Breaking News
Home / ರಾಜಕೀಯ

ರಾಜಕೀಯ

ರಾಜ್ಯ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಸಿಲ್ಲ: ಸಚಿವ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು: ಕೋವಿಡ್ ನಂತಹ ಸಮಯದಲ್ಲಿ ನಾಯಕತ್ವ ಬದಲಾವಣೆ ವಿಚಾರವು ಅಪ್ರಸ್ತುತವಾಗಿದ್ದು, ಅಂತಹ ಯಾವುದೇ ಚರ್ಚೆಗಳೂ ನಡೆದಿಲ್ಲ. ಕೇವಲ ರಾಜ್ಯದಲ್ಲಿನ ಕೊರೋನಾ ಸ್ಥಿತಿಗತಿಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಚರ್ಚೆ ನಡೆಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಾಗಿದೆ. ಈ ವೇಳೆ ರಾಜ್ಯದಲ್ಲಿ ಕೊರೋನಾ ನಿರ್ವಹಣೆ …

Read More »

ಗುಡ್ ನ್ಯೂಸ್ : ಅತಿಥಿ ಉಪನ್ಯಾಸಕರ ನೇಮಕಕ್ಕೆ ಕಾಲೇಜು ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು : ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ಪ್ರಸಕ್ತ ಸಾಲಿನ ಸಮ ಸೆಮಿಸ್ಟರ್ ತರಗತಿಗಳಿಗೆ ಬೋಧಿಸಲು ಹೆಚ್ಚುವರಿ ಕಾರ್ಯಭಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಈ ಹಿಂದೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಆದ್ಯತೆ ನೀಡಿ ಅಥವಾ ಹೊಸ ಅಭ್ಯರ್ಥಿಗಳಿಂದ ಅರ್ಜಿ ಪಡೆದು ಕಾಲೇಜು ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ವಿಭಾಗ ಮುಖ್ಯಸ್ಥರುಉ ಹಿರಿಯ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿ ಸದಸ್ಯರನ್ನು …

Read More »

ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ 14 ದಿನ ಮುಂದೂಡಿಕೆ?

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಲಸಿಕೆ ಪಡೆಯುವ ನಿರೀಕ್ಷೆಯಲ್ಲಿದ್ದ 18 ವರ್ಷ ಮೇಲ್ಪಟ್ಟವರಿಗೆ ಬಿಗ್ ಶಾಕ್ ಎದುರಾಗಿದ್ದು, ರಾಜ್ಯದಲ್ಲಿ ಮೇ. 10 ರಿಂದ 24 ರವರೆಗೆ ಕಠಿಣ ಲಾಕ್ ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ಲಸಿಕೆ ಪಡೆಯಲು ಬರಲು ಸಮಸ್ಯೆ ಅಗುತ್ತದೆ ಹೀಗಾಗಿ 14 ದಿನ ಮುಂದೂಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್ ಅವರು, ಬೆಂಗಳುರು ಸೇರಿದಂತೆ …

Read More »

ಜಗತ್ತಿನ ಅತಿ ದೊಡ್ಡ ನೆಟ್ವರ್ಕ್ ಈ ಒಂದು ಪ್ರದೇಶ ದಲ್ಲಿಲ್ಲ…?

ಜಮಖಂಡಿ: ಏರ್ಟೆಲ್ ಹಾಗೂ ಜಿಯೋ. ಜಗತ್ತಿನ ಅತ್ಯಂತ ದೊಡ್ಡ ನೆಟ್ವರ್ಕ್ ಅಂತ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಜಾಹೀರಾತು ಹಾಗೂ ಇನ್ನಿತರ ಮೂಲದ ಮೂಲಕ ಜನರಿಗೆ ತಲುಪಿಸುವ ಹಾಗೆ ದೃಶ್ಯ ಮಾಧ್ಯಮ, ಪ್ರಿಂಟ್ ಮೀಡಿಯಾ, ಹಾಗೂ ಡಿಜಿಟಲ್ ಮೀಡಿಯಾ ಮೂಲಕ ತಮ್ಮ ಪ್ರಚಾರ ಮಾಡ್ತೀರಿ, ಇದನ್ನ ಲಕ್ಷಾಂತರ ಜನ ಕೂಡ ವೀಕ್ಷಣೆ ಮಾಡುತ್ತಾರೆ ಆದ್ರೆ ಇವತ್ತು ಕಳೆದ ವರ್ಷ ದಿಂದ ಶಾಲೆ ಮಕ್ಕಳಿಗೆ ರಜೆ ಕೊಟ್ಟ ಹಾಗೆ ನಮ್ಮ ರಾಜ್ಯ …

Read More »

ವಾಹನವಿಲ್ಲದೆ ಪರದಾಟ: 7 ಕಿ.ಮೀ ನಡೆದ ತುಂಬು ಗರ್ಭಿಣಿ!

ಕೊಪ್ಪಳ: ನಗರದಲ್ಲಿ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ತುಂಬು ಗರ್ಭಿಣಿಯು ಆಸ್ಪತ್ರೆಗೆ ತೆರಳಲು ಪರದಾಡಿದ ಪ್ರಸಂಗ ಸೋಮವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ನರೇಗಲ್ ಗ್ರಾಮದ ಲಕ್ಷ್ಮೀ ಪೂಜಾರ ಅವರು ಕೊಪ್ಪಳದ ಖಾಸಗಿ ಆಸ್ಪತ್ರೆಗೆ ಚೆಕಪ್ ಗೆ ಹೋಗಬೇಕಿತ್ತು. ಆದರೆ ಪೊಲೀಸರು ಎಲ್ಲ ವಾಹನಗಳನ್ನ ಹಿಡಿದು ಜಪ್ತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲ ವಾಹನ ಚಾಲಕರು ಪೊಲೀಸರಿಗೆ ಹೆದರಿ ಗರ್ಭಿಣಿಯನ್ನ ಆಸ್ಪತ್ರೆಗೆ ಕರೆ ತರಲು ನಿರಾಕರಿಸಿದ್ದರು. ಇದರಿಂದ ಗ್ರಾಮದಿಂದ 7 …

Read More »

‘ಪ್ರಚಾರ ಮಂತ್ರಿ’ ಮೋದಿ; ಪ್ರಧಾನಿ ವಿರುದ್ಧ ಕಾಂಗ್ರೆಸ್ ಕಿಡಿ

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ), ‘ಪ್ರಚಾರ ಮಂತ್ರಿ’ ಎಂದು ವ್ಯಂಗ್ಯವಾಡಿದೆ. ಈ ಕುರಿತು ಮಾಡಿರುವ ಟ್ವೀಟ್‌ನಲ್ಲಿ, ಬಂಗಾಳದ ಚುನಾವಣೆಗೆ ಹತ್ತಿಪ್ಪತ್ತು ಪ್ರಚಾರ ಸಭೆ ನಡೆಸಿದ ‘ಪ್ರಚಾರ ಮಂತ್ರಿ’ ಮೋದಿಯವರು ಇದುವರೆಗೂ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ನೋಡಲಿಲ್ಲ, ಆಕ್ಸಿಜನ್ ಪೂರೈಕೆ ಪರಿಸ್ಥಿತಿಯ ಅವಲೋಕನ ಸಭೆ ನಡೆಸಲಿಲ್ಲ, ವೈದ್ಯಕೀಯ ತಜ್ಞರ, ವಿಜ್ಞಾನಿಗಳ ಸಭೆ ನಡೆಸಲಿಲ್ಲ, ಪತ್ರಿಕಾಗೋಷ್ಠಿ ನಡೆಸಿ …

Read More »

ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಯಿಂದ ಲಕ್ಷ ಲಕ್ಷ ಲೂಟಿ; ಬಿಲ್ ಫೊಟೊ ವೈರಲ್

ಕೋಲಾರ: ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳಿಂದ ಲಕ್ಷ ಲಕ್ಷ ಲೂಟಿ ಮಾಡುತ್ತಿದ್ದ ಪ್ರಕರಣ ಬಯಲಾಗಿದೆ. ಕೋಲಾರದ ಲಕ್ಷ್ಮೀ ಆಸ್ಪತ್ರೆಯಲ್ಲಿ 11 ದಿನಕ್ಕೆ 3.9 ಲಕ್ಷ ಬಿಲ್ ಮಾಡಿರುವುದು ಬೆಳಕಿಗೆ ಬಂದಿದೆ. ಅರವಿಂದ್ ಎಂಬ ಸೋಂಕಿತನ ಹೆಸರಲ್ಲಿ ಲಕ್ಷಗಟ್ಟಲೆ ಬಿಲ್ ಮಾಡಲಾಗಿದ್ದು, 3 ಲಕ್ಷ 90 ಸಾವಿರ ಬಿಲ್ ಮಾಡಿರುವ ರಸೀದಿ ಎಲ್ಲೆಡೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ರೋಗಿಯ ಬಿಲ್ ವೈರಲ್ ಆಗಿದ್ದು, ಸರ್ಕಾರ, ಆರೋಗ್ಯ ಸಚಿವರಿಗೆ ಜನರು ಹಿಗ್ಗಾಮುಗ್ಗಾ …

Read More »

ಕೊರೊನಾಗೆ ತಂದೆ ಮಗ ಬಲಿ

ಧಾರವಾಡ: ಸೋಂಕು ಹಿನ್ನೆಲೆ ಕಳೆದ ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ತಂದೆ ಮಗ ಇಬ್ಬರು ಕೊರೊನಾಗೆ ಬಲಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ. ತಂದೆ ರವೀಂದ್ರನಾಥ ವಸ್ತ್ರದ (74) ಮಗ ವಿಶ್ವನಾಥ ವಸ್ತ್ರದ (47) ಮೃತರಾಗಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ತಂದೆ ಮಗ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ತಂದೆ ನಿಧನರಾಗಿದ್ದರೆ. …

Read More »

ಲಾಕ್​ಡೌನ್​ ಮಧ್ಯೆ ಇಂದಿನಿಂದ ಲಿಕ್ಕರ್ ಹೋಮ್‌ ಡೆಲಿವರಿಗೆಅನುಮತಿ

ಛತ್ತೀಸ್‌ಗಢದಲ್ಲಿ ಬಿಗಿಯಾದ ಲಾಕ್‌ಡೌನ್‌ ಜಾರಿಗೊಳಿಸಿದ್ದರೂ ಮದ್ಯ ಮಾರಾಟಕ್ಕೆ ತುಸು ಸಡಿಲ ನೀತಿ ಅನುಸರಿಸಲಾಗುತ್ತಿದೆ. ಆಹಾರ ಮತ್ತು ಅಗತ್ಯ ವಸ್ತುಗಳ ರೀತಿ ಇಂದಿನಿಂದ ಮದ್ಯದ ಹೋಮ್‌ ಡೆಲಿವರಿಗೆ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಲಾಕ್​ಡೌನ್​​ನಿಂದ ಮನೆಯಲ್ಲೇ ಉಳಿಯುವ ಎಣ್ಣೆಪ್ರಿಯರು ಸರ್ಕಾರದ ಈ ನೀತಿಯಿಂದ ನಿಟ್ಟುಸಿರುಬಿಟ್ಟಿದ್ದಾರೆ. ಜನ ಸಂಚಾರ, ಅಂಗಡಿ ಮುಂಗಟ್ಟುಗಳು ಬಂದ್‌ ಮಾಡಿರುವ ಸಂದರ್ಭದಲ್ಲಿ ಲಿಕ್ಕರ್‌ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ. ಆನ್‌ಲೈನ್‌ ಮೂಲಕ ಲಿಕ್ಕರ್ ಆರ್ಡರ್‌ ಪಡೆದು ಹೋಮ್‌ ಡೆಲಿವರಿ ಕೊಡುವುದಕ್ಕೆ …

Read More »

ಲಾಕ್ ಡೌನ್: ಸಂಚಾರಕ್ಕೆ ಕಠಿಣ ನಿರ್ಬಂಧ

ವಿಜಯಪುರ: ನಗರದಲ್ಲಿ ಸೋಮವಾರ ಬೆಳಿಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಅರಸಿದ್ದಿ ಸಿಬ್ಬಂದಿಯೊಂದಿಗೆ ಸ್ವತಃ ರಸ್ತೆಗಳಿದು ವಾಹನಗಳ ತಪಾಸಣೆ ನಡೆಸಿ, ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದರು. ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದು, ದಂಡ ವಿಧಿಸಿದರು. ವಾಹನಗಳನ್ನು ಠಾಣೆಯಲ್ಲಿ ನಿಲ್ಲಿಸಿ, ನಡೆದುಕೊಂಡು ಹೋಗುವಂತೆ ಕೆಲವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು. ಮಹಾರಾಷ್ಟ್ರ-ಕರ್ನಾಟಕ ಗಡಿಯ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ವಿಜಯಪುರ ನಗರ …

Read More »