Breaking News
Home / ರಾಜ್ಯ (page 524)

ರಾಜ್ಯ

ಸಿದ್ದರಾಮಯ್ಯ ಬ್ಲ್ಯಾಕ್‌ಮೇಲ್‌ ತಂತ್ರ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಖ್ಯಮಂತ್ರಿಯಾಗುವುದಕ್ಕೆ ಸಿದ್ದರಾಮಯ್ಯ ಬ್ಲ್ಯಾಕ್‌ವೆುàಲ್‌ ತಂತ್ರ ಅನುಸರಿಸುತ್ತಿದ್ದಾರೆ. ಸೋನಿಯಾ ಗಾಂಧಿಯವರಿಗೆ ಫೋನ್‌ ಮಾಡಿ ತಮ್ಮನ್ನೇ ಸಿಎಂ ಮಾಡಬೇಕು. ಇಲ್ಲವಾದರೆ ತಮ್ಮ ದಾರಿ ತಾವು ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.   ಪತ್ರಕರ್ತರೊಂದಿಗೆ ಅವರು ಮಾತನಾಡಿ, 2009ರಲ್ಲಿ ಸಂಸತ್ತಿನ ಚುನಾವಣೆಗೆ ಮೊದಲು ಅವರು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಬೆದರಿಸಿದ್ದರು. ವಿಪಕ್ಷ ನಾಯಕ ಸ್ಥಾನ ಸಿಗದೆ ಇದ್ದರೆ ನನ್ನ ದಾರಿ ನನಗೆ ಎಂದಿದ್ದರು. …

Read More »

2 PU: ಹಾಜರಾತಿ ಕೊರತೆ ಇದ್ದರೂ ಪರೀಕ್ಷೆ ಬರೆಯಲು ಅವಕಾಶ

ಬೆಂಗಳೂರು: ತರಗತಿ ಹಾಜರಾತಿ ಕೊರತೆಯಿಂದ 2023ರ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಿಂದ ವಂಚಿತರಾಗಿರುವ ಕಲಾ ಮತ್ತು ವಾಣಿಜ್ಯ ವಿಭಾಗದ 12,385 ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಳ್ಳಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅನುವು ಮಾಡಿಕೊಟ್ಟಿದೆ.   ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಮಂಡಳಿ ಅಧ್ಯಕ್ಷ ಆರ್‌.ರಾಮಚಂದ್ರನ್‌ ಅವರು, 2022-23ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಗೆ ತರಗತಿ ವಿದ್ಯಾರ್ಥಿಗಳಾಗಿ ನೋಂದಾ ಯಿಸಿಕೊಂಡಿದ್ದ ಸಾವಿರಾರು ವಿದ್ಯಾರ್ಥಿಗಳು …

Read More »

ಡಿಕೆಶಿ ಅಕ್ರಮ ಆಸ್ತಿ ವಿಚಾರಣೆ ಜುಲೈ 14ಕ್ಕೆ ಮುಂದೂಡಿಕೆ

ಹೊಸದಿಲ್ಲಿ: ಡಿ.ಕೆ.ಶಿವಕುಮಾರ್‌ ಅಕ್ರಮ ಆಸ್ತಿಗಳ ತನಿಖೆ ಮುಂದುವರಿಸಲು ಅವಕಾಶ ನೀಡಬೇಕೆಂದು ಸಿಬಿಐ ಸರ್ವೋಚ್ಚ ಪೀಠದಲ್ಲಿ ಸಲ್ಲಿರುವ ಅರ್ಜಿ ವಿಚಾರಣೆ ಜು.14ಕ್ಕೆ ಮುಂದೂಡಲ್ಪಟ್ಟಿದೆ. ಮೇ 23ಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ ಅಕ್ರಮ ಆಸ್ತಿ ಹೊಂದಿದ್ದಾರೆ, ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಪ್ರಕರಣಗಳನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ. ಶಿವಕುಮಾರ್‌ ಮನವಿಯಂತೆ ಫೆ.10ರಂದು ಉಚ್ಚ ನ್ಯಾಯಾಲಯ ವಿಚಾರಣೆಗೆ ತಡೆ ನೀಡಿತ್ತು. ಇದರ ವಿರುದ್ಧ ಸಿಬಿಐ …

Read More »

ಸರಕಾರದ ಜತೆ ಪಠ್ಯವೂ ಬದಲು? ಮೊದಲರ್ಧ ವರ್ಷ ಗೊಂದಲ?

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದ್ದ ಪಠ್ಯಪುಸ್ತಕ ಪರಿಷ್ಕರಣೆಯ ಭವಿಷ್ಯ ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈಗಾ ಗಲೇ ಶೇ.90ರಷ್ಟು ಪಠ್ಯ ಪುಸ್ತಕಗಳು ವಿತರಣೆಯಾಗಿದ್ದು, ಇದೇ 29ರಿಂದ ಆರಂಭವಾಗಲಿರುವ 2023-24ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳು ಪರಿಷ್ಕೃತ ಪಠ್ಯವನ್ನೇ ಓದುತ್ತಾರೋ ಅಥವಾ ಪಠ್ಯ ಪುಸ್ತಕ ಇನ್ನೊಮ್ಮೆ ಪರಿಷ್ಕೃತ ಗೊಳ್ಳಲಿದೆಯೇ ಎಂಬ ಚರ್ಚೆ ಆರಂಭಗೊಂಡಿದೆ.   ಬಿಜೆಪಿ ಸರಕಾರ ರೋಹಿತ್‌ ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ರಚಿಸಿ 5ರಿಂದ …

Read More »

ಮೇ 28ಕ್ಕೆ UPSC ಪ್ರಿಲಿಮ್ಸ್‌ ಪರೀಕ್ಷೆ: ಅಭ್ಯರ್ಥಿಗಳ ತಯಾರಿಗೆ ಕೆಲವು ಟಿಪ್ಸ್‌

ನವದೆಹಲಿ: ಕೇಂದ್ರ ನಾಗರಿಕ ಸೇವಾ ಆಯೋಗ(ಯುಪಿಎಸ್‌ಸಿ) ಪ್ರತಿ ವರ್ಷ ನಡೆಸುವ ನಾಗರಿಕ ಸೇವಾ ಪರೀಕ್ಷೆಗೆ ದಿನ ಸಮೀಪಿಸುತ್ತಿದೆ. ಪ್ರಸ್ತುತ ವರ್ಷ ಮೇ 28 ರಂದು ಪೂರ್ವಭಾವಿ ಪರೀಕ್ಷೆ ನಿಗದಿಯಾಗಿದೆ. ದೇಶದ ಅತ್ಯಂತ ಕಠಿಣ ಪರೀಕ್ಷೆಯ ಬಗ್ಗೆ ಅಭ್ಯರ್ಥಿಗಳಿಗೆ ಆತಂಕ ಸಹಜವೇ. ಹೀಗಾಗಿ ಪರೀಕ್ಷೆಯನ್ನು ದಿಟ್ಟವಾಗಿ ಎದುರಿಸಲು ಇಲ್ಲಿವೆ ಉಪಯುಕ್ತ ಟಿಪ್ಸ್. ಕಳೆದ ಬಾರಿಗೆ ಹೋಲಿಸಿದರೆ ದೇಶಾದ್ಯಂತ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ. ಕೋವಿಡ್ ನಂತರದ ಪರಿಸ್ಥಿತಿ ಪರಿಗಣಿಸಿ, ಹೆಚ್ಚಿನ ಅಭ್ಯರ್ಥಿಗಳು ಪರೀಕ್ಷೆಗೆ ತಯಾರಿ …

Read More »

LIC ಹೂಡಿಕೆದಾರರಿಗೆ ಒಂದು ವರ್ಷದಲ್ಲಿ 2.4 ಲಕ್ಷ ಕೋಟಿ ರೂಪಾಯಿ ನಷ್ಟ!

ಹೂಡಿಕೆದಾರರು ಎಲ್​ಐಸಿ ಐಪಿಒದಲ್ಲಿ ಉತ್ತಮ ಲಾಭ ಪಡೆಯಬಹುದೆಂದು ಭಾವಿಸಿ ಹೂಡಿಕೆ ಮಾಡಿದ್ದರು. ಆದರೆ ಈ IPO ಹೂಡಿಕೆದಾರರಲ್ಲಿ ನಿರಾಶೆ ಮೂಡಿಸಿದೆ. ಒಂದು ವರ್ಷದ ಹಿಂದೆ ಭಾರಿ ನಿರೀಕ್ಷೆಯೊಂದಿಗೆ ಐಪಿಒಗೆ ಬಂದಿದ್ದ ಭಾರತೀಯ ಜೀವ ವಿಮಾ ನಿಗಮ (ಎಲ್​ಐಸಿ) ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿ ವರ್ಷ ಪೂರ್ಣಗೊಳಿಸಿದೆ. ಕಳೆದ ವರ್ಷ ಮೇ 17 ರಂದು ಲಿಸ್ಟ್​ ಮಾಡಲಾದ ಎಲ್‌ಐಸಿ ಮೊದಲ ದಿನವೇ ಹೂಡಿಕೆದಾರರನ್ನು ನಿರಾಸೆಗೊಳಿಸಿತು. ಅದರ ನಂತರ ಚೇತರಿಸಿಕೊಂಡಿರುವುದರ ಬಗ್ಗೆ ಯಾವುದೇ …

Read More »

ತಾನೇ ಬೀಸಿದ ಬಲೆಗೆ ಸಿಲುಕಿ ಮೀನುಗಾರ ಸಾವು

ಮಂಗಳೂರು: ಸುರತ್ಕಲ್ ಬಳಿ ಮೀನು ಹಿಡಿಯಲು ಬೀಸಿದ ಬಲೆಯಲ್ಲಿ ಮೀನುಗಾರರೊಬ್ಬರು ತಾವೇ ಸಿಲುಕಿ ಮೃತಪಟ್ಟಿದ್ದಾರೆ. ಮೀನುಗಾರ ಜಯರಾಜ್ ಅವರು ಮೀನು ಹಿಡಿಯಲು ಬಲೆ ಬೀಸಿದ್ದರು. ಆ ಬಲೆಯಲ್ಲಿ ಅವರ ಕಾಲು ಸಿಲುಕಿತ್ತು. ಇದೇ ವೇಳೆ ಭಾರೀ ಗಾತ್ರದ ತೆರೆ ಬಂದು ಅಪ್ಪಳಿಸಿದಾಗ ಜಯರಾಜ್ ಅವರು ಬಲೆಯಲ್ಲಿ ಸುತ್ತಿಕೊಂಡು ಈಜಲಾಗದೆ ಮುಳುಗಿ ಮೃತಪಟ್ಟಿದ್ದಾರೆ. ಘಟನೆ ಸಂಭವಿಸಿದ ವೇಳೆ ಅವರ ಜೊತೆಗಿದ್ದವರು ತಕ್ಷಣ ಸ್ಥಳೀಯರಿಗೆ ಮಾಹಿತಿ ತಿಳಿಸಿದ್ದು ಹಲವರು ರಕ್ಷಣೆಗೆ ಬಂದರೂ ಅವರನ್ನು ಬದುಕಿಸಲಾಗಲಲಿಲ್ಲ. …

Read More »

ಶನಿವಾರ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಪ್ರಮಾಣ ವಚನ

ನವದೆಹಲಿ: ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬುಧವಾರ ತಡರಾತ್ರಿ ನವದೆಹಲಿಯಲ್ಲಿ ನಡೆದ ಸಂದಾನ ಸಭೆಯಲ್ಲಿ ಈ ಕುರಿತು ಒಪ್ಪಂದಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ. ಎರಡೂವರೆ ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದಾರೆ. ಡಿ.ಕೆ.ಶಿವಕುಮಾರ ಉಪಮುಖ್ಯಮಂತ್ರಿಯಾಗಲಿದ್ದಾರೆ. ನಂತರದ ಎರಡೂವರೆ ವರ್ಷ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗಲಿದ್ದಾರೆ. ಈ ಕುರಿತ ಸಂದಾನಕ್ಕೆ ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ಬಂದಿದ್ದು, ಅಧಿಕೃತವಾಗಿ ಇನ್ನೂ ಪ್ರಕಟಿಸಲಾಗಿಲ್ಲ. ಮಾಹಿತಿ ಪ್ರಕಾರ ಶನಿವಾರ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಪ್ರಮಾಣ ವಚನ …

Read More »

Belagavi: CA ಓದು ಬಿಟ್ಟು ಕೃಷಿ ಸಾಧನೆ; ತಿಂಗಳಿಗೆ ಲಕ್ಷ ಲಕ್ಷ ಗಳಿಸುತ್ತಿರುವ ಸಾಧಕಿ

ಬೆಳಗಾವಿ: ಸಿಎ (ಚಾರ್ಟೆರ್ಡ್‌ ಅಕೌಂಟ್‌) ಮಾಡಿ ನೌಕರಿ ಹಿಡಿಯಬೇಕಿದ್ದ ಯುವತಿ ತಂದೆಯ ಸಾವಿನಿಂದಾಗಿ ಅರ್ಧಕ್ಕೆ ಓದು ಬಿಟ್ಟು ಕೃಷಿಯಲ್ಲಿ ತೊಡಗಿಕೊಂಡು ಒಂದು ಎಕರೆ ಜಮೀನಿನಲ್ಲಿ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುವ ಮೂಲಕ ಸಾಧನೆ ಮಾಡಿದ್ದಾಳೆ. ಕೃಷಿ ಎಂದರೆ ಮೂಗು ಮುರಿಯುವ ಇಂದಿನ ದಿನಮಾನದಲ್ಲಿ ಈ ಯುವತಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾಳೆ. ಬೆಳಗಾವಿ ತಾಲೂಕಿನ ಜಾಫರವಾಡಿ ಗ್ರಾಮದ 26 ವರ್ಷದ ನಿಕಿತಾ ವೈಜು ಪಾಟೀಲ ಎಂಬ ಯುವತಿ ಕೃಷಿಯಲ್ಲಿ ಉತ್ತಮ ಸಾಧನೆ …

Read More »

ಅಮರಾವತಿಯ ಬಿಹಾಲಿ ಹಳ್ಳಿಯಲ್ಲಿ ಮನೆ ಮನೆಯಲ್ಲೂ ಬಿದಿರು ತಯಾರಿಕೆ

ಮಹಾರಾಷ್ಟ್ರ : ಇಲ್ಲಿನ ಚಿಕಲ್ದಾರ ತಾಲೂಕಿನ ಬಿಹಾಲಿ ಹಳ್ಳಿಯು ಬಿದಿರಿನ ಉತ್ಪನ್ನಗಳ ತಯಾರಿಕೆಯ ಗ್ರಾಮವೆಂದು ಪ್ರಸಿದ್ಧವಾಗಿದೆ. ಬಿದಿರಿನಿಂದ ಬುಟ್ಟಿಗಳು ಹಾಗೂ ಅನೇಕ ಸಣ್ಣ ಮತ್ತು ಆಕರ್ಷಕ ವಸ್ತುಗಳು ಇಲ್ಲಿ ತಯಾರಿಕೆ ನಡೆಸುವುದು ಕಂಡು ಬರುತ್ತವೆ.   ಮೆಲ್ಘಾಟ್ ಅಮರಾವತಿಯ ‘ಬಿಹಾಲಿ’ ಹಳ್ಳಿಯ ಪ್ರತೀಕ್ ಎಂಬುವವರ ಮನೆಯಲ್ಲಿ ಬಿದಿರಿನಿಂದ ಮಾಡಿದ ಸೂಪ್ ಬಟ್ಟಲುಗಳು ಮತ್ತು ಬುಟ್ಟಿಗಳು ಸೇರಿದಂತೆ ಅನೇಕ ಸಣ್ಣ ಮತ್ತು ಆಕರ್ಷಕವಾದ ವಸ್ತುಗಳು ಕಂಡುಬರುತ್ತವೆ. ಒಟ್ಟು ಸುಮಾರು 170 ಮನೆಗಳನ್ನು ಹೊಂದಿರುವ …

Read More »