Breaking News
Home / ಜಿಲ್ಲೆ / ಬೆಳಗಾವಿ (page 210)

ಬೆಳಗಾವಿ

ಸೇವೆಯಿಂದ ವಜಾಗೊಂಡಿದ್ದ ಕೆ‌ಎಸ್‌ಆರ್‌ಪಿ ಕಾನ್ಸ್‌ಟೇಬಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಗೋಕಾಕ ತಾಲೂಕಿನ ಸಂಗನಕೇರಿ ಕ್ರಾಸ್ ಬಳಿ ನಡೆದಿದೆ.

ಬೆಳಗಾವಿ: ಸೇವೆಯಿಂದ ವಜಾಗೊಂಡಿದ್ದ ಕೆ‌ಎಸ್‌ಆರ್‌ಪಿ ಕಾನ್ಸ್‌ಟೇಬಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಗೋಕಾಕ ತಾಲೂಕಿನ ಸಂಗನಕೇರಿ ಕ್ರಾಸ್ ಬಳಿ ನಡೆದಿದೆ. ಗೋಕಾಕ್ ತಾಲೂಕಿನ ನಲ್ಲಾನಟ್ಟಿ ಗ್ರಾಮದ ನಿವಾಸಿ ರಮೇಶ್ ಬಿಲಕುಂದಿ (26) ಮೃತಪಟ್ಟವರು. ಆದರೆ ಮಗ ಅಪಘಾತದಲ್ಲಿ ಮೃತಪಟ್ಟಿಲ್ಲ, ಸೊಸೆಯೇ ಕೊಲೆ ಮಾಡಿಸಿದ್ದಾಳೆ ಎಂದು ಮೃತನ ತಾಯಿ ಲಕ್ಷ್ಮಿಬಾಯಿ ಆರೋಪಿಸಿದ್ದಾರೆ. ಮಗನ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ತಾಯಿ ಕಣ್ಣೀರಿಡುತ್ತಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ …

Read More »

ಉತ್ತರ ಪ್ರದೇಶ ಚುನಾವಣಾ ಮೇಲೆ ಬೆಲೆ ಏರಿಕೆ ಪರಿಣಾಮ ಬೀರುವದಿಲ್ಲ:ಅರವಿಂದ ಬೆಲ್ಲದ

ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಇಳಿಸಲು ಕೇಂದ್ರ ಕ್ರಮಗಳನ್ನು ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಬೆಲೆ ಇಳಿಕೆಯಾಗಲಿದೆ ಎಂಬ ವಿಶ್ವಾಸವನ್ನು ಶಾಸಕ‌ ಅರವಿಂದ ಬೆಲ್ಲದ ವ್ಯಕ್ತಪಡಿಸಿದರು. ನಗರದಲ್ಲಿಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು,ಬೆಲೆ ಏರಿಕೆಯಾಗುತ್ತಿರುವದು ಸರ್ಕಾರದ ಗಮನಕ್ಕೆ ಇದೆ. ಸರ್ಕಾರ ಬೆಲೆ ಇಳಿಕೆ ಮಾಡಲು ಯತ್ನಿಸುತ್ತಿದೆ ಎಂದರು. ತೆರಿಗೆ ವಸೂಲಿ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ತಗೆದುಕೊಳ್ಳಲಿದೆ. ಎಲ್ಲಾ ರಾಜ್ಯಗಳಿಗಿಂತಲೂ ರಾಜ್ಯ ಸರ್ಕಾರ ಕಡಿಮೆ ತೆರಿಗೆ ಇದೆ. …

Read More »

ಬೆಳಗಾವಿಯ ಸಿಪಿಇಡ್ ಮೈದಾನದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಬೆಳಗಾವಿಯ ಸಿಪಿಇಡ್ ಮೈದಾನದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಇನ್‍ನ್ಯೂಸ್ ಪ್ರಧಾನ ಸಂಪಾದಕರಾದ ರಾಜಶೇಖರ್ ಪಾಟೀಲ್, ಸಂಯುಕ್ತ ಕರ್ನಾಟಕ ಪತ್ರಿಕೆ ಹಿರಿಯ ವರದಿಗಾರ ವಿಲಾಸ್ ಜೋಶಿ ಅವರನ್ನು ಸತ್ಕರಿಸಿದರು. ಇನ್ನು ಸಂಗೀತ ಕ್ಷೇತ್ರದಿಂದ ಕೆಎಲ್‍ಇ ಕ್ಯಾಂಪಸ್‍ನ ಯಾದವೇಂದ್ರ ಪೂಜಾರಿ, ಶೌರ್ಯ ಗೋಕಾಕ್ ತಾಲೂಕಿನ ಅಂಕಲಗಿಯ ರೈಲ್ವೇ ಹೋಮ್ ಗಾರ್ಡ ಹೊಳೆಪ್ಪ ನೇಸರಗಿ, ಸಾಹಿತ್ಯ …

Read More »

ಎಲ್ಲ ವರ್ಗದ ಜನರ ಕಲ್ಯಾಣಕ್ಕೆ ಸರಕಾರ ಬದ್ಧ : ಸಚಿವ ಗೋವಿಂದ ಕಾರಜೋಳ 66 ನೇ ಕರ್ನಾಟಕ ರಾಜ್ಯೋತ್ಸವ : ಕನ್ನಡ ಹೋರಾಟಗಾರರು, ಪತ್ರಕರ್ತರಿಗೆ ಸನ್ಮಾನ

ಬೆಳಗಾವಿ : ಕೋವಿಡ್ ಹಿನ್ನೆಲೆಯಲ್ಲಿ ೬೬ ನೇ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.   ಜಿಲ್ಲಾಡಳಿತ ವತಿಯಿಂದ ನಗರದ ಸಿಪಿಎಡ್ ಮೈದಾನದಲ್ಲಿ ಸೋಮವಾರ (ನ.೧) ರಾಜ್ಯೋತ್ಸವ ಸಮಾರಂಭ ಆಯೋಜಿಸಲಾಗಿತ್ತು.   ಜಿಲ್ಲಾ ಉಸ್ತುವಾರಿ ಸಚಿವರೂ ಅಗಿರುವ ಜಲಸಂಪನ್ಮೂಲ (ಬೃಹತ್ ಮತ್ತು ಮಧ್ಯಮ) ಇಲಾಖೆಯ ಸಚಿವರಾದ ಗೋವಿಂದ ಕಾರಜೋಳ ಅವರು‌ ರಾಷ್ಟ್ರಧ್ವಜಾರೊಃಣ ನೆರವೇರಿಸಿದರು.   ತಾಯಿ ಭುವನೇಶ್ವರಿದೇವಿಗೆ ಪೂಜೆ ಸಲ್ಲಿಸಿ ಕವಾಯತು ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. …

Read More »

ಹಿಂಬದಿಯಿಂದ ಟ್ಯಾಂಕರ್ ಕಬ್ಬಿನ ಟ್ರ್ಯಾಕ್ಟರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿ

ಹಿಂಬದಿಯಿಂದ ಟ್ಯಾಂಕರ್ ಕಬ್ಬಿನ ಟ್ರ್ಯಾಕ್ಟರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-4ರ ಹಲಗಾ ಬಳಿ ನಡೆದಿದೆ. ಹೌದು ಹಲಗಾ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಮಂಜುನಾಥ್ ರೈಸ್ ಮಿಲ್ ಬಳಿ ಈ ದುರ್ಘಟನೆ ಸಂಭವಿಸಿದೆ. ಹಿಂಬದಿಯಿಂದ ಕಬ್ಬಿನ ಟ್ರ್ಯಾಕ್ಟರ್‍ಗೆ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಇದರಿಂದ ಟ್ರ್ಯಾಕ್ಟರ್ ಚಾಲನಿಗೆ ಗಾಯವಾಗಿದ್ದು. ಯಾವುದೇ ರೀತಿ ಪ್ರಾಣಹಾನಿ ಸಂಭವಿಸಿಲ್ಲ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Read More »

ಕಿಡಿಗೇಡಿಗಳಿಗೆ ಚೆಲ್ಲಾಟ ದ್ಧಾಂಜಲಿ ಕೋರಿ ಹಾಕಲಾಗಿದ್ದ ಫ್ಲೆಕ್ಸ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. 

ಪುನೀತ ರಾಜಕುಮಾರ ಅಕಾಲಿಕ ನಿಧನದಿಂದ ಇಡೀ ರಾಜ್ಯದ ಜನತೆ ಶೋಕಸಾಗರದಲ್ಲಿ ಮುಳುಗಿದೆ. ಒಂದು ಕಡೆ ಅಪ್ಪು ಅಭಿಮಾನಿಗಳಿಗೆ ಸಂಕಟ ಉಂಟಾಗಿದ್ದರೆ ಇನ್ನೊಂದು ಕಡೆ ಕಿಡಿಗೇಡಿಗಳಿಗೆ ಚೆಲ್ಲಾಟ ಎಂಬಂತಾಗಿದೆ. ಭಾವಪೂರ್ಣ ಶ್ರದ್ಧಾಂಜಲಿ ಕೋರಿ ಹಾಕಲಾಗಿದ್ದ ಫ್ಲೆಕ್ಸ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.  ಪುನೀತರಾಜಕುಮಾರ ಕಟೌಟ್ ಗೆ ಕಿಡಿಗೇಡಿಗಳಿಂದ ತಡರಾತ್ರಿ ಬೆಂಕಿ ಹಚ್ಚಿರುವ ಘಟನೆ ವಿಜಯಪುರ ನಗರದ ಆಶ್ರಮ ರಸ್ತೆಯಲ್ಲಿರುವ ಹೈ ಮಾಸ್ಕ್ ಲೈಟ್ ಬಳಿ ನಡೆದಿದೆ. ಅಪ್ಪು ಅಭಿಮಾನಿಗಳಿಂದ ಆಕ್ರೋಶ ವ್ಯಕ್ತಪಡಿಸಿ …

Read More »

ಕೋವಿಡ್ ಕಿಟ್ಗಳ ಹಸ್ತಾಂತರ….

ಮೂಡಲಗಿ: ತಾಲೂಕು ಪಂಚಾಯಿತಿ ಮತ್ತು ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ಯುಎಸ್ ಎಐಡಿ ಅನುದಾನದೊಂದಿಗೆ ಕೆಎಚ್ ಪಿಟಿ ಸಂಸ್ಥೆಯಿಂದ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರವನ್ನು ತಾಲೂಕು ಪಾಚಾಯಿತಿ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು. ತಾಲೂಕಿನ 2 ಗ್ರಾಮ ಪಂಚಾಯಿತಿ ಪಂಚಾಯಿತಿ ಅಧ್ಯಕ್ಷ ಹಾಗೂ ಕಾರ್ಯಕರ್ತೆಯರಿಗೆ ಕೋಡ್ ನಿರ್ವಹಣೆಯ ತದಬೇತಿ ಕಿಟ್‌ಗಳನ್ನು ಹಸ್ತಾಂತರಿಸಲಾಯಿತು. ತಾಲೂಕಾ ಸಹಾಯಕ ನಿರ್ದೇಶಕ ಸಂಗಮೇಶ ದೊಡ್ಡವರ ಮತ್ತು ಚಿಕ್ಕ ಮಕ್ಕಳ ತಜ್ಞರಾದ ಡಾ. ಜಗದೀಶ ಜಿಂಗಿ ಅವರು ಕೊಪಿಡ್ …

Read More »

ಪ್ರೀತಿಯಲ್ಲಿ ಮೋಸ ಆಗಿದ್ದಕ್ಕೆ ಸಹೋದರ ಆತ್ಮಹತ್ಯೆ; DC ಮುಂದೆ ಗಳಗಳನೇ ಕಣ್ಣೀರಿಟ್ಟ ಯೋಧ..!

ಬೆಳಗಾವಿ: ಪ್ರೀತಿಸಿದ ಹುಡುಗಿಯ ಮನೆಯವರ ವಿರೋಧಕ್ಕೆ ಹೆದರಿ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆಗೆ ಸಂಬಂಧಿಸಿದಂತೆ ಮೃತನ ಸಹೋದರ ಹಾಗೂ ಯೋಧ ನನ್ನ ಕುಟುಂಬಕ್ಕೆ ರಕ್ಷಣೆ ಸಿಗುತ್ತಿಲ್ಲ ಎಂದು ಕಣ್ಣಿರಿಟ್ಟಿದ್ದಾನೆ. ಪ್ರೀತಿಸಿದ ಹುಡುಗಿ ಮನೆಯವರು ಮದುವೆಗೆ ವಿರೋಧಿಸಿ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದರು. ಇದರಿಂದ ಮನನೊಂದ ತಾಲೂಕಿನ‌ ಬೆನಕನಹಳ್ಳಿಯ 31 ವರ್ಷದ ಭರಮಾ ಪಾಟೀಲ್ ಎಂಬಾತ ಅಕ್ಟೋಬರ್ 23ರಂದು ಆತ್ಮಹತ್ಯೆ ಮಾಡಿಕೊಂಡಿದ್ದ.     ಸಹೋದರನ ಸಾವು ನೆನೆದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ …

Read More »

ಹಾನಗಲ್, ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು, ಬಿಜೆಪಿಗೆ ಈಗಲೇ ಭಯ ಶುರುವಾಗಿದೆ: ಸತೀಶ ಜಾರಕಿಹೊಳಿ 

ಸಿಂಧಗಿ ಚುನಾವಣೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ. @Laxminews Gokak ಗೋಕಾಕ: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಹೀಗಾಗಿ, ಬಿಜೆಪಿಗೆ ಈಗಲೇ ಭಯ ಶುರುವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದ ಹಿಲ್ ಗಾರ್ಡನ್ ಗೃಹಕಚೇರಿಯಲ್ಲಿ ಇಂದು ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲಿನ ಭೀತಿಯಿಂದ ಮುಖ್ಯಮಂತ್ರಿಗಳು ಹಾನಗಲ್ ನಲ್ಲಿ ಬೀಡುಬಿಟ್ಟು ಪ್ರಚಾರ ನಡೆಸಿದ್ದಾರೆ ಎಂದರು. ಉಪಚುನಾವಣೆ ಎಂದರೆ ಹಾಗೆ. …

Read More »

ಬೆಳಗಾವಿಯ ಸುವರ್ಣ ‌ವಿಧಾನಸೌಧದ ಮೆಟ್ಟಿಲುಗಳ ಮೇಲೆ ಗುರುವಾರ ಲಕ್ಷ ಕಂಠ ಗೀತಗಾಯನ ನಡೆಯಿತು.

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ‘ಕನ್ನಡಕ್ಕಾಗಿ ನಾವು’ ಅಭಿಯಾನದಲ್ಲಿ ಬೆಳಗಾವಿಯ ಸುವರ್ಣ ‌ವಿಧಾನಸೌಧದ ಮೆಟ್ಟಿಲುಗಳ ಮೇಲೆ ಗುರುವಾರ ಲಕ್ಷ ಕಂಠ ಗೀತಗಾಯನ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿರುವ ಲಕ್ಷ ಕಂಠ ಕನ್ನಡ ಗೀತಗಾಯನ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಗೀತಗಾಯನವನ್ನು ಪ್ರಸ್ತುತಪಡಿಸಿದರು. ರಾಷ್ಟ್ರಕವಿ ಕುವೆಂಪು ವಿರಚಿತ ‘ಬಾರಿಸು ಕನ್ನಡ ಡಿಂಡಿಮ’; ನಿಸಾರ್ ಅಹಮದ್ ಅವರ ‘ಜೋಗದ ಸಿರಿ‌ ಬೆಳಕಿನಲ್ಲಿ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ …

Read More »