Breaking News
Home / ಜಿಲ್ಲೆ / ರಾಜ್ಯದಲ್ಲಿ 8 ಹೊಸ ಕೊರೋನಾ ಕೇಸ್, ಸೋಂಕಿತರ ಸಂಖ್ಯೆ 215ಕ್ಕೇರಿಕೆ..!

ರಾಜ್ಯದಲ್ಲಿ 8 ಹೊಸ ಕೊರೋನಾ ಕೇಸ್, ಸೋಂಕಿತರ ಸಂಖ್ಯೆ 215ಕ್ಕೇರಿಕೆ..!

Spread the love

ಬೆಂಗಳೂರು : ರಾಜ್ಯದಲ್ಲಿ ಕರೋನಾ ಸಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆಯವರೆಗೆ 8 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.ಇದರೊಂದಿಗೆ ರಾಜ್ಯದ ಕೋವಿಡ್-19 ಸೋಂಕಿತರ ಸಂಖ್ಯೆ 215ಕ್ಕೇರಿದೆ.

ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತೋರ್ವ ಬಾಲಕನಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಸೋಂಕಿತ ಸಂಖ್ಯೆ 92ರ ವ್ಯಕ್ತಿಯ ಸಂಪರ್ಕಕ್ಕೆ ಬಂದ 10 ವರ್ಷದ ಮಗನಿಗೆ ಸೋಂಕು ತಾಗಿದೆ ಆರೋಗ್ಯ ಸಚಿವ ಬಿ.ಶ್ರೀ ರಾಮುಲು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 7 ಹೊಸ ಕೊರೋನಾ ಪ್ರಕರಣಗಳು ಖಚಿತವಾಗಿತದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 214ಕ್ಕೆ ಏರಿದೆ. ಇದುವರೆಗೆ 37 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಪ್ರಸ್ತುತ ಸೋಂಕು ದೃಢಪಟ್ಟಿರುವ 7 ಮಂದಿಯಲ್ಲಿ ಐವರು ಮೈಸೂರು ಮೂಲದವರಾಗಿದ್ದು, ಇನ್ನಿಬ್ಬರು ಬೆಂಗಳೂರು ಹಾಗೂ ಬೀದರ್ ಮೂಲದವರಾಗಿದ್ದಾರೆಂದು ತಿಳಿದುಬಂದಿದೆ. ಜ್ಯುಬಿಲಿಯೆಂಟ್‌ ಔಷಧ ಕಂಪನಿಯ ಸೋಂಕಿತ ಕಾರ್ಮಿಕರೊಂದಿಗೆ ಸಂಪರ್ಕ ಹೊಂದಿದ್ದ ಐದು ಜನ ವ್ಯಕ್ತಿಗಳಲ್ಲಿ ಈ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ.

ನಂಜನಗೂಡು ಜ್ಯುಬಿಲೆಂಟ್ ಕಾರ್ಖಾನೆ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಎರಡು ಗ್ರಾಮಗಳಲ್ಲಿ ಸೀಲ್ಡ್‌ಡೌನ್‌ಗೆ ಆದೇಶ ಮಾಡಲಾಗಿದೆ. ಹೆಬ್ಯಾ, ಸೋಮೇಶ್ವರ ಗ್ರಾಮಗಳು ಸೀಲ್ ಡೌನ್ ಆಗಿವೆ. ಮೈಸೂರಿನ ಜೆಪಿ ನಗರ, ಶ್ರೀರಾಂಪುರದ ಎರಡು ಮನೆಗಳ ವ್ಯಾಪ್ತಿಯಲ್ಲಿ ನಿರ್ಬಂಧ ಹೇರಲಾಗಿದೆ. ಜ್ಯುಬಿಲೆಂಟ್ ಕಾರ್ಖಾನೆ ಸೋಂಕು ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.

ನಮಗೆ ಪಾಸ್ ಬೇಕು ಎಂದು 44 ಲಕ್ಷ 46 ಸಾವಿರ ಮಂದಿ ಕೇಳಿದ್ದಾರೆ, ಇಲ್ಲಿವರೆಗೆ 1 ಲಕ್ಷ 75 ಸಾವಿರ ಇ- ಪಾಸ್ ನೀಡಲಾಗಿದೆ. ನಗರದ ಪೊಲೀಸ್ ಹೊಯ್ಸಳ ವಾಹನಗಳನ್ನು ಸಾರ್ವಜನಿಕವಾಗಿ ತುರ್ತು ಸೇವೆಗೆ ನೀಡಲಾಗಿದೆ. ಇದರಿಂದ ಇಲ್ಲಿತನಕ 4 ಸಾವಿರ ಮಂದಿಗೆ ಸಹಾಯವಾಗಿದೆ. 273 ವಾಹನಗಳು ತುರ್ತು ಸೇವೆಗೆ ಮುಡಿಪಾಗಿವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಪ್ರಸ್ತುತ ಕಂಡು ಬಂದಿರುವ 215 ಮಂದಿಯಲ್ಲಿ 72 ಮಂದಿ ಬೆಂಗಳೂರು, 47 ಮೈಸೂರು ಹಾಗೂ 12 ಮಂದಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡು ಬಂದಿದೆ ಎನ್ನಲಾಗುತ್ತಿದೆ. ಪ್ರಸ್ತುತ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ 37 ಮಂದಿಯಲ್ಲಿ 19 ಜನರು ಬೆಂಗಳೂರು ಮೂಲದವರಾಗಿದ್ದು, ಐವರು ದಕ್ಷಿಣ ಕನ್ನಡ, ಮೂವರು ದಾವಣಗೆರೆ, ಇಬ್ಬರು ಉತ್ತರ ಕನ್ನಡ, 2 ಚಿಕ್ಕಬಳ್ಳಾಪುರ, ಮೈಸೂರು, ಕಲಬುರಗಿ, ಧಾರವಾಡ ಹಾಗೂ ಕೊಡಗಿನಲ್ಲಿ ಒಬ್ಬೊಬ್ಬರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಇನ್ನು ಇಲ್ಲಿವರೆಗೆ 39 ಜನರು ಡಿಸ್ಚಾರ್ಜ್ ಆಗಿದ್ದು 4 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.ಅಲ್ಲದೆ, 139768 ಮಂದಿಯನ್ನ ಬಂದರಿನಲ್ಲಿ ಸ್ಕ್ರೀನಿಂಗ್ ಮಾಡಲಾಗಿದೆ, 8560 ಸ್ಯಾಂಪಲ್ ಸಂಗ್ರಹಣೆ ಮಾಡಲಾಗಿದೆ.

ರಾಜ್ಯದಲ್ಲಿ ಇದುವರೆಗೆ ಆರು ಜನರು ಸೋಂಕಿನ ಕಾರಣದಿಂದ ಮರಣ ಹೊಂದಿದ್ದು, 39 ಜನರು ಚಿಕಿತ್ಸೆ ಮುಗಿಸಿ, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಒಟ್ಟು ನಾಲ್ವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 215 ಸೋಂಕಿತರಲ್ಲಿ 6 ಸೋಂಕಿತರು ಕೇರಳದವರು ಎನ್ನಲಾಗಿದೆ.


Spread the love

About Laxminews 24x7

Check Also

ಅಪ್ಪ ಮಕ್ಕಳ ಶಿಕಾರಿ ನಾನು ಮಾಡುತ್ತೇನೆ; ಈಶ್ವರಪ್ಪ ಕಿಡಿ

Spread the love ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ, ಇಂದು ಪಕ್ಷೇತರ ಅಭ್ಯರ್ಥಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ