Breaking News

ತುಮಕೂರಿನಲ್ಲಿ ಗಡ್ಡ ರವಿ ಶಿಷ್ಯ ಹಾಗೂ ಪೊಲೀಸ್ ಮಾಹಿತಿದಾರ ಹುಚ್ಚೆ ಮಂಜುನ ಬರ್ಬರ ಹತ್ಯೆ

ತುಮಕೂರು, ಡಿ.3- ಕಲ್ಪತರು ನಾಡಿನಲ್ಲಿ ಮತ್ತೊಂದು ಬರ್ಬರ ಹತ್ಯೆ ನಡೆದಿದೆ. ಮಾಜಿ ಮೇಯರ್ ಗಡ್ಡ ರವಿ ಆಪ್ತ ಶಿಷ್ಯ ಹಾಗೂ ಪೊಲೀಸ್ ಮಾಹಿತಿದಾರನಾಗಿದ್ದ ಹುಚ್ಚೆ ಮಂಜು ಅಲಿಯಾಸ್ ಆರ್‍ಎಕ್ಸ್ ಮಂಜ (33) ಭೀಕರವಾಗಿ ಹತ್ಯೆಯಾದ ಹಳೇ ರೌಡಿ ಶೀಟರ್. ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್‍ಪಿ ಕಚೇರಿ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಚೇರಿ ಇರುವ ಬಿ.ಎಚ್.ರಸ್ತೆಯ ಮಂಜುಶ್ರೀ ಲಿಕ್ಕರ್ಸ್ ಎದುರು ನಿನ್ನೆ ರಾತ್ರಿ 10.30ರ ಸಮಯದಲ್ಲಿ …

Read More »

ಉಗ್ರರ ಯಾವುದೇ ಚಟುವಟಿಕೆಗೆ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ. ಗೋಡೆ ಬರಹ ಸಂಬಂಧ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಿದ್ದಾರೆ:ಬೊಮ್ಮಾಯಿ

ಉಡುಪಿ: ಕೊರೊನಾ ವೈರಸ್ ಸೋಂಕು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಮಾಡುವ ಕುರಿತು ಸರಕಾರ ಚಿಂತನೆ ಮಾಡಿಲ್ಲ. ಈ ಬಗ್ಗೆ ಯಾವುದೇ ಮಾತುಕತೆಯೂ ಆಗಿಲ್ಲ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಉಡುಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನ ಸೊಂಕು ಹೆಚ್ಚುತ್ತಿರುವುದು ನಿಜ. ಅದನ್ನು ನಿಯಂತ್ರಣಕ್ಕೆ ತರುವಲ್ಲಿ ಸರಕಾರ ಒತ್ತು ನೀಡುತ್ತಿದೆ. ನೈಟ್ ಕರ್ಪ್ಯೂ ಕುರಿತು ಯಾವ ಚರ್ಚೆಯು ಆಗಿಲ್ಲ …

Read More »

ಸಚಿವ ರಮೇಶ್ ಜಾರಕಿಹೊಳಿಗೆ ಬುಧವಾರ ಭೇಟಿಯಾಗಿ, ಅಭಿನಂಧನೆ ಸಲ್ಲಿಸಿದ ಅಧ್ಯಕ್ಷೆ ಪವಿತ್ರ ರಾಮಯ್ಯ

  ಗೋಕಾಕ : ಭದ್ರ ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗೆ ಬುಧವಾರ ಭೇಟಿಯಾಗಿ, ಅಭಿನಂಧನೆ ಸಲ್ಲಿಸಿದರು. ಸಚಿವರಿಗೆ ಸನ್ಮಾನಿಸಿದ ಅವರು, ಪ್ರಾಧಿಕಾರದ ವ್ಯಾಪ್ತಿಯ ಅಚ್ಚುಕಟ್ಟು ಭಾಗದ ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ, ಅಧಿಕಾರಿಗಳು ರಚಿಸಿರುವ ಸುಮಾರು 400ಕೋಟಿ ರೂಗಳ ಕ್ರಿಯಾ ಯೋಜನೆಯ ಬಗ್ಗೆ ಹಾಗೂ ರೈತರಿಂದ ಬಂದಂತಹ ಅರ್ಜಿಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿ ಗಮನ ಸೆಳೆದರು. …

Read More »

ಬುರೆವಿ ಸೈಕ್ಲೋನ್ ಎಫೆಕ್ಟ್ – ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಚಳಿ ಜೊತೆ ತುಂತುರು ಮಳೆ

ಬೆಂಗಳೂರು: ನಿವಾರ್ ಚಂಡಮಾರುತದ ಬೆನ್ನಲ್ಲೇ ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬುರೆವಿ ಚಂಡಮಾರುತ ಎಂಟ್ರಿ ಕೊಟ್ಟಿದೆ. ಶೀತಗಾಳಿ ಜೊತೆಗೆ ಬೆಂಗಳೂರಲ್ಲಿ ಸಾಧಾರಣ ಮಳೆಯಾಗುತ್ತಿದೆ. ಬೆಂಗಳೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇನ್ನು ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ ಸಾಧ್ಯತೆ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಬುರೆವಿ ಸೈಕ್ಲೋನ್ ಪರಿಣಾಮ ಮಳೆಯಾಗುತ್ತಿದೆ. ಇಂದು ಮತ್ತು ನಾಳೆ ಹೆಚ್ಚಿನ ಮಳೆಯಾಗೋ ನಿರೀಕ್ಷೆ ಇದೆ. ಬೆಂಗಳೂರಲ್ಲಿ ತುಂತುರು ಮಳೆ ಆರಂಭವಾಗಿದ್ದು, …

Read More »

ಮೊದಲ ರಾತ್ರಿಯೇ ಕಂಠ ಪೂರ್ತಿ ಕುಡಿದುಬಂದ ಪತಿ ಮದುವೆಯಾದ ಒಂದೇ ತಿಂಗಳಲ್ಲಿ ಮುರಿದುಬಿತ್ತು ದಾಂಪತ್ಯ ಜೀವನ

    ಬೆಂಗಳೂರು: ಪತಿ ಮಹಾಶಯ ಫಸ್ಟ್ ನೈಟ್ ದಿನವೇ ಕಂಠಪೂರ್ತಿ ಕುಡಿದು ಬಂದು ಥಳಿಸಿದ್ದೂ ಅಲ್ಲದೇ ಅದಾಗಲೇ ಒಂದು ಮದೆಯಾಗಿದ್ದ ವಿಷಯವನ್ನೂ ಮುಚ್ಚಿಟ್ಟು ವಂಚಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಕ್ಟೋಬರ್ 29ರಂದು ಭರತ್ ಎಂಬಾತನನ್ನು ವಿವಾಹವಾಗಿದ್ದ ಯುವತಿ, ಇದೀಗ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಫಸ್ಟ್ ನೈಟ್ ದಿನವೇ ಕುಡಿದು ಬಂದ ಪತಿಯನ್ನು ಕಂಡು ಶಾಕ್ ಆದ ಯುವತಿ ಫಸ್ಟ್ …

Read More »

ಕಳೆದ ಎರಡು ದಿನಗಳಿಂದ ಯುವತಿಯ ಬ್ಯಾಕ್‍ಫ್ಲಿಪ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು

.ನವದೆಹಲಿ: ಕಳೆದ ಎರಡು ದಿನಗಳಿಂದ ಯುವತಿಯ ಬ್ಯಾಕ್‍ಫ್ಲಿಪ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸೀರೆ ಧರಿಸಿ ಮಾಡಿರುವ ಕಸರತ್ತು ಕಂಡ ನೆಟ್ಟಿಗರು ಮೆಚ್ಚುಗೆ ಸೂಚಿಸಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಬ್ಯಾಕ್‍ಫ್ಲಿಪ್ ಮಾಡಿರುವ ಯುವತಿಯ ಹೆಸರು ಮಿಲಿ ಸರ್ಕಾರ. ಈ ಬ್ಯಾಕ್‍ಫ್ಲಿಪ್ ಸೇರಿದಂತೆ ಹಲವು ಕಸರತ್ತಿನ ವೀಡಿಯೋಗಳನ್ನು ಮಿಲಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಮಿಲಿ ಓರ್ವ ಯೋಗಾಪಟು, ಕಟೆಂಪರಿ, ಡ್ಯಾನ್ಸರ್ ಆಗಿದ್ದಾರೆ. ಬಾಲಿವುಡ್ ನಟ ಟೈಗರ್ ಶ್ರಾಫ್ ಸಹ …

Read More »

ಜೈಲಿಗೆ ಹೋಗಿ ಬಂದರೂB.S.Y.ಗೆ ಬುದ್ಧಿ ಇಲ್ಲ: ವಾಟಾಳ್

ಹಾಸನ: ಜೈಲಿಗೆ ಹೋಗಿ ಬಂದರೂ ಯಡಿಯೂರಪ್ಪರಿಗೆ ಬುದ್ಧಿ ಇಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಿಎಂ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.ಇಂದು ಹಾಸನದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪರವರೇ ನಾವು ಹೋರಾಟದ ಮೂಲಕ ಜೈಲಿಗೆ ಹೋಗುತ್ತಿದ್ದೇವೆ. ನಿಮ್ಮ ಹಾಗೆ ಬೇರೆಯದಕ್ಕೆ ಜೈಲಿಗೆ ಹೋಗಿಲ್ಲ. ನಾಳೆ ಕೇರಳ ಮತ್ತು ತಮಿಳುನಾಡಿನವರು ಪ್ರಾಧಿಕಾರ ಮಾಡಲು ಕೇಳಬಹುದು. ಎಲ್ಲರೂ ಪ್ರಾಧಿಕಾರ ಮಾಡಿ ಎಂದು ಹೇಳ್ತಾರೆ ಆಗ ಪ್ರಾಧಿಕಾರ ಮಾಡ್ತೀರಾ ಎಂದು ಪ್ರಶ್ನೆ ಮಾಡಿದರು. ಗೋವಾದಲ್ಲಿ ಶೇ …

Read More »

ರೆಡ್ಡಿ ಬ್ರದರ್ಸ್ ಮತ್ತು ರಾಮುಲು ನಡುವೆ ಬಿರುಕು

ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿ ರೆಡ್ಡಿಗಳ ಮೂಲಕ ದೇಶದಲ್ಲಿಯೇ ಗುರುತಿಸಿಕೊಳ್ಳುವಂತಾಗಿತ್ತು. ಆದರೆ ದಿನೇ ದಿನೇ ರೆಡ್ಡಿಗಳ ಪಾರುಪತ್ಯ ಜಿಲ್ಲೆಯಲ್ಲಿ ಕಡಿಮೆಯಾದಂತೆ ಕಾಣಿಸುತ್ತಿದೆ. ಅದರಲ್ಲೂ ಅಖಂಡ ಬಳ್ಳಾರಿ ಜಿಲ್ಲೆ ಇಬ್ಭಾಗವಾದ ಮೇಲಂತೂ ಈ ಸಂಶಯ ರಾಜಕೀಯ ವಲಯದಲ್ಲಿ ಮತ್ತಷ್ಟು ಜೋರಾಗಿದೆ. ಇದೆಲ್ಲದರ ನಡುವೆಯೂ ಸಚಿವ ರಾಮುಲು, ರೆಡ್ಡಿ ಬ್ರದರ್ಸ್ ಜೊತೆಗಿದ್ದರೆ ಯಾರು ಏನು ಮಾಡಿಕೊಳ್ಳಲು ಆಗಲ್ಲ ಎಂಬ ಮಾತಿತ್ತು. ಆದರೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರೆಡ್ಡಿ ಬ್ರದರ್ಸ್ ಮತ್ತು ರಾಮುಲು ನಡುವೆ …

Read More »

ಸಕ್ಕರೆ ಗೊಂಬೆ ತಯಾರಿಕೆ ಒಂದು ಕಲೆ

ಸಕ್ಕರೆ ಆರತಿಯ ಪರಿಷೆ- ಗೌರಿಹಬ್ಗೌರಿಹಬ್ಬ ಎಂದರೆ ಅಣ್ಣ ತಂಗಿಯರ ಹಾಗೂ ಸೊಸೆ ಮಾವಂದಿರ, ಭಾವನಾತ್ಮಕ ಸಂಬಂಧಕ್ಕೆ ಬೆಸುಗೆ ಹಾಕುವ ಹಬ್ಬ ಎನ್ನಲಾಗುತ್ತಿದೆ.ಕೆಲವು ಪ್ರತಿಷ್ಠಿತ ಮನೆಗಳಲ್ಲಿ ಹಾಗೂ ದೇವಸ್ಥಾನದಲ್ಲಿ ಮಾತ್ರ, ಪ್ರತಿಷ್ಠಾಪಿಸುವ ಗೌರಮ್ಮನ ವಿಗ್ರಹಕ್ಕೆ ಗೌರಿ ಹುಣ್ಣಿಮೆ ರಾತ್ರಿಯಂದು ಸಕ್ಕರೆ ಗೊಂಬೆಗಳಿಂದ ಬೆಳಗುವ ಮೂಲಕ ಹಬ್ಬ ಪರಿಪೂರ್ಣವಾಗಲಿದೆ.ಮಕ್ಕಳು ಹೆಂಗಳೆಯರು ಗೌರಿಗೆ ಬೆಳಗಲು ಓಡಾಡುವ ಹೆಣ್ಣು ಮಕ್ಕಳ ಸಂಭ್ರಮ ಹೇಳತೀರದು. ಸಕ್ಕರೆ ಗೊಂಬೆಗಳಿರುವ ತಟ್ಟೆಯಲ್ಲಿ ದೀಪ ಹಚ್ಚಿಕೊಂಡು ಗೌರಮ್ಮನ ವಿಗ್ರಹಕ್ಕೆ ಆರತಿ ಎತ್ತಿ …

Read More »

ಬೆಳಗಾವಿ, ನಿಪ್ಪಾಣಿ ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು,ಅಜಿತ್ ಪವಾರ್ ಹೇಳಿಕೆ ನೀಡಿ ಇತ್ತೀಚೆಗೆ ಕನ್ನಡಿಗರ ಆಕ್ರೋಶಕ್ಕೆ ಕಾರಣ

ಕಾರವಾರ: ಬೆಳಗಾವಿ, ನಿಪ್ಪಾಣಿ, ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬುದಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆ ನೀಡಿ ಇತ್ತೀಚೆಗೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದರು. ಆದರೆ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಕಾರವಾರವನ್ನು ಈಗಾಗಲೇ ಮಹಾರಾಷ್ಟ್ರಕ್ಕೆ ಸೇರಿಸುವ ಮೂಲಕ ಕಾರವಾರದ ತನ್ನ ಗ್ರಾಹಕರಿಗೆ ‘ವೆಲ್ ಕಮ್ ಟು ಮಹಾರಾಷ್ಟ್ರ’ ಎಂಬ ಸಂದೇಶ ರವಾನಿಸಿ ಕೆಣಕಿದೆ. ಯಾವುದೇ ಕಂಪನಿಯ ನೆಟ್‍ವರ್ಕ್ ಇರಲಿ ಗ್ರಾಹಕರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಳಿದಾಗ ಆ ರಾಜ್ಯಕ್ಕೆ …

Read More »