Breaking News
Home / ರಾಜ್ಯ (page 612)

ರಾಜ್ಯ

ಬೆಳಗಾವಿಯಲ್ಲಿ ಅನುಭವ ಮಂಟಪ ನಿರ್ಮಾಣ,ಸಮುದಾಯದವರ ಮತ ಸೆಳೆಯಲು ಶಾಸಕರು ಕಸರತ್ತು

ಬೆಳಗಾವಿ: ಚುನಾವಣೆ (Election) ಸಮೀಪಿಸುತ್ತಿದ್ದಂತೆ ಸಮುದಾಯದವರ ಮತ ಸೆಳೆಯಲು ಶಾಸಕರು ಕಸರತ್ತು ನಡೆಸುತ್ತಿದ್ದಾರೆ. ಬೆಳಗಾವಿ (Belagavi) ಉತ್ತರ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತ ಸೆಳೆಯಲು ಶಾಸಕ ಅನಿಲ್ ಬೆನಕೆ (Anil Benake) ನಾನಾ ಕಸರತ್ತು ನಡೆಸಿದ್ದು, ಉತ್ತರ ಮತಕ್ಷೇತ್ರದಲ್ಲಿ ಲಿಂಗಾಯತ ಮತಗಳು ನಿರ್ಣಾಯಕ ಆಗಿವೆ. ಹೀಗಾಗಿ ಉತ್ತರ ಕ್ಷೇತ್ರದಲ್ಲಿ ಅನುಭವ ಮಂಟಪ (Anubhava Mantapa) ನಿರ್ಮಾಣಕ್ಕೆ ಶಾಸಕ ಅನಿಲ ಬೆನಕೆ ಮುಂದಾಗಿದ್ದಾರೆ. ಬೆಳಗಾವಿಯ ಮಾಳಮಾರುತಿ ಬಡಾವಣೆಯಲ್ಲಿ ನಿರ್ಮಾಣವಾಗಲಿರುವ ಅನುಭವ ಮಂಟಪ …

Read More »

ಸೋಮಣ್ಣ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ವಕ್ತಾರನಿಗೆ ನೋಟಿಸ್

ಚಾಮರಾಜನಗರ: ಸಚಿವ ವಿ ಸೋಮಣ್ಣ (V Somanna) ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದ ಚಾಮರಾಜನಗರ (Chamarajanagar) ಜಿಲ್ಲಾ ಬಿಜೆಪಿ ವಕ್ತಾರನಿಗೆ (BJP Spokesperson) ನೋಟಿಸ್ ನೀಡಲಾಗಿದೆ. ಚಾಮರಾಜನಗರ ಜಿಲ್ಲಾ ಬಿಜೆಪಿ ವಕ್ತಾರ ಅಯ್ಯನಪುರ ಶಿವಕುಮಾರ್‌ಗೆ ನೋಟೀಸ್ ಜಾರಿ ಮಾಡಲಾಗಿದೆ. ಸಚಿವ ಸೋಮಣ್ಣ ಅವರಿಗೆ ಮೈಸೂರು ವಿಭಾಗದ ಉಸ್ತುವಾರಿ ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಟಿಕೆಟ್ ನೀಡುವುದು ಬೇಡ ಎಂದು ಬಿಜೆಪಿ ವಕ್ತಾರ ಶಿವಕುಮಾರ್ ಒತ್ತಾಯ ಮಾಡಿದ್ದರು. ಚಾಮರಾಜನಗರದಲ್ಲಿ ಟಿಕೆಟ್ ನೀಡಿದರೆ ಗೋ ಬ್ಯಾಕ್ ಚಳವಳಿ …

Read More »

ಗೋಕರ್ಣ: ಅಥರ್ವಣ ವೇದ ಪಂಡಿತ ಆಚಾರ್ಯ ಶ್ರೀಧರ ಅಡಿ ವಿಧಿವಶ

ಗೋಕರ್ಣ: ಖ್ಯಾತ ಅಥರ್ವಣವೇದ ಪಂಡಿತರಾಗಿದ್ದ ಗೋಕರ್ಣದ ಆಚಾರ್ಯ ಶ್ರೀಧರ ಅಡಿ ಬುಧವಾರ ಮಹಾರಾಷ್ಟ್ರದ ನಾಸಿಕ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಪುತ್ರ ಮತ್ತು ಪುತ್ರಿ ಸೇರಿ ಅಪಾರ ಶಿಷ್ಯವರ್ಗ, ಬಂಧುಗಳನ್ನು ಅಗಲಿದ್ದಾರೆ. ವಾರಾಣಸಿಯಲ್ಲಿ ಋಗ್ವೇದ ಮತ್ತು ಯಜುರ್ವೇದ ಅಧ್ಯಯನ ಮುಗಿಸಿ ನಂತರ ಅಥರ್ವಣ ವೇದ ಪಾರಂಗತರಾಗಿ ವಿವಿಧೆಡೆ ವೇದ ಮಹತ್ವ ಸಾರಿ ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ತೊಡಗಿದ್ದರು. ಸಂಸ್ಕೃತ ಪಾಂಡಿತ್ಯ ಹೊಂದಿದ್ದ ಅವರು ವಾಗ್ಮಿಯೂ …

Read More »

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಬೆಳಗಾವಿ: ಸೂಕ್ತ ದಾಖಲಾತಿಗಳಲ್ಲದೇ ಸಾಗಿಸಲಾಗುತ್ತಿದ್ದ 9 ಲಕ್ಷ ರೂಪಾಯಿ ನಗದು ಹಣವನ್ನು ಕಣಬರಗಿ ಚೆಕ್ ಪೋಸ್ಟ್ ನಲ್ಲಿ ಮಂಗಳವಾರ ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿ ನಗರದಿಂದ ಅಂಕಲಗಿ ಕಡೆಗೆ ಹೊರಟಿದ್ದ ಕಾರನ್ನು ಕಣಬರಗಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿದಾಗ ನಗದು ಪತ್ತೆಯಾಗಿದೆ.   ನಗದು ಹಣವು ಖಾಸಗಿ ಫೈನಾನ್ಸ್ ಕಂಪನಿಗೆ ಸೇರಿದೆ. ಆದರೆ ಈ ಹಣಕ್ಕೆ ಸಂಬಂಧಿಸಿದಂತೆ ಸಮರ್ಪಕ ದಾಖಲೆಗಳನ್ನು ಅವರು ಒದಗಿಸಿರುವುದಿಲ್ಲ. ಇದಲ್ಲದೇ ಹಣ ಸಾಗಾಣಿಕೆಗೆ ಸಂಬಂಧಿಸಿದಂತೆ ಇರುವ ನಿಗದಿತ ಎಸ್.ಓ.ಪಿ.ಯನ್ನು …

Read More »

ದೂರು ನೀಡಲು ಬಂದಿದ್ದ ಯುವತಿ ಜೊತೆ ದುರ್ವರ್ತನೆ

ಬೆಂಗಳೂರು: ದೂರು ನೀಡಲು ಬಂದಿದ್ದ ಯುವತಿ ಜೊತೆ ದುರ್ವರ್ತನೆ ತೋರಿದ ಕೂಡಿಗೆಹಳ್ಳಿ ಠಾಣೆ ಪೊಲೀಸ್ ಇನಸ್ಪೆಕ್ಟರ್ ನ್ನು ಅಮಾನತುಗೊಳಿಸಲಾಗಿದೆ. ರಾಜಣ್ಣ ಅಮಾನತುಗೊಂಡವ. ಪ್ರಕರಣವೊಂದರ ಸಂಬಂಧ ದೂರು ನೀಡಲು ಠಾಣೆಗೆ ಬಂದಿದ್ದ ಯುವತಿಯ ಮೊಬೈಲ್ ಸಂಖ್ಯೆ ಪಡೆದಿದ್ದ ರಾಜಣ್ಣ, ನಂತರ ಆಕೆಯೊಂದಿಗೆ ಅಸಭ್ಯ ಚಾಟಿಂಗ್ ಮಾಡಿದ್ದ. ಇನ್ನೊಮ್ಮೆ ಠಾಣೆಗೆ ಕರೆಸಿ ಡ್ರೈ ಫ್ರುಟ್ ಬಾಕ್ಸ್ ನೀಡಿ ತನ್ನ ರೂಮ್ ಗೆ ಬರುವಂತೆ ಕರೆದಿದ್ದ. ರಾಜಣ್ಣನ ವರ್ತನೆಯಿಂದ ಬೇಸತ್ತ ಯುವತಿ ದಾಖಲೆಗಳ ಸಮೇತ ಹಿರಿಯ …

Read More »

ಪೀರನವಾಡಿ ಚೆಕ್ ಪೋಸ್ಟ್ ನಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡವು ಬುಧವಾರ 2.89 ಲಕ್ಷ ರೂಪಾಯಿ ಜಪ್ತಿ ಮಾಡಿಕೊಂಡಿರುತ್ತದೆ.

ಬೆಳಗಾವಿ: ಇಲ್ಲಿನ ಪೀರನವಾಡಿ ಚೆಕ್ ಪೋಸ್ಟ್ ನಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡವು ಬುಧವಾರ 2.89 ಲಕ್ಷ ರೂಪಾಯಿ ಜಪ್ತಿ ಮಾಡಿಕೊಂಡಿರುತ್ತದೆ. ಚೆಕ್ ಪೋಸ್ಟ್ ಮೂಲಕ ಹೋಗುತ್ತಿದ್ದ ಇಂಡಿಕಾ ವಾಹನವನ್ನು ಪೊಲೀಸ್ ಹಾಗೂ ಎಫ್.ಎಸ್.ಟಿ. ತಂಡದ ಅಧಿಕಾರಿಗಳು ತಪಾಸಣೆ ನಡೆಸಿದ ಸಂದರ್ಭದಲ್ಲಿ ನಗದು ಪತ್ತೆಯಾಗಿರುತ್ತದೆ. ನಗದು ಹಣವನ್ನು ಖಜಾನೆಯಲ್ಲಿ ಜಮಾ ಮಾಡಲಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More »

ರಾಮದುರ್ಗ: ವೈಭವದ ಬಸವಣ್ಣ ಪಲ್ಲಕ್ಕಿ ಉತ್ಸವ

ರಾಮದುರ್ಗ: ಹಲಗತ್ತಿ ಗ್ರಾಮದಲ್ಲಿ ಯುಗಾದಿ ಸಂಭ್ರಮದ ಸಿದ್ಧತೆಗಳು ಭರದಿಂದ ಸಾಗಿವೆ. ಗ್ರಾಮದ ಬಸವಣ್ಣ ದೇವರ ಪಲ್ಲಕ್ಕಿ ಉತ್ಸವ ಮಾರ್ಚ್‌ 27ರಂದು ಅದ್ಧೂರಿಯಾಗಿ ಜರುಗಲಿದೆ. ಮಾರ್ಚ್‌ 22ರಂದು ಓಕುಳಿ ಹೊಂಡ ಪೂಜೆ ನೆರವೇರುವುದು. ನಂತರ ಮೂರು ದಿನ ಬಣ್ಣದ ಓಕುಳಿ ವೈಭವದಿಂದ ನೆರವೇರಲಿದೆ.   ಮಲಪ್ರಭೆ ನದಿ ದಡದಲ್ಲಿರುವ ಹಲಗತ್ತಿ ಸುಂದರ ತಾಣ. ಬಸವಣ್ಣನ ಹರಕೆ ತೀರಿಸಲು ಸುತ್ತಲಿನ ಜನ ಭಕ್ತಿ ಭಾವದಿಂದ ಆಗಮಿಸುತ್ತಾರೆ. ಹೆಣ್ಣುಮಕ್ಕಳು ಗಂಡನ ಮನೆಯಿಂದ ಯುಗಾದಿ ಹಬ್ಬಕ್ಕೆಂದು ತವರಿಗೆ …

Read More »

ಈ ಭೂಮಿಯಿಂದ ನಿರ್ಗಮನರಾಗುವಾಗ ದೇವರಾಗಿ ಹೋಗುತ್ತಾರೆ. ಇದಕ್ಕೆ ವಿಜಯಪುರದ ಸಿದ್ಧೇಶ್ವರ ಸ್ವಾಮಿಜಿಗಳೇ ಜ್ವಲಂತ ಉದಾಹರಣೆ: ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಮಾನವರಾಗಿ ಹುಟ್ಟಿದ ಮೇಲೆ ನಾವು ಸಕಲರಿಗೂ ಒಳ್ಳೆಯದನ್ನೇ ಬಯಸಬೇಕು. ಈ ಭೂಮಿಯಲ್ಲಿ ಮನುಷ್ಯರಾಗಿ ಹುಟ್ಟಿರುವದು ನಮ್ಮೆಲ್ಲರ ಪುಣ್ಯವಾಗಿದೆ. ಆದರೆ ಕೆಲವೇ ಕೆಲವು ಜನರು ಈ ಭೂಮಿಯಿಂದ ನಿರ್ಗಮನರಾಗುವಾಗ ದೇವರಾಗಿ ಹೋಗುತ್ತಾರೆ. ಇದಕ್ಕೆ ವಿಜಯಪುರದ ಸಿದ್ಧೇಶ್ವರ ಸ್ವಾಮಿಜಿಗಳೇ ಜ್ವಲಂತ ಉದಾಹರಣೆ ಎಂದು ಶಾಸಕ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ವಡೇರಹಟ್ಟಿ ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ ಕಳೆದ ಭಾನುವಾರದಂದು ಸಿದ್ಧೇಶ್ವರ ಸ್ವಾಮಿಜಿಗಳ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ …

Read More »

24ರ ಸಾರಿಗೆ ಮುಷ್ಕರ ಕೈಬಿಡಲ್ಲ: ಆರ್. ಚಂದ್ರಶೇಖರ್

ಬೆಂಗಳೂರು: ಸಾರಿಗೆ ಸಿಬ್ಬಂದಿ ಮುಷ್ಕರ ಕೈಬಿಡುವಂತೆ ಅಧಿಕಾರಿಗಳು ನಡೆಸಿದ ಸಂಧಾನ ಸಭೆಯು ವಿಫಲವಾಗಿದ್ದು, ಸಾರಿಗೆ ನೌಕರರ ಸಂಘದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಆರ್. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಬಳಿ ಚಾಲಕರು ಹಾಗೂ ನಿರ್ವಾಹಕರು ಉಪವಾಸ ಸತ್ಯಾಗ್ರಹ ಆರಂಭಿಸಿದರು.   ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ, ಕರೆ ನೀಡಲಾಗಿರುವ ಮುಷ್ಕರದ ಪೂರ್ವಭಾವಿ ಹೋರಾಟಕ್ಕೆ ಮಂಗಳವಾರ ರಾತ್ರಿಯೇ ಚಾಲನೆ ದೊರೆಯಿತು. ಸರ್ಕಾರವು ಶೇ 15ರಷ್ಟು ವೇತನ ಹೆಚ್ಚಳಕ್ಕೆ …

Read More »

₹40 ಸಾವಿರ ಲಂಚ ಪಡೆಯುತ್ತಿದ್ದಾಗ ಪಿಎಸ್‌ಐ, ಕಾನ್‌ಸ್ಟೆಬಲ್‌ ಬಂಧನ

ರಾಣೆಬೆನ್ನೂರು: ವ್ಯಕ್ತಿಯೊಬ್ಬರಿಂದ ಮನೆ ಬಾಡಿಗೆ ವಸೂಲಿ ಮಾಡಿಕೊಡಲು ₹ 40 ಸಾವಿರ ಲಂಚ ಪಡೆಯುತ್ತಿದ್ದಾಗ ಇಲ್ಲಿನ ಅಶೋಕನಗರ ಠಾಣೆ ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್‌ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪಿಎಸ್‌ಐ ಸುನೀಲ ತೇಲಿ, ವಾಹನ ಚಾಲಕ ಹಾಗೂ ಕಾನ್‌ಸ್ಟೆಬಲ್‌ ಸಚಿನ್‌ ಓಲೇಕಾರ ಸಿಕ್ಕಿಬಿದ್ದವರು. ಇವರ ಜೊತೆಗೆ ಉಡುಪಿ ಟಿಸ್ಟಾಲ್‌ ಮಾಲೀಕ ಸಂತೋಷ್‌ ಶೆಟ್ಟಿ ಅವರನ್ನು ಲೋಕಾಯುಕ್ತ ಬಂಧಿಸಿದ್ದು, ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ದೂರುದಾರ ಸಿದ್ಧೇಶ್ವರ ನಗರದ ಅಫ್ರೋಜ್‌ ಅಹ್ಮದ್‌ ನೂರ ಅಹ್ಮದ್‌ಸಾಬ್‌ ಊದಗಟ್ಟಿ ಅವರಿಗೆ …

Read More »