Home / ಜಿಲ್ಲೆ / ಬೆಳಗಾವಿ (page 216)

ಬೆಳಗಾವಿ

ವಿದ್ಯುತ್​​​ ಅವಘಡ​​​: ಅಜ್ಜಿಯನ್ನು ರಕ್ಷಣೆ ಮಾಡಲು ಹೋದ ಮೊಮ್ಮಗ ಕೂಡ ಸಾವು

ಚಿಕ್ಕೋಡಿ: ವಿದ್ಯುತ್​ ಶಾಕ್​​​ಗೆ ಒಳಗಾಗಿದ್ದ ಅಜ್ಜಿಯನ್ನು ರಕ್ಷಣೆ ಮಾಡಲು ಹೋಗಿದ್ದ ಮೊಮ್ಮಗ ಕೂಡ ಶಾಕ್​ ತಗುಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಮಡ್ಡಿ ಗಲ್ಲಿಯಲ್ಲಿ ನಡೆದಿದೆ. ಅಜ್ಜಿ ಶಾಂತವ್ವಾ ಬಸ್ತವಾಡೆ, ಮೊಮ್ಮಗ ಸಿದ್ದಾರ್ಥ ಬಸ್ತವಾಡೆ (24) ಸ್ಥಳದಲ್ಲೇ ಸಾವನ್ನಪ್ಪಿದ ಮೃತ ದುರ್ದೈವಿಗಳು. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರೆ ಮತೋರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.   ನಿನ್ನೆ ರಾತ್ರಿ ಮಳೆ ಸುರಿದ ಹಿನ್ನಲೆ ಹಿತ್ತಲಿನಲ್ಲಿ ಬಟ್ಟೆ ಹಾಕುವ ತಂತಿಗೆ …

Read More »

ಬಿಜೆಪಿಯಿಂದ 40 ಜನ ಶಾಸಕರು ಕಾಂಗ್ರೆಸ್‌ಗೆ ಬರ್ತಾರೆ..- ಹೊಸ ಬಾಂಬ್ ಸಿಡಿಸಿದ ರಾಜು ಕಾಗೆ

ಬೆಳಗಾವಿ: ಬಿಜೆಪಿಯಿಂದ ಶೀಘ್ರವೇ 40 ಜನ ಶಾಸಕರು ಕಾಂಗ್ರೆಸ್‌ಗೆ ಬರಲಿದ್ದಾರೆ ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಮಾಜಿ ಶಾಸಕ ರಾಜು ಕಾಗೆ ಹೇಳಿಕೆ ನೀಡಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರದಲ್ಲಿ ವೈಮನಸ್ಸು ಉಂಟಾಗಿದೆ ಒಬ್ಬರೊಬ್ಬರಲ್ಲಿ ಹೊಂದಾಣಿಕೆ ಇಲ್ಲದ್ದರಿಂದ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇವರಿಗೆ ಭೇಟಿಯಾಗಿ ಬಂದಿದ್ದೇನೆ. ಬರುವ 2023 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ …

Read More »

ಶ್ರೀ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಫ್ಯಾಕ್ಟರಿ ನಲ್ಲಿ ಗಾಂಧಿ ಜಯಂತಿ ಆಚರಣೆ

ಗೋಕಾಕ: ನಾಡಿ ನಾದ್ಯಂತ ನಾಡಿನ ಪಿತಾಮಹ ಮಹಾತ್ಮ ಗಾಂಧೀಜಿ ಯವರ ಜಯಂತಿ ಆಚರಣೆ ಮಾಡಲಾಗುತ್ತಿದೆ . ಇಂದು ಶ್ರೀ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಚೇರ್ಮನರಾದಂತ ಸಂತೋಷ್ ಜಾರಕಿಹೊಳಿ ಅವರ ಮುಂದಾಳತ್ವದಲ್ಲಿ ಸೌಭಾಗ್ಯ ಲಕ್ಷ್ಮೀ ಶುಗರ ಫ್ಯಾಕ್ಟರಿ ನಲ್ಲಿ ಗಾಂಧಿ ಜಯಂತಿ ಆಚರಣೆ ಮಾಡಲಾಯಿತು. ಈ ಒಂದು ಸಂದರ್ಭದಲ್ಲಿ ಸಂತೋಷ್ ಜಾರಕಿಹೊಳಿ ಅವರು ಸೇರಿದಂತೆ ಕಾರ್ಖಾನೆಯ ಮುಖ್ಯ ಅಧಿಕಾರಿ ಅಧಿಕರಾವ ಪಾಟೀಲ ಸೇರಿದಂತೆ ಇನ್ನಿ ತರ ಕಾರ್ಖಾನೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More »

ಯಮಕನಮರಡಿ ಕ್ಷೇತ್ರದ ಜನತೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತೇವೆ: ರಾಹುಲ್ ಜಾರಕಿಹೊಳಿ

      ಬೆಳಗಾವಿ: ಯಮಕನಮರಡಿ ಮತ ಕ್ಷೇತ್ರ ಹುದಲಿ ಜಿಪಂ. ವ್ಯಾಪ್ತಿಯ ಬುಡ್ರ್ಯಾನೂರು ಗ್ರಾಮದಲ್ಲಿ ಲಕ್ಷ್ಮೀ ದೇವಿ ಮೂರ್ತಿ ಪ್ರತಿಷ್ಠಾನ ಮತ್ತು ಸಮುದಾಯಭವನವನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಶುಕ್ರವಾರ ಉದ್ಘಾಟಿಸಿದರು.   ಸತೀಶ ಜಾರಕಿಹೊಳಿ ಅವರ, ಶಾಸಕರ ವಿಶೇಷ ಅನುದಾನದಡಿಯಲ್ಲಿ 16 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಅಭಿವೃದ್ಧಿ ಕಾಮಗಾರಿ ಮತ್ತು ಹಳ್ಳೂರು, ಕರವಿನಕುಪ್ಪಿ ಇವೆರಡು ಗ್ರಾಮಕ್ಕೆ 6 ಲಕ್ಷ ರೂ. ಅನುದಾನದಲ್ಲಿ ಬಸ್ ನಿಲ್ದಾಣ …

Read More »

ಕ್ಷೇತ್ರದ ಚರ್ಚಗಳ ಜೀರ್ಣೋದ್ಧಾರಕ್ಕೆ 1.50 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

  ಗೋಕಾಕ : ಪ್ರಸಕ್ತ ಸಾಲಿನ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ ಚರ್ಚಗಳ ಜೀರ್ಣೋದ್ಧಾರಕ್ಕಾಗಿ ಅರಭಾವಿ ಕ್ಷೇತ್ರದ 13 ಚರ್ಚಗಳಿಗೆ 1.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ನಾಗನೂರ, ಗುಜನಟ್ಟಿ, ಧರ್ಮಟ್ಟಿ, ಕಮಲದಿನ್ನಿ, ಹೊನಕುಪ್ಪಿ, ಬಿಲಕುಂದಿ, ಉದಗಟ್ಟಿ, ಬೀರನಗಡ್ಡಿ, ಅರಭಾವಿ, ದಂಡಾಪೂರ, ರಾಜಾಪೂರ ಹಾಗೂ ತುಕ್ಕಾನಟ್ಟಿ ಗ್ರಾಮಗಳಲ್ಲಿರುವ ಚರ್ಚಗಳ ಜೀರ್ಣೋದ್ಧಾರಕ್ಕೆ ಈ ಅನುದಾನ ಬಿಡುಗಡೆಯಾಗಿದೆ …

Read More »

ಸಿಎಂ ಭೇಟಿ ಮಾಡಿದ ಜಯಮೃತ್ಯುಂಜಯ ಸ್ವಾಮೀಜಿ; ಪಂಚಮಸಾಲಿಗೆ 2 ಮೀಸಲಾತಿ ಚರ್ಚೆ

ಬೆಂಗಳೂರು: ಬಸವ ಜಯಮೃತ್ಯುಂಜಯ ಸ್ವಾಮೀಜಿ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ್ದಾರೆ. ಈ ಭೇಟಿ ವೇಳೆ ಸ್ವಾಮೀಜಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಸಿಎಂ ಭೇಟಿ ಬಳಿಕ ಮಾತನಾಡಿದ ಸ್ವಾಮೀಜಿ, ‘ಮೀಸಲಾತಿಗಾಗಿ ಆಗ್ರಹಿಸಿ ನಡೆಸುವ ಹೋರಾಟ ಕೈಬಿಡುವಂತೆ ಸಿಎಂ ಮನವಿ ಮಾಡಿದ್ದಾರೆ. ಅಲ್ಲದೇ ಮೀಸಲಾತಿ ವಿಚಾರವಾಗಿ ಕೆಲ ಅಂಶಗಳನ್ನು ಸಿಎಂ ಪ್ರಸ್ತಾಪಿಸಿದ್ದಾರೆ’ ಎಂದು ಹೇಳಿದ್ದಾರೆ. ಇನ್ನು ನಮ್ಮ ಮುಂದಿನ …

Read More »

ವರ್ಷಕ್ಕೆ ₹2.5ಕೋಟಿ ನಿರ್ವಹಣೆಗೆ ಬಿಡುಗಡೆ; ಆದರೂ ಕಪ್ಪು ಬಣ್ಣಕ್ಕೆ ತಿರುಗಿದ ಹೆಮ್ಮೆಯ ಸುವರ್ಣಸೌಧ..!

ಬೆಳಗಾವಿ: ಅಂದಾಜು 500 ಕೋಟಿ ರೂಪಾಯಿ ವೆಚ್ಚದಲ್ಲಿ ಕುಂದಾನಗರಿಯಲ್ಲಿ ನಿರ್ಮಾಣವಾಗಿರುವ ಸುವರ್ಣಸೌಧ ಸೂಕ್ತ ನಿರ್ವಹಣೆಯ ಕೊರತೆ ಎದುರಿಸುತ್ತಿದ್ದು, ಬಿಳಿ ಆನೆಯಂತಿದ್ದ ಸೌಧ ಸೂಕ್ತ ನಿರ್ವಹಣೆಯಿಲ್ಲದೆ ಪಾಚಿಗಟ್ಟಿ ಕಪ್ಪುಬಣ್ಣಕ್ಕೆ ತಿರುಗಿದೆ. ಹೌದು.. ಈ ಬಾರಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಸೌಂದರ್ಯ ಕಳೆದುಕೊಂಡ ಸುವರ್ಣಸೌಧ, ಸರಿಯಾಗಿ ನಿರ್ವಹಣೆ ಇಲ್ಲದೇ ಪಾಚಿಗಟ್ಟಿ ಹಸಿರು, ಕಪ್ಪು ಬಣ್ಣಕ್ಕೆ ತಿರುಗಿದೆ. ಪರಿಣಾಮ ಹಳೆ ಕಟ್ಟಡವಾಗಿ ಮಾರ್ಪಾಡಾಗಿದೆ. ಪ್ರತಿ ವರ್ಷ ಲೋಕೋಪಯೋಗಿ ಇಲಾಖೆಯಿಂದ ನಿರ್ವಹಣೆಗಾಗಿಯೇ 2.5ಕೋಟಿ ರೂಪಾಯಿಗಳನ್ನು ಖರ್ಚು …

Read More »

ಬೆಳಗಾವಿ: ‘ಸಕ್ಕರೆ ಕಾರ್ಖಾನೆಗಳು ₹ 42.17 ಕೋಟಿ ಕಬ್ಬಿನ ಬಿಲ್ ಪಾವತಿಸುವುದು ಬಾಕಿ ಇದೆ’ ಎಂದ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಬೆಳಗಾವಿ: ‘ಸಕ್ಕರೆ ಕಾರ್ಖಾನೆಗಳು ₹ 42.17 ಕೋಟಿ ಕಬ್ಬಿನ ಬಿಲ್ ಪಾವತಿಸುವುದು ಬಾಕಿ ಇದೆ’ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು. ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ವಿವಿಧ ಸಭೆಗಳನ್ನು ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ‘ರಾಜ್ಯದಲ್ಲಿ ಒಟ್ಟು 87 ನೋಂದಾಯಿತ ಸಕ್ಕರೆ ಕಾರ್ಖಾನೆಗಳಿವೆ. ಅವುಗಳಲ್ಲಿ 64 ಕಾರ್ಖಾನೆಗಳು ಕಾರ್ಯನಿರತವಾಗಿವೆ. 2020-21ನೇ ಕಬ್ಬು ಅರೆಯುವ ಹಂಗಾಮಿನಲ್ಲಿ 440.84 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದು 42.94 …

Read More »

ರಾತ್ರಿ ರಾಜಕೀಯದಿಂದ ಶಾಸಕಿಯಾದ ಲಕ್ಷ್ಮಿ ಹೆಬ್ಬಾಳಕರ: ಸಂಜಯ ಪಾಟೀಲ

ಬೆಳಗಾವಿ: ‘ರಾತ್ರಿ ರಾಜಕೀಯದ ಸಂಸ್ಕೃತಿ ಗೊತ್ತಿದ್ದರಿಂದಲೇ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಇಲ್ಲದಿದ್ದರೆ ಅವರು ಶಾಸಕಿ ಆಗುವುದಕ್ಕೆ ಸಾಧ್ಯವಿರಲಿಲ್ಲ’ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಟೀಕಿಸಿದರು. ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಚುನಾವಣೆಗೆ ಮುನ್ನ, ನಾನು ನಿಮ್ಮ ಮನೆ ಮಗಳು ಎಂದೆಲ್ಲಾ ಹೇಳಿ ದೊಡ್ಡ ದೊಡ್ಡ ಕನಸುಗಳನ್ನು ತೋರಿಸಿದ್ದರು. ಆ ಕನಸುಗಳನ್ನು ನನಸು ಮಾಡಲಾಗಿಲ್ಲ. ಹೀಗಾಗಿ, ಗ್ರಾಮೀಣ ಕ್ಷೇತ್ರದ ಜನರು ಪ್ರತಿಕ್ರಿಯೆ ಕೊಡಲು …

Read More »

ಕಿಡಿಗೇಡಿಗಳ ಕಲ್ಲು ತೂರಾಟದಲ್ಲಿ ಸಾರ್ವಜನಿಕರ ತುರ್ತು ಸೇವೆಯ 112 ವಾಹನ.

  ಘಟಪ್ರಭಾ: ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಘಟಪ್ರಭಾದ ದಳವಾಯಿ ನಗರದಲ್ಲಿ ಜನರ ತುರ್ತು ಸೇವೆಗಾಗಿರುವ ಪೊಲೀಸ್ ಇಲಾಖೆಯ 112 ವಾಹನದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿ ವಾಹನ ಜಖುಂಗೊಳಿಸಿ ಪರಾರಿಯಾಗಿದ್ದಾರೆ. ವಾಹನದಲ್ಲಿದ್ದ ಇಬ್ಬರು ಪೊಲೀಸರು ಅಪಾಯದಿಂದ ಪರಾಗಿದ್ದು 7 ಜನರ ಮೇಲೆ ಪೊಲೀಸರೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.   ಘಟನೆಯ ವಿವರ: ಗೋಕಾಕ ತಾಲೂಕಿನ ಶಿಂಗಳಾಪೂರ ಗ್ರಾಮದ ಯುವತಿಯೊರ್ವಳನ್ನ ಘಟಪ್ರಭಾ ದಳವಾಯಿ …

Read More »