Home / ರಾಜ್ಯ (page 2290)

ರಾಜ್ಯ

ಕೊರೊನಾ ಆತಂಕ ಮಧ್ಯೆ ಕೊಡಗು, ಹಾಸನದಲ್ಲಿ ಲಘು ಭೂಕಂಪನ

ಹಾಸನ/ಕೊಡಗು: ಕೊರೊನಾ ಆತಂಕದ ನಡುವೆ ಕೊಡಗು ಮತ್ತು ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿ ಜನ ಭಯಭೀತರಾಗಿದ್ದಾರೆ. ಕಾಳೇನಹಳ್ಳಿ, ಗರುಡನಹಳ್ಳಿ ಸುತ್ತಮುತ್ತಲಿನ ಗ್ರಾಮದಲ್ಲಿ ಭೂಮಿ ಕಂಪನದ ಅನುಭವವಾಗಿದೆ. ಇಂದು ಸಂಜೆ 5.20ರ ಸಮಯದಲ್ಲಿ ಭೂಮಿ ಕಂಪಿಸಿ ನಡುಗಿದ ಅನುಭವವಾಗಿದ್ದು, ಬೆಚ್ಚಿಬಿದ್ದ ಜನ ಮನೆಯಿಂದ ಹೊರ ಓಡಿ ಬಂದಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರ, ಕೂಡಿಗೆ, ಹೆಬ್ಬಾಲೆ ಸೇರಿದಂತೆ …

Read More »

ಲಾಕ್‍ಡೌನ್ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ- 15 ಜನರ ಬಂಧನ

ಕಾರವಾರ: ಲಾಕ್‍ಡೌನ್ ಎಚ್ಚರಿಕೆಯ ನಡುವೆಯೂ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಎರಡು ಮಸೀದಿಗಳಲ್ಲಿ ಸಾಮೂಹಿಕವಾಗಿ ನಮಾಜ್ ಮಾಡುತ್ತಿದ್ದ 15 ಜನರನ್ನು ಮಸೀದಿಯಲ್ಲಿಯೇ ದಸ್ತಗಿರಿ ಮಾಡಲಾಗಿದೆ. ಹುನಗುಂದದ ಅಬ್ದುಲ್ ಮುನಾಫ್, ಮಕ್ತುಮಸಾಬ್, ಅಬ್ದುಲ್ ಖಾದರ್ ಅಬ್ದುಲ್ ರೇಹಮಾನ್ ಮುಲ್ಲಾ, ಅಬ್ದುಲ್ ಖಾದರ್ ಅಬ್ದುಲ್ ಗಫಾರ್ ಮುಲ್ಲಾ, ಫೀರ ಅಹ್ಮದ್, ದಾದಾಪೀರ್ ಮತ್ತು ಹಜರತ ಅಲಿ ಹಾಗೂ ವೀರಾಪುರದ ಅಬ್ದುಲ್ ರಜಾಕ್, ಇಮ್ತಿಯಾಜ್, ಮಲ್ಲಿಕ್ ರೆಹಾನ್, ಮೊಹಮ್ಮದ್ ರಫಿಕ್, ಮೊಹಮ್ಮದ್ ಬಸೀರುಲ್, ಮುಸ್ತಾಕ್, …

Read More »

ಜಿಲ್ಲಾಡಳಿತ ನೀಡಿದ್ದ ಪ್ರಕಟಣೆಯಲ್ಲಿ ಉಂಟಾಗಿದ್ದ ಗೊಂದಲಕ್ಕೆ ರಾಜ್ಯ ಸರಕಾರವೇ ತೆರೆ ಎಳೆದಿದೆ.

ಕೊರೋನಾ ಸಂಬಂಧ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ನೀಡಿದ್ದ ಪ್ರಕಟಣೆಯಲ್ಲಿ ಉಂಟಾಗಿದ್ದ ಗೊಂದಲಕ್ಕೆ ರಾಜ್ಯ ಸರಕಾರವೇ ತೆರೆ ಎಳೆದಿದೆ. ಇನ್ನು ಮುಂದೆ ಜಿಲ್ಲಾಧಿಕಾರಿಗಳಿಗೆ ಕೊರೋನಾ ಪಾಸಿಟಿವ್ ಕುರಿತು ಮಾಹಿತಿ ನೀಡುವ ಅಧಿಕಾರ ಇಲ್ಲ. ರಾಜ್ಯ ಸರಕಾರವೇ ಮಾಹಿತಿ ನೀಡಲಿದೆ ಎಂದು ಸ್ಪಷ್ಟಪಡಿಸಲಾಗಿದೆ.   ಇಂದು ಬೆಳಗಾವಿಯಲ್ಲಿ ಯಾವುದೇ ಪಾಸಿಟಿವ್ ವರದಿ ಇಲ್ಲ ಎಂದು ಜಿಲ್ಲಾಡಳಿತ ತಿಳಿಸಿದ್ದರೆ, 3 ಪಾಸಿಟಿವ್ ವರದಿ ಬಂದಿದೆ ಎಂದು ರಾಜ್ಯಸರಕಾರ ಹೇಳಿತ್ತು. ಇದರಿಂದ ಸರಕಾರಕ್ಕೆ ತೀವ್ರ …

Read More »

ದಿನಸಿ ವಸ್ತು ತರಲು ಹೋದವನ ಕೈ ಬೆರಳು ಮುರಿದ ಸಿಪಿಐ;ಪೊಲೀಸ್ ದೌರ್ಜನ್ಯಕ್ಕೆ ಕೊನೆಯೇ ಇಲ್ವ?

ದಿನಸಿ ವಸ್ತು ತರಲು ಹೋದವನ ಕೈ ಬೆರಳು ಮುರಿದ ಸಿಪಿಐ;ಪೊಲೀಸ್ ದೌರ್ಜನ್ಯಕ್ಕೆ ಕೊನೆಯೇ ಇಲ್ವ? ಕೊರೋನಾ ಲಾಕ್ ಡೌನ್ ವೇಳೆ ಕೊರೋನಾ ಇಂದು ಮುಂಜಾನೆ 7.30 ಕೆ ಗೋಕಾಕ ನಗರದ ಅಪ್ಪ್ಸರಾ ಹೋಟೆಲ ಹತ್ತಿರ ಪೋಲಿಸ್ ಅಧಿಕಾರಿಯೊಬ್ಬರು ವಿನಾಕಾರಣ ಸಲೀಲ ಝಾಡವಾಲೇ ಎಂಬ ಅಮಾಯಕ ಯುವಕನ ಮೇಲೆ ಲಾಠಿ ಪ್ರಹಾರ ಮಾಡಿ ಆತನ ಕೈ ಬೆರಳು ಮುರಿದಿರುವ ಘಟನೆ ನಡೆದಿದೆ. ದಿನಸಿ ವಸ್ತುಗಳನ್ನು ತರಲು ಅಂಗಡಿಗೆ ತೆರಳುತ್ತಿದ್ದಾಗ ಪೊಲೀಸ್ ಅಧಿಕಾರಿ …

Read More »

ಕೇರಳ ಗಡಿ ದಾಟಲು ಯತ್ನ- ತಡೆದ ಪೊಲೀಸರ ಮೇಲೆ ಕಲ್ಲು ತೂರಾಟ

ಮಂಗಳೂರು: ಕೊರೊನಾ ಮುನ್ನೆಚ್ಚರಿಕೆ ಸಲುವಾಗಿ ವಾಹನಗಳ ತಪಾಸಣೆ ಮಾಡುತ್ತಿದ್ದ ಕರ್ತವ್ಯ ನಿರತ ಪೊಲೀಸರಿಗೆ ಹಲ್ಲೆ ಮಾಡಿ ತಪ್ಪಿಸಿಕೊಂಡ ಆರೋಪಿಯನ್ನು ಬಂಧಿಸಿ, ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.     ಪೆಪ್ಪರೆಯ ಸಿನಾನ್ ಬಂಧಿತ ಆರೋಪಿಯಾಗಿದ್ದಾನೆ. ಎ.ಎಸ್.ಐ. ಭಾಸ್ಕರ್ ಪ್ರಸಾದ್ ಹಾಗೂ ಹೆಡ್ ಕಾನ್ಸ್ ಟೇಬಲ್ ರಾಮನಾಯ್ಕ ಅವರು ಜನ ಹಾಗೂ ವಾಹನಗಳ ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸಿನಾನ್ …

Read More »

ನಮಾಜ್‍ಗೆ ತಡೆ- ಪೊಲೀಸರ ಮೇಲೆ ಕಲ್ಲು ತೂರಾಟ

ಹುಬ್ಬಳ್ಳಿ: ನಮಾಜ್ ವಿಷಯಕ್ಕೆ ಸಂಬಂಧಿಸಿದಂತೆ ಮುಸ್ಲಿಮರು ಮತ್ತು ಪೊಲೀಸ್ ಸಿಬ್ಬಂದಿಯ ಮಧ್ಯೆ ಗಲಾಟೆ ನಡೆದಿರುವ ಘಟನೆ ಹುಬ್ಬಳ್ಳಿ ಮಂಟೂರ್ ರೋಡ್ ಹತ್ತಿರದ ಅರಳಿಕಟ್ಟಿ ಕಾಲೋನಿ ಬಳಿ ನಡೆದಿದೆ.   ಲಾಕ್‍ಡೌನ್ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ನಮಾಜ್ ಮಾಡುವುದನ್ನು ನಿಲ್ಲಿಸಲಾಗಿದೆ. ಕೆಲ ಮೌಲ್ವಿಗಳೇ ನಮಾಜ್ ಮಾಡಲು ಮಸೀದಿಗೆ ಬರಬೇಡಿ ಎಂದು ಮನವಿ ಕೂಡ ಮಾಡಿದ್ದಾರೆ. ಆದರೆ ಈ ಮಧ್ಯೆಯೂ ಕೂಡ ನಮಾಜ್ ಮಾಡುವ ವಿಚಾರಕ್ಕೆ ಮುಸ್ಲಿಮರು ಮತ್ತು ಪೊಲೀಸರ …

Read More »

ಸಚಿವ ಜಗದೀಶ್ ಶೆಟ್ಟರ್ ಪಾಸಿಟಿವ್ ಕೇಸಸ್ ಇದೆ ಅಂತಾರೆ ಜಿಲ್ಲಾಡಳಿತ ಪಾಸಿಟಿವ್ ಇಲ್ಲ ಅಂತಾರೆ ಯಾವದು ನಿಜ ಯವದು ಸುಳ್ಳು ಬೆಳಗಾವಿ ಜನರಲ್ಲಿ ಆತಂಕ …

ಬೆಳಗಾವಿ – ಬೆಳಗಾವಿಯಲ್ಲಿ ಈವರೆಗೆ ಬಂದಿರುವ ವರದಿಯಲ್ಲಿ ಯಾವುದೇ ಪಾಸಿಟಿವ್ ಇಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಇದೀಗ ಮಾಧ್ಯಮ ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿಗಳು, ಮಧ್ಯಾಹ್ನ 12 ಗಂಟೆಯವರೆಗಿನ ಮಾಹಿತಿ ಪ್ರಕಾರ ಯಾವೊಂದೂ ಪಾಸಿಟಿವ್ ಬಂದಿಲ್ಲ ಎಂದಿದ್ದಾರೆ. ಆದರೆ ಬೆಂಗಳೂರಿನಲ್ಲಿ ರಾಜ್ಯ ಸರಕಾರಿ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ಬೆಳಗಾವಿಯಲ್ಲಿ ಮೂವರಿಗೆ ಪಾಸಿಟಿವ್ ಬಂದಿದೆ ಎಂದು ತಿಳಿಸಿದೆ. ಧಾರವಾಡದಲ್ಲಿ ಹೇಳಿಕೆ ನೀಡಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರೂ …

Read More »

ರವಿ.ಡಿ. ಚನ್ನಣ್ಣನವರ್ ಅವರು ನಿನ್ನೆ ರಾತ್ರಿ  ಲಾರಿ ಚಾಲಕನ ಮಾರುವೇಷದಲ್ಲಿ

ಬೆಂಗಳೂರು: ಕರ್ನಾಟಕದ ದಕ್ಷ ಪೊಲೀಸ್ ಅಧಿಕಾರಿ ರವಿ.ಡಿ. ಚನ್ನಣ್ಣನವರ್ ಅವರು ನಿನ್ನೆ ರಾತ್ರಿ  ಲಾರಿ ಚಾಲಕನ ಮಾರುವೇಷದಲ್ಲಿ ಹೋಗಿ ಲಂಚ ಪಡೆಯುತ್ತಿದ್ದ ಭ್ರಷ್ಟ ಆರ್ ಟಿಒ ಅಧಿಕಾರಿಗಳನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ಗಡಿ ಭಾಗದ ಅತ್ತಿಬೆಲೆ ಬಳಿ ಇರುವ  ಚೆಕ್ ಪೋಸ್ಟ್ ನಲ್ಲಿ ಹೋಮ್ ಗಾರ್ಡ್ ವಿವೇಕ್, ಆರ್‌ಟಿಒ ಬ್ರೇಕ್ ಇನ್ ಪೆಕ್ಟರ್ ಗಳಾದ ಕರಿಯಪ್ಪ ಮತ್ತು ಜಯಣ್ಣ ಅವರನ್ನು ಲಂಚ ಪಡೆದ ಆರೋಪದ ಮೇಲೆ …

Read More »

ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಬಹುತೇಕ ಗುಣಮುಖ: ಸಚಿವ ಶೆಟ್ಟರ್,

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಬಹುತೇಕ ಗುಣಮುಖರಾಗಿದ್ದು, ಮೂರು ಸಲದ ಪರೀಕ್ಷೆಯಲ್ಲಿ ನೆಗಟಿವ್ ಬಂದಿದೆ. ಇನ್ನೊಂದು ಸಲದ ಪರೀಕ್ಷೆ ಮಾತ್ರವೇ ಬಾಕಿ ಉಳಿದಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶೆಟ್ಟರ್, ಧಾರವಾಡದ ಕೊರೊನಾ ಪಾಸಿಟಿವ್ ವ್ಯಕ್ತಿ ಗುಣಮುಖರಾಗಿದ್ದಾರೆ. ಮೂರನೇ ಹಂತದ ಪ್ರಯೋಗಾಲಯ ಪರೀಕ್ಷೆಯಲ್ಲಿ ಆ ವ್ಯಕ್ತಿಯ ಫಲಿತಾಂಶ ನೆಗಟಿವ್ ಬಂದಿದೆ. ಇನ್ನೊಂದು ಸಲ ಪ್ರಯೋಗಾಲಯದಲ್ಲಿ …

Read More »

ಛತ್ತೀಸ್‍ಗಢ ರಾಜ್ಯದ ದಂಪತಿ ತಮಗೆ ಜನಿಸಿದ ಅವಳಿ ಮಕ್ಕಳಿಗೆ ‘ಕೊರೊನಾ’ ಮತ್ತು ‘ಕೋವಿಡ್’ ಎಂದು ನಾಮಕರಣ

ರಾಯ್ಪುರ: ದೇಶಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೋವಿಡ್-19 ಹಾಗೂ ಕೊರೊನಾ ಎಂಬ್ ಹೆಸರು ಕೇಳಿದರೇ ಜನರು ಬೆಚ್ಚಿ ಬೀಳುವ ಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಛತ್ತೀಸ್‍ಗಢ ರಾಜ್ಯದ ದಂಪತಿ ತಮಗೆ ಜನಿಸಿದ ಅವಳಿ ಮಕ್ಕಳಿಗೆ ‘ಕೊರೊನಾ’ ಮತ್ತು ‘ಕೋವಿಡ್’ ಎಂದು ನಾಮಕರಣ ಮಾಡಿರುವುದು ಅಚ್ಚರಿ ಮೂಡಿಸಿದೆ. ರಾಯ್ಪುರ ಮೂಲದ ದಂಪತಿಗೆ ಮಾರ್ಚ್ 27ರ ಮುಂಜಾನೆ ಅವಳಿ ಮಕ್ಕಳು ಜನಿಸಿದ್ದು, ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಾಗಿದೆ. ಕೊರೊನಾ …

Read More »