Breaking News
Home / ರಾಜಕೀಯ / ರಾಮದುರ್ಗ: ವೈಭವದ ಬಸವಣ್ಣ ಪಲ್ಲಕ್ಕಿ ಉತ್ಸವ

ರಾಮದುರ್ಗ: ವೈಭವದ ಬಸವಣ್ಣ ಪಲ್ಲಕ್ಕಿ ಉತ್ಸವ

Spread the love

ರಾಮದುರ್ಗ: ಹಲಗತ್ತಿ ಗ್ರಾಮದಲ್ಲಿ ಯುಗಾದಿ ಸಂಭ್ರಮದ ಸಿದ್ಧತೆಗಳು ಭರದಿಂದ ಸಾಗಿವೆ. ಗ್ರಾಮದ ಬಸವಣ್ಣ ದೇವರ ಪಲ್ಲಕ್ಕಿ ಉತ್ಸವ ಮಾರ್ಚ್‌ 27ರಂದು ಅದ್ಧೂರಿಯಾಗಿ ಜರುಗಲಿದೆ.

ಮಾರ್ಚ್‌ 22ರಂದು ಓಕುಳಿ ಹೊಂಡ ಪೂಜೆ ನೆರವೇರುವುದು. ನಂತರ ಮೂರು ದಿನ ಬಣ್ಣದ ಓಕುಳಿ ವೈಭವದಿಂದ ನೆರವೇರಲಿದೆ.

 

ಮಲಪ್ರಭೆ ನದಿ ದಡದಲ್ಲಿರುವ ಹಲಗತ್ತಿ ಸುಂದರ ತಾಣ. ಬಸವಣ್ಣನ ಹರಕೆ ತೀರಿಸಲು ಸುತ್ತಲಿನ ಜನ ಭಕ್ತಿ ಭಾವದಿಂದ ಆಗಮಿಸುತ್ತಾರೆ. ಹೆಣ್ಣುಮಕ್ಕಳು ಗಂಡನ ಮನೆಯಿಂದ ಯುಗಾದಿ ಹಬ್ಬಕ್ಕೆಂದು ತವರಿಗೆ ಆಗಮಿಸಿ, ಬಸವಣ್ಣನ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಹರಕೆ ತೀರಿಸುತ್ತಾರೆ.

26ರಂದು ಸಂಜೆ ಬಸವಣ್ಣನ ಬೆಳ್ಳಿ ಮೂರ್ತಿ ಪಲ್ಲಕ್ಕಿಯಲ್ಲಿ ಇಟ್ಟು ಪೂಜಿಸಲಾಗುವುದು. ಅಲ್ಲಿಂದ ಜನರು ಬೇಟೆಯಾಡಲು ಹೋಗುತ್ತಾರೆ. ಅದೇ ದಿನ ರಾತ್ರಿ ಗುಡ್ಡದಿಂದ ಮರಳಿ ಊರಿಗೆ ಬಸವಣ್ಣ ಪಲ್ಲಕ್ಕಿಯನ್ನು ರಾತ್ರಿ 6 ಗಂಟೆಗೆ ತಂದು ಹಳೆ ಪಂಚಾಯಿತಿ ಕಟ್ಟೆಯ ಮೆಲೆ ಇಡುತ್ತಾರೆ. ಆ ದಿನ ಪೂರ್ತಿ ಜಾಗರಣೆ ನಡೆಯುತ್ತದೆ.

27ರಂದು ಬಸವಣ್ಣನ ಗುಡಿಯ ಒಳಗೆ ಪ್ರವೇಶ ಮಾಡುತ್ತಾನೆ. ಕರಡಿ ಮಜಲು, ಡೊಳ್ಳು ಹಾಗೂ ಭಾಜಾ ಭಜಂತ್ರಿಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ. ಭಕ್ತರು ಚುರುಮರಿ ಬೆತ್ತಾಸು, ಉತ್ತತ್ತಿ ಹಾಗೂ ಚಿಲ್ಲರೆ ನಾಣ್ಯಗಳನ್ನು ತೂರುತ್ತಾರೆ.

ಗುಡಿ ಸುತ್ತಲು ಪಲ್ಲಕ್ಕಿ ಮೂರು ಸುತ್ತು ಸುತ್ತುವ ವೇಳೆ ಭಕ್ತರು ಟೆಂಗಿನ ಕಾಯಿ, ಜೋಳ ಮತ್ತು ಸಜ್ಜೆಯ ಕುಚಗಡಬು ಎಸೆಯುವುದು ಇನ್ನೊಂದು ವಿಶೇಷ. ನಂತರ ಬ್ರಾಹ್ಮಣರು, ಊರು ಹಿರಿಯರು ಸೇರಿ ಹೊಸ ಪಂಚಾಂಗವನ್ನು ಓದಿ ಫಲಾಫಲಗಳನ್ನು ಹೇಳುತ್ತಾರೆ


Spread the love

About Laxminews 24x7

Check Also

ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಬಿಗ್ ಶಾಕ್ :ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ಪಡೆ

Spread the loveಬೆಂಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಲ್ಬುರ್ಗಿ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಬಿಜೆಪಿಯ ಪರಾಜಿತ ಅಭ್ಯರ್ಥಿ ಮಲಿಕಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ