Breaking News

ಶಬರಿಮಲೆಗೆ ಹೋಗುವ ಭಕ್ತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ತಿರುವನಂತಪುರಂ,ನ.2- ಶಬರಿಮಲೈ ದೇವಾಲಯದ ಇತಿಹಾಸದಲ್ಲೇ ಮೊದಲ ಬಾರಿಗೆ ನ.16ರಿಂದ ಆರಂಭವಾಗುವ ಹಬ್ಬದ ದಿನಗಳಲ್ಲಿ ಎಲ್ಲಾ ಭಕ್ತರನ್ನು ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ನಿಯಂತ್ರಿಸಲಾಗುತ್ತದೆ ಎಂದು ತಿರುಬಂಕೂರು ದೇವಸ್ವಂ ಮಂಡಳಿ ತಿಳಿಸಿದೆ. ವಾರದ ದಿನಗಳಲ್ಲಿ ದಿನಕ್ಕೆ 1,000 ಭಕ್ತರಿಗೆ ಮಾತ್ರ ದೇವಾಲಯಕ್ಕೆ ಅವಕಾಶವಿದ್ದು, ಶನಿವಾರ ಮತ್ತು ಭಾನುವಾರದಂದು 2,000 ಭಕ್ತರಿಗೆ ಪ್ರವೇಶ ಅವಕಾಶವನ್ನು ವಿಸ್ತರಿಸಲಾಗಿದೆ. ಮಂಡಲ-ಮಕರ, ವಿಲಕ್ಕು ಪೂಜ ದಿನಗಳಲ್ಲಿ 5,000 ಮಂದಿ ಭಕ್ತರಿಗೆ ದರ್ಶನದ ಅವಕಾಶವಿದೆ. ಡಿಸೆಂಬರ್‍ನಲ್ಲಿ ಎಲ್ಲಾ ದಿನಗಳವರೆಗೆ …

Read More »

ಸಿಎಂ ಯಡಿಯೂರಪ್ಪ ಅವರನ್ನ ಅಲ್ಲಾಡಿಸೋಕೆ ಯಾರಿಗೂ ಆಗೋದಿಲ್ಲ:ಬಿಸಿ ಪಾಟೀಲ್

ಹಾವೇರಿ: ಸಿಎಂ ಯಡಿಯೂರಪ್ಪ ಅವರನ್ನ ಅಲ್ಲಾಡಿಸೋಕೆ ಯಾರಿಗೂ ಆಗೋದಿಲ್ಲ. ಬಿಎಸ್‍ವೈ ನೇತೃತ್ವದಲ್ಲಿ ಸರ್ಕಾರದ ಅಧಿಕಾರದ ಅವಧಿ ಪೂರ್ಣಗೊಳ್ಳುತ್ತದೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಯಡಿಯೂರಪ್ಪ ಅವರ ನೇತೃತ್ವದಲ್ಲೇ ನಡೆಯುತ್ತೆ. ಬಾಯಿ ಚಟಕ್ಕೆ, ನಾಲಿಗೆ ಚಟಕ್ಕೆ ಯಾರು ಯಾರೋ ಏನೇನೋ ಹೇಳ್ತಾರೆ. ಪ್ರಚಾರಕ್ಕಾಗಿ ಹೇಳೋರ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದರು. ಪಕ್ಷದ ವಿರುದ್ಧ ಮಾತನಾಡಿರುವ ಬಗ್ಗೆ ಕ್ರಮಕೈಗೊಳ್ಳವುದು ಈಗ …

Read More »

ಪ್ರಶಸ್ತಿ ವಿತರಣೆ ವೇಳೆ ಯುವತಿಯ ಗೋಲ್ಡ್ ಕೋಟೆಡ್ ಬಳೆ ಗಮನಿಸಿದ ಸಿಎಂ, ಕೈ ಹಿಡಿದು ಏನಮ್ಮಾ ಈ ಬಳೆ ಚಿನ್ನದ್ದಾ ಅಂತ ಪ್ರಶ್ನಿಸಿದರು

ಬೆಂಗಳೂರು: ಇಂದು ವಿಧಾನಸೌಧದಲ್ಲಿ ನಡೆದ ಪ್ರಶಸ್ತಿ ಸಮಾರಂಭದ ವೇಳೆ ಸಿಎಂ ಯಡಿಯೂರಪ್ಪ ಹಾಸ್ಯ ಎಲ್ಲರ ಗಮನ ಸೆಳೆಯಿತು. ಪ್ರಶಸ್ತಿ ವಿತರಣೆ ವೇಳೆ ಯುವತಿಯ ಗೋಲ್ಡ್ ಕೋಟೆಡ್ ಬಳೆ ಗಮನಿಸಿದ ಸಿಎಂ, ಕೈ ಹಿಡಿದು ಏನಮ್ಮಾ ಈ ಬಳೆ ಚಿನ್ನದ್ದಾ ಅಂತ ಪ್ರಶ್ನಿಸಿದರು. ಯುವತಿ ಚಿನ್ನದ್ದು ಅಲ್ಲ ಅಂದಾಗ ಸಿಎಂ ನಕ್ಕು, ಗೋಲ್ಡ್ ಹಾಕಿಕೊಂಡು ಬರಬೇಕಿತ್ತಾ ಅಲ್ವಾ ಎಂದರು. ನನ್ನ ಕೈಯಲ್ಲಿ ದೊಡ್ಡ ಬಳೆ ನೋಡಿ ಚಿನ್ನದ್ದಾ ಅಂತ ಕೇಳಿದರು. ಅಲ್ಲ …

Read More »

ಭೀಮಾ ತೀರದಲ್ಲಿ ಮತ್ತೆ ಗುಂಡಿನ  ಸದ್ದುಮಹಾದೇವ ಭೈರಗೊಂಡ  ಮೇಲೆ ಫೈರಿಂಗ್

ವಿಜಯಪುರ:  ಭೀಮಾ ತೀರದಲ್ಲಿ ಮತ್ತೆ ಗುಂಡಿನ  ಸದ್ದು ಮೊಳಗಿದ್ದು, ಹಂತಕ  ಮಹಾದೇವ ಭೈರಗೊಂಡ  ಮೇಲೆ ದುಷ್ಕರ್ಮಿಗಳ ತಂಡ ಫೈರಿಂಗ್ ನಡೆಸಿದೆ.  ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಕೆರೂರು ಬಳಿ  ಮಹಾದೇವ ಸಾಹುಕರ್ ಕಾರಿಗೆ ಟಿಪ್ಪರ್ ನಿಂದ ಡಿಕ್ಕಿ ಹೊಡೆಸಿ  ಬಳಿಕ  ದುಷ್ಕರ್ಮಿಗಳು  3-4 ಸುತ್ತು ಪೈರಿಂಗ್ ನಡೆಸಿದ್ದಾರೆ.  ಗುಂಡು ತಗುಲಿದ ಮಹಾದೇವ್ ಸಾಹುಕಾರ್ ತೀವ್ರ  ಗಾಯಗೊಂಡಿದ್ದು, ಆತನನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ …

Read More »

ಗಡಿ ವಿವಾದ  ವಿಚಾರವಾಗಿ ಕರ್ನಾಟಕದೊಂದಿಗೆ ಚರ್ಚಿಸುವಂತೆ ಶಿವಸೇನೆ ಮಹಾರಾಷ್ಟ್ರದ ರಾಜ್ಯಪಾಲರಿಗೆ ಆಗ್ರಹಿ

ಮುಂಬೈ: ಗಡಿ ವಿವಾದ  ವಿಚಾರವಾಗಿ ಕರ್ನಾಟಕದೊಂದಿಗೆ ಚರ್ಚಿಸುವಂತೆ ಶಿವಸೇನೆ ಮಹಾರಾಷ್ಟ್ರದ ರಾಜ್ಯಪಾಲರಿಗೆ ಆಗ್ರಹಿಸಿದೆ. ಶಿವಸೇನೆ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಗಡಿ ವಿಚಾರ ರಾಜ್ಯಪಾಲರು ಕರ್ನಾಟಕದೊಂದಿಗೆ ಚರ್ಚಿಸುವಂತೆ ಬರೆದಿದ್ದು,   ಡಿಸಿಎಂ ಲಕ್ಷ್ಮಣ ಸವದಿ ಅವರ ಸೂರ್ಯ, ಚಂದ್ರ ಇರುವವರೆಗೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ  ಹೇಳಿಕೆ ಪ್ರಸ್ತಾಪಿಸಿದೆ. ಮರಾಠಿ ಭಾಷಿಕರ ಮೇಲೆ ಈ ಭಾಗದಲ್ಲಿ ಕಳೆದ 60 ವರ್ಷಗಳಿಂದ ದೌರ್ಜನ್ಯ ನಡೆಯುತ್ತಿದೆ. ಕರ್ನಾಟಕ ಇದನ್ನು ನಿಭಾಯಿಸುತ್ತಿರುವ ಕ್ರಮ ಈ …

Read More »

ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿಪಟಾಕಿ ಮಾರಾಟದ ಮೇಲೆ ನಿಷೇಧ

ಜೈಪುರ: ಕೊರೊನಾ ರೋಗಿಗಳು ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ದೀಪಾಳಿಯ ಸಂದರ್ಭದಲ್ಲಿ ರಾಜಸ್ಥಾನ ಸರ್ಕಾರ ಪಟಾಕಿ ಮಾರಾಟದ ಮೇಲೆ ನಿಷೇಧ ವಿಧಿಸಿದೆ. ದೀಪಾವಳಿ ಹತ್ತಿರವಾಗುತ್ತಿರುವ ಹಿನ್ನೆಲೆ ಮಹತ್ವದ ನಿರ್ಧಾರವನ್ನು ರಾಜಸ್ಥಾನ ಸರ್ಕಾರ ಘೋಷಣೆ ಮಾಡಿದ್ದು, ರಾಜ್ಯದಲ್ಲಿ ಪಟಾಕಿ ಮಾರಾಟ ಮಾಡದಂತೆ ಸೂಚಿಸಿದೆ. ಪಟಾಕಿಯಿಂದ ವಾಯು ಮಾಲಿನ್ಯ ಉಂಟಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರವನ್ನು ಪ್ರಕಟಿಸಿದೆ. ಸಿಎಂ ಅಶೋಕ್ ಗೆಹ್ಲೋಟ್ ಅವರ ನೇತೃತ್ವದಲ್ಲಿ ಭಾನುವಾರ …

Read More »

ದಸರಾ ಸರಳ ಆಚರಣೆಯ ನಡುವೆಯೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಹೆಚ್ಚಳ:ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಮೈಸೂರು: ದಸರಾ ಸರಳ ಆಚರಣೆಯ ನಡುವೆಯೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ದಸರಾಗೆ ಪ್ರವಾಸಿತಾಣಗಳನ್ನು ಓಪನ್ ಮಾಡಿರುವ ಪರಿಣಾವನ್ನು ನಾವು ಎದುರಿಸಲೇಬೇಕು. ಆದ್ದರಿಂದ ಇದಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು. ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿದೆ. ಆದರೆ ಇನ್ನು 15 …

Read More »

ಸಿಎಂ ಆಗೋ ಭ್ರಮೆಯಲ್ಲಿರೋ ಡಿಕೆಶಿಗೆ ಸೋಲಿನ ಭಯ: ರೀರಾಮುಲು ವ್ಯಂಗ್ಯ

ಬಳ್ಳಾರಿ: ಉಪ ಚುನಾವಣೆ ಗೆದ್ದರೆ ಮುಖ್ಯಮಂತ್ರಿ ಆಗುವ ಭ್ರಮೆಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ಶಿರಾದಲ್ಲಿ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಚುನಾವಣಾ ಉಸ್ತುವಾರಿ ತೆಗೆದುಕೊಂಡಿದ್ದಾರೆ. ವಿಜಯೇಂದ್ರ ಹೋದ ಕಡೆ ಸೋಲು ಇಲ್ಲ. ಆದ್ರೆ ಶಿರಾದ ಜನತೆ ಮಾತ್ರ ಬಿಜೆಪಿಗೆ ಮತ ನೀಡಲಿದ್ದಾರೆ. ಈ ಹಿಂದೆ ಕೆ.ಆರ್.ಪೇಟೆ ಗೆಲುವಿಗೆ ಶ್ರಮಿಸಿದ್ದರು. ಆದ್ರೆ ಕಾಂಗ್ರೆಸ್ ಒಳ ಜಗಳದಿಂದಲೇ ಸೋಲುತ್ತೆ. ಸಿದ್ದರಾಮಯ್ಯನರವರು ಶಿರಾ ವಿಧಾನಸಭಾ …

Read More »

ಗೋಕಾಕದಲ್ಲಿ ಮಾಧವಾನಂದ ಪ್ರಭೂಜಿ ಜಯಂತಿ ಉದ್ಘಾಟಿಸಿದ ಸಚಿವ ರಮೇಶ್ ಜಾರಕಿಹೊಳಿ

      ಗೋಕಾಕದಲ್ಲಿ ಸ.ಸ.ಮಾಧವಾನಂದ ಪ್ರಭೂಜಿ ಅವರ 105 ನೇ ಜಯಂತಿ ಕಾರ್ಯಕ್ರಮವನ್ನು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಉದ್ಘಾಟಿಸಿದರು. ಗೋಕಾಕದಲ್ಲಿ ಸೋಮವಾರ ಸ.ಸ.ಮಾಧವಾನಂದ ಪ್ರಭೂಜಿ ಅವರ 105 ನೇ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಜಯಂತಿ ಅಂಗವಾಗಿ ಮಾಧವಾನಂದ ಪ್ರಭೂಜಿ ಅವರ ಪಾಲಕಿ ಉತ್ಸವದ ಮೆರವಣಿಗೆ ನಡೆಯಿತು. ಪ್ರಭೂಜಿ ಅವರ ಭಕ್ತರು ಭಜನೆ ಮೇಳದೊಂದಿಗೆ ಪಾಲಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ …

Read More »

ಬರುವ ಸ್ಥಳೀಯ ಮಟ್ಟದ ಚುನಾವಣೆ ಬಿಜೆಪಿಗೆ ಮಹತ್ವವಾಗಿದೆ.:ಈರಣ್ಣಾ ಕಡಾಡಿ

ಬೆಳಗಾವಿ:ಬರುವ ಸ್ಥಳೀಯ ಮಟ್ಟದ ಚುನಾವಣೆ ಬಿಜೆಪಿಗೆ ಮಹತ್ವವಾಗಿದೆ. ಎಲ್ಲ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕಿದೆ, ಕೇಂದ್ರ ಸರಕಾರದ ಮಹತ್ತರ ಯೋಜನೆಯನ್ನು ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು. ಸೋಮವಾರ ನಗರದ ಧರ್ಮನಾಥ ಭವನದಲ್ಲಿ ಬೆಳಗಾವಿ ಗ್ರಾಮಾಂತರ, ಮಹಾನಗರ ಮತ್ತು ಚಿಕ್ಕೋಡಿ ಜಿಲ್ಲೆಯ ಪ್ರಮುಖರ ಪ್ರಶಿಕ್ಷಣ ವರ್ಗದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 2014ರ ಬಳಿಕ …

Read More »