Breaking News
Home / ಜಿಲ್ಲೆ / ಜಿಲ್ಲಾಡಳಿತ ನೀಡಿದ್ದ ಪ್ರಕಟಣೆಯಲ್ಲಿ ಉಂಟಾಗಿದ್ದ ಗೊಂದಲಕ್ಕೆ ರಾಜ್ಯ ಸರಕಾರವೇ ತೆರೆ ಎಳೆದಿದೆ.

ಜಿಲ್ಲಾಡಳಿತ ನೀಡಿದ್ದ ಪ್ರಕಟಣೆಯಲ್ಲಿ ಉಂಟಾಗಿದ್ದ ಗೊಂದಲಕ್ಕೆ ರಾಜ್ಯ ಸರಕಾರವೇ ತೆರೆ ಎಳೆದಿದೆ.

Spread the love

ಕೊರೋನಾ ಸಂಬಂಧ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ನೀಡಿದ್ದ ಪ್ರಕಟಣೆಯಲ್ಲಿ ಉಂಟಾಗಿದ್ದ ಗೊಂದಲಕ್ಕೆ ರಾಜ್ಯ ಸರಕಾರವೇ ತೆರೆ ಎಳೆದಿದೆ.

ಇನ್ನು ಮುಂದೆ ಜಿಲ್ಲಾಧಿಕಾರಿಗಳಿಗೆ ಕೊರೋನಾ ಪಾಸಿಟಿವ್ ಕುರಿತು ಮಾಹಿತಿ ನೀಡುವ ಅಧಿಕಾರ ಇಲ್ಲ. ರಾಜ್ಯ ಸರಕಾರವೇ ಮಾಹಿತಿ ನೀಡಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

 

ಇಂದು ಬೆಳಗಾವಿಯಲ್ಲಿ ಯಾವುದೇ ಪಾಸಿಟಿವ್ ವರದಿ ಇಲ್ಲ ಎಂದು ಜಿಲ್ಲಾಡಳಿತ ತಿಳಿಸಿದ್ದರೆ, 3 ಪಾಸಿಟಿವ್ ವರದಿ ಬಂದಿದೆ ಎಂದು ರಾಜ್ಯಸರಕಾರ ಹೇಳಿತ್ತು. ಇದರಿಂದ ಸರಕಾರಕ್ಕೆ ತೀವ್ರ ಮುಜುಗರ ಉಂಟಾಗಿತ್ತು. ಸಾರ್ವಜವಿಕರಲ್ಲೂ ತೀವ್ರ ಗೊಂದಲ ಉಂಟಾಗುವಂತಾಗಿತ್ತು.

ರಾಜ್ಯದಲ್ಲಿ ಇಂದು ನಾಲ್ಕು ಪಾಸಿಟಿವ್ ವರದಿ ಬಂದಿದೆ. ಬಾಗಲಕೋಟೆಯಲ್ಲಿ ಒಂದು ಮತ್ತು ಬೆಳಗಾವಿಯಲ್ಲಿ ಮೂರು ಜನ ಸೋಂಕಿತರು ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 128 ಆಗಿದೆ. ಬೆಳಗಾವಿಯಲ್ಲಿ ಕೊರೋನಾ ದೃಢಪಟ್ಟ ಮೂವರೂ ನಿಜಾಮುದ್ದೀನ್ ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದವರು.


Spread the love

About Laxminews 24x7

Check Also

SSLC ಪರೀಕ್ಷೆ -2 ವಿಜ್ಞಾನ ವಿಷಯದ ಕೀ ಉತ್ತರ ಪ್ರಕಟ: ಆಕ್ಷೇಪಣೆಗಳಿದ್ದರೆ ಈ ವೆಬ್ ಸೈಟ್ ಗೆ ಭೇಟಿ ನೀಡಿ

Spread the love ಬೆಂಗಳೂರು: 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ-2 ವಿಜ್ಞಾನ ವಿಷಯದ ಕೀ ಉತ್ತರಗಳನ್ನು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ