ಚಿಕ್ಕೋಡಿ: ತಳ್ಳೋ ಗಾಡಿಯಲ್ಲಿ ಪತಿಯ ಶವವನ್ನು ಪತ್ನಿ ಸಾಗಿಸಿದ ಅಮಾನವೀಯ ಘಟನೆ ಬೆಳಗಾವಿಯ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ಸದಾಶಿವ ಹಿರಟ್ಟಿ (55) ಅನಾರೋಗ್ಯದಿಂದ ಗುರುವಾರ ರಾತ್ರಿ ಸಾವನ್ನಪ್ಪಿದ್ದರು. ಅನಾರೋಗ್ಯದಿಂದ ಬಳಲಿ ತೀರಿಹೋದ ಪತಿಯ ಅಂತ್ಯ ಸಂಸ್ಕಾರಕ್ಕೆ ಕೊರೊನಾ ಭಯದಿಂದ ಯಾರು ಬರದ ಕಾರಣ ಪತ್ನಿಯೇ ತಳ್ಳೋ ಗಾಡಿಯಲ್ಲಿ ಪರಿಚಯಸ್ಥರೊಬ್ಬರ ಸಹಾಯದಿಂದ ಶವ ಸಾಗಿಸಿದ್ದಾರೆ. ಅಥಣಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂದೆ ಚಪ್ಪಲಿ ಹೊಲಿದುಕೊಂಡಿದ್ದ ಸದಾಶಿವ ನಿನ್ನೆ ತಡರಾತ್ರಿ ಮನೆಗೆ …
Read More »ನಾಲ್ಕು ಬಾರಿ ಕೋವಿಡ್ ಟೆಸ್ಟ್- ಯಡಿಯೂರಪ್ಪಗೆ ಕೊರೊನಾ ನೆಗೆಟಿವ್
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಮ್ಮೆ ಕೋವಿಡ್ ಟೆಸ್ಟ್‌ಗೆ ಒಳಗಾಗಿದ್ದು, ಈ ಬಾರಿಯೂ ವರದಿಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ. ಸಿಎಂ ನಿವಾಸ ಮತ್ತು ಕೃಷ್ಣಾದಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಕೋವಿಡ್ ಟೆಸ್ಟ್ ಮಾಡಿಸಿದ್ದರು. ವರದಿಯಲ್ಲಿ ನೆಗೆಟಿವ್ ಬಂದಿದೆ. ಇದುವರೆಗೆ ಸುಮಾರು ನಾಲ್ಕು ಬಾರಿ ಸಿಎಂ ಯಡಿಯೂರಪ್ಪ ಕೋವಿಡ್ ಪರೀಕ್ಷೆ ಮಾಡಿಸಿದ್ದಾರೆ. ಈ ಎಲ್ಲಾ ಟೆಸ್ಟ್‌ಗಳಲ್ಲಿ ಸಿಎಂಗೆ ಕೊರೊನಾ ನೆಗೆಟಿವ್ ಬಂದಿದೆ. …
Read More »ಕೋವಿಡ್-19 | ಲಾಕ್‌ಡೌನ್ ವಿಸ್ತರಣೆ ಇಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು: ಲಾಕ್‌ಡೌನ್ ಮುಂದುವರಿಸಬೇಕು ಎಂಬ ಪ್ರಬಲ ಒತ್ತಡಗಳ ನಡುವೆಯೂ ಅದನ್ನು ಮತ್ತೊಂದು ಅವಧಿಗೆ ಮುಂದುವರಿಸದೇ ಇರಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ‘ಕೋವಿಡ್ ನಿಯಂತ್ರಿಸಲು ಲಾಕ್‌ಡೌನ್‌ನಿಂದ ಹೆಚ್ಚಿನ ಪ್ರಯೋಜನ ಆಗದ ಕಾರಣ, ಅದನ್ನು ಮುಂದುವರಿಸುವ ಆಲೋಚನೆ ಸರ್ಕಾರಕ್ಕಿಲ್ಲ. ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆಯೇ ಕೊರೊನಾ ಮಣಿಸಲು ಇರುವ ಏಕೈಕ ಮಾರ್ಗ’ ಎಂಬ ದೃಢ ಮಾತುಗಳನ್ನು ಅವರು ಆಡಿದ್ದಾರೆ. ಬೆಂಗಳೂರಿನ ಎಂಟು ವಲಯಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪರಿಸ್ಥಿತಿ ನಿರ್ವಹಣೆಯ ಮಾಹಿತಿ …
Read More »ಹನುಮಸಾಗರ ಸ್ವಯಂ ಘೋಷಿತ ಲಾಕ್ಡೌನ್…..?
ಕೊಪ್ಪಳ: ಜಿಲ್ಲೆಯಲ್ಲಿ ಕೊರೋನಾ ಹೆಮ್ಮಾರಿಯ ಅಟ್ಟಹಾಸ ನಿಲ್ಲುತ್ತಿಲ್ಲವಾದರೂ ಈಗಾಗಲೇ 248 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ. ಜಿಲ್ಲೆಯಲ್ಲಿ ಶುಕ್ರವಾರದವರೆಗೂ 431 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಕೇವಲ 9 ಜನರು ಸಾವನ್ನಪ್ಪಿದ್ದು, ಉಳಿದವರ ಪೈಕಿ 248 ಜನರು ಗುಣಮುಖವಾಗಿದ್ದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದಿಲ್ಲೊಂದು ಕಾಯಿಲೆ ಜಿಲ್ಲೆಯಲ್ಲಿ ಇದುವರೆಗೂ ಕೊರೋನಾದಿಂದಲೇ ಯಾರು ಸತ್ತಿಲ್ಲ. ಬೇರೆ ನಾನಾ ಕಾಯಿಲೆ ಇರುವವರಿಗೂ ಸೋಂಕು ಬಂದಿದೆ. ಅಂಥವರು ಮೃತಪಟ್ಟಿದ್ದಾರೆಯೇ ವಿನಃ ಇದುವರೆಗೂ …
Read More »ಬೆಂಗಳೂರಿನಲ್ಲಿ ಲಾಕ್‌ಡೌನ್ ವಿಸ್ತರಿಸಿʼ: ತಜ್ಞರ ಸಲಹೆ
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಸಾವಿರ ದಾಟಿದರೆ ಮತ್ತೆ ಲಾಕ್‍ಡೌನ್ ಮಾಡಬೇಕಾಗುತ್ತದೆ ಎಂದು 15 ದಿನಗಳ ಹಿಂದೆಯೇ ಕೊರೊನಾ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದರು. ಈಗಲೂ ಕೂಡ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದು, ತಕ್ಷಣಕ್ಕೆ ಲಾಕ್‍ಡೌನ್ ತೆರವು ಬೇಡ ಬೇಡ ವಿಸ್ತರಿಸಿ ಎಂದಿದ್ದಾರೆ. ತಜ್ಞರ ಸಲಹೆ ಏನು? ದಿನದ ಸೋಂಕಿತರ ಸಂಖ್ಯೆ 2 ಸಾವಿರ ದಾಟಿದೆ. ಇಂತಹ ಸಂದರ್ಭಗಳಲ್ಲಿ ಮೈಮರೆಯಬಾರದು. ಈಗ ಲಾಕ್‍ಡೌನ್ ತೆರವು ಮಾಡಿದರೆ ಜುಲೈ ಅಂತ್ಯದಲ್ಲಿ ಕೇಸ್ …
Read More »ರಾಯಚೂರಿನಲ್ಲಿ ಲಾಕ್‍ಡೌನ್ ಬಿಗಿ- ಶಾಸಕರ ಕಾರನ್ನೂ ವಾಪಸ್ ಕಳುಹಿಸಿದ ಪೊಲೀಸರು
ರಾಯಚೂರು: ಜಿಲ್ಲೆಯ ರಾಯಚೂರು ಹಾಗೂ ಸಿಂಧನೂರು ನಗರಗಳ 3ನೇ ದಿನದ ಲಾಕ್‍ಡೌನ್‍ನಲ್ಲೂ ಜನ ಯಾವುದೇ ಭೀತಿಯಿಲ್ಲದೆ ರಸ್ತೆಗಿಳಿಯುತ್ತಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಎರಡು ನಗರಗಳನ್ನು ಒಂದು ವಾರ ಕಾಲ ಲಾಕ್‍ಡೌನ್ ಮಾಡಲಾಗಿದೆ. ಅನಗತ್ಯವಾಗಿ ಜನ ರಸ್ತೆಗೆ ಇಳಿಯುತ್ತಲೇ ಇದ್ದಾರೆ. ಹೀಗಾಗಿ ಲಾಕ್‍ಡೌನ್ ಬಿಗಿಗೊಳಿಸಲು ಪೋಲಿಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಶಾಸಕರ ಕಾರನ್ನು ಸಹ ವಾಪಸ್ ಕಳುಹಿಸಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿಷ್ಠೆ …
Read More »ಬೆಳಗಾವಿಯಲ್ಲಿ 95 ಜನರಿಗೆ ಸೋಂಕು ಪತ್ತೆಯಾಗಿದೆ.
ಬೆಂಗಳೂರು – ರಾಜ್ಯದಲ್ಲಿ ಇಂದು 3693 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಬೆಳಗಾವಿಯಲ್ಲಿ 95 ಜನರಿಗೆ ಸೋಂಕು ಪತ್ತೆಯಾಗಿದೆ. ಬೆಂಗಳೂರಿನಲ್ಲಿ 2208, ಧಾರವಾಡದಲ್ಲಿ 157, ಬಳ್ಳಾರಿ 133, ವಿಜಯಪುರ 118, ಮೈಸೂರು 93, ಕಲಬುರಗಿ 89, ಉಡುಪಿ 80, ಉತ್ತರ ಕನ್ನಡ 75 ಜನರಿಗೆ ಸೋಂಕು ಪತ್ತೆಯಾಗಿದೆ.
Read More »ಖಾನಾಪುರದ ಈ ಹೋಟೆಲ್ ನಲ್ಲಿ ಯಾರಾದ್ರೂ ತಿಂಡಿ ತಿಂದ್ರೆ ಪರೀಕ್ಷೆ ಮಾಡಿಸಿಕೊಳ್ಳಿ
ಖಾನಾಪುರ – : ಖಾನಾಪುರ ತಾಲೂಕು ಇಲ್ಲಿಯವರೆಗೆ ಕೊರೋನಾ ರಹಿತವಾಗಿ ಗುರುತಿಸಿಕೊಂಡಿತ್ತು. ತಾಲೂಕಿನಲ್ಲಿ ಕೋವಿಡ್-೧೯ ಗೆ ಮೊದಲ ಬಲಿಯಾಗಿದೆ. ಪಟ್ಟಣದ ರೇಣುಕಾ ಹೊಟೇಲ್ ಉದ್ಯಮಿ ೩ ದಿನಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೆದ್ದಾರಿಗೆ ಹೊಂದಿಕೊಂಡಿರುವ ಹೊಟೆಲನ್ನು ಸೀಲಡೌನ್ ಮಾಡಲಾಗಿದೆ. ಶಾಸಕಿ ಡಾ.ಅಂಜಲಿ ನಿಂಬಾಳಕರ, ತಹಶೀಲದಾರ ರೇಷ್ಮಾ ತಾಳಿಕೋಟೆ, ಪಂ.ಪ.ಮುಖ್ಯಾಧಿಕಾರಿ ವಿವೇಕ ಬನ್ನೆ, ಪೋಲಿಸ್ ಅಧಿಕಾರಿಗಳು, ಡಾ.ನಾಂದ್ರೆ , ಸರ್ವ ಪಕ್ಷಗಳ ಮುಖಂಡರು ಸೇರಿ ಹೊಟೇಲ್ …
Read More »ಲಾಕಡೌನ್ ಜಾರಿಯಲ್ಲಿದ್ದರೂ ಜನಜೀವನಕ್ಕೆ ಎಂದಿನಂತೆಯೇ ಇದೆ.
ಗೋಕಾಕದಲ್ಲಿ ಲಾಕಡೌನ್ ಜಾರಿಯಲ್ಲಿದ್ದರೂ ಜನಜೀವನಕ್ಕೆ ಎಂದಿನಂತೆಯೇ ಇದೆ. ಲಾಕಡೌನ್ ಲೆಕ್ಕಕ್ಕಿಲ್ಲದಂತೆ ಜನ ಓಡಾಡುತ್ತಿದ್ದಾರೆ. ಲಾಕಡೌನ್ ಆದ ಪ್ರದೇಶದಲ್ಲಿ ಹೇಳೊರಿಲ್ಲ,ಕೇಳೊರಿಲ್ಲ ಅನ್ನೋ ಸ್ಥಿತಿ ಇದ ಕೊರೋನಾ ಸೋಂಕು ತಡೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ಆದರೆ ಗೋಕಾಕ ಜನತೆ ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿ ಹೇಗೆ ಬೇಕೋ ಹಾಗೆ ವರ್ತಿಸುತ್ತಿದ್ದಾರೆ. ಇದೆಲ್ಲ ಗೊತ್ತಿದ್ದರೂ ಗೋಕಾಕ ತಹಸೀಲ್ದಾರ್ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ.ವಸ್ತುಸ್ಥಿತಿಯನ್ನು ಪರಿಶೀಲಿಸುತ್ತಿಲ್ಲ. ಕೊರಾನಾ ಕೇಸ್‍ಗಳು ಹೆಚ್ಚುತ್ತಿವೆ. ಇದನ್ನು ತಡೆಯಲು ಲಾಕ್‍ಡೌನ್ ಘೋಷಿಸಲಾಗಿತ್ತು. …
Read More »ಗೋಕಾಕ ನಗರದ ವಾರ್ಡ್ ಗಳಲ್ಲಿ ಸದಸ್ಯರೊಂದಿಗೆ ಕೊರೊನಾ ವಾರಿಯರ್ಸ್ ಗಳು ಜಾಗೃತಿ ಮೂಡಿಸಿದರು.
ಗೋಕಾಕ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ ನಗರದ ವಾರ್ಡ್ ಗಳಲ್ಲಿ ಸದಸ್ಯರೊಂದಿಗೆ ಕೊರೊನಾ ವಾರಿಯರ್ಸ್ ಗಳು ಜಾಗೃತಿ ಮೂಡಿಸಿದರು. ನಗರಸಭೆ ಕಂದಾಯ ಅಧಿಕಾರಿ ಎಸ್. ಕೆ. ಹಳ್ಳೂರು, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸ್ ಸಿಬ್ಬಂದಿಗಳು ನಗರದ ಪ್ರತಿಯೊಂದು ವಾರ್ಡ್ ಗೆ ಸದಸ್ಯರೊಂದಿಗೆ ಭೇಟಿ ನೀಡಿ ಜನರಿಗೆ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಿ ಆರೋಗ್ಯ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಜತೆಗೆ ಕಡ್ಡಾಯವಾಗಿ …
Read More »
Laxmi News 24×7