Breaking News
Home / Uncategorized / ಸಕ್ಕರೆ ಗೊಂಬೆ ತಯಾರಿಕೆ ಒಂದು ಕಲೆ

ಸಕ್ಕರೆ ಗೊಂಬೆ ತಯಾರಿಕೆ ಒಂದು ಕಲೆ

Spread the love

ಸಕ್ಕರೆ ಆರತಿಯ ಪರಿಷೆ- ಗೌರಿಹಬ್ಗೌರಿಹಬ್ಬ ಎಂದರೆ ಅಣ್ಣ ತಂಗಿಯರ ಹಾಗೂ ಸೊಸೆ ಮಾವಂದಿರ, ಭಾವನಾತ್ಮಕ ಸಂಬಂಧಕ್ಕೆ ಬೆಸುಗೆ ಹಾಕುವ ಹಬ್ಬ ಎನ್ನಲಾಗುತ್ತಿದೆ.ಕೆಲವು ಪ್ರತಿಷ್ಠಿತ ಮನೆಗಳಲ್ಲಿ ಹಾಗೂ ದೇವಸ್ಥಾನದಲ್ಲಿ ಮಾತ್ರ, ಪ್ರತಿಷ್ಠಾಪಿಸುವ ಗೌರಮ್ಮನ ವಿಗ್ರಹಕ್ಕೆ ಗೌರಿ ಹುಣ್ಣಿಮೆ ರಾತ್ರಿಯಂದು ಸಕ್ಕರೆ ಗೊಂಬೆಗಳಿಂದ ಬೆಳಗುವ ಮೂಲಕ ಹಬ್ಬ ಪರಿಪೂರ್ಣವಾಗಲಿದೆ.ಮಕ್ಕಳು ಹೆಂಗಳೆಯರು ಗೌರಿಗೆ ಬೆಳಗಲು ಓಡಾಡುವ ಹೆಣ್ಣು ಮಕ್ಕಳ ಸಂಭ್ರಮ ಹೇಳತೀರದು.

ಸಕ್ಕರೆ ಗೊಂಬೆಗಳಿರುವ ತಟ್ಟೆಯಲ್ಲಿ ದೀಪ ಹಚ್ಚಿಕೊಂಡು ಗೌರಮ್ಮನ ವಿಗ್ರಹಕ್ಕೆ ಆರತಿ ಎತ್ತಿ ಆ ಬಳಿಕ ಕುಟುಂಬದ ಸದಸ್ಯರಿಗೆ,ನೆರೆ ಹೊರೆಯವರಿಗೆ, ಸಂಬಂಧಿಕರಿಗೆ ಆರತಿ ಬೆಳಗುವ ಸಂಪ್ರದಾಯ ಕಾಣಬಹುದಾಗಿದೆ.
ಹಲವು ಕುಟುಂಬಗಳು ಕೆಲವೆಡೆ ಗೌರಿಹಬ್ಬಕ್ಕಿಂತ ತಿಂಗಳ ಮೊದಲೇ
ಸಕ್ಕರೆ ಗೊಂಬೆಗಳು ತಯಾರಿಕೆಯಲ್ಲಿ ತೊಡಗುತ್ತಾರೆ.
ಸಕ್ಕರೆ ಗೊಂಬೆ ತಯಾರಿಕೆ ಒಂದು ಕಲೆ:- ಶುದ್ಧ ಸಕ್ಕರೆಗೆ ತಕ್ಕಂತೆ ನೀರು, ನಿಂಬೆರಸ,ಹಾಲು,ಏಲಕ್ಕಿ ಹಾಕಿ ಒಲೆಯ ಮೇಲೆ ಹದ ಬರುವ ಹಾಗೆ ಕಾಯಿಸಲಾಗುತ್ತದೆ.

ಆ ಬಳಿಕ ಹದವನ್ನು ಗೊಂಬೆ ತಯಾರಿಕೆಯ ಕಟ್ಟಿಗೆ ಅಚ್ಚುಗಳಿಗೆ ಹಾಕಿದಾಗ ಕೆಲವೇ ಸಮಯದಲ್ಲಿ ಬಗೆಬಗೆಯ ಗೊಂಬೆಗಳು ಸಿದ್ಧವಾಗುತ್ತವೆ.
ಆಕರ್ಷಿಸುವ ವಿನ್ಯಾಸಗಳು:-
ಜನರಲ್ಲಿರುವ ಭಕ್ತಿ, ಭಾವನೆಗಳಿಗೆ ತಕ್ಕಂತೆ ಶಿವ, ಪಾರ್ವತಿ,ಒಂಟೆ,ಆನೆ,ರಥ, ಅರ್ಜುನನ ಬಿಲ್ಲು, ಮಂಟಪ,ಆಂಜನೇಯ, ಬಸವಣ್ಣ,ವಿವಿಧ ರೀತಿಯ ಪಶುಪಕ್ಷಿಗಳು ಹೀಗೆ ಅನೇಕ ಕಲಾಕೃತಿಗಳಲ್ಲಿ ವಿಧ ವಿಧದ ಬಣ್ಣಗಳಲ್ಲಿ ಆಕರ್ಷಿಸುತ್ತಿವೆ.
ಹೊಸದಾಗಿ ಮದುವೆ ನಿಶ್ಚಯಗೊಂಡ ವರನ ಕಡೆಯವರು ವಧುವಿನ ಮನೆಗೆ ಗೌರಿ ಹುಣ್ಣಿಮೆಯಂದು ದಂಡಿಯ ಜೊತೆಗೆ ಸಕ್ಕರೆ ಗೊಂಬೆಗಳನ್ನು ತೆಗೆದುಕೊಂಡು ಬರುವ ಸಂಪ್ರದಾಯವಿದೆ.

ಸಕ್ಕರೆ ಆರತಿ ತಯಾರಕ ಕೂಡ್ಲಿಗಿ ಪಟ್ಟಣದ ವಡ್ರಳ್ಳಿ ಸೋಮಣ್ಣ ತಿಳಿಸಿದಂತೆ ಗೌರಿ ಹುಣ್ಣಿಮೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ಮಾರುಕಟ್ಟೆಗೆ ಸಕ್ಕರೆ ಆರತಿಗಳನ್ನು ತಯಾರಿಸಿ ಮಾರುಕಟ್ಟೆಗೆ ಮಾರಲಾಗುವುದು ಎನ್ನುತ್ತಾರವರು.ಸಕ್ಕರೆ ಗೊಂಬೆಯ ಆರತಿಗಳು ಕೆ.ಜಿ.ಗೆ 80 ರಿಂದ 140 ರೂ ಬಣ್ಣ ಬಣ್ಣ ದಂಡಿಗಳು ಒಂದಕ್ಕೆ 40 ರಿಂದ 50 ರೂ. ಕೊಲುಂಗುರ 25 ರಿಂದ 40 ರೂ.ಗೆ ಮಾರಾಟವಾಗುತ್ತಿದ್ದವು.
ಈ ವರ್ಷವೂ ದರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಸದ್ಯ ಕೆ.ಜಿಗೆ 100ರೂ ರಿಂದ 120 ರೂ.ವರೆಗೂ ಮಾರಾಟ ಮಾಡಲಾಗುತ್ತದೆ ಹಬ್ಬದ ದಿನದಂದು 120 ರಿದ 160 ರೂ.ಸಕ್ಕರೆ ಆರತಿಗಳು ಮಾರಾಟ ಮಾಡಲಾಗುತ್ತದೆ ಎನ್ನುತ್ತಾರೆ ವ್ಯಾಪಾರಸ್ಥರು.ಕೂಡ್ಲಿಗಿ ಪಟ್ಟಣದಲ್ಲಿ ಐದಾರು ತಯಾರಕರಿದ್ದಾರೆ,ತಾಲೂಕಿನಾಧ್ಯಂತ ಒಟ್ಟಾರೆ ನೂರಾರು ಸಕ್ಕರೆ ಆರತಿ ತಯಾರಕರಿದ್ದಾರೆ.

ಬೆಲೆ ಸೇರಿದಂತೆ ತಯಾರಿಕೆಯಲ್ಲಿ ಬಳಸಲಾಗುವ ವಿವಿಧ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಸಹಜವಾಗಿ ಗೊಂಬೆಗಳ ಬೆಲೆ ಹೆಚ್ಚಾಗಿದೆ ಎನ್ನುತ್ತಾರ ವರು.ನಮಗೆ ಲಾಭ ಗಳಿಕೆ ಉದ್ದೇಶವಿಲ್ಲ ತಲೆ ತಲಾಂತರದಿಂದ ಮಾಡಿಕೊಂಡುಬಂದಿದ್ದು, ಸಂಪ್ರದಾಯ ಪಾಲನೆಗಾಗಿ ಗೊಂಬೆ ತಯಾರಿಕೆಯಲ್ಲಿ ತೊಡಗಿರುವುದಾಗಿ ವಡ್ರಳ್ಳಿ ಸೋಮಪ್ಪ ಹಾಗೂ ಕುಟುಂಬ ಹೇಳುತ್ತಾರೆ.


Spread the love

About Laxminews 24x7

Check Also

ಕ್ಯಾನ್ಸರ್‌ ರೋಗಿಗಳಿಗೆ ಸಿಹಿಸುದ್ದಿ: 72 ಲಕ್ಷ ರೂ. ನ Cancer ಔಷಧ ಇನ್ಮುಂದೆ 3 ಲಕ್ಷಕ್ಕೆ ಸಿಗುತ್ತೆ

Spread the love ನವದೆಹಲಿ : ಕ್ಯಾನ್ಸರ್‌ ರೋಗಿಗಳಿಗೆ ಝೈಡಸ್‌ ಕಂಪನಿ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಹೌದು 72 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ