Breaking News
Home / ಜಿಲ್ಲೆ (page 1179)

ಜಿಲ್ಲೆ

ರಾತ್ರೋರಾತ್ರಿ ಗುಂಪು ಸೇರಿದ ಯುವಕರು – ಪ್ರಶ್ನಿಸಿ ಗದರಿಸಿದ್ದಕ್ಕೆ ಕಾಲ್ಕಿತ್ತರು

ಹಾಸನ: ರಾತ್ರೋರಾತ್ರಿ ಗುಂಪು ಸೇರಿದ ಯುವಕರನ್ನು ಸ್ಥಳೀಯರು ಪ್ರಶ್ನೆ ಮಾಡಿ ಗದರಿಸಿ ವಾಪಸ್ ಕಳಿಸಿರುವ ಘಟನೆ ಹಾಸನ ಜಿಲ್ಲೆ, ಅರಸೀಕೆರೆ ನಗರದ ಮುಜಾವರ್ ಮೊಹಲ್ಲಾ ಬಡಾವಣೆಯಲ್ಲಿ ನಡೆದಿದೆ. ಕೊರೊನಾ ಭಯದಿಂದ ದೇಶ ಲಾಕ್‍ಡೌನ್ ಆಗಿದೆ. ಗುಂಪಾಗಿ ಸೇರದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸರ್ಕಾರ ಮನವಿ ಮಾಡಿಕೊಳ್ಳುತ್ತದೆ. ಆದರೆ ಅರಸೀಕೆರೆ ನಗರದಲ್ಲಿ 20 ಜನ ಯುವಕರು ಒಟ್ಟಿಗೆ ಸೇರಿಕೊಂಡಿದ್ದರು. ಇವರನ್ನು ಪ್ರಶ್ನಿಸಿದರೆ ನಾವು ನಮಾಜ್ ಮಾಡಲು ಬಂದಿದ್ದೇವೆ. ನಮಗೆ ಕೊರೊನಾ …

Read More »

“ಸಿಎಂ ರಿಲೀಫ್ ಫಂಡ್‍ಗೆ ಒಟ್ಟು 1.80 ಕೋಟಿ ರೂ. ಜಮೆ” ಸಚಿವ ಸುರೇಶ್ ಕುಮಾರ್

ರಾಜ್ಯದಲ್ಲಿ 215 ಜನರಿಗೆ ಕೊರೊನಾ- 39 ಜನ ಡಿಸ್ಚಾರ್ಜ್ – ಬೆಂಗ್ಳೂರಿನಲ್ಲಿ ಇಂದಿನಿಂದ ಒಂದು ತಿಂಗ್ಳು ಕಠಿಣ ಕ್ರಮ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ಈವರೆಗೂ 1.80 ಕೋಟಿ ರೂ. ಜಮೆ ಬೆಂಗಳೂರು: ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ಈವರೆಗೂ 1.80 ಕೋಟಿ ರೂ. ಜಮೆಯಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 215ಕ್ಕೆ …

Read More »

ಹಿಂಬಾಗಿಲಿನಿಂದ ಮದ್ಯ ಮಾರಾಟಕ್ಕೆ ಮುಂದಾದ ಮಾಲೀಕ ಅರೆಸ್ಟ್

ರಾಯಚೂರು: ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯುವ ಹಿನ್ನೆಲೆ ಇಡೀ ದೇಶಾದ್ಯಂತ ಬಾರ್ ಅಂಡ್ ರೆಸ್ಟೋರೆಂಟ್ ಬಂದ್ ಮಾಡಲಾಗಿದೆ. ಲಾಕ್‍ಡೌನ್ ಹಿನ್ನೆಲೆ ಬಾರ್ ಗಳ ಬೀಗಕ್ಕೆ ಸೀಲ್ ಮಾಡಲಾಗಿದೆ. ಹೀಗಾಗಿ ಜಿಲ್ಲೆಯ ಲಿಂಗಸುಗೂರಿನ ಹಟ್ಟಿಯಲ್ಲಿ ಬಾರ್ ಮಾಲೀಕನೋರ್ವ ತನ್ನ ಅಂಗಡಿಯಲ್ಲಿನ ಮದ್ಯವನ್ನು ಹಿಂಬಾಗಿಲಿನಿಂದ ತಾನೇ ಕದ್ದು ಮಾರಾಟ ಮಾಡಲು ಮುಂದಾದ ವೇಳೆ ಸಿಕ್ಕಿಬಿದ್ದಿದ್ದಾನೆ ಇಲ್ಲಿನ ಕೋಹಿನೂರ್ ಬಾರ್ ಅಂಡ ರೆಸ್ಟೋರೆಂಟ್ ನಲ್ಲಿ ಮದ್ಯ ಹಾಗೂ ನಗದು ಹಣವನ್ನು ತೆಗೆಯುತ್ತಿದ್ದ ವೇಳೆ …

Read More »

ದ್ರಾಕ್ಷಿ ಹಣ್ಣು ವಿತರಿಸಿ ಕೊರೋನಾ ಜಾಗೃತಿ ಮೂಡಿಸಿದ ಕರುನಾಡು ಸೈನಿಕರು

  ಮೂಡಲಗಿ: ಮಹಾ ಮಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಟ್ಟಣದ ಸರಕಾರಿ ಆಸ್ಪತ್ರೆಯ ಸೇವಾ ಸಿಬ್ಬಂದಿಗಳಿಗೆ, ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆ ಮತ್ತು ಶಿವಾಪೂರ, ಹಳ್ಳೂರ ಗ್ರಾಮದ ಬಡ ಕುಟುಂಬ ಮತ್ತು ಜನತಾ ಪ್ಲಾಟದ ಗುಡಿಸಲು ನಿವಾಸಿಗಳಿಗೆ ಇಲ್ಲಿಯ ಕರುನಾಡು ಸೈನಿಕ ತರಬೇತಿ ಕೇಂದ್ರದ ಸಂಚಾಲಕ ಶಂಕರ ತುಕ್ಕನ್ನವರ ಮತ್ತು ಅದ್ಯಕ್ಷರಾದ ಸವಿತಾ ತುಕ್ಕನ್ನವರ ಅವರು ಮನೆ ಮನೆಗೆ ತೆರಳಿ 4ಕ್ವಿಂಟಲ್ ದ್ರಾಕ್ಷಿ ಹಣ್ಣು ಉಚಿತವಾಗಿ ವಿತರಿಸಿ ಮಾನವೀಯತೆ …

Read More »

ಹುಬ್ಬಳ್ಳಿ:ನೈರುತ್ಯ ರೈಲ್ವೆಯಲ್ಲಿ 80,000 ಬೆಡ್‍ಗಳ 312 ಐಸೋಲೇಷನ್ ಬೋಗಿಗಳ ನಿರ್ಮಾಣ

ಹುಬ್ಬಳ್ಳಿ , ಏ.11- ರೈಲ್ವೆ ಇಲಾಖೆಯ 10 ದಿನದಲ್ಲಿ 80,000 ಬೆಡ್‍ಗಳ ಐಸೊಲೇಷನ್ ಬೋಗಿಗಳನ್ನು ನಿರ್ಮಾಣ ಮಾಡಿದೆ. ಹುಬ್ಬಳ್ಳಿ ನೈರುತ್ಯ ರೈಲ್ವೆ ವತಿಯಿಂದ 312 ಐಸೊಲೇಷನ್ ಬೋಗಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು. ಹುಬ್ಬಳ್ಳಿಯ ರೈಲ್ವೆ ವರ್ಕಶಾಪ್‍ನಲ್ಲಿ ನಿರ್ಮಿಸಲಾಗಿರುವ ಐಸೋಲೇಷನ್ ಬೋಗಿಗಳನ್ನು ವೀಕ್ಷಿಸಿ ನಂತರ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನಂತೆ ದೇಶಾದ್ಯಂತ 20,000 …

Read More »

ಹುಬ್ಬಳ್ಳಿಯ ಕಮರಿಪೇಟೆ ಠಾಣೆಯ ಐವರು ಪೊಲೀಸರು ಹೋಂಕ್ವಾರಂಟೈನ್‍ಗೆ

ಹುಬ್ಬಳ್ಳಿ, ಏ.11- ಪೊಲೀಸ್ ಇಲಾಖೆಗೂ ಕೊರೊನಾ ವೈರಸ್ ಬಿಸಿ ತಟ್ಟಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಕಮರಿಪೇಟೆ ಪೊಲೀಸ್ ಠಾಣೆಯ ಐದು ಜನ ಪೊಲೀಸರನ್ನು ಹೋಂ ಕ್ವಾರಂಟೈನ್‍ಗೆ ಕಳುಹಿಸಲಾಗಿದೆ. ಐದು ಜನ ಪೊಲೀಸ್ ಸಿಬ್ಬಂದಿ ಕೈಗೆ ಆರೋಗ್ಯ ಇಲಾಖೆ ಸಿಬ್ಬಂದಿ ಸೀಲ್ ಹಾಕಿ ಹೋಂ ಕ್ವಾರಂಟೈನ್‍ನಲ್ಲಿಡಲಾಗಿದೆ. ಹುಬ್ಬಳ್ಳಿಯ ಮುಲ್ಲಾ ಓಣಿಯ ಸೋಂಕಿತನ ಜೊತೆ ಪ್ರಾಥಮಿಕ ಸಂಪರ್ಕದ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್‍ನಲ್ಲಿಡಲಾಗಿದೆ. ಕಮರಿಪೇಟೆ ಠಾಣಾ ವ್ಯಾಪ್ತಿಯಲ್ಲಿರುವ ಮುಲ್ಲಾ ಓಣಿಯಲ್ಲಿರುವ …

Read More »

ಬೆಂಗಳೂರು,:ಮೊಬೈಲ್ ಸ್ಯಾನಿಟೈಸರ್ ಬಸ್ ‘ಸಾರಿಗೆ ಸಂಜೀವಿನಿ’ಗೆ ಚಾಲನೆ

ಬೆಂಗಳೂರು, ಏ.11- ಮೊಬೈಲ್ ಸ್ಯಾನಿಟೈಸರ್ ಬಸ್ ಸಾರಿಗೆ ಸಂಜೀವಿನಿಗೆ ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ್ ಅವರು ಚಾಲನೆ ನೀಡಿದರು. ಕೆಎಸ್‍ಆರ್‍ಟಿಸಿಯ ಬೆಂಗಳೂರು ಕೇಂದ್ರೀಯ ವಿಭಾಗದ ಬಸ್ ಘಟಕ -2ರಲ್ಲಿ ತಾವೇ ಸ್ಯಾನಿಟೈಸರ್ ಸ್ಪ್ರೇಗೆ ಒಳಗಾಗುವ ಮೂಲಕ ಶಿವಯೋಗಿ ಕಳಸದ್ ಚಾಲನೆ ನೀಡಿದರು. ಸಾರ್ವಜನಿಕರ ಅನುಕೂಲಕ್ಕಾಗಿ ಇಂದಿನಿಂದ ಬೆಂಗಳೂರಿನಲ್ಲಿ ಸ್ಯಾನಿಟೈಸರ್ ಬಸ್ ಸಂಚರಿಸಲಿದೆ. ಹತ್ತು ವರ್ಷದ ಹಳೆಯ ಬಸ್‍ಅನ್ನು ಸ್ಯಾನಿಟೈಸರ್ ಬಸ್ ಆಗಿ ಪರಿವರ್ತಿಸಿದ ಕೆಎಸ್‍ಆರ್‍ಟಿಸಿ , ಸುಮಾರು …

Read More »

25 ಸಾವಿರ ಬ್ಯಾಗ್ ಪಡಿತರ ವಿತರಿಸಲಿದ್ದಾರೆ ಪ್ರಜ್ವಲ್ ರೇವಣ್ಣ

ಹಾಸನ: ಕೊರೊನಾ ಲಾಕ್‍ಡೌನ್‍ನಿಂದ ತೊಂದರೆ ಅನುಭವಿಸುತ್ತಿರುವ ಜನರಿಗೆ ಸಹಾಯ ಮಾಡುವ ಸಲುವಾಗಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ನೇತೃತ್ವದಲ್ಲಿ ಸುಮಾರು 25 ಸಾವಿರ ದವಸ, ಧಾನ್ಯದ ಬ್ಯಾಗ್ ರೆಡಿ ಮಾಡಲಾಗುತ್ತಿದೆ. ಪ್ರತಿ ಬ್ಯಾಗ್‍ನಲ್ಲಿ ಅಕ್ಕಿ, ಸಕ್ಕರೆ, ಎಣ್ಣೆ ಸೇರಿದಂತೆ ಸುಮಾರು 10 ದಿನಸಿ ಪದಾರ್ಥಗಳು ಇರಲಿವೆ. ಸೋಮವಾರದಿಂದ 25 ಸಾವಿರ ಆಹಾರ ಧಾನ್ಯದ ಬ್ಯಾಗ್‍ಗಳನ್ನು ಜಿಲ್ಲೆಯಾದ್ಯಂತ ಹಂಚಲು ತೀರ್ಮಾನಿಸಲಾಗಿದೆ. ಒಂದೊಂದು ಬ್ಯಾಗ್‍ನಲ್ಲೂ …

Read More »

ಮೂರು ಫಂಡ್‍ಗೆ ತಲಾ 1 ಲಕ್ಷ ಪಿಂಚಣಿ ದೇಣಿಗೆ ನೀಡಿದ ದೇವೇಗೌಡ್ರು

ಬೆಂಗಳೂರು: ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರು ತಮ್ಮ ಪಿಂಚಣಿ ಹಣವನ್ನು ಕೊರೊನಾ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ. ದೇವೇಗೌಡರು ಪಿಎಂ ಕೇರ್ಸ್ ಫಂಡ್, ಮುಖ್ಯಮಂತ್ರಿ ಪರಿಹಾರ ನಿಧಿ ಮತ್ತು ಕೇರಳ ಸಿಎಂ ಪರಿಹಾರ ನಿಧಿಗೆ ತಲಾ ಒಂದೊಂದು ಲಕ್ಷ ದೇಣಿಗೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. “ಕೊರೊನಾ ನಿಯಂತ್ರಣ ನಿಧಿಗೆ ನಾನು ಪಡೆಯುವ ಪಿಂಚಣಿ ಹಣವನ್ನು ನೀಡುತ್ತಿದ್ದೇವೆ. ಪಿಎಂ ಕೇರ್ಸ್ ಫಂಡ್, ಕರ್ನಾಟಕ ಮುಖ್ಯಮಂತ್ರಿ …

Read More »

ಚಾಮರಾಜನಗರ:400 ಬುಡಕಟ್ಟು ಕುಟುಂಬಗಳಿಗೆ ಪಡಿತರ ಕೊಡದೆ ವಂಚನೆ – ಡಿಸಿಯಿಂದ ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದು

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಹಿರಿಯಂಬಲ ಹಾಗೂ ಕತ್ತೆಕಾಲು ಪೋಡಿನ 400 ಬುಡಕಟ್ಟು ಸೋಲಿಗರ ಕುಟುಂಬಗಳಿಗೆ ಪಡಿತರ ಧಾನ್ಯ ವಿತರಣೆ ಮಾಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ವರದಿ ಮಾಡಲಾಗಿತ್ತು. ಈ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಕೊನೆಗೂ ವಿತರಣೆಯಲ್ಲಿ ವಂಚನೆ ಮಾಡಿದ್ದ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ಅನ್ನು ಅಮಾನತು ಮಾಡಿ ಆದೇಶಿಸಿದೆ. ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ವರದಿ ತರಿಸಿಕೊಂಡು ಹಿರಿಯಂಬಲ ಬ್ರಹ್ಮೇಶ್ವರ ನ್ಯಾಯಬೆಲೆ ಅಂಗಡಿಯ …

Read More »