Breaking News

ಕೆಜಿಎಫ್ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ‘ಹೊಂಬಾಳೆ ಫಿಲ್ಮ್ಸ್‌’ ಬ್ಯಾನರ್‌ನಲ್ಲಿ ಪ್ರಭಾಸ್‌ ಸಿನಿಮಾ

ಬೆಂಗಳೂರು: ಕೆಜಿಎಫ್ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ‘ಹೊಂಬಾಳೆ ಫಿಲ್ಮ್ಸ್‌’ ಬ್ಯಾನರ್‌ನಲ್ಲಿ ಸೆಟ್ಟೇರಲಿರುವ ಹೊಸ ಸಿನಿಮಾ ಘೋಷಣೆಯಾಗಿದ್ದು, ಟಾಲಿವುಡ್‌ ನಟ ಪ್ರಭಾಸ್‌ ಜೊತೆ ಪ್ಯಾನ್‌ ಇಂಡಿಯಾ ಸಿನಿಮಾ ಮಾಡುವುದಾಗಿ ಪ್ರಶಾಂತ್ ನೀಲ್ ಘೋಷಿಸಿದ್ದಾರೆ. ಈಗಾಗಲೇ ಕೆಜಿಎಫ್ ಚಾಪ್ಟರ್-1 ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದು, ಕೆಜಿಎಫ್-2 ಚಿತ್ರ ಕೂಡ ಬಿಡುಗಡೆಗೆ ಸಜ್ಜಾಗಿದೆ. ಭಾರತೀಯ ಸಿನಿರಂಗದಲ್ಲಿ ಹೊಸ ನಿರೀಕ್ಷೆಯನ್ನು ಮೂಡಿಸಿದೆ. ಇದೇ ವೇಳೆ ಕೆಜಿಎಫ್ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ …

Read More »

ಗೋಕಾಕ್ ಫಾಲ್ಸ್ ಬಳಿ ನವಜಾತ ಗಂಡು ಶಿಸುವೊಂದು ಪತ್ತೆ

  ಗೋಕಾಕ್: ಗೋಕಾಕ್ ಫಾಲ್ಸ್ ಬಳಿ ನವಜಾತ ಗಂಡು ಶಿಸುವೊಂದು ಪತ್ತೆಯಾಗಿದೆ. ಗೋಕಾಕ ಫಾಲ್ಸ್ ಸಮೀಪದ ರಸ್ತೆ ಪಕ್ಕದಲ್ಲಿ ಅಂದಾಜು 3 ದಿನದ ನವಜಾತ ಗಂಡು ಶಿಶುವನ್ನು ಬಿಟ್ಟು ಹೋಗಲಾಗಿದೆ. ನವ್ಹೆಂಬರ್ 26 ರಂದು, ಗುರುವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಶಿಶು ಪತ್ತೆಯಾಗಿದೆ. ಶಿಶುವನ್ನು ಸ್ಥಳಿಯ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿ ರಕ್ಷಣೆ ಮಾಡಿ ಬೆಳಗಾವಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿದ್ದಾರೆ. ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ …

Read More »

ಸನ್ನಿಡಿಯೋಲ್ ಅವರಿಗೆ ಕೊರೊನಾ ಪಾಸಿಟಿವ್

ಮುಂಬೈ,ಡಿ.2- ಇತ್ತೀಚೆಗೆ ಭುಜದ ಶಸ್ತ್ರ ಚಿಕಿತ್ಸೆಗೆ ಒಳ ಗಾಗಿದ್ದ ಬಾಲಿವುಡ್ ನಟ ಹಾಗೂ ಸಂಸದ ಸನ್ನಿಡಿಯೋಲ್ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಸನ್ನಿಡಿಯೋಲ್ ಅವರು ತಮ್ಮ ಟ್ವಿಟ್ಟರ್ ಮೂಲಕ ಈ ಸುದ್ದಿ ತಿಳಿಸಿದ್ದು ನನಗೆ ಕೊರೊನಾ ಸೋಂಕು ಬಂದಿರುವುದು ದೃಢಪಟ್ಟಿರುವುದರಿಂದ ನಾನು ವಿಶ್ರಾಂತಿ ಪಡೆಯುತ್ತಿದ್ದೇನೆ, ನನ್ನ ಸಂಪರ್ಕದಲ್ಲಿ ಇರುವವರು ಕೂಡ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಭುಜದ ಶಸ್ತ್ರಚಿಕಿತ್ಸೆಯ ನಂತರ ಸನ್ನಿಡಿಯೋಲ್ ಮನಾಲಿ ಯಲ್ಲಿರುವ ತಮ್ಮ ಫಾರ್ಮ್‍ಹೌಸ್‍ನಲ್ಲಿ ವಿಶ್ರಾಂತಿ …

Read More »

ಹೆಚ್ಚಿದ ಅಗರಬತ್ತಿ ಬೇಡಿಕೆ, ವಿದೇಶಕ್ಕೂ ಪಸರಿಸಿದ ಪರಿಮಳ..!

ಬೆಂಗಳೂರು, ಡಿ.2- ಭಾರತೀಯ ಅಗರ್‍ಬತ್ತಿ ಉದ್ಯಮವು ದೇಶೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ವರ್ಷಗಳಿಂದ ಕ್ಷಿಪ್ರಗತಿಯಲ್ಲಿ ರಫ್ತಿನಲ್ಲೂ ಸಕಾರಾತ್ಮಕ ಬೆಳವಣಿಗೆ ಕಾಣುತ್ತಿದೆ ಎಂದು ಅಖಿಲ ಭಾರತ ಅಗರ್‍ಬತ್ತಿ ಉತ್ಪಾದಕರ ಸಂಘದ ಅಧ್ಯಕ್ಷ ಅರ್ಜುನ್ ರಂಗಾ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ಆದಾಯಕ್ಕೆ ಹೋಲಿಸಿದರೆ ಈ ವರ್ಷ ಕೇವಲ 10 ತಿಂಗಳಲ್ಲೇ ದಾಖಲೆಯ ವಹಿವಾಟು ನಡೆದಿದೆ. ಅಮೆರಿಕ, ಇಂಗ್ಲೆಂಡ್, ಮಲೇಷಿಯಾ, ನೈಜೀರಿಯಾ ರಾಷ್ಟ್ರಗಳು ಅಗರ್‍ಬತ್ತಿ ಹಾಗೂ ಸಂಬಂಧಿತ ಉತ್ಪನ್ನಗಳಿಗೆ ಹೆಚ್ಚಿನ …

Read More »

ರಾಜ್ಯದಲ್ಲಿ ಆಲ್ ಲೈನ್ ಗೇಮ್ ಗಳನ್ನು ಬ್ಯಾನ್ ಮಾಡಿ ಆದೇಶ

: ಆನ್ ಲೈನ್ ಗೇಮ್ ಗಳಿಂದ ಹೆಚ್ಚುತ್ತಿರುವ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದಲ್ಲಿ ಆಲ್ ಲೈನ್ ಗೇಮ್ ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದ್ದಾರೆ. ಆನ್ ಲೈನ್ ಗೇಮ್ ಗೆ ದಾಸರಾಗಿದ್ದ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿದ್ದರು. ಅಲ್ಲದೇ ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದ್ದವು. ಇದರ ಬೆನ್ನಲ್ಲೇ ದಿಟ್ಟ ಕ್ರಮ ಕೈಗೊಂಡಿರುವ ಆಂದ್ರ ಸರ್ಕಾರ, ರಾಜ್ಯದಲ್ಲಿ ಆನ್ ಲೈನ್ …

Read More »

ಕಲಬುರಗಿ ಜಿಲ್ಲೆಯ 19 ಗ್ರಾಮ ಪಂಚಾಯತ್‍ಗಳಲ್ಲಿ ಚುನಾವಣೆ ನಡೆಸಲಾಗುತ್ತಿಲ್ಲ:ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ

ಕಲಬುರಗಿ : ನ್ಯಾಯಾಲಯದಲ್ಲಿನ ಪ್ರಕರಣ ಬಾಕಿ, ಅವಧಿ ಮುಕ್ತಾಯವಾಗದ ಹಾಗೂ ಮತ್ತಿತರರ ಕಾರಣದಿಂದ ಕಲಬುರಗಿ ಜಿಲ್ಲೆಯ 19 ಗ್ರಾಮ ಪಂಚಾಯತ್‍ಗಳಲ್ಲಿ ಚುನಾವಣೆ ನಡೆಸಲಾಗುತ್ತಿಲ್ಲ ಎಂದು ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ. ಯಾವ ಗ್ರಾಮ ಪಂಚಾಯತಿಗಳಲ್ಲಿ ಚುನಾವಣೆ ಇಲ್ಲ ಎಂದು ನೋಡುವುದಾದರೆ. ಚಿತ್ತಾಪುರ ತಾಲೂಕಿನ 20-ಡೊಣಾಗಾಂವ, 25-ಕೋಲ್ಲೂರ, 27-ರಾಂಪೂರಹಳ್ಳಿ. ಚಿಂಚೋಳಿ ತಾಲೂಕಿನ 14-ಕರ್ಚಖೇಡ, 15-ಗರಗಪಳ್ಳಿ. ಕಮಲಾಪುರ ತಾಲೂಕಿನ 03-ಮರಗುತ್ತಿ, 17-ಮುದ್ದಡಗಾ. ಕಾಳಗಿನ ತಾಲೂಕಿನ 11-ಶೇಳ್ಳಗಿ, 16-ಮೋಘಾ, …

Read More »

B.S.Y. ಅವರ ಬೆಳಗಾವಿ ಪ್ರವಾಸ ಪಟ್ಟಿ ಪ್ರಕಟ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಳಗಾವಿ ಪ್ರವಾಸ ಪಟ್ಟಿ ಪ್ರಕಟವಾಗಿದೆ. ಶುಕ್ರವಾರ ನಡೆಯಲಿರುವ ಬಿಜೆಪಿ ಕೋರ್ ಕಮಿಟಿ ಸಭೆ ಮತ್ತು ಶನಿವಾರ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ಆಗಮಿಸಲಿದ್ದಾರೆ.   ಶುಕ್ರವಾರ ಮಧ್ಯಾಹ್ನ 3.40ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಯಡಿಯೂರಪ್ಪ, ರಾತ್ರಿ 7.30ಕ್ಕೆ ಯು.ಕೆ.27 ಹೊಟೆಲ್ ನಲ್ಲಿ ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸುವರು. ಅಂದು ಬೆಳಗಾವಿಯಲ್ಲೇ ವಾಸ್ತವ್ಯ ಮಾಡಲಿರುವ ಯಡಿಯೂರಪ್ಪ ಶನಿವಾರ ಬೆಳಗ್ಗೆ 10 …

Read More »

ಸಂತೋಷ್ ಆತ್ಮಹತ್ಯೆ ಯತ್ನದ ಹಿಂದೆ ಹಲವು ರಹಸ್ಯಗಳಿವೆ: ಯತ್ನಾಳ್ 

ವಿಜಯಪುರ: ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಹೊಸ ಬಾಂಬ್ ಸಿಡಿಸಿದ್ದು,   ಪ್ರಕರಣದ ಹಿಂದೆ ದೊಡ್ಡ ಕಥೆಯಿದೆ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಸಂತೋಷ್ ಆತ್ಮಹತ್ಯೆ ಯತ್ನದ ಹಿಂದೆ ಹಲವು ರಹಸ್ಯಗಳಿವೆ. ಈ ಬಗ್ಗೆ ಕಾಲ ಬಂದಾಗ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

Read More »

ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ‘ ಎಂಬ ಆರೋಪ

ಬೆಳಗಾವಿ: ‘ ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ‘ ಎಂಬ ಆರೋಪ ಕೇಳಿ ಬಂದಿದೆ. ಕೊರೊನಾ ಕಾರಣದಿಂದ ಹೊರಗಿನ ಆಹಾರ ಪೂರೈಸದಂತೆ ಸರ್ಕಾರ ನಿರ್ದೇಶನ ನೀಡಿದೆ. ಸಂಬಂಧಿಕರ ಭೇಟಿಗೂ ಸಹ ಅವಕಾಶ ವಿಲ್ಲ. ಆದೆರ ಕೈದಿಗಳಿಗೆ ಹೊರಗಿನವರು ಅಧಿಕಾರಿಗಳ ಸಹಾಯದಿಂದ ಆಹಾರ ತಂದು ಕೊಡಲಾಗುತ್ತದೆ ಎಂದು ದೂರು …

Read More »

ರಾಯಬಾಗ ಪ್ರಜಾವಾಣಿ ವರದಿಗಾರ ಮಲ್ಲಪ್ಪ ಎಚ್ ರಾಮದುರ್ಗ ಅವರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಜೂರು ಮಾಡಿದ್ದಾರೆ.

ಇತ್ತೀಚೆಗೆ ಕೋವಿಡ್ ಗೆ ಬಲಿಯಾದ ಬೆಳಗಾವಿ ಜಿಲ್ಲೆಯ ರಾಯಬಾಗ ಪ್ರಜಾವಾಣಿ ವರದಿಗಾರ ಮಲ್ಲಪ್ಪ ಎಚ್ ರಾಮದುರ್ಗ ಅವರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಜೂರು ಮಾಡಿದ್ದಾರೆ.  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(KUWJ)ದ ಮನವಿ ಮೇರೆಗೆ ಈ ನೆರವು ಮಂಜೂರು ಮಾಡಲಾಗಿದೆ. ಪತ್ರಕರ್ತ ಮಲ್ಲಪ್ಪ ರಾಮದುರ್ಗ  ಅವರ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಬೆಳಗಾವಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ರಾಜ್ಯ ಸಂಘದ ಉಪಾಧ್ಯಕ್ಷ ಪುಂಡಲಿಕ …

Read More »