Breaking News

ಮೊದಲ ರಾತ್ರಿಯೇ ಕಂಠ ಪೂರ್ತಿ ಕುಡಿದುಬಂದ ಪತಿ ಮದುವೆಯಾದ ಒಂದೇ ತಿಂಗಳಲ್ಲಿ ಮುರಿದುಬಿತ್ತು ದಾಂಪತ್ಯ ಜೀವನ

Spread the love

 

 

ಬೆಂಗಳೂರು: ಪತಿ ಮಹಾಶಯ ಫಸ್ಟ್ ನೈಟ್ ದಿನವೇ ಕಂಠಪೂರ್ತಿ ಕುಡಿದು ಬಂದು ಥಳಿಸಿದ್ದೂ ಅಲ್ಲದೇ ಅದಾಗಲೇ ಒಂದು ಮದೆಯಾಗಿದ್ದ ವಿಷಯವನ್ನೂ ಮುಚ್ಚಿಟ್ಟು ವಂಚಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅಕ್ಟೋಬರ್ 29ರಂದು ಭರತ್ ಎಂಬಾತನನ್ನು ವಿವಾಹವಾಗಿದ್ದ ಯುವತಿ, ಇದೀಗ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಫಸ್ಟ್ ನೈಟ್ ದಿನವೇ ಕುಡಿದು ಬಂದ ಪತಿಯನ್ನು ಕಂಡು ಶಾಕ್ ಆದ ಯುವತಿ ಫಸ್ಟ್ ನೈಟ್ ರದ್ದು ಮಾಡಿದ್ದಾಳೆ. ಎರಡನೇ ದಿನವೂ ಮತ್ತೆ ಪತಿ ಕುಡಿದು ಬಂದಿದ್ದಾನೆ. ಪತ್ನಿ ರಂಪಾಟ ನಡೆಸಿದಾಗ ಪತ್ನಿಯನ್ನು ಚೆನ್ನಾಗಿ ಥಳಿಸಿದ್ದಾನೆ.

ಬಳಿಕ ಭರತ್ ಮನೆಯವರು ಕಿರುಕುಳ ನೀಡಿದ್ದಾರೆ ಮಾತ್ರವಲ್ಲ, ಮಾಟಮಂತ್ರ ಮಾಡಿ ಚಿತ್ರಹಿಂಸೆ ನೀಡಿದ್ದಾರೆ. ಇದರಿಂದ ಬೇಸತ್ತ ಮಹಿಳೆ ಕೊನೆಗೂ ಪತಿ ಮನೆಯಿಂದ ತಪ್ಪಿಸಿಕೊಂಡು ಬಂದು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಧ್ಯ ಪತಿ ಭರತ್ ನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 29ರಂದು ಆದ ವಿವಾಹ ನ.29ಕ್ಕೆ ಕೊನೆಯಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ