ಬೆಂಗಳೂರು: ಸೋತವರು ಉಪಮುಖ್ಯಮಂತ್ರಿ ಆಗಿಲ್ವೇನ್ರಿ? ಇನ್ನು ನಾನು ಎಂಎಲ್ಸಿ (ವಿಧಾನ ಪರಿಷತ್ ಸದಸ್ಯ) ಆಗಲ್ವಾ? ಎಂದು ಹೆಚ್. ವಿಶ್ವನಾಥ್ ಅವರು ಮಾಧ್ಯಮ ಎದುರು ಗರಂ ಆದ ಪ್ರಸಂಗ ನಡೆಯಿತು.
ನಗರದಲ್ಲಿ ಮಾತನಾಡಿದ ಅವರು ಯಡಿಯೂರಪ್ಪ ಅವರು ಸರ್ಕಾರ ಬರೋಕೆ ಕಾರಣರಾದ ಎಲ್ಲರಿಗೂ ಭರವಸೆ ಕೊಟ್ಟಿದ್ದಾರೆ. ಈ ಸರ್ಕಾರ ಬರಲು ಶ್ರಮ ಹಾಕಿದವರಿಗೆ ಅವಕಾಶವಿದೆ. ಸೋತವರನ್ನು ಉಪಮುಖ್ಯಮಂತ್ರಿ ಆಗಿಲ್ವೇನ್ರಿ(?) ಇನ್ನೂ ಸಂದರ್ಭ ಇದೆ ಹೇಳ್ತೀನಿ ಎಂದು ಹೇಳಿದರು.
ವಿಧಾನಪರಿಷತ್ ಚುನಾವಣೆ ಸಂಬಂಧಿಸಿದ ಯಾವ ಚರ್ಚೆಯೂ ಆರಂಭ ಆಗಿಲ್ಲ, ಚರ್ಚೆನೇ ಆರಂಭ ಆಗಿಲ್ಲ ಏನ್ ಹೇಳಲಿ. ಮೊದಲು ಚುನಾವಣೆ ನೋಟಿಫಿಕೇಶನ್ ಆಗಲಿ. ಪ್ರಕ್ರಿಯೆ ಆರಂಭಯಾದ ಮೇಲೆ ಟಿಕೆಟ್ ಯಾರಿಗೆ ಏನು(?) ಅಂತ ಡಿಸೈಡ್ ಆಗುತ್ತೆ ಎಂದು ಅವರು ತಿಳಿಸಿದ್ದಾರೆ.
https://youtu.be/OYEMtBeW6b0
ಇನ್ನು ವಿಶ್ವನಾಥ್ ಎಂಎಲ್ಸಿ ಮಾಡಲ್ಲ ಅನ್ನೋದು ಸುಳ್ಳು. ಯಾರೂ ಈ ಬಗ್ಗೆ ಚರ್ಚೆ ಮಾಡಿಲ್ಲ, ಹುಣಸೂರಿನಲ್ಲಿ ಸ್ಪರ್ಧೆ ಮಾಡಿ ಸೋತಿರೋದಕ್ಕೂ ನಾನು ಎಂಎಲ್ಸಿ ಆಗೋದಕ್ಕೂ ಏನು ಸಂಬಂಧ? ಎಂದು ಅವರು ಮರು ಪ್ರಶ್ನೆ ಮಾಡಿದರು.