Breaking News

ಲಾಕ್‌ಡೌನ್‌ ಕಾರಣದಿಂದಾಗಿ ರಾಜ್ಯ ಸಾರಿಗೆ ನಿಗಮಗಳಿಗೆ ಬರೋಬ್ಬರಿ 1,200 ಕೋಟಿಗೂ ಅಧಿಕ ನಷ್ಟ………

Spread the love

ಬೆಂಗಳೂರು; ಕೊರೋನಾ ಲಾಕ್‌ಡೌನ್‌ ಕಾರಣದಿಂದಾಗಿ ರಾಜ್ಯ ಸಾರಿಗೆ ನಿಗಮಗಳಿಗೆ ಬರೋಬ್ಬರಿ 1,200 ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಹೇಳಲಾಗುತ್ತಿದ್ದು, ಇದರ ಸುಧಾರಣೆ ಕುರಿತಂತೆ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಚರ್ಚೆ ನಡೆಸಲಾಗಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರಿಗೆ ಸಚಿವ ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಇಲಾಖೆಯ ಅಧಿಕಾರಿ ಗಳು ನಿಗಮದ ನಷ್ಟದ ಬಗ್ಗೆ ವಿವರಿಸಿದ್ದಾರೆ.  ಸಾರಿಗೆ ನಿಗಮದಲ್ಲಿ 1 ಲಕ್ಷದ 17 ಸಾವಿರ ನೌಕರರು ಇದ್ದಾರೆ. ಪ್ರತಿ ತಿಂಗಳು ಇಲಾಖೆಗೆ ಸಾರ್ವಜನಿಕರಿಂದ ಬರುವ ಆದಾಯ 300 ಕೋಟಿ. ಆದರೆ, ನೌಕರರ ಸಂಬಳಕ್ಕೆ 375 ಕೋಟಿ ಬೇಕು. 75 ಲಕ್ಷ ಪಾಸ್ ಗಳಿವೆ. ಇದರಿಂದಲೇ ಕೆಎಸ್ಆರ್‌ಟಿಸಿಗೆ 400 ಕೋಟಿ ನಷ್ಟ ಆಗಿದೆ.

ಲಾಕ್‌ಡೌ‌ನ್‌ನಿಂದ ಸಾರಿಗೆ ನಿಗಮಗಳಿಗೆ 1200 ಕೋಟಿಗೂ ಹೆಚ್ಚು ನಷ್ಟ; ನೌಕರರ ಸಂಬಳಕ್ಕೂ ಹಣವಿಲ್ಲ!

ಸದ್ಯ ಕೋವಿಡ್ ನಿಂದ ಎರಡುವರೇ ತಿಂಗಳು ಬಸ್ ಗಳು ರಸ್ತೆಗೆ ಇಳಿದಿಲ್ಲ, ಇದರಿಂದ 1,000 ಕೋಟಿಗೂ ಹೆಚ್ಚು ನಷ್ಟವಾಗಿದೆ. ಅಲ್ಲದೆ  ಇದರಿಂದ 750 ಕೋಟಿ ಹೆಚ್ಚುವರಿ ಹೊರೆ ಸರ್ಕಾರಕ್ಕೆ ಆಗಿದೆ‌. ಈಗ ಬಸ್ಸುಗಳು ರಸ್ತೆಗೆ ಇಳಿದಿದ್ದರೂ ಪ್ರಯಾಣಿಕರು ಹೆಚ್ಚಾಗಿ ಬರುತ್ತಿಲ್ಲ. ಪ್ರಯಾಣಿಕರು ಬಂದರೂ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಸಬೇಕು.

ಸಾಮಾಜಿಕ ಅಂತರದಿಂದ ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿ ಓಡಾಡಬೇಕು. ಇದರಿಂದ ಪ್ರತಿ ಕಿಲೋ ಮೀಟರ್ ಗೆ 22 ರೂಪಾಯಿ ನಿಗಮಕ್ಕೆ ನಷ್ಟ ವಾಗುತ್ತಿದೆ. ಈ ನಡುವೆ ಡೀಸೆಲ್‌ ದರ ಏರಿಕೆಯಾಗಿದೆ. ಆದರೆ, ಬಸ್ ದರ ಏರಿಕೆ ಇಲ್ಲ ಎಂಬುದರ ಬಗ್ಗೆ ಅಧಿಕಾರಿಗಳು ವಿವರಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಸಭೆಯಲ್ಲಿ ಮಾತನಾಡಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, “ಕೋವಿಡ್ ನಿಂದ ಸಮಸ್ಯೆಯಾಗಿದ್ದು, ಸಿಬ್ಬಂದಿಗಳಿಗೆ ವೇತನ ಕೊಡಲು ನಿಗಮದಲ್ಲಿ ಹಣವಿಲ್ಲ. ಕಳೆದ ತಿಂಗಳು ಸರ್ಕಾರ ಅರ್ಧ ವೇತನ ಕೊಟ್ಟಿತ್ತು. ಈಗ ಮುಂದಿನ ತಿಂಗಳ ವೇತನಕ್ಕೆ ಅರ್ಧ ಅನುದಾನವನ್ನು ಕೇಳಿದ್ದೇವೆ. ಪ್ರತಿ ತಿಂಗಳು ಸಿಬ್ಬಂದಿಗಳಿಗೆ ವೇತನ ಒಟ್ಟು 326 ಕೋಟಿ ವೆಚ್ಚವಾಗಲಿದ್ದು, ಇದರಲ್ಲಿ ಅರ್ಧದಷ್ಟು ವೇತನ ಕೊಡುವಂತೆ ಸಿಎಂ ಬಿಎಸ್‌ವೈ ಬಳಿ ಮನವಿ ಮಾಡಿದ್ದೇವೆ” ಎಂದು ತಿಳಿಸಿದ್ದಾರೆ.

ಸಿಎಂ ಯಡಿಯೂರಪ್ಪ ಇದಕ್ಮೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸರ್ಕಾರದಿಂದ ವೇತನ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸಾರಿಗೆ ನಿಗಮಗಳ ನಷ್ಟ ಸರಿದೂಗಿಸಲು ಪ್ರಯಾಣಿಕರ ಓಡಾಟ ಹೆಚ್ಚು ಮಾಡುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ


Spread the love

About Laxminews 24x7

Check Also

ರಾಮತೀರ್ಥ ನಗರದಲ್ಲಿ ಸುರೇಶ ಯಾದವ ಫೌಂಡೇಶನ್ ದಿಂದ ಹೋಳಿ ಆಚರಣೆ

Spread the love ರಾಮತೀರ್ಥ ನಗರದಲ್ಲಿ ಸುರೇಶ ಯಾದವ ಫೌಂಡೇಶನ್ ದಿಂದ ಹೋಳಿ ಆಚರಣೆ ಬೆಳಗಾವಿಯ ರಾಮತೀರ್ಥ ನಗರದ ಸುರೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ