ಬೆಂಗಳೂರು (ಜೂನ್ 03); ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಓರ್ವ 420, ಗುಜರಿ ವ್ಯಾಪಾರ ಮಾಡಿ ಇದೀಗ ರಾಜಕಾರಣದಲ್ಲಿ ನಾಟಕ ಮಾಡುತ್ತಿದ್ದಾನೆ ಎಂದು ಮಾಜಿ ಸಚಿವ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಏಕ ವಚನದಲ್ಲಿ ದಾಳಿ ನಡೆಸಿದ್ದಾರೆ.
ಶಾಸಕ ಜಮೀರ್ ಅಹಮದ್ ಪಾದರಾಯನಪುರ ಗಲಾಟೆಯಲ್ಲಿ ಬಂಧಿಸಲ್ಪಟ್ಟ ಆರೋಪಿಗಳ ಜಾಮೀನಿಗೆ ಸಹಕರಿಸಿದ್ದಾರೆ. ಅಲ್ಲದೆ, ಬಿಡುಗಡೆಗೊಂಡವರನ್ನು ಇಂದು ಪಾದರಾಯನಪುರದಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಲಾಗಿದೆ.
ಈ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ, ” ಪಾದರಾಯನಪುರ ಗೂಂಡಾಗಳಿಗೆ ಜಮೀರ ಅಹಮ್ಮದ್ ಬೆಂಬಲ ಕೊಡುತ್ತಿದ್ದಾರೆದ. ಜಮೀರ್ ಅಹಮ್ಮದ್ ಶಾಸಕರಾಗಲು ನಾಲಾಯಕ್. ಅವರು ಜನರನ್ನ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆತ ಪಕ್ಕಾ 420. ಗುಜರಿ ವ್ಯಾಪಾರ ಮಾಡಿ ಈಗ ರಾಜಕಾರಣದಲ್ಲಿ ನಾಟಕ ಮಾಡುತ್ತಿದ್ದಾನೆ.