Breaking News
Home / ಜಿಲ್ಲೆ / ಸಚಿವ ಜಗದೀಶ್ ಶೆಟ್ಟರ್ ಪಾಸಿಟಿವ್ ಕೇಸಸ್ ಇದೆ ಅಂತಾರೆ ಜಿಲ್ಲಾಡಳಿತ ಪಾಸಿಟಿವ್ ಇಲ್ಲ ಅಂತಾರೆ ಯಾವದು ನಿಜ ಯವದು ಸುಳ್ಳು ಬೆಳಗಾವಿ ಜನರಲ್ಲಿ ಆತಂಕ …

ಸಚಿವ ಜಗದೀಶ್ ಶೆಟ್ಟರ್ ಪಾಸಿಟಿವ್ ಕೇಸಸ್ ಇದೆ ಅಂತಾರೆ ಜಿಲ್ಲಾಡಳಿತ ಪಾಸಿಟಿವ್ ಇಲ್ಲ ಅಂತಾರೆ ಯಾವದು ನಿಜ ಯವದು ಸುಳ್ಳು ಬೆಳಗಾವಿ ಜನರಲ್ಲಿ ಆತಂಕ …

Spread the love

ಬೆಳಗಾವಿ – ಬೆಳಗಾವಿಯಲ್ಲಿ ಈವರೆಗೆ ಬಂದಿರುವ ವರದಿಯಲ್ಲಿ ಯಾವುದೇ ಪಾಸಿಟಿವ್ ಇಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ಇದೀಗ ಮಾಧ್ಯಮ ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿಗಳು, ಮಧ್ಯಾಹ್ನ 12 ಗಂಟೆಯವರೆಗಿನ ಮಾಹಿತಿ ಪ್ರಕಾರ ಯಾವೊಂದೂ ಪಾಸಿಟಿವ್ ಬಂದಿಲ್ಲ ಎಂದಿದ್ದಾರೆ. ಆದರೆ ಬೆಂಗಳೂರಿನಲ್ಲಿ ರಾಜ್ಯ ಸರಕಾರಿ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ಬೆಳಗಾವಿಯಲ್ಲಿ ಮೂವರಿಗೆ ಪಾಸಿಟಿವ್ ಬಂದಿದೆ ಎಂದು ತಿಳಿಸಿದೆ.

ಧಾರವಾಡದಲ್ಲಿ ಹೇಳಿಕೆ ನೀಡಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರೂ ಬೆಳಗಾವಿಯಲ್ಲಿ ಮೂವರಿಗೆ ಕೊರೋನಾ ಸೋಂಕು ತಗುಲಿದೆ ಎಂದಿದ್ದಾರೆ.

ಈವರೆಗೆ 718 ಜನರ ನಿಗಾ ವಹಿಸಲಾಗಿದೆ. 175 ಜನರು 14 ದಿನದ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. 33 ಜನರನ್ನು ಐಸೋಲೇಟೆಡ್ ವಾರ್ಡ್ ನಲ್ಲಿಡಲಾಗಿದೆ. 420 ಜನರು 14 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. 90 ಜನರು 28 ದಿನದ ಕ್ವಾರಂಟೈನ್ ಮುಗಿಸಿದ್ದಾರೆ. 60 ಜನರ ಸ್ಯಾಂಪಲ್ಸ್ ಸಂಗ್ರಹಿಸಿ ಲ್ಯಾಬ್ ಗೆ ಕಳಿಸಲಾಗಿದೆ. ಅವರಲ್ಲಿ 27 ಜನರ ವರದಿ ಬಂದಿದ್ದು ಎಲ್ಲವೂ ನೆಗೆಟಿವ್ ಬಂದಿದೆ. ಈವರೆಗೆ ಯಾವುದೇ ಪಾಸಿಟಿವ್ ವರದಿ ಬಂದಿಲ್ಲ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ನಿಜಾಮುದ್ದೀನ್ ಪ್ರಾರ್ಥನೆಗೆ ಮಾ.13ರಿಂದ 18ರ ವರೆಗೆ ತೆರಳಿದ್ದ 70 ವರ್ಷ, 26 ವರ್ಷ ಮತ್ತು 20 ವರ್ಷದ ಬೆಳಗಾವಿಯ ವ್ಯಕ್ತಿಗಳಿಗೆ ಸೋಂಕು ತಗುಲಿದೆ. ಇವರಿಗೆಲ್ಲ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಜ್ಯ ಸರಕಾರ ನೀಡಿರುವ ಮಾಧ್ಯಮ ಪ್ರಕಟಣೆ ಹೇಳಿದೆ. ಈ ರೋಗಿಗಳನ್ನು ನಂ.126, 127 ಮತ್ತು 128 ಎಂದು ಗುರುತಿಸಲಾಗಿದೆ.

ಸಚಿವ ಜಗದೀಶ ಶೆಟ್ಟರ್ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಆದರೆ ಜಿಲ್ಲಾಡಳಿತ ಮಾತ್ರ ಯಾವುದೇ ಪಾಸಿಟಿವ್ ಬಂದಿಲ್ಲ ಎಂದು ತಿಳಿಸಿದೆ.


Spread the love

About Laxminews 24x7

Check Also

ಸರ್ಕಾರಿ ವಾಹನದಲ್ಲಿ ಬಿಜೆಪಿ ಹಣ ಸಾಗಣೆ: ದಿನೇಶ್‌ ಗುಂಡೂರಾವ್

Spread the loveಮೈಸೂರು: ‘ಬಿಜೆಪಿ ನಾಯಕರು ಸರ್ಕಾರಿ ವಾಹನಗಳಲ್ಲಿ ಕೋಟ್ಯಂತರ ರೂಪಾಯಿ ಸಾಗಿಸಿ ಹಂಚುತ್ತಿದ್ದಾರೆ. ಐಟಿ, ಇಡಿ ರಕ್ಷಣೆಯಲ್ಲೇ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ