Breaking News
Home / ರಾಜಕೀಯ / ಮಹಾರಾಷ್ಟ್ರ: ಕಸ್ಬಾ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ; ಬಿಜೆಪಿಗೆ ಮುಖಭಂಗ

ಮಹಾರಾಷ್ಟ್ರ: ಕಸ್ಬಾ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ; ಬಿಜೆಪಿಗೆ ಮುಖಭಂಗ

Spread the love

ಮುಂಬೈ: ಮಹಾರಾಷ್ಟ್ರ ರಾಜ್ಯದಲ್ಲಿ ಆಡಳಿತಾರೂಢ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ-ಶಿವಸೇನೆ ಸರಕಾರಕ್ಕೆ ಭಾರಿ ಹಿನ್ನಡೆಯಾಗಿದ್ದು, ತನ್ನ ಭದ್ರಕೋಟೆಯಾದ ಕಸ್ಬಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಪ್ರತಿಷ್ಠೆಯ ಹೋರಾಟದಲ್ಲಿ ಬಿಜೆಪಿ ಸೋಲನುಭವಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಧಾಂಗೇಕರ್ ಅವರು ಬಿಜೆಪಿ ಅಭ್ಯರ್ಥಿ ಹೇಮಂತ್ ರಸಾನೆ ಅವರನ್ನು 10,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು.

 

ಕಸ್ಬಾ ಕ್ಷೇತ್ರದಲ್ಲಿ 20ನೇ ಸುತ್ತಿನ ಅಂತ್ಯಕ್ಕೆ ಧಾಂಗೇಕರ್ 72,599 ಮತಗಳನ್ನು ಪಡೆದರೆ, ರಸಾನೆ 61,771 ಮತಗಳನ್ನು ಪಡೆದರು.

ತಮ್ಮ ಗೆಲುವಿಗೆ ಮತದಾರರೇ ಕಾರಣ ಎಂದು ಧಾಂಗೇಕರ್ ಹೇಳಿದರು, ‘ನನ್ನನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಮತದಾರರು ತೆಗೆದುಕೊಂಡಿದ್ದರಿಂದ ಇದು ಮತದಾರರ ಗೆಲುವು. ಕ್ಷೇತ್ರದ ಜನರಿಗಾಗಿ ಶ್ರಮಿಸುತ್ತೇನೆ ಮತ್ತು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ನಿಜವಾಗಿಸುತ್ತೇನೆ” ಎಂದರು.

ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಹಾಗೂ ಶಿವಸೇನೆಯ (ಯುಬಿಟಿ) ಆದಿತ್ಯ ಠಾಕ್ರೆ ಅವರು ನನ್ನನ್ನು ಅಭಿನಂದಿಸಲು ಕರೆ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಚಿಂಚ್ ವಾಡಾದಲ್ಲಿ ಬಿಜೆಪಿಗೆ ಮುನ್ನಡೆ

ಚಿಂಚ್‌ವಾಡ್‌ಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಅಶ್ವಿನಿ ಜಗತಾಪ್ ಸುಮಾರು 5,000 ಮತಗಳಿಂದ ಮುನ್ನಡೆ ಸಾಧಿಸಿದ್ದರೆ, ಸಮೀಪದ ಪ್ರತಿಸ್ಪರ್ಧಿ ಎನ್‌ಸಿಪಿಯ ನಾನಾ ಕೇಟ್ ಹಾಗೂ ಸ್ವತಂತ್ರ ಅಭ್ಯರ್ಥಿ ರಾಹುಲ್ ಕಲಾಟೆ ಹಿನ್ನಡೆಯಲ್ಲಿದ್ದಾರೆ.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ