Breaking News

ರಾಜ್ಯ

ನಾನು ಸಿಎಂ ಆಗಿದ್ರೆ ಲಾಕ್ಡೌನ್ ವೇಳೆ 10 ಸಾವಿರ ಕೊಡ್ತಿದ್ದೆ ಸಿದ್ದರಾಮಯ್ಯ

ಬೆಂಗಳೂರು(ಆ.16): ನಾನು ಸಿಎಂ ಆಗಿದ್ದರೆ ಲಾಕ್ಡೌನ್ ವೇಳೆ 10ಸಾವಿರ ಕೊಡುತ್ತಿದ್ದೆ. ಯಡಿಯೂರಪ್ಪ ಹಾಗೂ ಅವರ ಮಗ ಲೂಟಿ ಹೊಡೆದರು. ಆದ್ರೆ ಕಣ್ಣೀರಿನಲ್ಲಿ ಕೈತೊಳೆಯುವ ಜನರಿಗೆ ಹಣ ಕೊಡಲಿಲ್ಲ. ಕೆಲಸವಿಲ್ಲದೆ ಪರದಾಡುವ ಜನರಿಗೆ ಸಹಾಯ ಮಾಡಲಿಲ್ಲ ಎಂದು ವಿಜಯನಗರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂದಿರಾ ಕ್ಯಾಂಟೀನ್ ಮುಚ್ಚಲು ಹೊರಟಿದ್ದಾರೆ. ಅವನ್ಯಾವನೋ ಸಿ.ಟಿ.ರವಿ ಅಂತ ಇದ್ದಾನೆ. ಅವನಿಗೆ ಮನುಷ್ಯತ್ವವೂ ಇಲ್ಲ. ಬಡವರ ಬಗ್ಗೆಯೂ ಗೊತ್ತಿಲ್ಲ ಅನ್ನಪೂರ್ಣೇಶ್ವರಿ ಹೆಸರು ಇಡಬೇಕು ಎನ್ನುತ್ತಾನೆ. …

Read More »

ಚಿಕಿತ್ಸೆಗೆಂದು ವೃದ್ಧಾಶ್ರಮ ಸೇರಿದ್ದ ವೃದ್ಧ ಮಹಿಳೆ ನಿಗೂಢ ಸಾವು

ಬೆಂಗಳೂರು, ಆ. 16: ವೃದ್ಧರನ್ನು ಪೋಷಣೆ ಮಾಡುವ ಹೆಸರಿನಲ್ಲಿ ದುಡ್ಡಿಗಾಗಿ ಹುಟ್ಟಿಕೊಂಡಿರುವ ಅನಾಥಾಶ್ರಮಗಳಲ್ಲಿ ಮಹಾ ದುರಂತಗಳಲ್ಲಿ ನಡೆಯುತ್ತಿವೆ. ವೃದ್ಧರನ್ನು ಪೋಷಣೆ ಮಾಡುವ ಹೆಸರಿನಲ್ಲಿ ಚಿತ್ರಹಿಂಸೆ ಕೊಟ್ಟು ಸಾಯಿಸಿರುವ ಆರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಿದ್ದವು. ಇದೀಗ ವೃದ್ಧ ಮಹಿಳೆಯೊಬ್ಬಳು ಅನಾಥಾಶ್ರಮದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ರಾಮಚಂದ್ರ ಎಂಬುವರ ತಾಯಿ ಕಮಲಮ್ಮ ಮರೆವು ಕಾಯಿಲೆಯಿಂದ ಬಳಲುತ್ತಿದ್ದರು. ದಿನವೂ ಆಕೆಯನ್ನು ಹಾರೈಕೆ ಮಾಡಲಾಗದ ಕಾರಣದಿಂದ ಅವರು ನಾಗರಭಾವಿಯಲ್ಲಿರುವ ಉಸುರು ಫೌಂಡೇಷನ್ ವೃದ್ಧರ …

Read More »

ಹೇಳಿಕೆಗಳಿಂದ ನಾಯಕನಾಗಲು ಸಾಧ್ಯವಾಗಲ್ಲ,ಕೆಲಸ ಮಾಡಬೇಕು: ವಿಜಯೇಂದ್ರ

ಶಿವಮೊಗ್ಗ: ಯಾವುದೇ ಹೇಳಿಕೆಗಳಿಂದ ನಾಯಕನಾಗಿ ಹೊರಹೊಮ್ಮಲು ಸಾಧ್ಯವಿಲ್ಲ. ಅದರ ಬದಲು ಜನಪರ ಕೆಲಸ ಮಾಡುವ ಮೂಲಕ ಸಂಘಟನೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಎರಡು ಪೆಗ್ ಬೇಕು ಎಂಬ ಹೇಳಿಕೆಗಳಿಗೆ ತಿರುಗೇಟು ನೀಡಿದರು. ಬಹಳಷ್ಟು ಜನ ಎಲುಬಿಲ್ಲದ ನಾಲಿಗೆ ರೀತಿ ವರ್ತಿಸುತ್ತಿದ್ದಾರೆ. ಇದನ್ನು ನಾವೆಲ್ಲರೂ ಗಮನಿಸುತ್ತಿದ್ದೇವೆ. ಹೇಳಿಕೆಗಳನ್ನು ಕೊಡುವುದರ ಮೂಲಕ ನಾಯಕತ್ವ ಬೆಳೆದುಬಿಡುತ್ತದೆ ಎಂಬ …

Read More »

ಅಜ್ಜಿಯ ಹಲ್ಲಿನ ಸೆಟ್ ಹಾಳು ಮಾಡಿದ ಹಸುಳೆಯ ಹತ್ಯೆ: ಆರೋಪಿ ಬಂಧನ

ವಿಜಯಪುರ: ತಾಯಿಯ ಹಲ್ಲಿನ ಸೆಟ್ ನಾಶ ಮಾಡಿದಳೆಂಬ ಕಾರಣಕ್ಕೆ ವಿಕೃತ ಯುವಕನೊಬ್ಬ ಆರು ವರ್ಷದ ಬಾಕಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಆ.9 ರಂದು ಮಿರಗಿ ಗ್ರಾಮದಲ್ಲಿ ಬೋಳೆಗಾಂವ ಮೂಲದ ಆರು ವರ್ಷದ ಬಾಲಕಿ ಗ್ರಾಮದ ಹನಮಂತ ದೇವರ ದೇವಸ್ಥಾನದ ಬಳಿ ಆಟ ಆಡುತ್ತಿದ್ದಾಗ ಕಾಣೆಯಾಗಿದ್ದಳು. ಜೊತೆಗಿದ್ದ ಆಕೆಯ ಸಹೋದರಿ ಮನೆಗೆ ಬಂದರೂ ಈ ಬಾಲೆ ಮನೆಗೆ ಮರಳದ ಕಾರಣ ಗ್ರಾಮದಲ್ಲಿ ಹುಡುಕಿದ …

Read More »

ಬಿಜೆಪಿ ಸೇರುವಂತೆ ನನಗೂ ಕರೆ ಬಂದಿತ್ತು’: ಸ್ಫೋಟಕ ಹೇಳಿಕೆ ಕೊಟ್ಟ ಕೈ ಶಾಸಕ

ಬಳ್ಳಾರಿ: ನಾನೇನಾದ್ರೂ ಬಿಜೆಪಿಗೆ ಹೋಗಿದ್ರೇ ಈಗ ನಾನು ಮಂತ್ರಿಯಾಗ್ತಿದ್ದೇ, ಬಿಜೆಪಿ ಸರ್ಕಾರ ರಚನೆ ಸಂದ​ರ್ಭ​ದಲ್ಲಿ ನನಗೂ ಬಿಜೆಪಿ ಪಕ್ಷ​ದಿಂದ ಕರೆ ಬಂದಿತ್ತು. ಎಂದು ಹಗರಿಬೊಮ್ಮನಹಳ್ಳಿ ಕಾಂಗ್ರೆಸ್​ಶಾಸಕ ಎಸ್‌. ಭೀಮಾ​ನಾಯ್ಕ್ ಹೇಳಿ​ದ್ದಾ​ರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ಸರ್ಕಾರ ನನಗೂ ಸಚಿವ ಸ್ಥಾನದ ಆಮಿಷ ಒಡ್ಡಿ ಪಕ್ಷ ಸೇರುವಂತೆ ಕರೆ ಬಂದಿತ್ತು, ಆದರೆ ನಾನು ಮಾಜಿ ಸಿಎಂ ಸಿದ್ದರಾಮಯ್ಯನವರ ಮುಖ ನೋಡ್ಕೊಂಡು ಬಿಜೆಪಿಗೆ ಹೋಗಲಿಲ್ಲ ಎಂದಿದ್ದಾರೆ. 2013- 2018ರ ವರೆಗೆ …

Read More »

ಲವ್ ಮಾಡಲ್ಲ ಎಂದ ಯುವತಿಯನ್ನ ನಡುರಸ್ತೆಯಲ್ಲೇ ಕತ್ತು ಸೀಳಿ ಕೊಲೆಗೈದ ಯುವಕ

ಗುಂಟೂರು: ಮೂರನೇ ವರ್ಷದ ಬಿ.ಟೆಕ್​ ಶಿಕ್ಷಣವನ್ನು ಪಡೆಯುತ್ತಿದ್ದ ವಿದ್ಯಾರ್ಥಿನಿಯನ್ನು ಯುವಕನೊಬ್ಬ ನಡುರಸ್ತೆಯಲ್ಲಿ ಕತ್ತಿಯಿಂದ ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆಗೈದಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ರಮ್ಯಾಶ್ರೀ ಕೊಲೆಯಾದ ವಿದ್ಯಾರ್ಥಿನಿಯಾಗಿದ್ದು, ಆಕೆಯ ಹೊಟ್ಟೆ ಭಾಗ ಹಾಗೂ ಕುತ್ತಿಗೆ ಭಾಗಕ್ಕೆ 6ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಲಾಗಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಶಶಿ ಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ.     ಘಟನೆ ನಡೆಯುವ ಮುನ್ನ ವಿದ್ಯಾರ್ಥಿನಿಯೊಂದಿಗೆ …

Read More »

ಸ್ವಾತಂತ್ರ್ಯಕ್ಕೆ ಬೆಳ್ತಂಗಡಿಗೆ ಒಲಿದು ಬಂತು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಅವಾರ್ಡ್..!

ಬೆಳ್ತಂಗಡಿ : 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ 5000 ಕ್ಕೂ ಮಿಕ್ಕಿ ಮಂದಿ ಸ್ಪರ್ಧಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ನೆಲೆಯಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನ ಪ್ರಶಸ್ತಿಯನ್ನು, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಷ್ಯಾ ಮುಖ್ಯಸ್ಥರಾದ, ಡಾ. ಮನೀಶ್ ವೈಷ್ಣವ್, ಅವರು ಶಾಸಕ ಹರೀಶ್ ಪೂಂಜ ಅವರಿಗೆ 75 ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯ ಸಂದರ್ಭದಲ್ಲಿ( …

Read More »

ಏಳನೇ ಬಾರಿಗೆ ವಿಶ್ಚದಾಖಲೆ ಬರೆದ ಬಾಲಕಿ; ಗೋಲ್ಡನ್ ಗರ್ಲ್ ಕಿರೀಟ ಮುಡಿಗೇರಿಸಿ ಸಾಧನೆ!

ಉಡುಪಿ: ಈಕೆ 12 ವರ್ಷದ ಬಾಲಕಿ. ಈಕೆಯ ಸಾಧನೆ ಕಂಡು ಜಗತ್ತೆ ನಿಬ್ಬೆರಗಾಗಿದೆ. ಈಗಾಗಲೇ ಆರು ವಿಶ್ವದಾಖಲೆ ಮಾಡಿರುವ ಈಕೆಯ ಏಳನೆ ವಿಶ್ವದಾಖಲೆಯನ್ನ ಯಾರೂ ಮುರಿಯಲು ಅಸಾಧ್ಯವೆಂಬಂತೆ‌ ಸಾಧಿಸಿ ತೋರಿಸಿದ್ದಾಳೆ. ಸ್ವತಃ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಮುಖ್ಯಸ್ಥರೇ ಮೂಖವಿಸ್ಮಿತರಾಗಿ ಗೋಲ್ಡನ್ ಗರ್ಲ್ ಗರಿಯನ್ನ ಈಕೆ ಮುಡಿಗೇರಿಸಿದ್ದಾರೆ. ಉಡುಪಿಯ ಯೋಗಸಾಧಕಿ, ಪುಟ್ಟ ಹೆಣ್ಣು ಮಗಳು ಜಗತ್ತೇ ಬೆರಗುಗಣ್ಣಿನಿಂದ ನೋಡುವಂತಹ ಸಾಧನೆ ಮಾಡಿದ್ದಾಳೆ. ದೇಹದೊಳಗೆ ಮೂಳೆಯೇ ಇಲ್ಲದವಳಂತೆ ಲೀಲಾಜಾಲವಾಗಿ ತಿರುಗುವ ಈಕೆ, …

Read More »

ಹಳ್ಳಿಯ ಗ್ರಾಮಸ್ಥರಲ್ಲಿ ಟ್ರ್ಯಾಕ್ಟರ್ ಸ್ಪರ್ಧೆ ಕ್ರೇಜ್ -ಎಂಜಿನ್ ಹಾರಿದರೂ ನಿಲ್ಲೋದಿಲ್ಲ ಚಾಲನೆ!

ಬಾಗಲಕೋಟೆ: ಪಂಚಮಿ ಹಬ್ಬ ಕಳೆದು ಮೂರು ನಾಲ್ಕು ದಿನವಾದ್ರು, ನಾಗದೇವತೆಗೆ ಹಾಲೆರೆಯುವ ಕಾರ್ಯ ಮಾತ್ರ ಮುಕ್ತಾಯವಾಗಿಲ್ಲ. ರಾಜ್ಯದ ಗ್ರಾಮೀಣ ಭಾಗದಲ್ಲಿ ಪಂಚಮಿ ಅಂದ್ರೆ ಹಬ್ಬದ ಮತ್ತೊಂದು ಮುಖ. ವರ್ಷಕ್ಕೊಮ್ಮೆ ಬರುವ ಪಂಚಮಿ ಹಬ್ಬದ ಪ್ರಯುಕ್ತ ವಿವಿಧ ಗ್ರಾಮೀಣ ಕ್ರೀಡೆಗಳು ನಡೆಯುತ್ತಿವೆ. ಆದ್ರೆ ಅದೊಂದು ಹಳ್ಳಿಯ ಟ್ರ್ಯಾಕ್ಟರ್ ಸಾಹಸ ಕ್ರೀಡೆ ಮಾತ್ರ ಎಲ್ಲರ ಗಮನ ಸೆಳೆಯಿತು.     ಕೊರೊನಾ ನಿಯಮಕ್ಕೆ ಬ್ರೇಕ್​.. ಟ್ರ್ಯಾಕ್ಟರ್ ಎಕ್ಷಲರೇಟ್ ರೈಜ್ ಟ್ರ್ಯಾಕ್ಟರ್ ಎಂಜಿನ್​ಗೆ ಮೂರು …

Read More »

ಪ್ರಧಾನಿ ನರೇಂದ್ರ ಮೋದಿ ಭಾಷಣ ಟೊಳ್ಳು: ‍ಪ್ರತಿಪಕ್ಷಗಳ ಟೀಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವಾತಂತ್ರ್ಯ ದಿನದ ಭಾಷಣವನ್ನು ‘ವಾಕ್ಚಾತುರ್ಯ ಮತ್ತು ಖಾಲಿ ಘೋಷಣೆ’ಗಳಿಂದ ಕೂಡಿದೆ ಎಂದಿರುವ ಪ್ರತಿಪಕ್ಷಗಳು, ಎಂಟು ವರ್ಷಗಳಿಂದ ಅದೇ ಭಾಷಣ ಮಾಡುತ್ತಿದ್ದಾರೆ ಎಂದು ಟೀಕಿಸಿವೆ. ಘೋಷಿಸಲಾಗಿರುವ ಅಂಶಗಳು ಜಾರಿಗೆ ತರುವಂತಹವುಗಳಲ್ಲ ಎಂದು ಅಭಿಪ್ರಾಯಪಟ್ಟಿವೆ. ‘ಪ್ರಧಾನಿ ಅಧಿಕಾರ ಸ್ವೀಕರಿಸಿದ ನಂತರ ದೇಶವು ‘ಅದೇ ಭಾಷಣಗಳನ್ನು’ ಕೇಳುತ್ತಿದೆ. ಆದರೆ ರೈತರು ಸೇರಿದಂತೆ ಅನ್ಯಾಯಕ್ಕೊಳಗಾದವರಿಗೆ ಯಾವುದೇ ಪರಿಹಾರಗಳನ್ನು ನೀಡುತ್ತಿಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಟೀಕಿಸಿದ್ದಾರೆ. …

Read More »