Breaking News

ಮಂಗಳೂರು:ಶ್ರೀಕ್ಷೇತ್ರ ಧರ್ಮಸ್ಥಳದ ವಿಷು ಜಾತ್ರೆ ರದ್ದು.

Spread the love

ಮಂಗಳೂರು: ಕೊರೊನಾ ವೈರಸ್ ಹರಡುವ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆದ ಹಿನ್ನೆಲೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಬೇಕಿದ್ದ ವಾರ್ಷಿಕ ವಿಷು ಮಾಸದ ಜಾತ್ರೆ ರದ್ದು ಮಾಡಲಾಗಿದೆ ಅಂತ ಧರ್ಮಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇವರ ಪ್ರಶ್ನೆ ಮೂಲಕ ನೋಡಿ ಧರ್ಮದೇವತೆಗಳ, ಅಣ್ಣಪ್ಪ ಸ್ವಾಮಿಯ ನೇಮ-ಕೋಲಗಳು, ಐದು ದಿನಗಳ ಕಾಲ ನಡೆಯಬೇಕಿದ್ದ ಮಂಜುನಾಥ ಸ್ವಾಮಿಯ ರಥೋತ್ಸವ, ಕಟ್ಟೆ ವಿಹಾರ ಹಾಗೂ ಅವಭೃತ ವಿಹಾರವೂ ರದ್ದು ಮಾಡಲಾಗಿದೆ ಅಂತ ತಿಳಿಸಿದ್ದಾರೆ.

ಮುಂದಿನ ಸೂಚನೆಯವರೆಗೂ ಭಕ್ತರ ಪ್ರವೇಶ ಹಾಗೂ ದರ್ಶನ ಕೂಡ ರದ್ದು ಮಾಡಿದ್ದು, ಈ ಬಗ್ಗೆ ಭಕ್ತರು ಯಾರೂ ಸಂಕೋಚ ಪಡಬೇಕಾಗಿಲ್ಲ. ದೈವ-ದೇವರುಗಳು ಈ ರೀತಿಯ ಪರಿವರ್ತನೆಗೆ ಒಪ್ಪಿದ್ದಾರೆ. ಸಾಂಕೇತಿಕ ಸೇವೆಗಳಿಗೆ ಒಪ್ಪಿ ಅನುಗ್ರಹಿಸಿದ್ದಾರೆ ಅಂತ ತಿಳಿಸಿದ್ದಾರೆ.

ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸಿ, ಕೊರೊನಾ ಸೋಂಕು ಮುಕ್ತಿಗಾಗಿ ಪ್ರಾರ್ಥನೆ ಮಾಡಿ ಮುಂದಿನ ದಿನಗಳ ಸುಭೀಕ್ಷೆಗಾಗಿ ಸರ್ಕಾರದ ಆದೇಶವನ್ನು ಪರಿಪಾಲಿಸಿ ಅಂತ ಭಕ್ತರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಕರೆ ನೀಡಿದ್ದಾರೆ


Spread the love

About Laxminews 24x7

Check Also

ರಾಜ್ಯ ಸರ್ಕಾರ ದಿವಾಳಿಯಾಗಿದೆ: ಪ್ರಹ್ಲಾದ ಜೋಶಿ‌

Spread the loveರಾಜ್ಯ ಸರ್ಕಾರ ದಿವಾಳಿಯಾಗಿದೆ: ಪ್ರಹ್ಲಾದ ಜೋಶಿ‌ ಹುಬ್ಬಳ್ಳಿ: ರೈತರ ಹೆಸರು ಹೇಳಿ ಹಾಲಿನ‌ ದರ ಹಚ್ಚಳಕ್ಕೆ ರಾಜ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ