Breaking News

ರವಿ.ಡಿ. ಚನ್ನಣ್ಣನವರ್ ಅವರು ನಿನ್ನೆ ರಾತ್ರಿ  ಲಾರಿ ಚಾಲಕನ ಮಾರುವೇಷದಲ್ಲಿ

Spread the love

ಬೆಂಗಳೂರು: ಕರ್ನಾಟಕದ ದಕ್ಷ ಪೊಲೀಸ್ ಅಧಿಕಾರಿ ರವಿ.ಡಿ. ಚನ್ನಣ್ಣನವರ್ ಅವರು ನಿನ್ನೆ ರಾತ್ರಿ  ಲಾರಿ ಚಾಲಕನ ಮಾರುವೇಷದಲ್ಲಿ ಹೋಗಿ ಲಂಚ ಪಡೆಯುತ್ತಿದ್ದ ಭ್ರಷ್ಟ ಆರ್ ಟಿಒ ಅಧಿಕಾರಿಗಳನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಕರ್ನಾಟಕ ಮತ್ತು ತಮಿಳುನಾಡು ಗಡಿ ಭಾಗದ ಅತ್ತಿಬೆಲೆ ಬಳಿ ಇರುವ  ಚೆಕ್ ಪೋಸ್ಟ್ ನಲ್ಲಿ ಹೋಮ್ ಗಾರ್ಡ್ ವಿವೇಕ್, ಆರ್‌ಟಿಒ ಬ್ರೇಕ್ ಇನ್ ಪೆಕ್ಟರ್ ಗಳಾದ ಕರಿಯಪ್ಪ ಮತ್ತು ಜಯಣ್ಣ ಅವರನ್ನು ಲಂಚ ಪಡೆದ ಆರೋಪದ ಮೇಲೆ ಬಂಧಿಸಲಾಗಿದೆ.ತಮಿಳುನಾಡಿನಿಂದ ಕರ್ನಾಟಕದ ಕಡೆ ಬರುತ್ತಿದ್ದ ವಾಹನಗಳನ್ನು ನಿಲ್ಲಿಸಿ ಸಾರಿಗೆ ಅಧಿಕಾರಿಗಳಾದ ಕರಿಯಪ್ಪಪ ಮತ್ತು ಜಯಣ್ಣ ಅವರ ಮಾರ್ಗದರ್ಶನದಲ್ಲಿ ವಿವೇಕ್ ಎಂಬ ಹೋಮ್ ಗಾರ್ಡ್ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದರು.

ತಾತ್ಕಾಲಿಕ ಪರ್ಮಿಟ್ ಕೊಡುವ ಹೆಸರಲ್ಲಿ ₹400-₹500 ಹಣ ಪಡೆಯುತ್ತಿದ್ದರು.  ಮಾರು ವೇಷದಲ್ಲಿ ಹೋಗಿ ರವಿ ಚನ್ನಣ್ಣನವರ್ ಅವರು ಸಾರಿಗೆ ಅಧಿಕಾರಿಗಳನ್ನು ಬಂಧಿಸಿ ₹12, 350 ರೂ. ವಶಪಡಿಸಿಕೊಂಡಿದ್ದಾರೆ.

ಸಾರಿಗೆ ಅಧಿಕಾರಿಗಳಾದ ಜಯಣ್ಣ ಮತ್ತು ಕರಿಯಪ್ಪ ಅವರನ್ನು ಜಿಲ್ಲಾಧಿಕಾರಿ ಶಿವಮೂರ್ತಿ ಅವರು ಅಮಾನುತು ಮಾಡಿದ್ದಾರೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ