Breaking News

ರಾಜ್ಯ

ವರ್ಷದಿಂದ ವರ್ಷಕ್ಕೆ ವೃದ್ಧಿಸಿದ ‘ಶಕ್ತಿ’

ಹುಬ್ಬಳ್ಳಿ: ರಾಜ್ಯದಲ್ಲಿ ‘ಶಕ್ತಿ’ ಯೋಜನೆ ಅನುಷ್ಠಾನವಾದ ಬಳಿಕ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲುಕೆಆರ್‌ಟಿಸಿ) ಬಸ್‌ಗಳಲ್ಲಿ ಎಲ್ಲ ಸೀಟುಗಳು ಭರ್ತಿಯಾಗುತ್ತಿವೆ. ಕಳೆದ ವರ್ಷ ಸಂಚರಿಸಿದ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ ಈ ವರ್ಷ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ವೃದ್ಧಿಸಿದೆ.   ಅತಿ ಹೆಚ್ಚು ವಿಸ್ತಾರ ಮತ್ತು ಜನಸಂಖ್ಯೆಯುಳ್ಳ ಬೆಳಗಾವಿ ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಸಂಚರಿಸಿದ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆಯಾಗಿದೆ. 2023ನೇ ಸಾಲಿನ ಸೆಪ್ಟೆಂಬರ್‌ನಲ್ಲಿ ಸಂಚರಿಸಿದ್ದ ಒಟ್ಟು ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ …

Read More »

ಬೆಳೆದು ನಿಂತ ಭತ್ತಕ್ಕೆ ಕಣೆ ನೊಣ, ಕಾಡಿಗಿ ರೋಗ

ಸಿಂಧನೂರು: ಮುಂಗಾರು ಹಂಗಾಮಿನಲ್ಲಿ ಸಾಕಷ್ಟು ಮಳೆಯಾಗಿದ್ದು ಕಾಲುವೆಯ ನೀರು ಸಹ ಯಥೇಚ್ಛವಾಗಿ ಹರಿದು ಬಂದಿರುವುದರಿಂದ ತಾಲ್ಲೂಕಿನಲ್ಲಿ ಭತ್ತದ ಬೆಳೆ ಸಮೃದ್ಧವಾಗಿ ಬೆಳೆದು ನಿಂತು ಕಾಳು ಕಟ್ಟಿದೆ. ಈ ಸಮಯದಲ್ಲಿ ಕಣೆ ನೊಣ ಮತ್ತು ಕಾಡಿಗಿ ರೋಗ ಹರಡಿ ಬೆಳೆಹಾನಿ ಉಂಟು ಮಾಡುತ್ತಿರುವುದು ರೈತರಿಗೆ ಸಂಕಟ ತಂದೊಡ್ಡಿದೆ.   ತಾಲ್ಲೂಕಿನಲ್ಲಿ 1.30 ಲಕ್ಷ ಹೆಕ್ಟೇರ್ ಜಮೀನು ಕೃಷಿಗೆ ಯೋಗ್ಯವಾಗಿದ್ದು, ಅದರಲ್ಲಿ 75 ಸಾವಿರ ಹೆಕ್ಟೇರ್ ಜಮೀನಿನಲ್ಲಿ ಭತ್ತ ಬೆಳೆಯಲಾಗಿದೆ. ಕಾಳು ಕಟ್ಟುವ ಸಮಯದಲ್ಲಿ …

Read More »

ಬೆಂಗಳೂರಿನಲ್ಲಿ ನಡೆದ 40ನೇ ಕರ್ನಾಟಕ ಸೆಲೆಕ್ಷನ್ ಟ್ರಯಲ್ ನಲ್ಲಿ ಫ್ರೀ ಸ್ಟೈಲ್ ಮತ್ತು ಸೋಲೋ ಆರ್ಟಿಸ್ಟಿಕ್ ಸ್ಕೇಟಿಂಗ್ ನಲ್ಲಿ ಬೆಳಗಾವಿ ಆರ್ಮಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಖುಷಿ ಏಕನಾಥ ಅಗಸಿಮನಿ ಅವರು ತಲಾ ಒಂದೊಂದು ಚಿನ್ನ ಹಾಗೂ ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದಾರೆ.

ಬೆಳಗಾವಿಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 40ನೇ ಕರ್ನಾಟಕ ಸೆಲೆಕ್ಷನ್ ಟ್ರಯಲ್ ನಲ್ಲಿ ಫ್ರೀ ಸ್ಟೈಲ್ ಮತ್ತು ಸೋಲೋ ಆರ್ಟಿಸ್ಟಿಕ್ ಸ್ಕೇಟಿಂಗ್ ನಲ್ಲಿ ಬೆಳಗಾವಿ ಆರ್ಮಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಖುಷಿ ಏಕನಾಥ ಅಗಸಿಮನಿ ಅವರು ತಲಾ ಒಂದೊಂದು ಚಿನ್ನ ಹಾಗೂ ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದಾರೆ. ಬೆಳಗಾವಿ ಸ್ಕೇಟಿಂಗ್ ತರುಬೇತುದಾರ ಸೂರ್ಯಕಾಂತ ಹಿಂಡಲಗೇಕರ್, ವಿಠ್ಠಲ ಗಗನೆ ಅವರ ಮಾರ್ಗದರ್ಶನದಲ್ಲಿ ಖುಷಿ ಅವರು ಸಾಧನೆ ಮಾಡಿದ್ದಾರೆ. ಖುಷಿಯ ಅವರ ಈ ಸಾಧನೆಗೆ …

Read More »

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಮೈಸೂರು: ಮುಡಾ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಚುರುಕುಗೊಳಿಸಿರುವ ಬೆನ್ನಲ್ಲೇ ಕೇಂದ್ರ ಸರಕಾರದ ವಿರುದ್ಧ ತಿರುಗಿ ಬಿದ್ದಿರುವ ಸಿದ್ದರಾಮಯ್ಯ, “ಒಂದು ವೇಳೆ ನನ್ನನ್ನು ಮುಟ್ಟಿದರೆ ರಾಜ್ಯದ ಜನ ನಿಮ್ಮನ್ನು ಸುಮ್ಮನೆ ಬಿಡುವು ದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.   ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಲ್ಲಿನ 470 ಕೋಟಿ ರೂ. ಮೌಲ್ಯದ ಕಾಮಗಾರಿಗಳ ಉದ್ಘಾಟನೆ, ಕಟ್ಟಡಗಳ ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಅವರು, ಭಾರೀ …

Read More »

ಪವಿತ್ರ ಕ್ಷೇತ್ರಗಳಲ್ಲಿ ರಾಜಕೀಯ ಬೆರೆಸದಿರಿ: ಮಲ್ಲಿಕಾರ್ಜುನ ಸ್ವಾಮೀಜಿ

ಬೈಲಹೊಂಗಲ: ‘ಸಮಾಜ ತಿದ್ದುವಲ್ಲಿ ಮಠಗಳು ಅವಿರತವಾಗಿ ಪ್ರಯತ್ನಿಸುತ್ತಿದ್ದು, ಇಂಥಹ ಪವಿತ್ರ ಕ್ಷೇತ್ರಗಳಲ್ಲಿ ರಾಜಕೀಯ ಬೆರಸದೇ, ಭಕ್ತರಾಗಿ ಬಂದು ಇವುಗಳ ಉದ್ಧಾರಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು’ ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.   ತಾಲ್ಲೂಕಿನ ಬೈಲವಾಡ ಗ್ರಾಮದ ವರ್ತಿ ಸಿದ್ಧಬಸವೇಶ್ವರ ದೇವಸ್ಥಾನ ಆವರಣದಲ್ಲಿ ನಿರ್ಮಿಸಿದ ಕಲ್ಯಾಣ ಮಂಟಪ ಉದ್ಘಾಟನೆ ಹಾಗೂ ಗುರುಭವನ ಭೂಮಿಪೂಜೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಜಿಲ್ಲೆಯು ಐತಿಹಾಸಿಕ, ಧಾರ್ಮಿಕ ಕ್ಷೇತ್ರ ಸೇರಿದಂತೆ ಹಲವಾರು ರಂಗದಲ್ಲಿ ಮುಂಚೂಣಿಯಲ್ಲಿದೆ. ಸಾಧಕರು ತಮ್ಮ …

Read More »

ಅರಭಾವಿ ತೋಟಗಾರಿಕೆ ಕಾಲೇಜಿಗೆ ರನ್ನರ್‌ ಅಪ್‌ ಪ್ರಶಸ್ತಿ

ಮೂಡಲಗಿ: ಬೀದರ್‌ನಲ್ಲಿ ಇತ್ತೀಚೆಗೆ ಜರುಗಿದ 15ನೇ ತೋಟಗಾರಿಕೆ ಮಹಾವಿದ್ಯಾಲಯದ ಯುವಜನೋತ್ಸವ-2024ರಲ್ಲಿ ತಾಲ್ಲೂಕಿನ ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯವು ರನ್ನರ್‌ ಅಪ್ ಪ್ರಶಸ್ತಿ ಪಡೆದುಕೊಂಡಿದೆ. ಮಹಾವಿದ್ಯಾಯದ ವಿದ್ಯಾರ್ಥಿಗಳು ಏಕಪಾತ್ರಾಭಿನಯ, ಮೈಮ್‌, ಸ್ಕಿಟ್‌, ಕಾರ್ಟೂನ್‌ ಬಿಡಿಸುವುದು, ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ, ಲಘು ಗಾಯನ, ಸ್ಥಳದಲ್ಲಿ ಚಿತ್ರ ಬಿಡಿಸುವುದು, ತೇಪೆ ಚಿತ್ರಗಾರಿಕೆ ದ್ವಿತೀಯ ಸ್ಥಾನ ಹಾಗೂ ಜಾನಪದ ಹಾಡು, ಏಕಾಂಕ ನಾಟಕ, ಪೋಸ್ಟರ್ ತಯಾರಿಕೆ, ಎಕ್ಸ್ಟೊಂಬರ್ ತೃತೀಯ ಸ್ಥಾನ ಹಾಗೂ ಭಾಷಣ ಸ್ಪರ್ಧೆಯಲ್ಲಿ …

Read More »

“ಲೇ ಜಮೀರ್” ಎಂದ ಪುನೀತ್‌ ಕೆರೆಹಳ್ಳಿ ರಾತ್ರೋರಾತ್ರಿ ಬಂಧನ!

ಸಚಿವ ಜಮೀರ್‌ ಅಹಮದ್‌ ಬಗ್ಗೆ ಬೇಕಾಬಿಟ್ಟಿ ಮಾತನಾಡಿದ್ದ ಹಿಂದೂ ಮುಖಂಡ ಪುನೀತ್‌ ಕೆರೆಹಳ್ಳಿಗೆ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ಗುನ್ನಾ ಕೊಟ್ಟಿದ್ದಾರೆ. ಜಮೀರ್‌ ಅಹಮದ್‌ ಖಾನ್‌ ಅವರು ಕೇಂದ್ರ ಸಂಸದ ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿದ್ದ ಹೇಳಿಕೆಗೆ ರಿಯಾಕ್ಟ್‌ ಮಾಡಿದ್ದ ಪುನೀತ್‌ ಕೆರೆಹಳ್ಳಿ ಅವರು ಬೇಕಾಬಿಟ್ಟಿ ಮಾತನಾಡಿದ್ದರು. ಈ ಸಂಬಂಧ ವಿಡಿಯೋವೊಂದನ್ನು ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಪುನೀತ್‌. ಜಮೀರ್‌ ಅವರ ಬಗ್ಗೆ ಏ ಜಮೀರ್ ಎಂದು …

Read More »

ಬಿಡಿಸಿಸಿ ಬ್ಯಾಂಕ್ ಒಳ್ಳೆಯ ರೀತಿ ಆಡಳಿತ ನೀಡಲಿದೆ: ಸಚಿವ ಸತೀಶ್‌ ಜಾರಕಿಹೊಳಿ…!!

ಬೆಳಗಾವಿ : ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಬಿಡಿಸಿಸಿ) ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಎಲ್ಲರ ಅಭಿಪ್ರಾಯ ಪಡೆದುಕೊಂಡು ಒಳ್ಳೆಯ ರೀತಿ ಆಡಳಿತ ನಡೆಸಬೇಕೆಂಬ ತಿರ್ಮಾಣ ಮಾಡಲಾಗಿದ್ದು, ನೂತನ ಅಧ್ಯಕ್ಷರಾಗಿ ರಾಯಬಾಗ ತಾಲೂಕಿನ ಅಪ್ಪಾಸಾಹೇಬ ಕುಲಗೋಡೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಸುಭಾಷ್ ಢವಳೇಶ್ವರ ಅವರೇ …

Read More »

ಕಾಗವಾಡ ನ್ಯಾಯವಾದಿ ಸಂಘದ ಮುಷ್ಕರಕ್ಕೆ ಮಾಜಿ ಸಚಿವ ಶ್ರೀಮಂತ ಪಾಟೀಲ್ ಭೇಟಿ ನೀಡಿ ಬೆಂಬಲ ಸೂಚಿಸಿದರು. ಸ್ಥಳ ಕಾಗವಾಡ

ಕಾಗವಾಡ: ಪಟ್ಟಣದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಿಸಲು  ಆಗಿನ ಎಪಿಎಂಸಿ ಸಚಿವ ಬಂಡೆಪ್ಪಾ ಕಾಶಪ್ಪನ್ನವರ ಅನುಮತಿ ನೀಡಿದ್ದರು. ಆದರೇ ಕೆರೆ ಪಕ್ಕದ ಜಾಗ ಬಫರ್ ಝೋನ್ ಎಂದು ಪರಿಗಣಿಸಿ ನ್ಯಾಯಾಲಯ ನಿರ್ಮಾಣಕ್ಕಾಗಿ ಅಡ್ಡಿ ಉಂಟಾಗಿ ಅದು ನೆನೆಗುದಿಗೆ ಬಿದ್ದಿದ್ದು,  ದಿ. 12 ರಂದು ಪಟ್ಟಣದಲ್ಲಿ ತಾಲೂಕಾ ವಕೀಲರ ಸಂಘದ ಸದಸ್ಯರು ಹಮ್ಮಿಕೊಂಡಿರುವ ಅನಿರ್ಧಿಷ್ಠಾವಧಿ ಮುಷ್ಕರ  ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು ಉಗ್ರವಾಗಿ ಹೋರಾಟ ಪ್ರಾರಂಭಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಕಾಗವಾಡ …

Read More »

ಮರಕುಂಬಿ ಅಸ್ಪೃಶ್ಯತೆ ಪ್ರಕರಣ. 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್

ಕೊಪ್ಪಳ: ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ಅಸ್ಪೃಶ್ಯತೆಯ ಪ್ರಕರಣದ 99 ಜನರಿಗೆ ಧಾರವಾಡ ವಿಭಾಗೀಯ ಪೀಠವು ಜಾಮೀನು ಮಂಜೂರು ಮಾಡಿದೆ. ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಅಸ್ಪೃಶ್ಯತೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 9 ವರ್ಷದ ಹಿಂದೆ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.   ಆಗ 117 ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿತ್ತು‌. ಈ ಪ್ರಕರಣ ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆಯಿತು. ಕಳೆದ ಅಕ್ಟೋಬರ್ 24 ರಂದು …

Read More »