ನಾಳೆ ದೇಶಾದ್ಯಂತ ಜನತಾ ಕರ್ಪ್ಯೂಗೆ ಪ್ರಧಾನಿ ಮೋದಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ ಒಪಿಡಿಗಳನ್ನು ಬಂದ್ ಮಾಡಲಾಗುವುದು. ತುರ್ತು ಚಿಕಿತ್ಸೆ ಮಾತ್ರ ಇರುತ್ತದೆ.
ಕೊರೋನಾ ಸೋಂಕು ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ನಾಳೆ ಜನತಾ ಕರ್ಫ್ಯೂಗೆ ಮೋದಿ ಕರೆ ನೀಡಿದ್ದು, ಹೀಗಾಗಿ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡುವಂತೆ ಐಎಂಎ ಸೂಚನೆ ನೀಡಿದೆ. ತುರ್ತು ಚಿಕಿತ್ಸೆ ಮಾತ್ರ ನೀಡಲಾಗುವುದು.
ಹೊರರೋಗಿಗಳ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬಂದು ಸೋಂಕು ತಗುಲುವ ಸಾಧ್ಯತೆ ಹಿನ್ನಲೆಯಲ್ಲಿ ಅಗತ್ಯ ಇರುವವರಿಗೆ ತುರ್ತು ಚಿಕಿತ್ಸೆ ನೀಡಲಾಗುವುದು ಎಂದು ಹೇಳಲಾಗಿದೆ.