Breaking News
Home / ರಾಜ್ಯ (page 1509)

ರಾಜ್ಯ

ಬನಹಟ್ಟಿ : ಚಿಮ್ಮಡ ಬಳಿ ರಸ್ತೆ ಅಪಘಾತ ಯುವಕ ಸಾವು

ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪೂರ ರಬಕವಿ ರಸ್ತೆಯ ಚಿಮ್ಮಡ ಹದ್ದಿಯ ಮುಘಳಖೋಡ ಬಳಿ ನಡೆದ ರಸ್ತೆ ಅಪಘಾತದಲ್ಲಿ ಯುವನೋರ್ವ ಸಾವನ್ನಪಿದ ಘಟನೆ ಬನಹಟ್ಟಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ಬನಹಟ್ಟಿಯ ಸೋಮವಾರ ಪೇಟೆಯ ನಿವಾಸಿ ಬಾಳಯ್ಯ ಕಾಡಯ್ಯ ಕತ್ತಿ(27) ಮೃತ ದುರ್ದೈವಿ. ಬಾಳಯ್ಯ ಅವರು ಗುರುವಾರ ರಾತ್ರಿ ತನ್ನ ಬೈಕನ್ನು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡು ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ …

Read More »

ಟೆಂಪೊದಲ್ಲಿ ಮಹಿಳೆ ಅತ್ಯಾಚಾರ; ಖಾಸಗಿ ಭಾಗಕ್ಕೆ ರಾಡ್ ತುರುಕಿ ಚಿತ್ರಹಿಂಸೆ!

ಮಧ್ಯವಯಸ್ಕ ಮಹಿಳೆಯೊಬ್ಬರನ್ನು ರಸ್ತೆ ಬದಿಯಲ್ಲಿದ್ದ ಟೆಂಪೊದೊಳಗೆ ಅತ್ಯಾಚಾರ ನಡೆಸಿ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ತುರುಕಿ ಚಿತ್ರಹಿಂಸೆ ನೀಡಿದ ಆಘಾತಕಾರಿ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆ ಸ‍್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮೋಹನ್ ಚೌಹಾಣ್ (45) ನನ್ನು ಬಂಧಿಸಲಾಗಿದೆ. ಕೈರಾನಿ ರಸ್ತೆಯಲ್ಲಿ ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸುತ್ತಿದ್ದಾರೆ ಎಂದು ದೂರವಾಣಿ ಕರೆ ಸ್ವೀಕರಿಸಿದ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. …

Read More »

ಮಗುವಿಗೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ

ಮೈಸೂರು: ಮೂರೂವರೆ ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾಗಿದ್ದು, 45 ವರ್ಷದ ಜಗದೀಶ್ ಎಂಬಾತನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ಈ ಆದೇಶ ನೀಡಿದೆ. ನ್ಯಾಯಾಧೀಶೆ ಶ್ಯಾಮಾಕಂರೋಸ್‌ ತೀರ್ಪು ನೀಡಿದ್ದಾರೆ. 2019ರಲ್ಲಿ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ಪ್ರಕರಣ ನಡೆದಿತ್ತು. ಆಟವಾಡುತ್ತಿದ್ದ ಮಗುವಿನ …

Read More »

ವಿವಿಧ ವಸತಿ ಯೋಜನೆಗಳಡಿ 4 ಲಕ್ಷ ಮನೆಗಳಿಗೆ ಅರ್ಹ ಫಲಾನುಭವಿಗಳ ಆಯ್ಕೆ: ಬಸವರಾಜ ಬೊಮ್ಮಾಯಿ

ಬೆಂಗಳೂರು: ವಿವಿಧ ವಸತಿ ಯೋಜನೆಗಳಡಿ 4 ಲಕ್ಷ ಮನೆಗಳಿಗೆ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದ್ದಾರೆ. ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಕೇಂದ್ರ ಸರ್ಕಾರದಿಂದ 4 ಲಕ್ಷ ಹೊಸ ಮನೆಗಳ ಗುರಿಗೆ ಅನುಮೋದನೆ ದೊರೆಯದಿದ್ದಲ್ಲಿ ಅಥವಾ ಅದಕ್ಕಿಂತ ಕಡಿಮೆ ಮನೆಗಳಿಗೆ ಅನುಮೋದನೆ ದೊರೆತಲ್ಲಿ ಉಳಿದ ಮನೆಗಳನ್ನು ರಾಜ್ಯದ ವಸತಿ ಯೋಜನೆಗಳಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿತ್ತು. ಅದರಂತೆ ರಾಜ್ಯದಾದ್ಯಂತ ನಗರ …

Read More »

ಮಹಾಲಿಂಗೇಶ್ವರ ನಗರ ಗೋಕಾಕ ನಲ್ಲಿ ಬಸವರಾಜ ಸಾಯನ್ನವರ ಅವರಿಂದ ಸರಳ ರೀತಿಯಲ್ಲಿ ಗಣೇಶ್ ಉತ್ಸವ ಆಚರಣೆ

ಗೋಕಾಕ : ಗೋಕಾಕನಲ್ಲಿ ಪ್ರತಿಯೊಂದು ವಿಶೇಷತೆ ಇದೆ ಗೋಕಾಕ ಜಲಪಾತ ಹಿಡಿದು , ಲಕ್ಷ್ಮಿ ದೇವಿ ಗುಡಿ , ಹಾಗೂ ರಾಜಕಾರಣಕ್ಕೆ ಮುಖ್ಯ ಬುಲಂದಿಯೆ ಗೋಕಾಕ , ಗೋಕಾಕ ಕರದಂಟು ಎಷ್ಟು ಫೇಮಸ್ ಇದೆಯೋ ಅದೇ ರೀತಿ ಗೋಕಾಕ ನಗರದ ಮಹಾಲಿಂಗೇಶ್ವರ ನಗರದ ಗಣಪತಿ ಉತ್ಸವ ಕೂಡ ಅಷ್ಟೇ ಜೋರಾಗಿ ವಿಜೃಂಭಣೆ ಯಿಂದ ಮಾಡುತ್ತ ಬಂದಿದ್ದಾರೆ . ಬಸವರಾಜ ಸಾಯನ್ನವರ ಅವರು.ಇವರು ಎ. ಪಿ.ಎಂ.ಸಿ.ನಿರ್ದೇಶಕರು ಕೂಡ ಹೌದು. ಈ ಬಾರಿ …

Read More »

ಮಾನನಷ್ಟ ಮೊಕದ್ದಮೆ ಹಾಕುವ ಎಚ್ಚರಿಕೆ ಕೊಟ್ಟ ಬಿ ಸಿ ಪಾಟೀಲ

ಹಾವೇರಿ: ಕೃಷಿ ಸಚಿವ ಬಿ.ಸಿ ಪಾಟೀಲ್​​ ತಮ್ಮ ವಿರುದ್ಧ ಕೇಳಿ ಬಂದಿರುವ 210 ಕೋಟಿ ರೂಪಾಯಿ ಭ್ರಷ್ಟಾಚಾರ ಆರೋಪವನ್ನು ತಿರಸ್ಕರಿಸಿದ್ದು, ತಮ್ಮ ಮೇಲಿನ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ. ಹಿರೇಕೆರೂರಿನ ಸ್ವ-ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಸಿ ಪಾಟೀಲ್ ಅವರು, ಭ್ರಷ್ಟಾಚಾರ ಆರೋಪ ಸತ್ಯಕ್ಕೆ ದೂರವಾದದ್ದು. ನಮ್ಮ ಇಲಾಖೆಯಲ್ಲಿ ಮೈಕ್ರೋ ಇರಿಗೇಶನ್ ಇರಬಹುದು ಮ್ಯಾಕಿನಿಷನ್ ಇರಬಹುದು ಅತ್ಯಂತ ಪಾರದರ್ಶಕತೆಯನ್ನು ಕಾಪಾಡಿಕೊಂಡು ಬಂದಿದ್ದೇವೆ. ಕೃಷಿ ಇಲಾಖೆ ಮಾತ್ರ ರಾಜ್ಯ ಸರ್ಕಾರದಲ್ಲಿ ಎಲ್ಲದರಲ್ಲೂ …

Read More »

ಭಾರತದಲ್ಲಿ ಏರಿಕೆಯ ಹಾದಿ ಹಿಡಿದ ನಿರುದ್ಯೋಗ ದರ ಪ್ರಮಾಣ : ಕೆಲಸ ಕಳೆದುಕೊಂಡ 1.9 ಮಿಲಿಯನ್ ಜನ!

ನವದೆಹಲಿ:ಭಾರತದಲ್ಲಿ ನಿರುದ್ಯೋಗ ದರವು ಆಗಸ್ಟ್‌ನಲ್ಲಿ ಏರಿದೆ ಮತ್ತು ಜುಲೈನಲ್ಲಿದ್ದ 7% ಕ್ಕೆ ಹೋಲಿಸಿದರೆ 8.3% ಕ್ಕೆ ತಲುಪಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರಕಾರ, ಔಪಚಾರಿಕ ಮತ್ತು ಅನೌಪಚಾರಿಕ ವಲಯಗಳ 1.9 ದಶಲಕ್ಷಕ್ಕೂ ಹೆಚ್ಚು ಜನರು ಆಗಸ್ಟ್‌ನಲ್ಲಿ ಉದ್ಯೋಗ ಕಳೆದುಕೊಂಡರು. ಉದ್ಯೋಗ ದರವು ಜುಲೈನಲ್ಲಿ 37.5% ರಿಂದ ಆಗಸ್ಟ್ನಲ್ಲಿ 37.2% ಕ್ಕೆ ಇಳಿದಿದೆ,ಜುಲೈನಲ್ಲಿ 399.7 ದಶಲಕ್ಷಕ್ಕೆ ಹೋಲಿಸಿದರೆ, ಸಂಪೂರ್ಣ ಉದ್ಯೋಗವು 397.8 ದಶಲಕ್ಷಕ್ಕೆ ಇಳಿದಿದೆ, ಸಂಸ್ಥೆ ಹೇಳಿದೆ. ‘ನಷ್ಟವು …

Read More »

‘ನಾನು ಎಲ್ಲೂ ಓಡಿ ಹೋಗಿಲ್ಲ..’ ಮುಂಬೈನಿಂದ ಬೆಂಗಳೂರಿಗೆ ವಾಪಸ್ಸಾದ ಅನುಶ್ರೀ.. ಹೇಳಿದ್ದಿದು.!

ಬೆಂಗಳೂರು: ಡ್ರಗ್ ಕೇಸ್​​ಗೆ ಸಂಬಂಧಿಸಿದಂತೆ ನಿರೂಪಕಿ ಅವರ ಹೆಸರು ಮತ್ತೊಮ್ಮೆ ಚರ್ಚೆಗೆ ಬಂದ ಬೆನ್ನಲ್ಲೇ ಅನುಶ್ರೀ ಮುಂಬೈಗೆ ಹೋಗಿದ್ದರು. ಇದೀಗ ಮುಂಬೈನಿಂದ ಅನುಶ್ರೀ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಬೆಂಗಳೂರಿಗೆ ಬರುತ್ತಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅನುಶ್ರೀ.. ನಾನು ಎಲ್ಲಿಯೂ ಓಡಿ ಹೋಗಿಲ್ಲ ಎಂದಿದ್ದಾರೆ. ಮುಂಬೈನಿಂದ ಬೆಂಗಳೂರಿನ ಕಮಲಮ್ಮನ ಗುಂಡಿ ಬಳಿ ಇರುವ ನಿವಾಸಕ್ಕೆ ವಾಪಸ್ಸಾದ ಅನುಶ್ರೀ.. ಪ್ರಶಾಂತ್ ಸಂಬರ್ಗಿ ಅವರು ಕಾನೂನು ಮೂಲಕ ಹೋಗಲಿ.. ನಮ್ಮ ಸಮಾಜದಲ್ಲಿ ಕಾನೂನು ಅಂತ ಇದೆ.. ನಾನು …

Read More »

ಮತದಾನದ ವೇಳೆ ವಿವಿ ಪ್ಯಾಟ್ ಹಾಕದೇ ಚುನಾವಣೆ ನಡೆಸಲಾಗಿದೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ , ಪರಾಭವಗೊಂಡ 310 ಅಭ್ಯರ್ಥಿಗಳಿಂದ ಪ್ರತಿಭಟನೆ ಆರೋಪ:

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿಯಲ್ಲಿ ಚುನಾವಣೆಯಲ್ಲಿ ಪರಾಭವಗೊಂಡ 310 ಅಭ್ಯರ್ಥಿಗಳಿಂದ ಪ್ರತಿಭಟನೆ ಕೈಗೊಳ್ಳಲಾಗಿದೆ. ಪರಾಭವಗೊಂಡ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಪ್ರತಿಭಟನೆ ಕೈಗೊಂಡು ಮರುಚುನಾವಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಚುನಾವಣೆ ನಡೆಸಲಾಗಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಮರುಚುನಾವಣೆ ನಡೆಸಬೇಕು. ನಡೆಸದಿದ್ದರೆ ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಮತದಾನದ ವೇಳೆ ವಿವಿ ಪ್ಯಾಟ್ ಹಾಕದೇ ಚುನಾವಣೆ ನಡೆಸಲಾಗಿದೆ, …

Read More »

ದಾರುಣ ಘಟನೆ: ನಾಪತ್ತೆಯಾದ ಅಪ್ಪನ ಹುಡುಕುತ್ತಾ ಮಸಣ ಸೇರಿದ ಮಗ..

ಬಳ್ಳಾರಿ: ಕಾಣೆಯಾದ ತಂದೆಯನ್ನ ಹುಡುಕಲು ಹೋದ ಮಗ ಭೀಕರ ಅಪಘಾತ ಸಂಭವಿಸಿ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಕೊಳಗಲ್ ಗ್ರಾಮದ ಬಳಿ ನಡೆದಿದೆ. ತಿಪ್ಪೇಸ್ವಾಮಿ (40) ಮೃತಪಟ್ಟ ದುರ್ದೈವಿ. ನಗರದ ಕರಿಮಾರೆಮ್ಮ ಕಾಲೋನಿ ನಿವಾಸಿ ತಿಪ್ಪೇಸ್ವಾಮಿ ನಾಪತ್ತೆಯಾದ ತಂದೆಯನ್ನು ಹುಡುಕಿಕೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ರಸ್ತೆ ಮಧ್ಯೆ ಅಪಘಾತ ಸಂಭವಿಸಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

Read More »