Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ದಿನಸಿ ವಸ್ತು ತರಲು ಹೋದವನ ಕೈ ಬೆರಳು ಮುರಿದ ಸಿಪಿಐ;ಪೊಲೀಸ್ ದೌರ್ಜನ್ಯಕ್ಕೆ ಕೊನೆಯೇ ಇಲ್ವ?

ದಿನಸಿ ವಸ್ತು ತರಲು ಹೋದವನ ಕೈ ಬೆರಳು ಮುರಿದ ಸಿಪಿಐ;ಪೊಲೀಸ್ ದೌರ್ಜನ್ಯಕ್ಕೆ ಕೊನೆಯೇ ಇಲ್ವ?

Spread the love

ದಿನಸಿ ವಸ್ತು ತರಲು ಹೋದವನ ಕೈ ಬೆರಳು ಮುರಿದ ಸಿಪಿಐ;ಪೊಲೀಸ್ ದೌರ್ಜನ್ಯಕ್ಕೆ ಕೊನೆಯೇ ಇಲ್ವ?

ಕೊರೋನಾ ಲಾಕ್ ಡೌನ್ ವೇಳೆ ಕೊರೋನಾ ಇಂದು ಮುಂಜಾನೆ 7.30 ಕೆ ಗೋಕಾಕ ನಗರದ ಅಪ್ಪ್ಸರಾ ಹೋಟೆಲ ಹತ್ತಿರ ಪೋಲಿಸ್ ಅಧಿಕಾರಿಯೊಬ್ಬರು ವಿನಾಕಾರಣ ಸಲೀಲ ಝಾಡವಾಲೇ ಎಂಬ ಅಮಾಯಕ ಯುವಕನ ಮೇಲೆ ಲಾಠಿ ಪ್ರಹಾರ ಮಾಡಿ ಆತನ ಕೈ ಬೆರಳು ಮುರಿದಿರುವ ಘಟನೆ ನಡೆದಿದೆ.

ದಿನಸಿ ವಸ್ತುಗಳನ್ನು ತರಲು ಅಂಗಡಿಗೆ ತೆರಳುತ್ತಿದ್ದಾಗ
ಪೊಲೀಸ್ ಅಧಿಕಾರಿ ಸಲೀಲನನ್ನು ತಡೆದು ಲಾಠಿಯಿಂದ ಹೊಡೆದ ಪರಿಣಾಮ ಆತನ ಕೈಬೆರೆಳಲ್ಲಿನ ಎಲುಬು ಕಟ್ ಆಗಿದೆ‌.ಕೈ ಬೆರಳಿಗೆ ಗಂಭೀರವಾಗಿ ಪೆಟ್ಟು ಬಿದ್ದ ಪರಿಣಾಮ ಆತ ನಿಮ್ರಾ ಆಸ್ಪತ್ರೆಗೆತೆರಳಿ ಎಕ್ಸರೆ ತೆಗೆದುಕೊಂಡಿದ್ದಾನೆ.ನಂತರ ಎಕ್ಸರೆ ರಿಪೋರ್ಟ್ ನೊಡಿದಾಗ ಆತನ ಕೈ ಬೆರಳಿನ ಎಲುಬು ಕಟ್ ಆಗಿರುವ ಬಗ್ಗೆ ತಿಳಿದುಬಂದಿದೆ.ಕೂಡಲೆ ಚಿಕಿತ್ಸೆ ಪ್ರಾರಂಭಿಸಿದ ವೈದ್ಯರು ಆಪರೇಷನ್ ಮೂಲಕ ತುಂಡಾದ ಎಲುಬನ್ನು ಜೊಡಿಸಿದ್ದಾರೆ.

ಕೋರೋನಾ ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಪಾಲಿಸುವುದು ಜನರ ಕರ್ತವ್ಯ.ಆದರೆ ಆಹಾರ ಪದಾರ್ಥಗಳು, ಔಷಧಿ,ಸೇರಿದಂತೆ ಇತ್ಯಾದಿ ಅಗತ್ಯ ವಸ್ತುಗಳನ್ನು ತರಲು ಮನೆಯಿಂದ ಹೊರ ಬರುವ ಜನರ ಮೇಲೆ ಪೋಲಿಸರು ಮನಬಂದಂತೆ ಹಲ್ಲೆ ಮಾಡುವುದು ನಿಜಕ್ಕೂ ಖಂಡನೀಯ.ಆದ್ದರಿಂದ ಅಮಾನವೀಯ ವರ್ತನೆ ತೋರುತ್ತಿರುವ ಪೋಲಿಸರಿಗೆ ಲಾಠಿಯನ್ನು ಬಿಟ್ಟು ಸಭ್ಯತೆಯಿಂದ ಕರ್ತವ್ಯ ನಿರ್ವಹಿಸುವಂತೆ ರಾಜ್ಯ ಸರ್ಕಾರ ಪೋಲಿಸ್ ಇಲಾಖೆಗೆ ಆದೇಶ ನೀಡಬೇಕೆಂದು ಗೋಕಾಕ್ ನಗರದ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.


Spread the love

About Laxminews 24x7

Check Also

ಇಂದು, ನಾಳೆ ಬೆಂಗಳೂರಿನಲ್ಲಿ ಅಮಿತ್‌ ಶಾ, ಯೋಗಿ ರೋಡ್‌ ಶೋ

Spread the loveಬೆಂಗಳೂರು: ಮೊದಲನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ