Breaking News
Home / ಜಿಲ್ಲೆ / ಬೆಂಗಳೂರು (page 374)

ಬೆಂಗಳೂರು

ರಾಜ್ಯಸಭೆ, ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ಜೆಡಿಎಸ್ ಶಾಸಕಾಂಗ ಸಭೆ

ಬೆಂಗಳೂರು, ಜೂ.4-ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ಮಹತ್ವದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಂಸದರು, ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಆಹ್ವಾನ ನೀಡಲಾಗಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ನಾಳೆ ಮಧ್ಯಾಹ್ನ ಸಭೆ ನಡೆಯಲಿದೆ. ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವುದು, ಅಭ್ಯರ್ಥಿ ಆಯ್ಕೆ ಬಗ್ಗೆಯೂ ಚರ್ಚೆ …

Read More »

ದೇಶದಲ್ಲಿ ಒಂದೇ ದಿನ ಗರಿಷ್ಠ 9,304 ಮಂದಿಗೆ ಕೊರೊನಾ- 260 ಜನ ಸಾವು

ನವದೆಹಲಿ: ದೇಶದಲ್ಲಿ ಡೆಡ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗುವಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಯಲ್ಲಿ ಗರಿಷ್ಠ 9,304 ಮಂದಿಗೆ ಸೋಂಕು ದೃಢಪಟ್ಟಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದ 9,304 ಮಂದಿಗೆ ಸೋಂಕು ಪತ್ತೆಯಾದರೆ, 260 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 2,16,919ಕ್ಕೆ ಏರಿಕೆಯಾದರೆ, ಕೊರೊನಾಗೆ 6,075 ಮಂದಿ ಬಲಿಯಾಗಿದ್ದಾರೆ. …

Read More »

ದ್ವಿತೀಯ ಪಿಯುಸಿ ವಿಜ್ಞಾನ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡದಿರಲು ಉಪನ್ಯಾಸಕರು ನಿರ್ಧಾರ

ಬೆಂಗಳೂರು: ಪಿಯುಸಿ ಮೌಲ್ಯಮಾಪನಕ್ಕೂ ಕೊರೊನಾ ಭೀತಿ ತಟ್ಟಿದ್ದು, ದ್ವಿತೀಯ ಪಿಯುಸಿ ವಿಜ್ಞಾನ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡದಿರಲು ಉಪನ್ಯಾಸಕರು ನಿರ್ಧಾರ ಮಾಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಮೌಲ್ಯಮಾಪನ ಕೇಂದ್ರಗಳನ್ನು ಆಯಾ ಜಿಲ್ಲೆಗಳಲ್ಲಿ ವಿಕೇಂದ್ರಿಕರಣಗೊಳಿಸುವಂತೆ ಉಪನ್ಯಾಸಕರ ಸಂಘ ಮನವಿ ಮಾಡಿತ್ತು. ಕೊರೊನಾ ಸಮುದಾಯಕ್ಕೆ ಹರಡುತ್ತಿದೆ ಎಂದು ಈ ಮನವಿ ಮಾಡಲಾಗಿತ್ತು. ಆದರೆ ಸರ್ಕಾರ ಉಪನ್ಯಾಸಕರ ಬೇಡಿಕೆಗೆ ಈಡೇರಿಸದ ಕಾರಣ ನಾಳೆಯಿಂದ ಪ್ರಾರಂಭವಾಗಬೇಕಿದ್ದ ವಿಜ್ಞಾನ ವಿಷಯದ ಮೌಲ್ಯಮಾಪನ ಮಾಡದೇ ಇರಲು ಉಪನ್ಯಾಸಕರ ಸಂಘದಿಂದ ನಿರ್ಧಾರ …

Read More »

ಕೊರೊನಾ ಮಧ್ಯೆ ಶಾಲೆ ಆರಂಭ, ಸರ್ಕಾರಕ್ಕೆ 10 ‘ಪಬ್ಲಿಕ್’ ಪ್ರಶ್ನೆ – ಎಷ್ಟು ಮಕ್ಕಳಿಗೆ ಸೋಂಕು ಬಂದಿದೆ?

ಬೆಂಗಳೂರು: ಕೊರೋನಾ ತಾಂಡವವಾಡ್ತಿದೆ. ಖುದ್ದು ಕೇಂದ್ರ ಸರ್ಕಾರವೇ, ಮನೆಯಿಂದ ಹೊರಬರಬೇಡಿ ಎಂದು ಮಕ್ಕಳಿಗೆ, ವೃದ್ಧರಿಗೆ ಲಾಕ್‍ಡೌನ್ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದರೆ ಇದ್ಯಾವುದನ್ನು ಕಿವಿಗೆ ಹಾಕಿಕೊಳ್ಳದ ರಾಜ್ಯ ಸರ್ಕಾರ, ಜುಲೈ 1ರಿಂದ ಶಾಲೆಗಳನ್ನು ತೆರೆಯಲು ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. 4ರಿಂದ ಏಳನೇ ತರಗತಿಯ ಮಕ್ಕಳಿಗೆ ಜುಲೈ 1ರಿಂದ, 1ನೇ ತರಗತಿಯಿಂದ 3ನೇ ತರಗತಿವರೆಗಿನ ಮಕ್ಕಳಿಗೆ, 8ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಜುಲೈ 15ರಿಂದ ಶಾಲೆ ನಡೆಸಲು ಪ್ಲಾನ್ ಮಾಡ್ತಿದೆ. ಇನ್ನು …

Read More »

ಲಾಕ್‌ಡೌನ್‌ ಕಾರಣದಿಂದಾಗಿ ರಾಜ್ಯ ಸಾರಿಗೆ ನಿಗಮಗಳಿಗೆ ಬರೋಬ್ಬರಿ 1,200 ಕೋಟಿಗೂ ಅಧಿಕ ನಷ್ಟ………

ಬೆಂಗಳೂರು; ಕೊರೋನಾ ಲಾಕ್‌ಡೌನ್‌ ಕಾರಣದಿಂದಾಗಿ ರಾಜ್ಯ ಸಾರಿಗೆ ನಿಗಮಗಳಿಗೆ ಬರೋಬ್ಬರಿ 1,200 ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಹೇಳಲಾಗುತ್ತಿದ್ದು, ಇದರ ಸುಧಾರಣೆ ಕುರಿತಂತೆ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಚರ್ಚೆ ನಡೆಸಲಾಗಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರಿಗೆ ಸಚಿವ ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಇಲಾಖೆಯ ಅಧಿಕಾರಿ ಗಳು ನಿಗಮದ ನಷ್ಟದ ಬಗ್ಗೆ ವಿವರಿಸಿದ್ದಾರೆ.  ಸಾರಿಗೆ ನಿಗಮದಲ್ಲಿ 1 ಲಕ್ಷದ 17 …

Read More »

ಜಮೀರ್‌ 420, ಗುಜರಿ ವ್ಯಾಪಾರ ಮಾಡಿ ರಾಜಕಾರಣದಲ್ಲಿ ನಾಟಕ‌ ಮಾಡ್ತಿದ್ದಾನೆ; ರೇಣುಕಾಚಾರ್ಯ

ಬೆಂಗಳೂರು (ಜೂನ್‌ 03); ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಓರ್ವ 420, ಗುಜರಿ ವ್ಯಾಪಾರ ಮಾಡಿ ಇದೀಗ ರಾಜಕಾರಣದಲ್ಲಿ ನಾಟಕ ಮಾಡುತ್ತಿದ್ದಾನೆ ಎಂದು ಮಾಜಿ ಸಚಿವ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಏಕ ವಚನದಲ್ಲಿ ದಾಳಿ ನಡೆಸಿದ್ದಾರೆ. ಶಾಸಕ ಜಮೀರ್‌ ಅಹಮದ್‌ ಪಾದರಾಯನಪುರ ಗಲಾಟೆಯಲ್ಲಿ ಬಂಧಿಸಲ್ಪಟ್ಟ ಆರೋಪಿಗಳ ಜಾಮೀನಿಗೆ ಸಹಕರಿಸಿದ್ದಾರೆ. ಅಲ್ಲದೆ, ಬಿಡುಗಡೆಗೊಂಡವರನ್ನು ಇಂದು ಪಾದರಾಯನಪುರದಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಲಾಗಿದೆ. ಈ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ, ” ಪಾದರಾಯನಪುರ ಗೂಂಡಾಗಳಿಗೆ …

Read More »

ಅಟಲ್ ಭೂ-ಜಲ ಯೋಜನೆಗೆ 1203 ಕೋಟಿ ರೂ. : ಸಚಿವ ಮಾಧುಸ್ವಾಮಿ

ಬೆಂಗಳೂರು, ಜೂ.3- ಅಟಲ್ ಭೂ ಜಲ ಯೋಜನೆಯಡಿ ಅಂತರ್ಜಲ ಅಭಿವೃದ್ಧಿ ಯೋಜನೆಗೆ 1203 ಕೋಟಿ ರೂ. ಒದಗಿಸಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 14 ಜಿಲ್ಲೆಗಳಲ್ಲಿನ 41 ತಾಲ್ಲೂಕಿಗೆ ಈ ಹಣ ಒದಗಿಸಿದ್ದು, ನಾಲ್ಕು ವರ್ಷದಲ್ಲಿ ವೆಚ್ಚ ಮಾಡಬೇಕು. ಕೇಂದ್ರ ಸರ್ಕಾರದ ಈ ಅನುದಾನದ ಜತೆಗೆ ರಾಜ್ಯ ಸರ್ಕಾರದ ನೆರವು ಮತ್ತು ನರೇಗಾ ಯೋಜನೆಯನ್ನು ಬಳಸಿಕೊಳ್ಳಬಹುದು ಎಂದರು. ಅಂತರ್ಜಲ ಚೇತನ, ಅಟಲ್ ಭೂ …

Read More »

ಜೈಲಿನಿಂದ ಬಂದ ಪಾದರಾಯನಪುರ ಪುಂಡರಿಗೆ ಭವ್ಯ ಸ್ವಾಗತ ನೀಡಿದ ಶಾಸಕ ಜಮೀರ್..!

ಬೆಂಗಳೂರು,ಜೂ.3- ಪಾದಾರಾಯನಪುರ ದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಬಂಧಿತರಾಗಿದ್ದ 126 ಆರೋಪಿಗಳು ಇಂದು ಬಿಡುಗಡೆಯಾಗಿ ಬಂದಾಗ ಪೊಷಕರ ದಂಡೇ ಅಲ್ಲಿ ನೆರೆದಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾ ಗಿದ್ದರೂ ಬಹಳಷ್ಟು ಮಂದಿ ಅವರನ್ನು ಬರಮಾಡಿಕೊಳ್ಳಲು ಗುಂಪು ಸೇರಿದ್ದು ಕಂಡುಬಂತು. ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಸಹ ಸ್ಥಳದಲ್ಲಿದ್ದು, ಅವರನ್ನು ಸ್ವಾಗತ ಕೋರಿದರು. ಪಾದರಾಯನಪುರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾದ ವೇಳೆ ತಪಾಸಣೆಗೆ ಬಂದಿದ್ದ ಆರೋಗ್ಯ ಕಾರ್ಯಕರ್ತರ ಮೇಲೆ ಹಾಗೂ …

Read More »

ಸೋತವರು ಉಪಮುಖ್ಯಮಂತ್ರಿ ಆಗಿಲ್ವೇನ್ರಿ? ಇನ್ನು ನಾನು ಎಂಎಲ್​ಸಿ (ವಿಧಾನ ಪರಿಷತ್​ ಸದಸ್ಯ) ಆಗಲ್ವಾ?

ಬೆಂಗಳೂರು: ಸೋತವರು ಉಪಮುಖ್ಯಮಂತ್ರಿ ಆಗಿಲ್ವೇನ್ರಿ? ಇನ್ನು ನಾನು ಎಂಎಲ್​ಸಿ (ವಿಧಾನ ಪರಿಷತ್​ ಸದಸ್ಯ) ಆಗಲ್ವಾ? ಎಂದು  ಹೆಚ್. ​ ವಿಶ್ವನಾಥ್ ಅವರು ಮಾಧ್ಯಮ ಎದುರು ಗರಂ ಆದ ಪ್ರಸಂಗ ನಡೆಯಿತು.  ನಗರದಲ್ಲಿ ಮಾತನಾಡಿದ ಅವರು ಯಡಿಯೂರಪ್ಪ ಅವರು ಸರ್ಕಾರ ಬರೋಕೆ ಕಾರಣರಾದ ಎಲ್ಲರಿಗೂ ಭರವಸೆ ಕೊಟ್ಟಿದ್ದಾರೆ. ಈ ಸರ್ಕಾರ ಬರಲು ಶ್ರಮ ಹಾಕಿದವರಿಗೆ ಅವಕಾಶವಿದೆ. ಸೋತವರನ್ನು ಉಪಮುಖ್ಯಮಂತ್ರಿ ಆಗಿಲ್ವೇನ್ರಿ(?) ಇನ್ನೂ ಸಂದರ್ಭ ಇದೆ ಹೇಳ್ತೀನಿ ಎಂದು  ಹೇಳಿದರು.  ವಿಧಾನಪರಿಷತ್ ಚುನಾವಣೆ …

Read More »

ರಾಜ್ಯಸಭೆಗೆ ಚುನಾವಣೆಗೆ ಬಿಜೆಪಿಯಿಂದ ತೇಜಸ್ವಿನಿ-ಸುಧಾಮೂರ್ತಿ ಸ್ಪರ್ಧೆ…?

ಬೆಂಗಳೂರು,ಜೂ.3- ಇದೇ 19ರಂದು ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಆಡಳಿತಾರೂಢ ಬಿಜೆಪಿಯಿಂದ ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ಹಾಗೂ ಇನ್ಫೋಸಿಸ್ ಸುಧಾಮೂರ್ತಿ ಹೆಸರುಗಳು ಕೇಳಿಬಂದಿವೆ. ಬಿಜೆಪಿಯಿಂದ ರಾಜ್ಯಸಭೆಗೆ ಇಬ್ಬರು ಆಯ್ಕೆಯಾಗುವ ಅವಕಾಶ ಇರುವುದರಿಂದ ಸಮಾಜ ಸೇವೆ ಕೋಟಾದಡಿ ಈ ಇಬ್ಬರಲ್ಲಿ ಒಬ್ಬರನ್ನು ರಾಜ್ಯಸಭೆಗೆ ಕಳುಹಿಸಲು ಪಕ್ಷದ ವಲಯದಲ್ಲಿ ಚಿಂತನೆ ನಡೆದಿದೆ. ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಪ್ರಭಾಕರ್ ಕೋರೆ ಅವರ ಅಧಿಕಾರ ಅವಧಿ ಈ ತಿಂಗಳ ಅಂತ್ಯಕ್ಕೆ …

Read More »