ರಾಯ್ಪುರ: ದೇಶಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೋವಿಡ್-19 ಹಾಗೂ ಕೊರೊನಾ ಎಂಬ್ ಹೆಸರು ಕೇಳಿದರೇ ಜನರು ಬೆಚ್ಚಿ ಬೀಳುವ ಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಛತ್ತೀಸ್‍ಗಢ ರಾಜ್ಯದ ದಂಪತಿ ತಮಗೆ ಜನಿಸಿದ ಅವಳಿ ಮಕ್ಕಳಿಗೆ ‘ಕೊರೊನಾ’ ಮತ್ತು ‘ಕೋವಿಡ್’ ಎಂದು ನಾಮಕರಣ ಮಾಡಿರುವುದು ಅಚ್ಚರಿ ಮೂಡಿಸಿದೆ.
ರಾಯ್ಪುರ ಮೂಲದ ದಂಪತಿಗೆ ಮಾರ್ಚ್ 27ರ ಮುಂಜಾನೆ ಅವಳಿ ಮಕ್ಕಳು ಜನಿಸಿದ್ದು, ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಾಗಿದೆ. ಕೊರೊನಾ ಭೀತಿ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಆಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಜನಿಸಿದ್ದರಿಂದ ನೆನಪಿಗಾಗಿ ಈ ಹೆಸರನ್ನು ಇಡಲಾಗಿದೆಯಂತೆ.
ಈ ಕುರಿತು ಸಂತಸ ಹಂಚಿಕೊಂಡಿರುವ ಅವಳಿ ಮಕ್ಕಳ ತಾಯಿ ಪ್ರೀತಿ ವರ್ಮಾ, ಮಾರ್ಚ್ 27 ರಂದು ಮುಂಜಾನೆ ನಾನು ಅವಳಿ ಮಕ್ಕಳಿಗೆ ಜನ್ಮ ನೀಡಿದೆ. ನಾವು ಗಂಡು ಮಗುವಿಗೆ ಕೋವಿಡ್ ಮತ್ತು ಹೆಣ್ಣು ಮಗುವಿಗೆ ಕೊರೊನಾ ಎಂದು ಹೆಸರಿಟ್ಟಿದ್ದೇವೆ. ಹೆರಿಗೆಯ ವೇಳೆ ಅನೇಕ ತೊಂದರೆಗಳನ್ನು ಎದುರಿಸಿದ್ದೇನೆ. ಆದ್ದರಿಂದ ನನ್ನ ಪತಿ ನೆನಪಿಗಾಗಿ ಈ ಹೆಸರು ಇಟ್ಟಿದ್ದಾರೆ ಎಂದು ತಿಳಿಸಿದ್ದಾರೆ.