ಗೋಕಾಕ: ಲಾಕ್ ಡೌನ್ ಸಂದರ್ಭದಲ್ಲಿ ಜನರು ಅವಶ್ಯಕತೆಗೆ ಹೊರ ಬಂದರೆ ಅವರನ್ನು ತೊಂದರೆ ಕೊಡಬೇಡಿ ಎಂದು ಗೋಕಾಕ ಪೊಲೀಸ್ ಅಧಿಕಾರಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸೂಚನೆ ನೀಡಿದರು.
ಸ್ಥಳಿಯರ ದೂರುಗಳಿಗೆ ಸ್ಪಂದಿಸಿ ಪೊಲೀಸ್ ಅಧಿಕಾರಿಗಳೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ ಉಪಯುಕ್ತ ಸಾಮಾನುಗಳ ಅಂಗಡಿ ತೆರೆಯುವಂತೆ ಮತ್ತು ನೀರು, ಕಿರಾಣಿ, ಹಾಲು ಮೆಡಿಕಲ್ ಸ್ಟೋರ್ ಗಳಿಗೆ ಸಾಮಾನು ತರಲು ಹೋಗುವ ಜನರನ್ನು ಹೊಡೆಯಬೇಡಿ , ಆನವಶ್ಯಕವಾಗಿ ತಿರುಗಾಡುವವರಿಗೆ ಮಾತ್ರ ಕ್ಲಾಸ್ ತಗೆದುಕೊಳ್ಳಿ ಎಂದು ಸೂಚಿಸಿದರು.
ಬೆಳಗಾವಿಯಲ್ಲಿ ಕೂಡ 24/7 ಅವಶ್ಯಕತೆ ಇರುವ ಅಂಗಡಿಗಳನ್ನು ತೆರೆಯಲಾಗಿದೆ. ಸರ್ಕಾರ ಸೂಚನೆಯು ಕೂಡ ಇದೆ ಹೀಗಾಗಿ ಅನಾವಶ್ಯಕವಾಗಿ ಹೊಡೆಯಬೇಡಿ ಎಂದರು.