Breaking News
Home / ಜಿಲ್ಲೆ / ಬೆಳಗಾವಿ (page 218)

ಬೆಳಗಾವಿ

ತುಂಬಿದ ಸಭೆಯಲ್ಲಿ ಬೊಮ್ಮಾಯಿಗೆ ‘ಬಾದಾಮಿ ಹಾಲು’ ಕೊಟ್ಟು ‘CM ಮಾಡಿದ್ದು ನಾನೇ’ ಎಂದ ಅಭಿಮಾನಿ..!

ಬೆಳಗಾವಿ: ಅಭಿಮಾನಿಯೋರ್ವ ಸಿಎಂ ಬಸವರಾಜ್​​ ಬೊಮ್ಮಾಯಿಗೆ ಬಾದಾಮಿ ಹಾಲು ನೀಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ವಿಶೇಷ ಗೆಟಪ್​ನಲ್ಲಿ ಆಗಮಿಸಿ ಅಭಿಮಾನಿ ಬಾದಾಮಿ ಹಾಲು ನೀಡಿದ್ದಾನೆ. ಅಭಿಮಾನಿಯನ್ನ ತಡೆಯಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಅವನನ್ನು ಬಿಡಿ ಎಂದು ಸಿಎಂ ಹಾಲು ಸ್ವೀಕರಿಸಿದ್ದಾರೆ. ಎಲ್ಲಿ ಹೋದರೂ ಅವನು ಏನನ್ನಾದರು ಕೊಟ್ಟೇ ಕೊಡುತ್ತಾನೆ. ಇಂದು ಬಾದಾಮಿ ಹಾಲು ಕೊಟ್ಟಿದ್ದಾನೆ ಎಂದಿದ್ದಾರೆ ಸಿಎಂ ಬೊಮ್ಮಾಯಿ. ಬಾದಾಮಿ ಹಾಲು ನೀಡಿದ ಬಳಿಕ ಬೊಮ್ಮಾಯಿ ಅವರನ್ನ ಸಿಎಂ …

Read More »

ಬೆಳಗಾವಿ: ಐದು ಭಾಷೆಯ ಡಿಜಿಟಲ್ ಗ್ರಂಥಾಲಯವನ್ನು ಲೋಕಾರ್ಪಣೆ ಮಾಡಲಿರುವ ಸಿಎಂ!

ಬೆಳಗಾವಿ: ಎರಡು ದಿನ ಜಿಲ್ಲಾ ಪ್ರವಾಸ ನಡೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಂದು ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ 2. 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರೋ 5 ಭಾಷೆಯ ರವೀಂದ್ರ ಕೌಶಿಕ್ ಡಿಜಿಟಲ್ ಗ್ರಂಥಾಯಲದ ಉದ್ಘಾಟನೆ ಮಾಡಿ ಲೋಕಾರ್ಪಣೆ ಆಗಲಿದೆ. ಇದೇ ರೀತಿ 2.7 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವಟ ರಾಜ್ಯದ ಮೊದಲ ಬುದ್ಧಿಮಾಂದ್ಯತೆ ಮಕ್ಕಳ ಪಾರ್ಕ್ ನ ಉದ್ಘಾಟನೆಯನ್ನು ಸಿಎಂ‌ …

Read More »

ಕಾಸ್ಮೊಪಾಲಿಟನ್ ಸಂಸ್ಕೃತಿ ಹೊಂದಿರುವ ಬೆಳಗಾವಿಯಲ್ಲಿ ಇಡೀ ಭಾರತವೇ ಇದೆ: ಬೊಮ್ಮಾಯಿ

ಬೆಳಗಾವಿ: ಬೆಳಗಾವಿಯಲ್ಲಿ ಇಡೀ ಭಾರತವೇ ಇದೆ. ಕಾಸ್ಮೊಪಾಲಿಟನ್ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವ ವಿಶಾಲ ಮನೋಭಾವದ ಜನರು ಈ ನಗರದವರು ಎಂದು ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಹೇಳಿದರು. ನಗರದ ‌ಎಸ್‌ಪಿಎಂ ರಸ್ತೆಯಲ್ಲಿ ಶಿವಾಜಿ ಉದ್ಯಾನದ ಸಮೀಪದಲ್ಲಿ ಸ್ಮಾರ್ಟ್ ‌ಸಿಟಿ‌ ಯೋಜನೆಯಲ್ಲಿ ನಿರ್ಮಿಸಲಾದ ರವೀಂದ್ರ ಕೌಶಿಕ್ ಇ- ಗ್ರಂಥಾಲಯವನ್ನು ಭಾನುವಾರ ಉದ್ಘಾಟಿಸಿ‌ ಅವರು ಮಾತನಾಡಿದರು. ಸಂಕುಚಿತ ಮನೋಭಾವಕ್ಕೆ ಇಲ್ಲಿ ಜಾಗ ಇಲ್ಲ ಎನ್ನುವುದನ್ನು ಈಚೆಗೆ ನಡೆದ ಮಹಾನಗರಪಾಲಿಕೆ ಸಾರ್ವತ್ರಿಕ ‌ಚುನಾವಣೆಯಲ್ಲಿ ಜನರು ತೋರಿಸಿಕೊಟ್ಟಿದ್ದಾರೆ. ಅಭಿವೃದ್ಧಿಗೆ …

Read More »

ಅಣ್ಣನ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ ಸಹೋದರ ರಮೇಶ ಕತ್ತಿ

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಯ ಪ್ರಜ್ಞೆ ಇಟ್ಟುಕೊಂಡು ನಮ್ಮ‌ಕ್ಷೇತ್ರಕ್ಕೆ‌ ಬಂದು ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ನನಗೂ ಸಮಯ ಪ್ರಜ್ಣೆ ಇದೆ. ಆದರೆ ನಮ್ಮಣ್ಣ ಉಮೇಶ ಕತ್ತಿ ಎರಡು ತಾಸು ಲೇಟ್ ಮಾಡಿ ಬರ್ತಾರೆ.‌ ಬೇಗ ಟೇಕಪ್ ಆಗುವುದಿಲ್ಲ ಎಂದು ಸಹೋದರ ರಮೇಶ ಕತ್ತಿ ಅವರು ಹಿರಿಯಣ್ಣನ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದರು. ಹುಕ್ಕೇರಿಯ ಕ್ಯಾರಗುಡ್ಡದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ, ಪ್ರಥಮ ದರ್ಜೆ ಕಾಲೇಜು, ಹುಕ್ಕೇರಿಯ ಹೈಟೆಕ್ …

Read More »

ಪ್ರಧಾನಿ ಮೋದಿ ಅವರ ಆಡಳಿತದಿಂದ ಇಡೀ ವಿಶ್ವಕ್ಕೆ “ಭಾರತ ಗುರು”ವಾಗುವ ಕಾಲ ಸನ್ನಿಹಿತ ಶಾಸಕ ಬಾಲಚಂದ್ರ ಜಾರಕಿಹೊಳಿ.

  ಗೋಕಾಕ : ಶಿಸ್ತಿನ ಪಕ್ಷ ಬಿಜೆಪಿಗೆ ಕಾರ್ಯಕರ್ತರೇ ಜೀವಾಳವಾಗಿದ್ದು, ಕಾರ್ಯಕರ್ತರ ಪರಿಶ್ರಮದಿಂದ ಕೇಂದ್ರ ಹಾಗೂ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆ. ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಗಳಲ್ಲಿ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಬೇಕಾಗಿದೆ. ಎಲ್ಲರೂ ಒಂದಾಗಿ, ಒಗ್ಗಟ್ಟಾಗಿ ದುಡಿದು ಬೆಳಗಾವಿ ಜಿಲ್ಲಾ ಪಂಚಾಯತಿಯಲ್ಲಿ ಬಿಜೆಪಿ ಬಾವುಟ ಹಾರಿಸೋಣ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾಯರ್ಸ್ ಸಭಾಭವನದಲ್ಲಿ ಶನಿವಾರ ಸಂಜೆ …

Read More »

ಗೋಕಾಕ ಜನತೆಗೆ ಅನುಕೂಲಕ್ಕಾಗಿ ಅತಿ ಸುಂದರವಾದ ಸಮುದಾಯ ಭವನ: ಸತೀಶ್ ಜಾರಕಿಹೊಳಿ ಭೇಟಿನೀಡಿ ವೀಕ್ಷಣೆ. 

    ಗೋಕಾಕ: ಗೋಕಾಕ ನಗರದ ಜನತೆಗೆ ಲಕ್ಷ್ಮಿ ದೇವಿಯು ಆರಾಧ್ಯ ದೇವತೆ ಇನ್ನು ಪ್ರತಿಯೊಂದು ಕುಟುಂಬ ಈ ಆರಾಧ್ಯ ದೇವತೆಯ ಭಕ್ತರು   ಇನ್ನು ಈ ಒಂದು ದೇವಸ್ಥಾನದ ಕಮಿಟಿ ಒಂದು ಅಧ್ಬೂತ ವಾದ ಕೆಲಸಕ್ಕೆ ಮುಂದಾಗಿದ್ದು ಇಂದು ಅದರ ಪ್ರತಿಫಲವಾಗಿ ಒಂದು ಸುಂದರವಾದ ಸಮುದಾಯ ಭವನ ಜನತೆಯೇ ಹಿತಾಸಕ್ತಿ ಗಾಗಿ ನಿರ್ಮಾಣ ವಾಗಿದೆ.   ಈ ಒಂದು ಕೆಲಸಕ್ಕೆ ಗೋಕಾಕ ಜನತೆ ಜಾತ್ರಾ ಕಮಿಟಿ ಹಾಗೂ ಸಾಹುಕಾರರ …

Read More »

ಚಿತ್ರಮಂದಿರ ಪೂರ್ಣ ತೆರೆಯಲು ಅವಕಾಶ: ಕೆಲವು ಜಿಲ್ಲೆಗಳಲ್ಲಿ ಮಾತ್ರ

ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಬಾಗಿಲು ಹಾಕಿದ್ದ ಚಿತ್ರಮಂದಿರಗಳು ಆ ನಂತರ ಸರ್ಕಾರದ ಆದೇಶದಂತೆ 50% ನಿಯಮಕ್ಕೆ ಬದ್ಧವಾಗಿ ಕೆಲಸ ಮಾಡುತ್ತಿದ್ದವು. ಇದೀಗ ಸರ್ಕಾರವು ಚಿತ್ರಮಂದಿರಗಳ ಮೇಲೆ ಕೃಪೆ ತೋರಿದ್ದು 100% ಪ್ರೇಕ್ಷಕರಿಗೆ ಅವಕಾಶ ನೀಡಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಮಾತ್ರ. ರಾಜ್ಯದ ಯಾವ ಜಿಲ್ಲೆಯಲ್ಲಿ ಕೊರೊನಾ ಶೇ 1ಕ್ಕಿಂತಲೂ ಕಡಿಮೆ ಪ್ರಸರಣ ಇದೆಯೋ ಆ ಜಿಲ್ಲೆಗಳಲ್ಲಿ ಮಾತ್ರವೇ ಚಿತ್ರಮಂದಿರಗಳು ಪೂರ್ಣವಾಗಿ ಬಾಗಿಲು ತೆರೆಯಬಹುದಾಗಿದೆ. ಯಾವ ಜಿಲ್ಲೆಗಳಲ್ಲಿ ಶೇ 1ಕ್ಕಿಂತಲೂ …

Read More »

ರಾಜ್ಯದಲ್ಲಿ ವಾರದೊಳಗೆ ಮಹತ್ವದ ಬದಲಾವಣೆಯಾಗಲಿದೆ: ಯತ್ನಾಳ

ಬೆಳಗಾವಿ: ‘ರಾಜ್ಯದಲ್ಲಿ ವಾರದೊಳಗೆ ಮಹತ್ವದ ಬದಲಾವಣೆಯಾಗಲಿದೆ. ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆಗೆದುಕೊಳ್ಳಲಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು. ಇಲ್ಲಿನ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಲಿಂಗಾಯತ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ನಲ್ಲಿ ಪಾಲ್ಗೊಂಡ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ‘ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೆರಳಲ್ಲ. ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಶಕ್ತಿ ಮತ್ತು ಅನುಭವ ಅವರಿಗಿದೆ. ಇನ್ನೊಂದು ವಾರದಲ್ಲಿ ಅವರು …

Read More »

ರವೀಂದ್ರ ಕೌಶಿಕ್ ಇ-ಗ್ರಂಥಾಲಯ ಜಗತ್ತಿಗೆ ಮಾದರಿ ಗ್ರಂಥಾಲಯ: ಶಾಸಕ ಅಭಯ್ ಪಾಟೀಲ

ಬೆಳಗಾವಿ: ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರನ್ನು ನೆನಪಿಸುವ ದೃಷ್ಟಿಯಿಂದ ಮರೆತು ಹೋಗಿದ್ದ ದೇಶ ಪ್ರೇಮಿ ರವೀಂದ್ರ ಕೌಶಿಕ್ ಅವರ ಹೆಸರನ್ನು ಇ- ಗ್ರಂಥಾಲಯಕ್ಕೆ ನಾಮಕರಣ ಮಾಡಲಾಗಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು. ರವೀಂದ್ರ ಕೌಶಿಕ್ ಇ ಲೈಬ್ರರಿ ಕುರಿತು ಮಾಹಿತಿ ನೀಡುತ್ತಿರುವ ಶಾಸಕ ಅಭಯ ಪಾಟೀಲನಗರದ ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ಸರ್ಕಲ್ ನಲ್ಲಿ ಶಿವಾಜಿ ಉದ್ಯಾನದ ಹತ್ತಿರವಿರುವ ರವೀಂದ್ರ ಕೌಶಿಕ್ ಇ-ಗ್ರಂಥಾಲಯದಲ್ಲಿ ಶನಿವಾರ (ಸೆ.25) ನಡೆದ ಪತ್ರಿಕಾಗೋಷ್ಠಿಯನ್ನ …

Read More »

ಯುಪಿಎಸ್ ಸಿ ಪರೀಕ್ಷೆಯಲ್ಲಿ ಬೆಳಗಾವಿಯ ಶಾಕೀರ್ ಅಹ್ಮದ್ ಗೆ 583ನೇ ರ್ಯಾಂಕ್

ಬೆಳಗಾವಿ: ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ರಾಮಾಪುರಸೈಟ್ ಗ್ರಾಮದ ಶಾಕೀರ್ ಅಹ್ಮದ್ 583ನೇ ರ್ಯಾಂಕ್ ಪಡೆದಿದ್ದಾರೆ. ಶಾಕೀರ್ ಅಹ್ಮದ್ ಅವರು 2014ರಲ್ಲಿ ಕೆಪಿಎಸ್‌ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದರು. ಮತ್ತೆ 2015ರಲ್ಲಿ ಕೆಪಿಎಸ್‌ ಸಿ ಪರೀಕ್ಷೆ ಬರೆದು ಹೆಚ್ಚಿನ ಅಂಕದೊಂದಿಗೆ ತೇರ್ಗಡೆಯಾಗಿ ಹುಬ್ಬಳ್ಳಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಯುಪಿಎಸ್ ಸಿ …

Read More »