Breaking News
Home / ಜಿಲ್ಲೆ / ಶಾಸಕಿ ಹೆಬ್ಬಾಳಕರ ಅಲ್ಲಲ್ಲಿ ಕೆಲವು ಕನ್ನಡದ ಮಾತುಗಳನ್ನು ಹೇಳಿದ್ದನ್ನು ಬಿಟ್ಟರೆ, ಕಾಯ೯ಕ್ರಮದಲ್ಲಿ ಕನ್ನಡದ ಲವಲೇಶವೂ ಇರಲಿಲ್ಲ. ಕಾಯ೯ಕ್ರಮ ಮಹಾರಾಷ್ಟ್ರದಲ್ಲಿ ನಡೆದಂತೆ ಇತ್ತು

ಶಾಸಕಿ ಹೆಬ್ಬಾಳಕರ ಅಲ್ಲಲ್ಲಿ ಕೆಲವು ಕನ್ನಡದ ಮಾತುಗಳನ್ನು ಹೇಳಿದ್ದನ್ನು ಬಿಟ್ಟರೆ, ಕಾಯ೯ಕ್ರಮದಲ್ಲಿ ಕನ್ನಡದ ಲವಲೇಶವೂ ಇರಲಿಲ್ಲ. ಕಾಯ೯ಕ್ರಮ ಮಹಾರಾಷ್ಟ್ರದಲ್ಲಿ ನಡೆದಂತೆ ಇತ್ತು

Spread the love

ಕಾಯ೯ಕ್ರಮವನ್ನು ಸಂಪೂಣ೯ವಾಗಿ ಮರಾಠಿಮಯವಾಗಿಸುವ ಮೂಲಕ ಕನ್ನಡ ಸಂಘಟನೆಗಳ ಆಕ್ರೋಶಕ್ಕೆ ಗುರಿ
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಇದು ಕನಾ೯ಟಕ ಸಕಾ೯ರಕ್ಕೆ ಮಾಡಿದ ಅವಮಾನ ಎಂದು ಪ್ರತಿಕ್ರಿಯಿಸಿದ್ದಾರೆ.
ಬೆಳಗಾವ್’ ಎಂದು ದೊಡ್ಡದಾಗಿ ಬರೆಸುವ ಮೂಲಕ ಕನ್ನಡಕ್ಕೆ ದ್ರೋಹ ಬಗೆಯಲಾಗಿದೆ.

ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅನಗತ್ಯವಾಗಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕನಾ೯ಟಕದ ಸಕಾ೯ರದ ಅನುದಾನದಲ್ಲಿ ನಡೆಯುವ ಕಾಯ೯ಕ್ರಮವನ್ನು ಸಂಪೂಣ೯ವಾಗಿ ಮರಾಠಿಮಯವಾಗಿಸುವ ಮೂಲಕ ಕನ್ನಡ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ.

ಬೆಳಗಾವಿ ಸಮೀಪದ ರಾಜಹಂಸಗಡ ಕೋಟೆಯ ಅಭಿವೃದ್ಧಿ ಮತ್ತು ಮೇಲ್ಭಾಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪಿಸಲು ಸಕಾ೯ರ ಮೊದಲ ಹಂತದಲ್ಲಿ ರೂ.೩.೫೦ ಕೋಟಿ ಮಂಜೂರು ಮಾಡಿದೆ. ಸೋಮವಾರ ಲಕ್ಷ್ಮೀ ಹೆಬ್ಬಾಳಕರ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ನೆರವೇರಿಸಿದರು. ಆದರೆ, ಈ ಕಾಯ೯ಕ್ರಮ ಕನ್ನಡಿಗರಿಗೆ, ಕನ್ನಡಕ್ಕೆ ಜಾಗವೇ ಇಲ್ಲದ ರೀತಿಯಲ್ಲಿ ಸಂಪೂಣ೯ವಾಗಿ ಮರಾಠಿಮಯವಾಗಿ ಜರುಗಿದೆ. ಕಾಯ೯ಕ್ರಮ ನಡೆಯುತ್ತಿರುವುದು ಮಹಾರಾಷ್ಟ್ರದಲ್ಲಿಯೋ ಅಥವಾ ಕನಾ೯ಟಕದಲ್ಲಿಯೋ ಎನ್ನುವಂತೆ ಆಯೋಜಿಸಿ, ಮರಾಠಿಗರ ಓಟುಗಳ ಆಸೆಗೆ ಕನ್ನಡವನ್ನು ಇಲ್ಲಿ ಬಲಿ ಕೊಡಲಾಗಿದೆ.

ಪೆಂಡಾಲಿನಲ್ಲಿ ಹಾಕಲಾಗಿದ್ದ ದೊಡ್ಡ ಬ್ಯಾನರ್ ನಲ್ಲಿ ಎಲ್ಲಿಯೂ ಕನ್ನಡದ ಒಂದು ಅಕ್ಷರವೂ ಇರಲಿಲ್ಲ. ಕನ್ನಡ ಸಂಘಟನೆಗಳ ಹೊಟ್ಟೆಗೆ ಖಾರ ಬಿದ್ದಿರುವುದು ಏತಕ್ಕೆ ಎಂದರೆ, ಬ್ಯಾನರ್ ನಲ್ಲಿ ‘ಬೆಳಗಾವಿ’ ಬದಲಾಗಿ ಮರಾಠಿಯಲ್ಲಿ ‘ಬೆಳಗಾವ್’ ಎಂದು ಬರೆಸಿದ್ದು. ‘ಬೆಳಗಾಮ್’ ಇದ್ದುದನ್ನು ಬೆಳಗಾವಿ ಮಾಡಿ ಹಲವು ವಷ೯ಗಳೇ ಗತಿಸಿವೆ. ಅದನ್ನು ಬದಲಾಯಿಸಲು ಹಲವಾರು ದಶಕಗಳ ಹೋರಾಟ ನಡೆದಿದೆ. ಮಾಹಾರಾಷ್ಟ್ರ ಏಕೀಕರಣ ಸಮಿತಿ ಬಿಟ್ಟರೆ ಯಾರೂ ಕೂಡ ‘ಬೆಳಗಾವ್’ ಎಂದು ಬಳಸುವುದಿಲ್ಲ. ಕೇಂದ್ರ ಸಕಾ೯ರದ ಕಚೇರಿಗಳೂ ‘ಬೆಳಗಾವಿ’ ಎಂದು ಬದಲಾಯಿಸಿಕೊಂಡಿವೆ. ಹೀಗಿರುವಾಗ, ಕನಾ೯ಟಕ ಸಕಾ೯ರದ ಅನುದಾನದಲ್ಲಿ ನಡೆಯುತ್ತಿರುವ ಕಾಯ೯ಕ್ರಮದಲ್ಲಿಯೇ ‘ಬೆಳಗಾವ್’ ಎಂದು ದೊಡ್ಡದಾಗಿ ಬರೆಸುವ ಮೂಲಕ ಕನ್ನಡಕ್ಕೆ ದ್ರೋಹ ಬಗೆಯಲಾಗಿದೆ.

ಶಾಸಕಿ ಹೆಬ್ಬಾಳಕರ ಅವರು ತಮ್ಮ ಭಾಷಣದ ಮಧ್ಯೆ ಅಲ್ಲಲ್ಲಿ ಕೆಲವು ಕನ್ನಡದ ಮಾತುಗಳನ್ನು ಹೇಳಿದ್ದನ್ನು ಬಿಟ್ಟರೆ, ಕಾಯ೯ಕ್ರಮದಲ್ಲಿ ಕನ್ನಡದ ಲವಲೇಶವೂ ಇರಲಿಲ್ಲ. ಕಾಯ೯ಕ್ರಮ ಮಹಾರಾಷ್ಟ್ರದಲ್ಲಿ ನಡೆದಂತೆ ಇತ್ತು. ಬೆಳಗಾವಿಯ ರಾಜಕಾರಣಿಗಳು ಮತಕ್ಕಾಗಿ ಮರಾಠಿಗರ ಓಲೈಕೆ ಮಾಡುವುದು ಹೊಸದೇನಲ್ಲ. ಆದರೆ, ಯಾರೂ ಕಾನೂನು ರೀತಿಯಲ್ಲಿ ಕೇಂದ್ರದ ಅನುಮತಿ ಪಡೆದು ಬದಲಾಯಿಸಲಾಗಿರುವ ‘ಬೆಳಗಾವಿ’ ಹೆಸರನ್ನು ‘ಬೆಳಗಾವ್’ ಮಾಡುವ ಧೈಯ೯ವನ್ನು ಯಾರೂ ತೋರಿರಲಿಲ್ಲ.  ಆದರೆ ಲಕ್ಷ್ಮೀ ಹೆಬ್ಬಾಳಕರ ಅದನ್ನು ಮಾಡುವ ಮೂಲಕ ಪರೋಕ್ಷವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಬೆಂಬಲಿಸಿದ್ದಾರೆ.

ಕನಾ೯ಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾಧ್ಯಕ್ಷ ಮಹಾದೇವ ತಳವಾರ, ಹೆಬ್ಬಾಳಕರ ನಡೆಯನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿದ್ದು, “ಕನ್ನಡಿಗರ ತೆರಿಗೆ ಹಣದಲ್ಲಿ ಮಾಡುತ್ತಿರುವ ಕಾಯ೯ಕ್ರಮದಲ್ಲಿ ಕನ್ನಡ ಬಳಸಬೇಕು ಎನ್ನುವ ಕನಿಷ್ಟ ಸೌಜನ್ಯವೂ ಇಲ್ಲದ ನಿಮ್ಮಂತಹ ರಾಜಕಾರಣಿಗಳಿಗೆ ಧಿಕ್ಕಾರ ಇರಲಿ. ‘ಬೆಳಗಾವಿ’ ಯನ್ನು ‘ಬೆಳಗಾವ್’ ಮಾಡಿದ್ದೀರಿ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸ್ತೀವಿ ಅನ್ನೋ  ಎಮ್.ಇ.ಎಸ್ ನವರನ್ನು ಮನೆಗೆ ಕಳಿಸಿದ್ದೇವೆ. ಇನ್ನು ನೀವು ಯಾವ ಲೆಕ್ಕ” ಎಂದು ಬರೆದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಇದು ಕನಾ೯ಟಕ ಸಕಾ೯ರಕ್ಕೆ ಮಾಡಿದ ಅವಮಾನ ಎಂದು ಪ್ರತಿಕ್ರಿಯಿಸಿದ್ದಾರೆ. ರಾಜಹಂಸಗಡ ಕೋಟೆಯ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ರೂ. ೩ ಕೋಟಿ ಮತ್ತು ಛತ್ರಪತಿ ಶಿವಾಜಿ ಪ್ರತಿಮೆ ನಿಮಾ೯ಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರೂ.೫೦ ಲಕ್ಷ ಮಂಜೂರಾಗಿದೆ. ಇದರಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಬಳಸಲು ಅವಕಾಶವಿಲ್ಲ. ಶಾಸಕಿ ಬೇಕಾದರೆ ವೈಯಕ್ತಿಕ ಮಟ್ಟದಲ್ಲಿ ಮರಾಠಿ ಮಾತನಾಡಿಕೊಳ್ಳಲಿ. ಈ ರೀತಿ ಮಾಡುವುದು ತೀವ್ರ ಅಕ್ಷೇಪಾಹ೯. ಜಿಲ್ಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಚಂದರಗಿ ಒತ್ತಾಯಿಸಿದ್ದಾರೆ.

 


Spread the love

About Laxminews 24x7

Check Also

ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Spread the love ಬೆನಕಟ್ಟಿ: ಗ್ರಾಮಕ್ಕೆ ಆಗಮಿಸಿದ ಮಾಜಿ ಕೇಂದ್ರ ಸಚಿವ ದಿ. ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ