Breaking News

ನಾಳೆ ಜನತಾ ಕರ್ಫ್ಯೂನಲ್ಲಿ ಏನೆಲ್ಲಾ ಬಂದ್ ಇರುತ್ತೆ

Spread the love

ಬೆಂಗಳೂರು : ಮಾರ್ಚ್ 22ರ ಭಾನುವಾರದಂದು (ನಾಳೆ) ಪ್ರಧಾನಿ ನರೇಂದ್ರ ಮೋದಿಯವರು ಜನತಾ ಕರ್ಪ್ಯೂಗೆ ಕರೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಬಹುತೇಕ ಜನರು ಅಂದು ಸ್ವಯಂ ಗೃಹ ಬಂಧನಕ್ಕೆ ಒಳಗಾಗಲಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಮನೆಯಿಂದ ಹೊರಗೆ ಬಾರದೇ ಪ್ರಧಾನಿಯವರ ಜನತಾ ಕರ್ಪ್ಯೂಗೆ ಬೆಂಬಲ ಸೂಚಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದೆಲ್ಲೆಡೆ ಏನೆಲ್ಲಾ ವ್ಯವಸ್ಥೆ ಇರೋದಿಲ್ಲ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ..

ಮಾರ್ಚ್ 22ರ ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಜನತಾ ಕರ್ಪ್ಯೂಗೆ ಕರೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲೂ ಪ್ರಧಾನಿ ಕರೆಗೆ ಮಹತ್ವದ ಸ್ಪಂದನೆ ವ್ಯಕ್ತವಾಗಿದೆ. ಪ್ರಧಾನಿಯವರ ಜನತಾ ಕರ್ಪ್ಯೂ ಹಿನ್ನಲೆಯಲ್ಲಿ ಈ ಕೆಳಗಿನ ಸೇವಗಳು ಬಂದ್ ಆಗಲಿವೆ.
*ನಮ್ಮ ಮೆಟ್ರೋ ಸೇವೆ ಸ್ಥಗಿತ
*ಕೆ ಎಸ್ ಆರ್ ಟಿ ಸಿ ಬಸ್ ಸೇವೆ ಲಭ್ಯವಿಲ್ಲ
*ಹೋಟೆಲ್ ನಲ್ಲಿ ಊಟ ಸಿಗೋದಿಲ್ಲ
*ಆಭರಣ ಮಳಿಗೆಗಳು ಬಂದ್
*ಪೆಟ್ರೋಲ್, ಡಿಸೇಲ್ ಬಂಕ್ ಗಳು ಬಂದ್
*ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ ಗಳ ಸಂಚಾರ ಸ್ಥಗಿತ
*ಬಾರ್, ಪಬ್, ರೆಸ್ಟೋರೆಂಟ್ ಗಳು ಓಪನ್ ಇರೋದಿಲ್ಲ
*ಬೆಂಗಳೂರಿನ ಪ್ರಮುಖ ಕೆ ಆರ್ ಮಾರುಕಟ್ಟೆ ಕ್ಲೋಸ್
*ಬಿಎಂಟಿಸಿ ಬಸ್ ಗಳು ಶೇ.20ರಷ್ಟು ಮಾತ್ರ ಸಂಚರಿಸಲಿವೆ
*ದೇವಾಲಯಗಳು ಬಂದ್
*ಆಟೋ, ಟ್ಯಾಕ್ಸಿ ಸೇವೆ ಕೂಡ ಬಹುತೇಕ ಸ್ಥಬ್ಧ
ಕೈಗಾರಿಕೆಗಳು ಬಂದ್
ಇನ್ನೂ ಈ ಎಲ್ಲಾ ವ್ಯವಸ್ಥೆಗಳಲ್ಲಿ ವ್ಯತ್ಯವಾದ್ರೇ.. ಅಗತ್ಯ ವಸ್ತುಗಳ ತುರ್ತು ಸೇವೆ ಲಭ್ಯವಾಗಲಿದೆ. ಮೆಡಿಕಲ್, ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಇದರ ಹೊರತಾಗಿ ಇತರೇ ಸೇವೆಗಳು ಬಂದ್ ಆಗಲಿದ್ದು, ಬಹುತೇಕ ಇಡೀ ದೇಶವೇ ಸ್ಥಬ್ಧವಾಗಲಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಜನತಾ ಕರ್ಪ್ಯೂಗೆ ಬೆಂಬಲ ವ್ಯಕ್ತವಾಗುವ ಮೂಲಕ, ಕೊರೊನಾ ವೈರಸ್ ತಡೆಗೆ ದೇಶದವಲ್ಲದೇ ರಾಜ್ಯದಲ್ಲೂ ಬೆಂಬಲ ವ್ಯಕ್ತವಾಗಲಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ