Breaking News
Home / ರಾಜಕೀಯ (page 1800)

ರಾಜಕೀಯ

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ತ್ಯ 8 ಲಕ್ಷ ಲೀಟರ್ ಹಾಲು ಮಾರಾಟವಾಗದೇ ಉಳಿಯುತ್ತಿದೆ:ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಹೇರಲಾಗಿರುವ ಲಾಕ್‍ಡೌನ್‍ನಿಂದಾಗಿ ನಂದಿನಿ ಹಾಲು ಹಾಗೂ ಮೊಸರಿಗೆ ಬೇಡಿಕೆ ಕುಸಿದಿದೆ. ನಿತ್ಯ 8 ಲಕ್ಷ ಲೀಟರ್ ಹಾಲು ಮಾರಾಟವಾಗದೇ ಉಳಿಯುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶನಿವಾರ ಕೆಎಂಎಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೊರೊನಾ ವೈರಸ್ ಹರಡುವಿಕೆ ತಡೆಯಲು ಕೆಎಂಎಫ್ ಕೂಡ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಹಾಲು ಉತ್ಪಾದಕರ ಸಂಘಗಳಲ್ಲಿ …

Read More »

ಪ್ರಧಾನಿ ಪರಿಹಾರ ನಿಧಿಗೆ ಬರೋಬ್ಬರಿ 25 ಕೋಟಿ ರೂ. ನೀಡಿದ ನಟ ಅಕ್ಷಯ್ ಕುಮಾರ್..!

ನವದೆಹಲಿ : ಕೊರೋನಾ ಮಹಾಮಾರಿ ಪ್ರಪಂಚದಾದ್ಯಂತ ಮರಣಮೃದಂಗ ಬಾರಿಸುತ್ತಾ ಅಟ್ಟಹಾಸ ಮೆರೆಯುತ್ತಿದೆ. ಕಿಲ್ಲರ್ ಕೊರೋನಾ ವಿರುದ್ಧ ಭಾರತ ಲಾಕ್ ಡೌನ್ ಹೋರಾಟ ಮಾಡುತ್ತಿದೆ. ಇದೆ ಹೊತ್ತಲ್ಲಿ ಪ್ರಧಾನಿ ಮೋದಿ ದೇಶವಾಸಿಗಳಲ್ಲಿ ಹಣಕಾಸಿನ ನೆರವನ್ನು ಕೋರಿದ್ದಾರೆ. ಈ ಕೊರೊನಾ ನಿಯಂತ್ರಣ ಕ್ರಮಕ್ಕಾಗಿ ದೇಶದ ಜನರು ಕೈಜೋಡಿಸಿ, ಹಣಕಾಸಿನ ನೆರವನ್ನು ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಕ್ಷಣಮಾತ್ರದಲ್ಲೇ ಸ್ಪಂದಿಸಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಉಳಿತಾಯದಿಂದ ಬರೋಬ್ಬರಿ 25 ಕೋಟಿ ರೂ. …

Read More »

ಧಾರವಾಡಕ್ಕೆ ನೆರವು ಘೋಷಿಸಿದ ಸುಧಾಮೂರ್ತಿ

ಧಾರವಾಡ: ಕೊರೊನಾದಿಂದ ಉಂಟಾಗಿರುವ ಸಂಕಷ್ಟ ಪರಿಹಾರೋಪಾಯ ಕಾರ್ಯಕ್ಕಾಗಿ ಈಗಾಗಲೇ ಸಾಕಷ್ಟು ನೆರವು ನೀಡಿರುವ ಇನ್ಫೋಸಿಸ್ ಪ್ರತಿಷ್ಠಾನವು ಈಗ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ 20 ಲಕ್ಷ ರೂ.ಗಳ ಪ್ರತ್ಯೇಕ ನೆರವು ಘೋಷಿಸಿದೆ. ಧಾರವಾಡ ಜಿಲ್ಲೆ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕು ಒಳಗೊಂಡು ಪರಿಹಾರ ಕಾರ್ಯ ಕೈಗೊಳ್ಳುವುದಕ್ಕಾಗಿ ಸುಧಾಮೂರ್ತಿಯವರು ಈ ನೆರವು ನೀಡಿದ್ದು, ಸಾಫಲ್ಯ ಪ್ರತಿಷ್ಠಾನ ಮತ್ತು ಗ್ರಾಮ ವಿಕಾಸ ಸಂಸ್ಥೆಗಳ ಮೂಲಕ ಈ ಪರಿಹಾರ ಕಾರ್ಯಗಳು ನಡೆಯಲಿವೆ. ಈ ಹಣದಲ್ಲಿ …

Read More »

ಲಾಕ್ ಡೌನ್ ಸಂದರ್ಭದಲ್ಲಿ ಜನರು ಅವಶ್ಯಕ‌ತೆಗೆ ಹೊರ ಬಂದರೆ ಅವರನ್ನು ತೊಂದರೆ ಕೊಡಬೇಡಿ: ಸತೀಶ ಜಾರಕಿಹೊಳಿ

ಗೋಕಾಕ: ಲಾಕ್ ಡೌನ್ ಸಂದರ್ಭದಲ್ಲಿ ಜನರು ಅವಶ್ಯಕ‌ತೆಗೆ ಹೊರ ಬಂದರೆ ಅವರನ್ನು ತೊಂದರೆ ಕೊಡಬೇಡಿ ಎಂದು ಗೋಕಾಕ‌‌ ಪೊಲೀಸ್ ಅಧಿಕಾರಿಗಳಿಗೆ ಕೆಪಿಸಿಸಿ ‌ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸೂಚನೆ‌ ನೀಡಿದರು. ಸ್ಥಳಿಯರ ದೂರುಗಳಿಗೆ ಸ್ಪಂದಿಸಿ ಪೊಲೀಸ್ ಅಧಿಕಾರಿಗಳೊಂದಿಗೆ ದೂರವಾಣಿ‌‌ ಮುಖಾಂತರ ಮಾತನಾಡಿ ಉಪಯುಕ್ತ ಸಾಮಾನುಗಳ ಅಂಗಡಿ ತೆರೆಯುವಂತೆ ಮತ್ತು ನೀರು, ಕಿರಾಣಿ, ಹಾಲು ಮೆಡಿಕಲ್ ಸ್ಟೋರ್ ಗಳಿಗೆ ಸಾಮಾನು ತರಲು ಹೋಗುವ ಜನರನ್ನು ಹೊಡೆಯಬೇಡಿ , ಆನವಶ್ಯಕವಾಗಿ ತಿರುಗಾಡುವವರಿಗೆ ಮಾತ್ರ ಕ್ಲಾಸ್ …

Read More »

ಕೊರೋನಾ ಸೋಂಕು ನಿಯಂತ್ರಣ ಹಾಗೂ ಪರಿಸ್ಥಿತಿ ನಿರ್ವಹಣೆಗೆ ಕಾಂಗ್ರೆಸ್ ಕಾರ್ಯಪಡೆಯ ಮೊದಲ ಸಭೆ ಮಾ.31 ರಂದು

ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣ ಹಾಗೂ ಪರಿಸ್ಥಿತಿ ನಿರ್ವಹಣೆಗೆ ರಚಿಸಲಾಗಿರುವ ಕಾಂಗ್ರೆಸ್ ಕಾರ್ಯಪಡೆಯ ಮೊದಲ ಸಭೆ ಮಾ.31 ರಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಕಾರ್ಯಪಡೆಯ ಮುಖ್ಯಸ್ಥ ರಮೇಶ್ ಕುಮಾರ್ ಅವರು ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಅನೌಪಚಾರಿಕ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಹಿರಿಯ ನಾಯಕ ಹಸನಬ್ಬ ಅವರು ಉಪಸ್ಥಿತರಿದ್ದರು. ಕಾರ್ಯಪಡೆಯ ಮೊದಲ ಸಭೆ ಮುಂದಿನ ಮಂಗಳವಾರ ಬೆಳಗ್ಗೆ 11 …

Read More »

ಮದ್ಯದಂಗಡಿ ತೆಗೆಯಿರಿ: ರಿಷಿ ಕಪೂರ್

ಮುಂಬೈ: ಬಾಲಿವುಡ್ ಹಿರಿಯ ನಟ ರಿಷಿ ಕಪೂರ್, ಲೈಸನ್ಸ್ ಹೊಂದಿರುವ ಮದ್ಯದಂಗಡಿಗಳನ್ನು ತೆಗೆಯಬೇಕೆಂದು ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ. ಕೊರೊನಾ ತಡೆಗೆ ಪ್ರಧಾನಿಗಳು ದೇಶವನ್ನು ಲಾಕ್‍ಡೌನ್ ಮಾಡಿದಾಗಿನಿಂದಲೂ ರಿಷಿ ಕಪೂರ್ ಈ ವಿಷಯವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಂದು ಟ್ವೀಟ್ ಮಾಡಿರುವ ರಿಷಿ ಕಪೂರ್, ಒಂದು ಕಾರಣಕ್ಕಾಗಿ ಪರವಾನಿಗೆ ಪಡೆದ ಮದ್ಯದಂಗಡಿಗಳನ್ನು ತೆರೆದರೆ ಸೂಕ್ತ ಎಂದಿದ್ದಾರೆ. ರಿಷಿ ಕಪೂರ್ ಟ್ವೀಟ್: ಸರ್ಕಾರ ಪ್ರತಿಸಂಜೆ ಲೈಸನ್ಸ್ ಹೊಂದಿರುವ ಮದ್ಯದ ಮಳಿಗೆಗಳನ್ನು ತೆರೆಯಲು ಅನುಮತಿ …

Read More »

ಕೇಂದ್ರ ಸರ್ಕಾರ ಭಾರತ ಲಾಕ್ ಡೌನ್ ಹಸಿವು ನಿಗಿಸುವುದರ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ: ಸುರೇಂದ್ರ ಅನಗೋಳ್ಕರ್

ಬೆಳಗಾವಿ: ಕೇಂದ್ರ ಸರ್ಕಾರ ಭಾರತ ಲಾಕ್ ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಬಡವರು ಆಹಾರಕ್ಕಾಗಿ ಪರದಾಡುವಂತಾಗಿದ್ದು, ಸಮಾಜ ಸೇವಕ ಸುರೇಂದ್ರ ಅನಗೋಳ್ಕರ್ ನೇತೃತ್ವದ ತಂಡ ಬಡ ಜನರ ಹಸಿವು ನಿಗಿಸುವುದರ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಇಲ್ಲಿನ ವಿಜಯನಗರದ ಪೈಪ್ಲೈನ್ ರೋಡ್ ನಿವಾಸಿ, ಸಿಸಿ ಕ್ಯಾಮರಾ ಕೆಲಸ ನಿರ್ವಹಿಸುವ ಸ್ವಯಂ ಉದ್ಯೋಗಿ ಸುರೇಂದ್ರ ಕಳೆದ ಮೂರು ವರ್ಷಗಳಿಂದ ಬಡವರ ಹಸಿ ನಿಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 2018ರಿಂದ ಪ್ರತಿ ದಿನ ಜಿಲ್ಲಾಸ್ಪತ್ರೆಗೆ ಆಗಮಿಸಿದ ರೋಗಿಗಳು …

Read More »

ಜನರ ನಿಯಂತ್ರಣಕ್ಕೆ ಬೆಂಗಳೂರಲ್ಲಿ ಬೀದಿಗಿಳಿಯಲಿದೆ ಅರೆ ಸೇನಾ ಪಡೆ..!

ಬೆಂಗಳೂರು, ಮಾ.28-ಎಷ್ಟೇ ಎಚ್ಚರಿಕೆ ನೀಡಿದರೂ ಜನ ಬೀದಿಗೆ ಬರುತ್ತಿರುವುದನ್ನು ನಿಲ್ಲಿಸದೇ ಇರುವ ಹಿನ್ನಲೆಯಲ್ಲಿ ನಗರಕ್ಕೆ ಅರೆ ಸೇನಾ ಪಡೆಯನ್ನು ನಿಯೋಜಿಸುವ ಕುರಿತಂತೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ನಗರದಲ್ಲಿ ದಿನೇ ದಿನೇ ಮಹಾಮಾರಿ ಕೊರೊನಾ ವೈರಸ್ ಹೆಚ್ಚುತ್ತಲೆ ಇರುವುದು ತಲೆ ನೋವಾಗಿ ಪರಿಣಮಿಸಿದೆ. ಪೊಲೀಸರು ಜನರ ಮೇಲೆ ಲಾಠಿ ಪ್ರಯೋಗಿಸಿ ಮನೆಗಳಿಂದ ಹೊರ ಬರದಂತೆ ಎಚ್ಚರಿಕೆ ನೀಡುತ್ತಿದ್ದರೂ ಜನ ತಲೆ ಕೆಡಿಸಿಕೊಳ್ಳುತ್ತಿಲ್ಲ. ಜನರ ಈ ನಿರ್ಲಕ್ಷ್ಯದಿಂದ ನಗರದಲ್ಲಿ ಕೊರೊನಾ ಸೋಂಕಿತರ …

Read More »

ಕೆ.ಆರ್.ಮಾರುಕಟ್ಟೆಯನ್ನು ನ್ಯಾಷನಲ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸುವ ಐಡಿಯಾ ಫ್ಲಾಪ್

ಬೆಂಗಳೂರು,ಮಾ.28- ಕೆ.ಆರ್.ಮಾರುಕಟ್ಟೆಯನ್ನು ನ್ಯಾಷನಲ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸುವ ಐಡಿಯಾ ಫ್ಲಾಪ್ ಆಗುತ್ತಿದ್ದಂತೆ ಕಲಾಸಿಪಾಳ್ಯ ಮಾರುಕಟ್ಟೆಯನ್ನು ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರಿಸಲು ಬಿಬಿಎಂಪಿ ಮುಂದಾಗಿದೆ. ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದೆ ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಮಾರುಕಟ್ಟೆಯನ್ನು ಹೊಸೂರು ರಸ್ತೆಯ ಸಿಂಗೇನ ಅಗ್ರಹಾರ ಸ್ಥಳಾಂತರಿಸಲಾಗುತ್ತಿದೆ ಎಂದು ಆಯುಕ್ತ ಅನಿಲ್‍ಕುಮಾರ್ ತಿಳಿಸಿದ್ದಾರೆ. ಕಲಾಸಿಪಾಳ್ಯ ಮಾರುಕಟ್ಟೆಯನ್ನು ಈ ಹಿಂದೆಯೇ ಸಿಂಗೇನ ಅಗ್ರಹಕಾರಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಗಿತ್ತು. ಇದೀಗ ಕಲಾಸಿಪಾಳ್ಯ ಮಾರುಕಟ್ಟೆಯ 423ಕ್ಕೂ ಹೋಲ್‍ಸೇಲ್ …

Read More »

ಮೂರು ತಿಂಗಳು ವಿದ್ಯುತ್ ವಿನಾಯಿತಿ: ರಿಲೀಫ್ ನೀಡಿದ್ದ ಕೇಂದ್ರ ಸರ್ಕಾರ

ನವದೆಹಲಿ: ಜನ ಸಾಮಾನ್ಯರಿಗೆ, ಉದ್ಯೋಗಿಗಳಿಗೆ ರಿಲೀಫ್ ನೀಡಿದ್ದ ಕೇಂದ್ರ ಸರ್ಕಾರ ಈಗ ವಿದ್ಯುತ್ ವಿನಾಯಿತಿಯನ್ನು ನೀಡಿದೆ. ಮೂರು ತಿಂಗಳ ಕಾಲ ವಿದ್ಯುತ್ ಬಿಲ್ ಪಾವತಿಗೆ 3 ತಿಂಗಳು ವಿನಾಯಿತಿ ನೀಡಿ ರಾಜ್ಯ ಸರ್ಕಾರಗಳು ಎಲ್ಲ ಎಸ್ಕಾಂಗಳಿಗೆ ಸೂಚಿಸಬೇಕೆಂದು ಕೇಂದ್ರ ಇಂಧನ ಸಚಿವಾಲಯ ಆದೇಶಿಸಿದೆ. ಲಾಕ್‍ಡೌನ್ ಅವಧಿಯಲ್ಲಿ ವ್ಯವಹಾರ ನಡೆಯದ ಕಾರಣ ವಿದ್ಯುತ್ ಶುಲ್ಕದಲ್ಲಿ ವಿನಾಯಿತಿ ನೀಡಬೇಕೆಂದು ಬೇಡಿಕೆ ವ್ಯಕ್ತವಾಗಿತ್ತು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಲವು ಕೈಗಾರಿಕೆ ಮತ್ತು ಕಂಪನಿಗಳು ಬಂದ್ ಆಗಿರುವ …

Read More »