Home / ಜಿಲ್ಲೆ / ಮೂಡಲಗಿಯಲ್ಲಿ ಜನತಾ ಕರ್ಫ್ಯೂ ಜಾಗೃತಿ ಆಂದೋಲನಕ್ಕೆ ಚಾಲನೆ

ಮೂಡಲಗಿಯಲ್ಲಿ ಜನತಾ ಕರ್ಫ್ಯೂ ಜಾಗೃತಿ ಆಂದೋಲನಕ್ಕೆ ಚಾಲನೆ

Spread the love

ಮೂಡಲಗಿ : ಪ್ರಪಂಚಾದ್ಯಂತ ವ್ಯಾಪಿಸಿರುವ ಕೊರೋನಾ ವೈರಸ್ ಹರಡುವದನ್ನು ತಡೆಯಲು, ನಾಗರಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿರುವ ನಾಳಿನ ರವಿವಾರದ ‘ಜನತಾ ಕಫ್ರ್ಯೂ’ ಜಾಗೃತಿ ಆಂದೋಲನಕ್ಕೆ ಶಾಸಕ ಹಾಗೂ ಕ.ಹಾ.ಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಮೂಡಲಗಿಯಲ್ಲಿಂದು ಚಾಲನೆ ನೀಡಲಾಯಿತು.

ಅರಭಾವಿ ಮಂಡಲ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪೂರ್ವ ಭಾವಿ ಜಾಗೃತಿ ಆಂದೋಲನಕ್ಕೆ ಬಿಜೆಪಿ ಪದಾಧಿಕಾರಿಗಳು ಹಾಗೂ ಮುಖಂಡರು ಚಾಲನೆ ನೀಡಿದರು.

ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸೇರಿದ್ದ ಬಿಜೆಪಿ ಪದಾಧಿಕಾರಿಗಳು ಮಾತನಾಡಿ, ಕೊರೋನಾ ವೈರಸ್ ನಿಗ್ರಹಿಸಲ್ಲು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗಿನ 14 ತಾಸು ‘ಜನತಾ ಕಫ್ರ್ಯೂ’ ಘೋಷಿಸಿದ್ದು ಆ ದಿನ 12 ಘಂಟೆಕ್ಕಿಂತ ಹೆಚ್ಚು ಕಾಲ ಜನರು ಮನೆಯ ಹೊರಗೆ ಬಾರದೇ ಮನೆಯಲ್ಲಿಯೇ ಉಳಿದು ಕೊಂಡರೆ ವೈರಾಣು ತನ್ನ ಶಕ್ತಿ ಕಳೆದುಕೊಂಡು ಮತ್ತೊಬ್ಬರಿಗೆ ಹರಡುವದಿಲ್ಲ.
ಆದ್ದರಿಂದ ಪ್ರತಿಯೊಬ್ಬರೂ ಪ್ರಧಾನಿಗಳ ಕರೆಯಂತೆ ನಾಳಿನ ದಿನ ಪೂರ್ಣವಾಗಿ ಆಚರಿಸಿ ಕೊರೋನಾ ವೈರಸ್ ತಡೆಯಲು ಪ್ರಮುಖ ಪಾತ್ರ ವಹಿಸಬೇಕೆಂದು ಜಾಗೃತಿ ಆಂದೋಲನದಲ್ಲಿ ಪದಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಕ್ಷೇತ್ರದಾದ್ಯಂತ ಕಾರ್ಯಕರ್ತರ ಪಡೆಯನ್ನು ಕಳುಹಿಸಿಕೊಟ್ಟಿದ್ದಾರೆ ಜೊತೆಗೆ ಅಟೋ ರಿಕ್ಷಾ ಮೂಲಕ ಧ್ವನಿ ವರ್ಧಕ ಅಳವಡಿಸಿ ಎಲ್ಲ ಹಳ್ಳಿಗಳಲ್ಲಿ ವೈರಸ್ ಸೊಂಕು ತಡೆಗಟ್ಟುವಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನಿಯವಾದದ್ದು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಹೇಳಿದರು. ನಾಳೆ ಮೂಡಲಗಿಯಲ್ಲಿ ನಡೆಯಲಿರುವ ಸಂತೆಯನ್ನು ರದ್ದುಪಡಿಸುವಂತೆ ಅವರು ಒತ್ತಾಯಿಸಿದರು.

ಎನ್‍ಎಸ್‍ಎಫ್ ಅತಿಥಿ ಗೃಹದ ನಿಂಗಪ್ಪ ಕುರಬೇಟ, ಜಿ.ಪಂ ಸದಸ್ಯ ಗೋವಿಂದ ಕೊಪ್ಪದ, ಹನಮಂತ ತೆರದಾಳ, ಸಂತೋಷ ಸೋನವಾಲಕರ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ರವಿ ಪರುಶೆಟ್ಟಿ, ಹುಸೇನ ಶೇಖ, ಅನ್ವರ ನದಾಫ್, ಡಾ: ಎಸ್.ಎಸ್.ಪಾಟೀಲ, ಹನಮಂತ ಗುಡ್ಲಮನಿ, ಗಿರೀಶ ಢವಳೇಶ್ವರ, ಬಸು ಝಂಡೆಕುರಬರ, ಆನಂದ ಟಪಾಲ, ಶಿವಬಸು ಜುಂಜರವಾಡ, ಪರಶುರಾಮ ಸನದಿ, ಪ್ರಕಾಶ ಮಾದರ, ಸಿದ್ದಾರೂಢ ಮಬನೂರ, ಪಂಚಯ್ಯಾ ಹಿರೇಮಠ, ಶ್ರೀಕಾಂತ ಪಾಟೀಲ, ಹನಮಂತ ಪೂಜೇರಿ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.
‘ಜನತಾ ಕಫ್ರ್ಯೂ’ ಜಾಗೃತಿ ಜಾಥಾವು ಪಟ್ಟಣದ ಸಂಗಪ್ಪಣ್ಣಾ ವೃತ್ತÀ, ಗಾಂಧಿ ವೃತ್ತ, ಚನ್ನಮ್ಮ ವೃತ್ತ ಸೇರಿದಂತೆ ವಿವಿಧ ವಾರ್ಡಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ