ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಹಿತ್ತಲ ಶಿರೂರ ಗ್ರಾಮದ ಜನವೇರಿ 26ರಂದು ರಾತ್ರಿ ವೇಳೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿರ್.ಅಂಬೇಡ್ಕರ ರವರ ನಾಮ ಫಲಕಕ್ಕೆ ಸಗಣಿ ಎರಚಿ ಚಪ್ಪಲಿ ಹಾರ ಹಾಕಿ ಮಾನಸಿಕ ಅಸ್ವಸ್ಥತರಂತೆ ಕ್ರೌರ್ಯ ಮೇರೆದಿದ್ದವರನ್ನು ಕೂಡಲೇ ಬಂದಿಸಿ ಸೂಕ್ತ ಕಾನೂನು ಕ್ರಮಕೈಗೊಂಡು ನಮ್ಮ ರಾಜ್ಯದಿಂದ ಗಡಿಪಾರು ಮಾಡಿ ದೇಶದ್ರೋಹಿಗಳೆಂದು ಘೋಷಿಸಿಬೇಕೆಂದು ಹಾಗೂ ಇನ್ನುಮುಂದೆ ಈ ರೀತಿ ಘಟನೆಗಳನ್ನು ಮರುಕಳಿಸುವದಂತೆ ರಾಜ್ಯದ ಎಲ್ಲಾ ಭಾಗದಲ್ಲಿರುವ ಬಾಬಾಸಾಹೇಬರ್ ವೃತ್ತ, ಪ್ರತಿಮೆ, ಕಾಲೋನಿ ಹಾಗೂ ನಾಮ ಫಲಕಗಳಿರುವ ಸ್ಥಳದಲ್ಲಿ ಈ ರೀತಿ ಆಗದಂತೆ ಇನ್ನುಮುಂದೆ ಸರಕಾರ ಮುನ್ನೆಚ್ಚರಿಕೆ ವಹಿಸಬೇಕೆಂದು ಅಂಬೇಡ್ಕರ್ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಡಾ. ಅರ್ಜುನ ಬಂಡಿ ಜಿಲ್ಲಾಧಿಕಾರಿಗಳಿಗೆ, ಮುಖ್ಯಮಂತ್ರಿಗಳಿಗೆ, ಗೃಹಮಂತ್ರಿಗಳಿಗೆ ಹಾಗೂ ಪೋಲಿಸ್ ಮಹಾ ನಿರ್ದೇಶಕರಿಗೆ ಮನವಿಯನ್ನು ಮಾಡಿರುತ್ತಾರೆ.
