Breaking News
Home / ಜಿಲ್ಲೆ / ಬೆಳಗಾವಿ (page 200)

ಬೆಳಗಾವಿ

ಬೆಳಗಾವಿ ಇಂದಿನ ಕೊರೋನಾ

ಬೆಳಗಾವಿ- ಇಂದು ಜಿಲ್ಲೆಯಲ್ಲಿ 418 ಪ್ರಕರಣಗಳು ಕಂಡು ಬಂದಿವೆ. ಅಥಣಿ 33, ಚಿಕ್ಕೋಡಿ 29, ಸವದತ್ತಿ 33 ಪ್ರಕರಣಗಳು ಕಂಡು ಬಂದಿವೆ.

Read More »

ಮಹದಾಯಿ ಹೋರಾಟ ಪಕ್ಷದ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಪಾಲಿಕೆಯಲ್ಲಿ ಅಭಯ ಪಾಟೀಲ ಮೇಯರ್, ಅನೀಲ ಬೆನಕೆ ಡೆಪ್ಯುಟಿ ಮೇಯರ್ ಸತೀಶ್ ಜಾರಕಿಹೊಳಿ ಲೇವಡಿ….   ಬೆಳಗಾವಿ: ಕೋವಿಡ್‌ ಕಡಿಮೆಯಾದ ಮೇಲೆ ಮುಂದಿನ ದಿನಗಳಲ್ಲಿ ಮೇಕೆದಾಟು ಹೋರಾಟದ ಮಾದರಿಯಲ್ಲಿಯೇ ಮಹದಾಯಿ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್‌ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹದಾಯಿ ಹೋರಾಟ ಎಲ್ಲಿಂದ ಆರಂಭ ಮಾಡಬೇಕೆಂಬುವುದನ್ನು ನಮ್ಮ ಪಕ್ಷದ ನಾಯಕರೊಂದಿಗೆ ಚರ್ಚಿಸಿ, ರೂಪರೇಷೆ ತಯಾರಿಸಿ ನಂತರ ನಿರ್ಧಾರ …

Read More »

ಅರಣ್ಯ ಇಲಾಖೆಯ ಸಿಬ್ಬಂದಿಗಳ ವಸತಿ ಗೃಹಗಳ ಶಂಕುಸ್ಥಾಪನೆ ನೆರೆವೇರಿ‌ಸಿದ ಸಚಿವ ಉಮೇಶ್ ಕತ್ತಿ

ಘಟಪ್ರಭಾ ಅರಣ್ಯ ವಿಭಾಗದ ಸಿಬ್ಬಂದಿ ವಸತಿ ಗೃಹಗಳ ಶಂಕುಸ್ಥಾಪನೆಯನ್ನು ಅರಣ್ಯ ಹಾಗೂ ಆಹಾರ ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿಯವರು ಸೋಮವಾರದಂದು ನಗರದಲ್ಲಿ ನೆರೆವೇರಿ‌ಸಿದರು .   ಈ ಸಂದರ್ಭದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ ಕುಮಾರ ಸಾಲಿಮಠ ,ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂತೋನಿ ಎಸ್.ಮರಿಯಪ್ಪ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ವರಿ ಈರನಟ್ಟಿ, ವಲಯ ಅರಣ್ಯ ಅಧಿಕಾರಿ ಕೆ.ಎನ್.ವಣ್ಣೂರ ಹಾಗೂ ಸಿಬ್ಬಂದಿ ಇದ್ದರು.

Read More »

ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ‘ಬನದ ಹುಣ್ಣಿಮೆ ಸಾರ್ವಜನಿಕ ಪ್ರವೇಶ ಇಲ್ಲ.

ಸವದತ್ತಿ (ಬೆಳಗಾವಿ): ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ‘ಬನದ ಹುಣ್ಣಿಮೆ’ ಅಂಗವಾಗಿ ಸೋಮವಾರ (ಜ.17) ನಡೆಯಬೇಕಿದ್ದ ಜಾತ್ರೆಯನ್ನು ಕೋವಿಡ್ ಕಾರಣದಿಂದ ರದ್ದುಪಡಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ಸರಳವಾಗಿ ನಡೆಯಲಿವೆ. ಬೆಳಿಗ್ಗೆ ಮತ್ತು ಸಂಜೆ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಜರುಗಲಿದೆ. ಆದರೆ, ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.   ದೇವಸ್ಥಾನಕ್ಕೆ ಸೀಮಿತವಾಗಿ ಅಧಿಕಾರಿಗಳು, ಅರ್ಚಕರು ಹಾಗೂ ಕೆಲವೇ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಆಚರಣೆ ಕೈಗೊಳ್ಳಲಾಗುವುದು ಎಂದು ಯಲ್ಲಮ್ಮ ದೇವಸ್ಥಾನ ಅಧಿಕಾರಿಗಳು ತಿಳಿಸಿದ್ದಾರೆ.   ನಿಷೇಧದ …

Read More »

ಪ್ರಿಯಕರನ ಜೊತೆ ಸೇರಿ ಗಂಡನ ಹತ್ಯೆಗೆ ಪತ್ನಿಯೇ ಪ್ಲ್ಯಾನ್

ಬೆಳಗಾವಿ: ರಂದು ರಮೇಶ್ ಮಾದಿಗರ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ರಮೇಶ್ ಹತ್ಯೆಗೈದಿದ್ದ ಪತ್ನಿ ಶ್ರೀದೇವಿ ಮಾದಿಗರ(30) ಮತ್ತು ಪ್ರಿಯಕರ ಬಸವರಾಜ ಹರಿಜನ(20)ನನ್ನು ಬೆಳಗಾವಿ ಜಿಲ್ಲೆ ಕಿತ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.   ಜನವರಿ 13ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಚ್ಚನಕೇರಿ ಕ್ರಾಸ್ ಬಳಿ ರಮೇಶ್ ಮಾದಿಗರ ಶವ ಪತ್ತೆಯಾಗಿತ್ತು. ಈ ಹಿನ್ನೆಲೆ ಕೊಲೆಯ ಆರೋಪಿಗಳಿಗಾಗಿ ಬಲೆ ಬೀಸಿದ್ದ ಪೊಲೀಸರಿಗೆ ಬೆಚ್ಚಿಬೀಳಿಸುವ ಸಂಗತಿ ಬಯಲಾಗಿದೆ. ಪ್ರಿಯಕರನ ಜೊತೆ ಸೇರಿ …

Read More »

ಮೂವರು ಮಕ್ಕಳ ಸಾವಿಗೆ ಅಸಲಿ ಕಾರಣ ಬಿಚ್ಚಿಟ್ಟ ಲಸಿಕಾಧಿಕಾರಿ ಗಡಾದ್..!

ರಾಮದುರ್ಗ ತಾಲೂಕಿನಲ್ಲಿ ಮೂವರು ಮಕ್ಕಳ ನಿಗೂಢ ಸಾವು ಪ್ರಕರಣದಲ್ಲಿ ಮೂವರು ಕಂದಮ್ಮಗಳ ಸಾವಿನ ಅಸಲಿ ಕಾರಣ ಬೆಳಕಿಗೆ ಬಂದಿದೆ. ಆರೋಗ್ಯ ಸಿಬ್ಬಂದಿ ಯಡವಟ್ಟಿನಿಂದ ಮೂವರು ಕಂದಮ್ಮಗಳು ಬಲಿಯಾಗಿದ್ದು, ಲಸಿಕಾರಣದ ಮಾರ್ಗಸೂಚಿ ಉಲ್ಲಂಘನೆಯೇ ಮಕ್ಕಳ ಸಾವಿಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.ಈ ಬಗ್ಗೆ ಬೆಳಗಾವಿಯಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಲಸಿಕಾಧಿಕಾರಿ ಡಾ.ಈಶ್ವರ ಗಡಾದ ಅವರು ಜನೆವರಿ 10ರಂದು ಲಸಿಕೆಯನ್ನ ತೆಗೆದುಕೊಂಡು ಹೋಗಿದ್ದ ಸಾಲಹಳ್ಳಿ ಪ್ರಾಥಮಿಕ ಕೇಂದ್ರ …

Read More »

ಬೆಳಗಾವಿ ಜಿಲ್ಲೆಯಲ್ಲಿ ಮಕ್ಕಳಿಗೆ ಹೆಚ್ಚು ಕೊರೊನಾ ಕಾಣಿಸ್ತಿದೆ: ಪಾಲಕರೇ ಹುಷಾರ್..!

ಕಳೆದ ಎರಡು ದಿನಗಳಿಂದ ಮಕ್ಕಳಲ್ಲಿ ಒಮಿಕ್ರಾನ್ ಹೆಚ್ಚಾಗಿದ್ದು, ಶೇ. 100 ಮಕ್ಕಳಲ್ಲಿ 20 ರಿಂದ 30 ಮಕ್ಕಳಲ್ಲಿ ಕೋವಿಡ್ ಪಾಸಿಟಿವ್ ದರ ಹೆಚ್ಚಾಗಿದೆ.ಡಿ.ಎಚ್.ಓ ಮುನ್ಯಾಳ ಮಾತನಾಡಿ ಜನೇವರಿ 1 ರಿಂದ 3 ನೇ ಅಲೆಯ ಪ್ರಭಾವ ವಾಗಿ ಮಕ್ಕಳಲ್ಲಿ ಅಷ್ಟೊಂದು ಪಾಸಿಟಿವಿಟಿ ಇರಿಲಿಲ್ಲ ಕಳೆದ ಎರಡು ದಿನಗಳಿಂದ ನಿರತಂರವಾಗಿ ಓಮಿಕ್ರಾನ್ ಪ್ರಭಾವ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ 100 ಮಕ್ಕಳು ಕೋವಿಡ್ ಪರೀಕ್ಷೆಗೆ ಒಳಪಟ್ಟರೆ 20 ರಿಂದ 30 ಮಕ್ಕಳಲ್ಲಿ ಸೊಂಕು …

Read More »

ಚುಚ್ಚು ಮದ್ದು ಪಡೆದ ಮೂರು ಕಂದಮ್ಮಗಳ ಸಾವು ಪ್ರಕರಣದ ಕುರಿತು ಸಂಪೂರ್ಣವಾಗಿ ತನಿಖೆ ಆಗಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಗೋಕಾಕ : ಚುಚ್ಚು ಮದ್ದು ಪಡೆದ ಮೂರು ಕಂದಮ್ಮಗಳ ಸಾವು ಪ್ರಕರಣದ ಕುರಿತು ಸಂಪೂರ್ಣವಾಗಿ ತನಿಖೆ ಆಗಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಒತ್ತಾಯ ಮಾಡಿದ್ದಾರೆ.   ಇಲ್ಲಿನ ಹಿಲ್‌ ಗಾರ್ಡನ್‌ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಮುಚ್ಚು ಮದ್ದು ಪಡೆದ ಮಕ್ಕಳ ಸಾವಿಗೆ ಕೆಳವರ್ಗದ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. …

Read More »

ಏ ಹೊರಗೆ ಬಾರೊ ಸಂಜು, ನಿನಗೆ ಊರಲ್ಲಿ ಹೆಣ್ಣು ನೋಡಿದ್ದೀನಿ. ಮದುವೆ ಮಾಡೋಣ. ಹೀಗೆ ಮಲಗಿದರೆ ಹೆಂಗಪ್ಪ…’

ಜಗಳೂರು: ‘ಏ ಹೊರಗೆ ಬಾರೊ ಸಂಜು, ನಿನಗೆ ಊರಲ್ಲಿ ಹೆಣ್ಣು ನೋಡಿದ್ದೀನಿ. ಮದುವೆ ಮಾಡೋಣ. ಹೀಗೆ ಮಲಗಿದರೆ ಹೆಂಗಪ್ಪ…’ ತಾಲ್ಲೂಕಿನ ಕಾನನಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಶುಕ್ರವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂಜೀವ್ ಅವರ ತಾಯಿ ಪಟ್ಟಣದ ಆಸ್ಪತ್ರೆಯಲ್ಲಿ ರೋದಿಸಿದ್ದು ಹೀಗೆ. ಪಟ್ಟಣದ ಶವಾಗಾರದಲ್ಲಿ ಹೆತ್ತ ಮಕ್ಕಳು ಶವವಾಗಿ ಸಾಲಾಗಿ ಮಲಗಿರುವ ಘೋರ ದೃಶ್ಯ ಕಂಡು ಹೆತ್ತವರು ಆಘಾತಕ್ಕೆ ಒಳಗಾದರು. ಸಂಜೀವ್‌ ಅವರ ತಾಯಿ ಗೋಗರೆಯುತ್ತಿದ್ದ ದೃಶ್ಯ …

Read More »

ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಅವರಿಗೆ ಸನ್ಮಾನ   

ಗೋಕಾಕ:ನೂತನ ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಅವರಿಗೆ ಸನ್ಮಾನ ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಯವರು ಸಂಸ್ಥೆಯ ಚೇರಮನ ಲಖನ ಜಾರಕಿಹೊಳಿ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ನಿಮಿತ್ತ ಅವರನ್ನು ಗುರುವಾರದಂದು ಸತ್ಕರಿಸಿ ,ಗೌರವಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸದಾನಂದ ಕಲಾಲ, ಮುಖ್ಯೋಪಾಧ್ಯಾಯನಿ .ಸಿ.ಬಿ.ಪಾಗದ, ಶಿಕ್ಷಕ ಎಂ.ಸಿ ವಣ್ಣೂರ ಸೇರಿದಂತೆ ಅನೇಕರು ಇದ್ದರು.

Read More »