಯ ಲೆಕ್ಕಾಚಾರಗಳು ಬದಲಾಗಿದ್ದು, ಇನ್ನೊಬ್ಬ ಪ್ರಬಲ ಆಕಾಂಕ್ಷಿ ಅನಹ೯ ಶಾಸಕ ಆರ್. ಶಂಕರ ಹೆಸರು ಮುನ್ನೆಲೆಗೆ

ಬೆಳಗಾವಿ: ರಿಜ್ವಾನ್ ಅಷ೯ದ್ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಖಾಲಿಯಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ  ಚುನಾವಣಾ ಆಯೋಗ ಫೆಬ್ರುವರಿ ೧೭ರಂದು ಉಪಚುನಾವಣೆ ಘೋಷಣೆ ಮಾಡಿದ ಬಳಿಕ ನಿರಾಳವಾಗಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಮತ್ತೆ ಆತಂಕ ಶುರುವಾಗಿದೆ. ಮೊನ್ನೆಯವರೆಗೆ ಖಾಲಿಯಾಗಿರುವ ಸ್ಥಾನ ತುಂಬಲು ಸವದಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿತ್ತು. ಆದರೆ, ಧಿಡೀರಣೆ ರಾಜಕೀಯ ಲೆಕ್ಕಾಚಾರಗಳು ಬದಲಾಗಿದ್ದು, ಇನ್ನೊಬ್ಬ ಪ್ರಬಲ ಆಕಾಂಕ್ಷಿ ಅನಹ೯ ಶಾಸಕ ಆರ್. ಶಂಕರ ಹೆಸರು ಮುನ್ನೆಲೆಗೆ …

Read More »

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ಬೆಳಗಾವಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಹುಜನ ಕ್ರಾಂತಿ ಮೋರ್ಚಾ ಸಂಘಟನೆ ಕರೆ ನೀಡಿದ ಭಾರತ್ ಬಂದ್ ಗೆ ಬೆಂಬಲಿಸಿ ಮಾನವ ಬಂಧುತ್ವ ವೇದಿಕೆ ಹಾಗೂ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು. ಇಲ್ಲಿನ ಅಂಜುಮನ್ ಕಾಲೇಜು ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಡಿಸಿ ಕಚೇರಿವರೆಗೆ ತಲುಪಿತು. ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಸಿಎಂ ಯಡಿಯೂರಪ್ಪ ವಿರುದ್ದ …

Read More »

ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿ ಸ್ಥಾಪಿಸಲಾಗಿರುವ ಇಂಟಿಗ್ರೇಟೆಡ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್ ೭೬.೮೦ ಕೋಟಿ ರೂಪಾಯಿ ಯೋಜನಾ ಮೊತ್ತದಲ್ಲಿ

ಸ್ಮಾರ್ಟ್ ಸಿಟಿ‌ ಯೋಜನೆಯಡಿ ೭೬.೮೦ ಕೋಟಿ ರೂಪಾಯಿ ಯೋಜನಾ ಮೊತ್ತದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿ ಸ್ಥಾಪಿಸಲಾಗಿರುವ ಇಂಟಿಗ್ರೇಟೆಡ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್(ಸಮಗ್ರ ಆಜ್ಞಾ ಮತ್ತು ನಿರ್ವಹಣಾ ಕೇಂದ್ರ) ಅನ್ನು ಮುಖ್ಯಮಂತ್ರಿ ಬಿ‌ಎಸ್.ಯಡಿಯೂರಪ್ಪ ಅವರು ಇದೀಗ ಲೋಕಾರ್ಪಣೆಗೊಳಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಥಾಪಿಸಲಾಗಿರುವ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ನ ಕಾರ್ಯವೈಖರಿಯ ಬಗ್ಗೆ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಶಿಧರ್ ಕುರೇರ್ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ …

Read More »

ಶಾಸಕಿ ಹೆಬ್ಬಾಳಕರ ಅಲ್ಲಲ್ಲಿ ಕೆಲವು ಕನ್ನಡದ ಮಾತುಗಳನ್ನು ಹೇಳಿದ್ದನ್ನು ಬಿಟ್ಟರೆ, ಕಾಯ೯ಕ್ರಮದಲ್ಲಿ ಕನ್ನಡದ ಲವಲೇಶವೂ ಇರಲಿಲ್ಲ. ಕಾಯ೯ಕ್ರಮ ಮಹಾರಾಷ್ಟ್ರದಲ್ಲಿ ನಡೆದಂತೆ ಇತ್ತು

ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅನಗತ್ಯವಾಗಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕಾಯ೯ಕ್ರಮವನ್ನು ಸಂಪೂಣ೯ವಾಗಿ ಮರಾಠಿಮಯವಾಗಿಸುವ ಮೂಲಕ ಕನ್ನಡ ಸಂಘಟನೆಗಳ ಆಕ್ರೋಶಕ್ಕೆ ಗುರಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಇದು ಕನಾ೯ಟಕ ಸಕಾ೯ರಕ್ಕೆ ಮಾಡಿದ ಅವಮಾನ ಎಂದು ಪ್ರತಿಕ್ರಿಯಿಸಿದ್ದಾರೆ. ಬೆಳಗಾವ್’ ಎಂದು ದೊಡ್ಡದಾಗಿ ಬರೆಸುವ ಮೂಲಕ ಕನ್ನಡಕ್ಕೆ ದ್ರೋಹ ಬಗೆಯಲಾಗಿದೆ. ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅನಗತ್ಯವಾಗಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕನಾ೯ಟಕದ …

Read More »

ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಸಿಐಡಿ ವಿಭಾಗದ ಮುಖ್ಯಸ್ಥ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್‍ಸೂದ್..”

ಬೆಂಗಳೂರು,ಜ.29-ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಸಿಐಡಿ ವಿಭಾಗದ ಮುಖ್ಯಸ್ಥ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್‍ಸೂದ್ ನೇಮಕವಾಗುವುದು ಬಹುತೇಕ ಖಚಿತವಾಗಿದೆ. ಹಾಲಿ ಪೊಲೀಸ್ ಮಹಾನಿರ್ದೇಶಕರಾಗಿರುವ ನೀಲಮಣಿ ಎನ್.ರಾಜು ಅವರು ಶುಕ್ರವಾರ ಸೇವೆಯಿಂದ ನಿವೃತ್ತರಾಗಲಿದ್ದು, ತೆರವಾಗುವ ಈ ಸ್ಥಾನಕ್ಕೆ ಸಿಐಡಿ ವಿಭಾಗದ ಡಿಐಜಿ ಪ್ರವೀಣ್ ಸೂದ್ ಅವರನ್ನು ನೇಮಕ ಮಾಡಲು ಸರ್ಕಾರ ಒಲವು ತೋರಿದೆ.   ಕೊನೆ ಕ್ಷಣದಲ್ಲಿ ಯಾವುದೇ ಅಚ್ಚರಿಯ ಬೆಳವಣಿಗೆ ನಡೆಯದಿದ್ದರೆ ಪ್ರವೀಣ್‍ಸೂದ್ ಅವರು ರಾಜ್ಯ ಪೊಲೀಸ್ ಇಲಾಖೆಯ ನೂತನ ಮುಖ್ಯಸ್ಥರಾಗಿ …

Read More »

ಡಾ.ಬಿರ್.ಅಂಬೇಡ್ಕರ ರವರ ನಾಮ ಫಲಕಕ್ಕೆ ಸಗಣಿ ಎರಚಿ ಚಪ್ಪಲಿ ಹಾರ ಹಾಕಿ ಮಾನಸಿಕ ಅಸ್ವಸ್ಥತರಂತೆ ಕ್ರೌರ್ಯ ಮೇರೆದಿದ್ದವರನ್ನು ಕೂಡಲೇ ಬಂದಿಸಿ

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಹಿತ್ತಲ ಶಿರೂರ ಗ್ರಾಮದ ಜನವೇರಿ 26ರಂದು ರಾತ್ರಿ ವೇಳೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿರ್.ಅಂಬೇಡ್ಕರ ರವರ ನಾಮ ಫಲಕಕ್ಕೆ ಸಗಣಿ ಎರಚಿ ಚಪ್ಪಲಿ ಹಾರ ಹಾಕಿ ಮಾನಸಿಕ ಅಸ್ವಸ್ಥತರಂತೆ ಕ್ರೌರ್ಯ ಮೇರೆದಿದ್ದವರನ್ನು ಕೂಡಲೇ ಬಂದಿಸಿ ಸೂಕ್ತ ಕಾನೂನು ಕ್ರಮಕೈಗೊಂಡು ನಮ್ಮ ರಾಜ್ಯದಿಂದ ಗಡಿಪಾರು ಮಾಡಿ ದೇಶದ್ರೋಹಿಗಳೆಂದು ಘೋಷಿಸಿಬೇಕೆಂದು ಹಾಗೂ ಇನ್ನುಮುಂದೆ ಈ ರೀತಿ ಘಟನೆಗಳನ್ನು ಮರುಕಳಿಸುವದಂತೆ ರಾಜ್ಯದ ಎಲ್ಲಾ ಭಾಗದಲ್ಲಿರುವ ಬಾಬಾಸಾಹೇಬರ್ ವೃತ್ತ, ಪ್ರತಿಮೆ, ಕಾಲೋನಿ …

Read More »

ಕಲೆಗಳ ತೌರೂರು ಉತ್ತರ ಕರ್ನಾಟಕದಲ್ಲಿ ಭಜನೆ,ಬಯಲಾಟ,ನಾಟಕ,ಸಣ್ಣಾಟ ಬಯಲಾಟ ಮರೆಯಾಗದಿರಲಿಪರಂಪರೆ..!

  ಮರೆಯಾಗದಿರಲಿ ಬಯಲಾಟ ಪರಂಪರೆ..! ಕಲೆಗಳ ತೌರೂರು ಉತ್ತರ ಕರ್ನಾಟಕದಲ್ಲಿ ಭಜನೆ,ಬಯಲಾಟ,ನಾಟಕ,ಸಣ್ಣಾಟ ಹೀಗೆ ವಿಭಿನ್ನ ಬಗೆಯ ಕಲೆಗಳು ನಮ್ಮಲ್ಲಿನ್ನೂ ಜೀವಂತವಾಗಿ.ಇಂತಹ ಕಲೆಯನ್ನು ನೋಡುವುದೆ ವಿಶೇಷ.ಏರು ದ್ವನಿ,ತಾಳದ ಗತ್ತು ,ಹಾರ್ಮೋನಿಯಂ ಸ್ವರ,ಕುಣಿತ,ಬಟ್ಟೆ ,ಮುಖದ‌ ಮೇಲಿನ‌ ಬಣ್ಣ ಗಮನಸೆಳೆಯುವವು.ಪೂರ್ವ ಸಿದ್ದತೆ ಬಯಲುಪ್ರದೇಶದಲ್ಲಿ ರಂಗಸಜ್ಜಿಕೆ ಹಾಕುವ ಮೂಲಕ ಲೈಟದೀಪಗಳ ಅಲಂಕಾರಿಕೆಗಳೆ ಮತ್ತೊಂದು ಆಕರ್ಷಕ. ಹಿಂದಿನ ಕಾಲದಲ್ಲಿ ಯಾವುದೆ ತರದ ಆಧುನಿಕ ತಂತ್ರಜ್ಞಾನ ಬಳಸದೆ ತಮ್ಮದೆ ಏರುಧ್ವನಿ ಮತ್ತು ಬೆಂಕಿಯ ಪಂಜಿನ‌ಬೆಳಕಿನಲ್ಲಿ ಆಟ ಪ್ರಾರಂಭವಾಗುತಿತ್ತು.ರಾತ್ರಿ ೯ …

Read More »

ಉಪಚುನಾವಣೆಯಲ್ಲಿ ಗೆದ್ದಿರುವ 11 ಶಾಸಕರು ಮಂತ್ರಿಯಾಗುವುದು ನಿಶ್ಚಿತ: ಶಾಸಕ ರಮೇಶ್ ಜಾರಕಿಹೊಳಿ

ಉಪಚುನಾವಣೆಯಲ್ಲಿ ಗೆದ್ದಿರುವ 11 ಶಾಸಕರು ಮಂತ್ರಿಯಾಗುವುದು ನಿಶ್ಚಿತವಾಗಿದ್ದು ಎಚ್.ವಿಶ್ವನಾಥ್ ಅವರನ್ನು ಮಂತ್ರಿ ಮಾಡಲು ನಾವೆಲ್ಲ ಪ್ರಯತ್ನಿಸುತ್ತೇವೆ ಎಂದು ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದರು.. ಶಾಸಕರಾದ ಮಹೇಶ್ ಕುಮಠಹಳ್ಳಿ, ಶ್ರೀಮಂತ ಪಾಟೀಲ್, ಮಾಜಿ ಸಚಿವ ಆರ್.ಶಂಕರ್ ಜೊತೆ ಶ್ರೀಕಂಠೇಶ್ವರಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಎಚ್.ವಿಶ್ವನಾಥ್ ಅವರನ್ನು ಉಪಚುನಾವಣೆಯಲ್ಲಿ ಸ್ಪರ್ಧಿಸದಂತೆ ಸಿಎಂ ಯಡಿಯೂರಪ್ಪ ಹೇಳಿದ್ದು ನಿಜ. ಅವರು ನಮ್ಮ ನಾಯಕರು. ನಮ್ಮ …

Read More »

ಐಎಂಎ ಬಹುಕೋಟಿ ವಂಚನೆ ಪ್ರಕರಣ ಐಪಿಎಸ್ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರ

ಬೆಂಗಳೂರು,ಜ.29- ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಕ್ಕೆ ಸಿಲುಕಿರುವ ಐಪಿಎಸ್ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಮತ್ತು ಅಜಯ್ ಹಿಲೋರಿಗೆ ಸಂಕಷ್ಟ ಎದುರಾಗಿದೆ. ಹೇಮಂತ್ ನಿಂಬಾಳ್ಕರ್ ಮತ್ತು ಅಜಯ್ ಹಿಲೋರಿ ಐಎಂಎ ಪ್ರಕರಣದಲ್ಲಿ ಆರೋಪಿ ಮನ್ಸೂರ್‍ಖಾನ್‍ಗೆ ಸಹಾಯ ಮಾಡಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಬಿಐ, ಇಬ್ಬರು ಅಧಿಕಾರಿಗಳ ವಿರುದ್ಧ …

Read More »