ಬೆಂಗಳೂರು : ಕಳೆದ ಒಂದು ತಿಂಗಳಿನಲ್ಲಿ ಬೆಂಗಳೂರಿನ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಗಳು ನಡೆದಿವೆ. ಹಾಗಾಗಿ BMTC ಸಿಬ್ಬಂದಿ ಮೇಲಿನ ಹಲ್ಲೆ ಕೇಸ್ ಗೆ ಸಂಬಂಧಿಸಿದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಕುರಿತಂತೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಡ್ರೈವರ್, ಚಾಲಕರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. …
Read More »ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ
ಮುಧೋಳ: ರೈತರ ಖಾತೆಗೆ ಬಾಕಿ ಹಣ ಜಮಾ ಮಾಡುವಂತೆ ಒತ್ತಾಯಿಸಿ ಸಮೀಪದ ಐಸಿಪಿಎಲ್ ಕಾರ್ಖಾನೆ ಎದುರು ಕಬ್ಬು ಬೆಳೆಗಾರರು ಹಾಗೂ ರೈತರು ಧರಣಿ ನಡೆಸಿದರು. ಅ.24ರಂದು ನಗರದಲ್ಲಿ ಸಭೆ ಸೇರಿದ್ದ ರೈತರು 26ರೊಳಗೆ 2023ರ ಹಂಗಾಮಿನ ಪ್ರತಿಟನ್ನಿಗೆ ಹೆಚ್ಚುವರಿ 62ರೂ. ನೀಡಬೇಕು ಎಂದು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗಳಿಗೆ ಗಡುವು ನೀಡಿದ್ದರು. ಆದರೆ ರೈತರ ಗಡುವಿಗೆ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸ್ಪಂದನೆ ನೀಡದ ಕಾರಣ ಶನಿವಾರ ಮತ್ತೆ ಸಭೆ ಸೇರಿದ …
Read More »ಬಿಜೆಪಿ 2ನೇ ಪಟ್ಟಿ ಬಿಡುಗಡೆ: ಇಬ್ಬರು ಎಂಎಲ್ ಎ ಗಳಿಗೆ ಕೊಕ್
ಮುಂಬಯಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಶನಿವಾರ(ಅ26) 22 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಪಟ್ಟಿಯಲ್ಲಿ ಆರು ಹಾಲಿ ಶಾಸಕರಿಗೆ ಮತ್ತೆ ಅವಕಾಶ ನೀಡಲಾಗಿದೆ. ಶಿವಸೇನೆ(ಶಿಂಧೆ) ಮತ್ತು ಎನ್‌ಸಿಪಿ(ಅಜಿತ್ ಪವಾರ್) ಜತೆಗೆ ಆಡಳಿತಾರೂಢ ಮಹಾಯುತಿ ಒಕ್ಕೂಟದಲ್ಲಿರುವ ಬಿಜೆಪಿ ಇದುವರೆಗೆ 121 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ. ಅಕೋಟ್, ನಾಸಿಕ್ ಸೆಂಟ್ರಲ್, ಪೆನ್, ಖಡಕ್ವಾಸಲಾ, ಪುಣೆ ಕಂಟೋನ್ಮೆಂಟ್ ಮತ್ತು ಉಲ್ಲಾಸನಗರದ ಶಾಸಕರನ್ನು ಉಳಿಸಿಕೊಂಡು ವಾಶಿಮ್ …
Read More »ದೀಪಾವಳಿ ಬಳಿಕ ಸಿಎಂ ಸಿದ್ದರಾಮಯ್ಯಗೆ ಲೋಕಾ ನೋಟಿಸ್?
ಮೈಸೂರು: ಮುಡಾ ನಿವೇಶನ ಹಂಚಿಕೆ ಹಗರಣದ (Muda Case) ತನಿಖೆಯನ್ನು ಚುರುಕುಗೊಳಿಸಿರುವ ಲೋಕಾಯುಕ್ತ ಪೊಲೀಸರು ಪ್ರಕರಣದ ಎ1 ಆರೋಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ಅವರಿಗೆ ಶೀಘ್ರದಲ್ಲೇ ನೋಟಿಸ್ ನೀಡಿ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ. ಈಗಾಗಲೇ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಮೂವರು ಆರೋಪಿಗಳ ವಿಚಾರಣೆಯನ್ನು ಲೋಕಾಯುಕ್ತ ಅಧಿಕಾರಿಗಳು ಮುಕ್ತಾಯಗೊಳಿಸಿದ್ದಾರೆ. ಹಾಗಾಗಿ 1ನೇ ಆರೋಪಿ ಸಿದ್ದರಾಮಯ್ಯ ಅವರನ್ನು ಯಾವಾಗ ವಿಚಾರಣೆಗೆ ಒಳಪಡಿಸುತ್ತಾರೆಂಬ ಪ್ರಶ್ನೆ ಇದೆ. ಶುಕ್ರವಾರವಷ್ಟೇ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ …
Read More »ಮತ್ತೆ ಬನ್ನಿ ಕಿತ್ತೂರು ಉತ್ಸವಕ್ಕೆ…:D.C.
ಚನ್ನಮ್ಮನ ಕಿತ್ತೂರು: ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆಗೆ ಶುಕ್ರವಾರ ತಡರಾತ್ರಿ ವೈಭವದ ತೆರೆ ಬಿದ್ದಿತು. ಬಾಲಿವುಡ್ ಖ್ಯಾತ ಗಾಯಕ ಅರ್ಮಾನ್ ಮಲೀಕ್ ಅವರ ಗಾನಸುಧೆಯ ಮೂಲಕ ಸಾಂಸ್ಕೃತಿಕ ಲೋಕವೊಂದು ನಿರ್ಮಾಣವಾಯಿತು. ರಾಜ್ಯದ ಎಲ್ಲೆಡೆಯಿಂದ ಸೇರಿದ್ದ ಅಪಾರ ಜನ ಮೂರು ದಿನಗಳ ವೈಭೋಗವನ್ನು ಕಣ್ಣು- ಮನದಲ್ಲಿ ಹಿಡಿದಿಟ್ಟುಕೊಂಡು ಮರಳಿದರು. ದ್ವಿಶತಮಾನೋತ್ಸವಕ್ಕೆ ಜನ ನಿರೀಕ್ಷೆಗೆ ಮೀರಿ ಹರಿದುಬಂದರು. ರಾಣಿ ಚನ್ನಮ್ಮ ಮುಖ್ಯ ವೇದಿಕೆಯಲ್ಲಿ ಬೆಳಗಿನ ಅವಧಿಯಲ್ಲಿ ನಡೆದ ಸಾಹಿತ್ಯ ಗೋಷ್ಠಿಗಳು ಮತ್ತು ಮಧ್ಯಾಹ್ನದ …
Read More »ಬೈಲಹೊಂಗಲ ಉತ್ಸವಕ್ಕೆ ಭರದ ಸಿದ್ಧತೆ
ಬೈಲಹೊಂಗಲ: ವೀರರಾಣಿ ಕಿತ್ತೂರು ಚನ್ನಮ್ಮನ 200ನೇ ವಿಜಯೋತ್ಸವದ ವರ್ಷಾಚರಣೆ ಸವಿ ನೆನಪಿಗಾಗಿ ಅ.28ರಂದು ಇದೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಬೆಳಗಾವಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿರುವ ಪ್ರಥಮ ಬೈಲಹೊಂಗಲ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ಪಟ್ಟಣದ ಕಲ್ಮಠ ಗಲ್ಲಿಯಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮನ ಐತಿಹಾಸಿಕ ಸಮಾಧಿ ಸ್ಥಳದಲ್ಲಿ ಸರ್ಕಾರದಿಂದ ಉತ್ಸವ ನಡೆಸುವಂತೆ ವೀರರಾಣಿ ಕಿತ್ತೂರು ಚನ್ನಮ್ಮ ಸ್ಮರಣೋತ್ಸವ …
Read More »ಮನೆ ಗೋಡೆ ಕುಸಿತ: ತಪ್ಪಿದ ದುರಂತ
ಕಿತ್ತೂರು: ಇಲ್ಲಿಯ ಗುರುವಾರಪೇಟೆಯ ಶ್ರೀನಾಥ ಉಮರ್ಜಿ ಹಾಗೂ ಸಂಗೋಜಿ ಕುಟುಂಬಕ್ಕೆ ಸೇರಿದ ಮನೆಯ ಗೋಡೆ ಮಂಗಳವಾರ ಕುಸಿದು ಬಿದ್ದಿದೆ. ಮಲಗುವ ಕೋಣೆಯ ಗೋಡೆಯಾಗಿದ್ದರಿಂದ ಕುಟುಂಬಸ್ಥರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಉಮರ್ಜಿ ಮತ್ತು ಸಂಗೋಜಿ ಕುಟುಂಬದ ಎರಡೂ ಮನೆಗಳಿಗೂ ಇದೊಂದೇ ಗೋಡೆಯಾಗಿತ್ತು. ಸಂಗೋಜಿ ಅವರ ಮನೆಯಲ್ಲಿ ಸದ್ಯ ಯಾರೂ ವಾಸಿಸುತ್ತಿಲ್ಲ. ಆದರೆ ಮನೆ ಸೋರುವ ವಿಷಯ ಅವರಿಗೆ ತಿಳಿಸಲಾಗಿತ್ತು. ಬೇಗ ಗಮನ ಹರಿಸದ್ದರಿಂದ ಉಮರ್ಜಿ ಅವರ ಮನೆ ಕಡೆಗೆ ಗೋಡೆ ಬಾಗಿ ಬಿದ್ದಿದೆ …
Read More »ಮುಡಾ ಹಗರಣ : `CM ಸಿದ್ದರಾಮಯ್ಯ’ ವಿಚಾರಣೆಗೆ ಲೋಕಾಯುಕ್ತ ಸಿದ್ಧತೆ!
ಮುಡಾ ಹಗರಣ : `CM ಸಿದ್ದರಾಮಯ್ಯ’ ವಿಚಾರಣೆಗೆ ಲೋಕಾಯುಕ್ತ ಸಿದ್ಧತೆ! ಮೈಸೂರು : ಮುಡಾ ಹಗರಣ ಸಂಬಂಧ ಲೋಕಾಯುಕ್ತ ಪೊಲೀಸರು ಈಗಾಗಲೇ ವಿಚಾರಣೆ ನಡೆಸುತ್ತಿದ್ದು, ಇದೀಗ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಲು ಸಿದ್ಧತೆ ನಡೆಸಲಾಗಿದೆ. ಮುಡಾ ಹಗರಣ ಸಂಬಂಧ ಪ್ರಕರಣದ 3 ನೇ ಆರೋಪಿ, ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಸ್ವಾಮಿ, 4 ನೇ ಆರೋಪಿ ಜಮೀನಿನ ಮಾಲೀಕ ದೇವರಾಜು ವಿಚಾರಣೆ ಮಾಡಲಾಗಿತ್ತು. ಶುಕ್ರವಾರ 2 ನೇ …
Read More »ದೀಪಾವಳಿ ಹಬ್ಬದ ಸಂದರ್ಭ14 ಪ್ರಮುಖ ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿ
ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಈ ಹಿನ್ನೆಲೆ ಕರ್ನಾಟಕಕ್ಕೆ ಸಂಬಂಧಿಸಿದ 14 ಪ್ರಮುಖ ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತಿದೆ. ಈ ಬಗ್ಗೆ ನೈರುತ್ಯ ರೈಲ್ವೆ ಮಾಹಿತಿ ನೀಡಿದ್ದು, ” ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು 14 ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ತಾತ್ಕಾಲಿಕವಾಗಿ ಜೋಡಿಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿದೆ. * ಅಕ್ಟೋಬರ್ 25 ರಿಂದ ನವೆಂಬರ್ 24 ರವರೆಗೆ …
Read More »ಬೇಲೆಕೇರಿ ಅದಿರು ಅಕ್ರಮ ನಾಪತ್ತೆ ಕೇಸ್ : ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್!
ಬೆಂಗಳೂರು: ಬೇಲೆಕೇರಿ ಬಂದರಿನಲ್ಲಿದ್ದಂತ ಅದಿರು ನಾಪತ್ತೆ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ದೋಷಿ ಎಂಬುದಾಗಿ ಕೋರ್ಟ್ ತೀರ್ಪು ನೀಡಿತ್ತು. ಇಂದು ಅವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. 2010ರ ಬೇಲೆಕೇರಿ ಬಂಧರಿನಲ್ಲಿನ ಅದಿರು ನಾಪತ್ತೆ ಪ್ರಕರಣ ಸಂಬಂಧದ ತೀರ್ಪನ್ನು ಕೋರ್ಟ್ ಪ್ರಕಟಿಸಿದೆ. ಕಾರವಾರದ ಕಾಂಗ್ರೆಸ್ …
Read More »
Laxmi News 24×7