Home / ಜಿಲ್ಲೆ /  ಸ್ಮಾಟ್೯ ಸಿಟಿ ಯೋಜನೆ ಅಡಿಯಲ್ಲಿ ರೂ.೯೫೯.೪೩ ಕೋಟಿ ಮೊತ್ತದಲ್ಲಿ ಒಟ್ಟು ೧೦೦ ಕಾಮಗಾರಿ

 ಸ್ಮಾಟ್೯ ಸಿಟಿ ಯೋಜನೆ ಅಡಿಯಲ್ಲಿ ರೂ.೯೫೯.೪೩ ಕೋಟಿ ಮೊತ್ತದಲ್ಲಿ ಒಟ್ಟು ೧೦೦ ಕಾಮಗಾರಿ

Spread the love

ಬೆಳಗಾವಿ: ಸ್ಮಾಟ್೯ ಸಿಟಿ ಯೋಜನೆ ಅಡಿಯಲ್ಲಿ ರೂ.೯೫೯.೪೩ ಕೋಟಿ ಮೊತ್ತದಲ್ಲಿ ಒಟ್ಟು ೧೦೦ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿಯವರೆಗೆ ರೂ. ೬೬.೨೯ ಕೋಟಿಯ ೧೬ ಕಾಮಗಾರಿಗಳು ಮುಕ್ತಾಯಗೊಂಡಿದ್ದು, ರೂ.೭೭೧.೭೬ ಕೋಟಿಯ ೬೨ ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದ ೧೪ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಬಾಕಿ ಇರುವ ೮ ಕಾಮಗಾರಿಗಳು ಡಿಪಿಆರ್ ರಚನೆ ಹಂತದಲ್ಲಿವೆ.

ಕೇಂದ್ರದಿಂದ ರೂ.೧೯೬ ಕೋಟಿ ಮತ್ತು ರಾಜ್ಯದಿಂದ ರೂ.೨೦೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದುವರೆಗೆ ರೂ.೧೪೩.೩೩ ಕೋಟಿ ಖಚಾ೯ಗಿದೆ.

ಮುಖ್ಯವಾಗಿ ೪೧ ಕಿ.ಮೀ. ನಷ್ಟು ಸ್ಮಾಟ್೯ ರಸ್ತೆಗಳನ್ನು ರೂ.೩೧೯ ಕೋಟಿಯಲ್ಲಿ ಮತ್ತು ೩೦ ಕಿ.ಮೀ, ಉದ್ದದ ಪೇವರ್ಸ್ ರಸ್ತೆಗಳನ್ನು ರೂ.೬೦ ಕೋಟಿಯಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದೆ.

ಸುಮಾರು ೭೮ ಕಿ.ಮೀ. ಉದ್ದ ರಸ್ತೆಗಳಲ್ಲಿ ಎಲ್.ಟಿ. ಕೇಬಲ್ ಅಂಡರ್ ಗ್ರೌಂಡ್ ಮಾಡಲಾಗುತ್ತಿದ್ದು, ಒಟ್ಟು ರೂ.೮೧ ಕೋಟಿ ವೆಚ್ಚ ಮಾಡಲಾಗುತ್ತಿದೆ.

ಹೆರಿಟೇಜ್ ಪಾಕ್೯ ಮತ್ತು ಇತರೆ ೬ ಉದ್ಯಾನಗಳ ಅಭಿವೃದ್ಧಿಗೆ ಒಟ್ಟು ರೂ.೩೬ ಕೋಟಿ ನಿಗದಿಪಡಿಸಲಾಗಿದೆ.

೧೨ ಕಿ.ಮೀ. ಉದ್ದದ ಪಾದಚಾರಿ ಹಾಗೂ ಸೈಕಲ್ ಮಾಗ೯ ಅಭಿವೃದ್ಧಿಗೆ ರೂ. ೪೪ ಕೋಟಿ ವೆಚ್ಚ ನಿಗದಿಪಡಿಸಲಾಗಿದೆ.

ಕಲಾಮಂದಿರದ ಜಾಗದಲ್ಲಿ ಬಹುಮಹಡಿ ಕಟ್ಟಡವನ್ನು ರೂ.೪೬ ಕೋಟಿ ವೆಚ್ಚದಲ್ಲಿ ನಿಮಿ೯ಸಲಾಗುತ್ತಿದೆ.

ಕೇಂದ್ರ ಬಸ್ ನಿಲ್ದಾಣವನ್ನು ರೂ.೩೨ ಕೋಟಿ ವೆಚ್ಚದಲ್ಲಿ ನಿಮಾ೯ಣ ಮಾಡಲಾಗುತ್ತಿದೆ.

ಸಾವ೯ಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಧಮ೯ನಾಥ ವೃತ್ತದ ಹತ್ತಿರ ರೂ.೧೪೫ ಕೋಟಿ ವೆಚ್ಚದ ಬಹುಮಹಡಿ ಕಟ್ಟಡ ಮತ್ತು ರೂ.೫೨ ಕೋಟಿ ವೆಚ್ಚದಲ್ಲಿ ಎಲ್.ಇ.ಡಿ ಪ್ರೊಜೆಕ್ಟ್ ಗಳಿಗೆ ಟೆಂಡರ್ ಕರೆಯಲಾಗಿದೆ.

ಈ ರೀತಿಯಾಗಿ ಸ್ಮಾಟ್೯ ಸಿಟಿ ಅಡಿಯಲ್ಲಿ ವಿನೂತನ ಯೋಜನೆಗಳಾದ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್, ಸ್ಮಾಟ್೯ ರಸ್ತೆಗಳು, ಪಾದಚಾರಿ ಮತ್ತು ಸೈಕಲ್ ಮಾಗ೯ಗಳ ನಿಮಾ೯ಣ, ಸ್ಮಾಟ್೯ ಶಾಲೆಗಳು, ಬಹು ಉದ್ದೇಶಿತ ವಾಣಿಜ್ಯ ಸಂಕೀಣ೯, ಕೆರೆ ಅಭಿವೃದ್ಧಿ, ನಗರ ಬಸ್ ನಿಲ್ದಾಣ, ಡಿಜಿಟಲ್ ಲೈಬ್ರರಿ, ಆಟ್೯ ಗ್ಯಾಲರಿ ಹಾಗೂ ಎಲ್.ಇ.ಡಿ ಬೀದಿ ದೀಪಗಳ ಯೋಜನೆಯಂತಹ ಕಾಮಗಾರಿಗಳನ್ನು ಕೈಗೊಂಡಿದ್ದು, ವಿವಿಧ ಹಂತಗಳಲ್ಲಿ ಅನುಷ್ಠಾನಗೊಳ್ಳುತ್ತಿವೆ. ಹೆಚ್ಚಿನ ಸಂಖ್ಯೆಯ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಮುಗಿಸುವ ಗುರಿ ಹೊಂದಲಾಗಿದೆ.

Visits: 67

Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ